Jothe Jotheyali: ವಠಾರಕ್ಕೆ ಹೊರಟ ಅನು: ಆರಾಧನಾಗೆ ಹೊಸ ಜವಾಬ್ದಾರಿ

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ಮನೆಯನ್ನು ಬಿಟ್ಟು ವಠಾರಕ್ಕೆ ಹೋಗಬೇಕಲ್ಲ ಎಂದು ರೂಮಿನಲ್ಲಿ ತನ್ನ ಹಾಗೂ ಆರ್ಯನ ಜೊತೆಗಿನ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾ ಅಳುತ್ತಿರುತ್ತಾಳೆ.

ಇತ್ತ ಆರ್ಯ ದಾರಿಯುದ್ದಕ್ಕೂ ಮನದಲ್ಲಿ ಅನು ಬಳಿ ಕ್ಷಮೆ ಕೇಳುತ್ತಲೇ ಬರುತ್ತಾನೆ. ಬೇರೆ ದಾರಿ ಇಲ್ಲದೇ, ನಿನ್ನನ್ನು ದೂರ ಮಾಡುತ್ತಿದ್ದೇನೆ. ನನಗೆ ಝೇಂಡೇ ಇಲ್ಲದೇ ಇರಲು ಸಾಧ್ಯವಿಲ್ಲ ಎಂದು ಹೇಳಿಕೊಂಡೇ ಆಫೀಸಿಗೆ ತಲುಪುತ್ತಾನೆ.

ಆಫೀಸಿನಲ್ಲಿ ಕಣ್ಣು ಮುಚ್ಚಿ ಕುಳಿತಿದ್ದಾಗ ಮೀರಾ ಬರುತ್ತಾಳೆ. ರೆಸ್ಟ್ ಮಾಡಲಿ ಎಂದು ವಾಪಸ್ ಹೋಗುವಾಗ ಆರ್ಯ ಕರೆದು ಮಾತನಾಡಿಸುತ್ತಾನೆ. ಮೀರಾಗೆ ಮೊದಲಿನಂತೆ ಆರ್ಯ ಸರ್ ಆಗಿದ್ದಾರೆ ಎಂದು ಖುಷಿಯಾಗುತ್ತದೆ.

ಆರಾಧನಾಳಿಗೆ ಕೆಲಸ ವಹಿಸಿದ ಅನು

ಆರಾಧನಾಳಿಗೆ ಕೆಲಸ ವಹಿಸಿದ ಅನು

ಅನು ರೂಮಿನಲ್ಲಿ ಬಟ್ಟೆಗಳನ್ನೆಲ್ಲಾ ಪ್ಯಾಕ್ ಮಾಡಿಕೊಳ್ಳುತ್ತಿರುತ್ತಾಳೆ. ಅನುಳನ್ನು ಮಾತನಾಡಿಸಲು ಆರಾಧನಾ ಬರುತ್ತಾಳೆ. ಅನುಗೆ ಆರಾಧನಾ ಸಮಾಧಾನ ಮಾಡುತ್ತಾಳೆ. ಈಗಲೂ ನೀವು ನಿಮ್ಮ ನಿರ್ಧಾರವನ್ನು ಬದಲಿಸಿಕೊಳ್ಳಬಹುದು. ನೀವು ಇಲ್ಲೇ ಇರುವುದು ಸೂಕ್ತ ಎಂದು ಹೇಳುತ್ತಾಳೆ. ಅದಕ್ಕೆ ಅನು ಇಲ್ಲ ನಾನು ಈಗ ನನ್ನ ತಂದೆಯ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ನಾನೇನು ಇಲ್ಲಿಂದ ಪೂರ್ತಿಯಾಗಿ ಹೊರಡುತ್ತಿಲ್ಲ. ಸಮಯಕ್ಕೆ ಎಲ್ಲವನ್ನೂ ಬದಲಿಸುವ ಶಕ್ತಿ ಇದೆ. ನಾನು ಎಲ್ಲೇ ಇದ್ದರೂ ನನ್ನ ಮನಸೆಲ್ಲಾ ಸದಾ ಆರ್ಯ ಸರ್ ಬಗ್ಗೆ ಯೋಚಿಸುತ್ತಿರುತ್ತದೆ. ಈ ಭೂಮಿಗೆ ಹೇಗೆ ಸೂರ್ಯನೋ ಹಾಗೆ ನನಗೂ ಆರ್ಯ ಸರ್. ನಾವಿಬ್ಬರೂ ಯಾವುದೇ ಕಾರಣಕ್ಕೂ ಬೇರೆ ಆಗೋದಿಲ್ಲ ಎಂದು ಹೇಳುತ್ತಾಳೆ. ಇನ್ನು ಆರಾಧನಾಳಿಗೆ ನನಗೋಸ್ಕರ ಸ್ವಲ್ಪ ದಿನ ಇಲ್ಲೇ ಇರಿ. ಶಾರದಾ ದೇವಿ ಆರೋಗ್ಯದ ಬಗ್ಗೆ ಗಮನಿಸೋಕೆ ಯಾರೂ ಇಲ್ಲ ಎಂದು ಕೇಳುತ್ತಾಳೆ.

 ಆರ್ಯ ಮಾತು ಕೇಳಿ ಮೀರಾ ಶಾಕ್

ಆರ್ಯ ಮಾತು ಕೇಳಿ ಮೀರಾ ಶಾಕ್

ಮೀರಾ ಜೊತೆಗೆ ಮಾತನಾಡುವ ಆರ್ಯ, ಅನುಳನ್ನು ಮಿಸ್ ಮಾಡಿಕೊಳ್ಳುತ್ತಿರುವ ಬಗ್ಗೆ ಹೇಳುತ್ತಾನೆ. ಮೀರಾ ಕಾರಣ ಕೇಳಿದ್ದಕ್ಕೆ, ಅನುಳನ್ನು ವಠಾರಕ್ಕೆ ವಾಪಸ್ ಕಳಿಸುತ್ತಿರುವ ವಿಚಾರವನ್ನು ಹೇಳುತ್ತಾನೆ. ಅನು ಹೋಗದಿದ್ದರೆ, ತಾನು ಮತ್ತೆ ಝೇಂಡೇ ಒಟ್ಟಿಗೆ ಇರುವುದಕ್ಕೆ ಆಗೋದಿಲ್ಲ. ಝೇಂಡೇ ಇಲ್ಲದೇ, ತನಗೆ ಒಂದು ದಿನವೂ ಇರುವುದು ಸಾಧ್ಯವಿಲ್ಲ. ಹಾಗಾಗಿ ನಾನು ಅನಿವಾರ್ಯವಾಗಿ ಅನುಳನ್ನು ವಠಾರಕ್ಕೆ ಕಲಿಸುತ್ತಿದ್ದೇನೆ ಎಂದು ಹೇಳುತ್ತಾನೆ. ಆರ್ಯನ ಮಾತನ್ನು ಕೇಳಿದ ಮೀರಾ ಶಾಕ್ ಆಗುತ್ತಾಳೆ.

ಅಪ್ಪನ ಮನೆಗೆ ಹೊರಟ ಅನು

ಅಪ್ಪನ ಮನೆಗೆ ಹೊರಟ ಅನು

ಅನು ಅಪ್ಪನ ಮನೆಗೆ ಹೊರಟು ನಿಲ್ಲುತ್ತಾಳೆ. ಮಾನ್ಸಿ, ಶಾರದಾ ಎಲ್ಲರಿಗೂ ತಾನು ಹೊರಡುವುದಾಗಿ ಹೇಳುತ್ತಾಳೆ. ಆಗ ಶಾರದಾ ಕಣ್ಣಿರು ಹಾಕುತ್ತಾ ಅನುಗೆ ಹುಷಾರಾಗಿರುವಂತೆ ಹೇಳುತ್ತಾಳೆ. ಮಾನ್ಸಿ ಕೂಡ ಅನುಳನ್ನು ತಬ್ಬಿಕೊಳ್ಳುತ್ತಾಳೆ. ಅದರೆ, ಹರ್ಷ ಮಾತನಾಡುವುದಿಲ್ಲ. ಅನುಳನ್ನು ಕಳಿಸಿಕೊಡುವುದು ತನಗೆ ಇಷ್ಟವಿಲ್ಲ ಎಂದು ಹೇಳುತ್ತಾನೆ. ಅನು, ಹರ್ಷನಿಗೆ ಸಮಾಧಾನ ಮಾಡುತ್ತಾಳೆ.

ಮತ್ತೆ ಮನೆಯಲ್ಲೇ ಉಳಿಯುವ ಆರಾಧನಾ

ಮತ್ತೆ ಮನೆಯಲ್ಲೇ ಉಳಿಯುವ ಆರಾಧನಾ

ಇನ್ನು ಅನು, ಆರಾಧನಾಳಿಗೆ ಜವಾಬ್ದಾರಿ ಕೊಟ್ಟಿರುವುದರಿಂದ ಇಲ್ಲೇ ಉಳಿಯಬೇಕಾಗಿದೆ. ಅದಾಗಲೇ ಆರಾಧನಾಳಿಗೆ ಆರ್ಯನ ಮೇಲೆ ಒಲವಿದೆ. ನೋಡಲು ತನ್ನ ಪತಿ ವಿಶ್ವಾಸ್ ದೇಸಾಯಿ ರೀತಿಯೇ ಇರುವುದರಿಂದ ಆಕೆ ಮನಸ್ಸು ಗೊಂದಲಕ್ಕೊಳಗಾಗುತ್ತಿದೆ. ಈಗ ಆರಾಧನಾ ಇಲ್ಲೇ ಉಳಿದರೆ, ಆರ್ಯನ ಮೇಲೆ ಪ್ರೀತಿ ಹುಟ್ಟುವ ಸಾಧ್ಯತೆ ಇದೆ. ಅನು ಕೂಡ ಮನೆಯಲ್ಲಿ ಇರುವುದಿಲ್ಲ. ಮುಂದೆ ಏನಾಗಬಹುದು ಎಂಬ ಕುತೂಹಲವಿದೆ.

More from Filmibeat

English summary
Jothe Jotheyali Serial 14th February Episode Written Update. Anu ready to go for vatara. Anu gives new responsibility to aradhana. Arya expresses his feelings towards jhende
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X