Jothe Jotheyali: ಸತ್ಯ ಹೇಳದ ಆರಾಧನಾ: ಆರ್ಯನನ್ನು ಸಂಕಷ್ಟಕ್ಕೆ ಸಿಲುಕಿಸುತ್ತಾಳಾ..?
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಸುಬ್ಬು ಮಗಳು ಹಾಗೂ ಅಳಿಯನನ್ನು ಬೇರೆ ಮಾಡಲು ಮುಂದಾಗಿದ್ದ. ಆದರೆ, ಅದು ತಪ್ಪು ಎಂದು ತಿಳಿದು ಈಗ ಅನುಳನ್ನು ಆರ್ಯನ ಮನೆಗೆ ಕಳಿಸಿಕೊಡಲು ತಯಾರಾಗಿದ್ದಾನೆ.
ಆರ್ಯನ ಬಗ್ಗೆ ತಪ್ಪು ತಿಳಿದಿದ್ದ ಸುಬ್ಬುಗೆ ಅನು ಏನೂ ಮಾತನಾಡದೇ ಸತ್ಯವನ್ನು ಅರ್ಥ ಮಾಡಿಸಿದ್ದಾಳೆ. ಆರ್ಯ ಕಮಲಮ್ಮನ ವಠಾರದ ಹಬ್ಬದಲ್ಲಿ ಮಾತನಾಡಿದ ಮಾತುಗಳನ್ನು ಸುಬ್ಬು ಕೇಳಿ ತನ್ನ ತಪ್ಪನ್ನು ತಿದ್ದಿಕೊಂಡಿದ್ದಾನೆ.
ಅಪ್ಪ ಸತ್ಯವನ್ನು ಅರ್ಥ ಮಾಡಿಕೊಂಡರು ಎಂದು ಅನು, ಸುಬ್ಬುಗೆ ಈಗಲಾದರೂ ಬುದ್ಧಿ ಬಂತಲ್ಲ ಎಂದು ಪುಷ್ಪಾ ಸಮಾಧಾನ ಪಟ್ಟುಕೊಳ್ಳುತ್ತಾಳೆ. ಇನ್ನು ಶಾರದಾಳಿಗೂ ಸುಬ್ಬು ಬದಲಾಗಿದ್ದು ಖುಷಿಯನ್ನು ತಂದಿದೆ.

ಖುಷಿ ಪಡುತ್ತಿರುವ ಅನು
ಹೀಗಾಗಿ ಶಾರದಾ ದೇವಿ ತನ್ನ ಮನೆಯವರ ಜೊತೆಗೆ ಅನು ಮನೆಗೆ ಹೊರಟಿದ್ದಾಳೆ. ಅನುಳನ್ನು ತನ್ನ ಮನೆಗೆ ಕರೆದುಕೊಂಡು ಬರಲು ಮುಂದಾಗಿದ್ದಾಳೆ. ಈ ಬಗ್ಗೆ ಪುಷ್ಪಾಳಿಗೆ ಫೋನ್ ನಲ್ಲಿ ಹೇಳಿದ ಕೂಡಲೇ, ಪುಷ್ಪಾ ಖುಷಿ ಪಟ್ಟು ತನ್ನ ಮನೆಯಲ್ಲೇ ಊಟ ಮಾಡಬೇಕು ಎಂದು ಹೇಳುತ್ತಾಳೆ. ಅನುಗೆ ಆರ್ಯ ಸರ್ ಕೂಡ ತನ್ನನ್ನು ಕರೆದುಕೊಂಡು ಹೋಗಲು ಬರುತ್ತಾರಲ್ಲ ಎಂದು ಖುಷಿಯಾಗಿದ್ದಾಳೆ. ಇನ್ನು ಶಾರದಾ, ಆರ್ಯನಿಗೆ ಆದಷ್ಟು ಬೇಗ ಕೆಲಸ ಮುಗಿಸಿ ವಠಾರಕ್ಕೆ ಬರುವಂತೆ ಹೇಳುತ್ತಾಳೆ.

ಆರ್ಯ ವಠಾರಕ್ಕೆ ಹೋಗದಂತೆ ಪ್ಲಾನ್
ಆಗ ಆರಾಧನಾ ಆರ್ಯ ಸರ್ ಇವತ್ತು ಪೂರ್ತಿ ನನ್ನ ಟೀಂ ಜೊತೆಗೆ ಇರುತ್ತಾರೆ. ಹಾಗಾಗಿ ಅವರು ವಠಾರಕ್ಕೆ ಬರುವುದು ಅನುಮಾನ ಎಂದು ಹೇಳುತ್ತಾಳೆ. ಆರಾಧನಾ ಮಾತಿಗೆ ಆರ್ಯ ಇಲ್ಲ ಬೇಗ ಕೆಲಸ ಮುಗಿಸಿ ಬರುತ್ತೀನಿ. ಇವತ್ತು ನಾನೇ ಬಂದು ಅನುಳನ್ನು ಮನೆಗೆ ಕರೆದುಕೊಂಡು ಬರುವೆ ಎಂದು ಹೇಳುತ್ತಾನೆ. ಆದರೆ, ಆರಾಧನಾಳಿಗೆ ಇದು ಇಷ್ಟವಿರುವುದಿಲ್ಲ. ಹಾಗಾಗಿ ನನ್ನ ಟೀಂ ಜೊತೆಗಿನ ಮೀಟಿಂಗ್ ಲೇಟ್ ಆಗಬಹುದು. ಅರ್ಧದಲ್ಲಿ ಮೀಟಿಂಗ್ ಅನ್ನು ಕ್ಯಾನ್ಸಲ್ ಮಾಡಲು ಸಾಧ್ಯವಿಲ್ಲ ಎಂದು ಅನಿಸುತ್ತದೆ ಎಂದು ರಾಗ ಹಾಡುತ್ತಾಳೆ. ಆದರೆ, ಆರಾಧನಾ ಮಾತುಗಳಿಗೆ ಆರ್ಯ ಏನನ್ನೂ ಹೇಳುವುದಿಲ್ಲ.

ಮಾನ್ಸಿ ತಲೆ ಕೆಡಿಸಿದ ಸ್ನೇಹಿತೆ
ಶಾರದಾ ದೇವಿ, ಹರ್ಷ ಇಬ್ಬರೂ ಸುಬ್ಬು ಮನೆಗೆ ಬರುತ್ತಾರೆ. ಅನು ತುಂಬಾ ಖುಷಿಪಡುತ್ತಾಳೆ. ಇನ್ನು ಮಾನ್ಸಿ ಜೊತೆಗೆ ಪುಷ್ಪಾ ಫೋನಿನಲ್ಲಿ ಮಾತನಾಡುತ್ತಾಳೆ. ಊಟಕ್ಕೆ ಮನೆಗೆ ಬನ್ನಿ. ಜೊತೆಗೆ ಊಟ ಮಾಡೋಣ ಕಾಯುತ್ತೀವಿ ಎಂದು ಸೌಜನ್ಯದಿಂದ ಪುಷ್ಪಾ ಮಾತನಾಡುತ್ತಾಳೆ. ಆದರೆ ಮಾನ್ಸಿ, ಪುಷ್ಪಾಳಿಗೆ ಬೇಸರವಾಗುವಂತೆಯೇ ನಡೆದುಕೊಳ್ಳುತ್ತಾಳೆ. ಇನ್ನು ಮಾನ್ಸಿ ಜೊತೆಗಿದ್ದ ಸ್ನೇಹಿತೆ, ತಲೆ ಕೆಡಿಸುತ್ತಾಳೆ. ಅತ್ತಿಗೆ ಜೊತೆ ಸಲಿಗೆ ಇಂದ ಇರಬೇಡ. ನಿನ್ನ ಬೆಲೆ ಏನು ಎಂಬುದನ್ನು ತೋರಿಸು ಎಂದು ಚಾಡಿ ಹೇಳಿ ಕೊಡುತ್ತಾಳೆ. ಮಾನ್ಸಿಗೂ ಆಕೆಯ ಮಾತು ಸರಿ ಎನಿಸುತ್ತದೆ.

ಆರಾಧನಾಳಿಂದ ಮತ್ತೊಂದು ತಪ್ಪು
ಇತ್ತ ಮೀಟಿಂಗ್ ಸಮಯದಲ್ಲೇ ಆರಾಧನಾ ಸಹೋದರಿ ಭಾವನಾ ಕೂಡ ಎಂಟ್ರಿ ಕೊಡುತ್ತಾಳೆ. ಆರಾಧನಾ ತನ್ನ ಕುಟುಂಬದವರಿಗೆ ವಿಶ್ವಾಸ್ ದೇಸಾಯಿ ಸಾವನ್ನಪ್ಪಿರುವ ವಿಚಾರವನ್ನು ತಿಳಿಸಿರುವುದಿಲ್ಲ. ಇದರಿಂದ ಭಾವನಾ ಬಂದ ಕೂಡಲೇ ಆರ್ಯನನ್ನು ಬಾವ ಎಂದು ತಿಳಿದು ಮಾತನಾಡಿಸುತ್ತಾಳೆ. ಇದರಿಂದ ಆರಾಧನಾ ಹಾಗೂ ಆರ್ಯ ಇಬ್ಬರೂ ಮುಜುಗರಕ್ಕೆ ಒಳಗಾಗುತ್ತಾರೆ. ಆರಾಧನಾ ತನ್ನ ಮನೆಯವರಿಗೆ ಸತ್ಯ ಹೇಳದೆ ಮತ್ತೊಂದು ತಪ್ಪು ಮಾಡಲು ಮುಂದಾಗಿದ್ದಾಳೆ.


Click it and Unblock the Notifications











