ವಠಾರಕ್ಕೆ ಬಂದ ಸಂಜು ಅನು ಮನೆಯಲ್ಲಿ ಮಾಡಿದ್ದೇನು..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಸಂಜು ಜೊತೆಗೆ ಆರಾಧನಾ ಮಾತನಾಡಿದ್ದಾಳೆ. ಆರಾಧನಾಗೆ ಇನ್ನು ವಿಶ್ವಾಸ್ ದೇಸಾಯಿ ಸಾವನ್ನಪ್ಪಿರುವ ಸಂಗತಿ ತಿಳಿದಿಲ್ಲ. ಹಾಗಾಗಿ ಆಕೆ ವಿಶ್ವಾಸ್ ನಂಬರ್‌ಗೆ ಕರೆ ಮಾಡಿ ಮಾತನಾಡಿದ್ದಾಳೆ.
ಸಂಜುಗೆ ಆಕೆಯ ಜೊತೆಗೆ ಏನು ಮಾತನಾಡಬೇಕು ಎಂಬುದೇ ಗೊತ್ತಿಲ್ಲ. ಹಾಗಾಗಿ ಆರಾಧನಾ ಮಾತುಗಳನ್ನಷ್ಟೇ ಕೇಳಿಸಿಕೊಂಡಿದ್ದು, ಫೋನ್ ಅನ್ನು ಹಾಗೆಯೇ ಕಟ್ ಮಾಡಿ ಬಿಟ್ಟಿದ್ದಾನೆ. ಆರಾಧನಾ ಕಳಿಸುತ್ತಿರುವ ಮೆಸೇಜ್‌ಗಳನ್ನು ನೋಡಿ, ನೆನಪು ಮಾಡಿಕೊಳ್ಳಲು ಯತ್ನಿಸುತ್ತಿದ್ದಾನೆ.
ಇತ್ತ ಮಾನ್ಸಿಗೆ ಮಂದಾ, ಸಂಜು ಮತ್ತು ಆರಾಧನಾ ಫೋನ್‌ನಲ್ಲಿ ಮಾತನಾಡುತ್ತಿದ್ದರು ಎಂದು ಹೇಳಿದ್ದಾಳೆ. ಈ ಮಾತನ್ನು ಕೇಳಿದ ಮಾನ್ಸಿ, ಸಂಜು ಮೇಲೆ ಮತ್ತಷ್ಟು ಅನುಮಾನವನ್ನು ಪಟ್ಟಿದ್ದಾಳೆ. ಇದೆಲ್ಲದರಿಂದ ಮನೆಯಲ್ಲಿನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

ಅನುಗೆ ಹುಡಿ ತುಂಬುವ ಶಾಸ್ತ್ರ
ಅನುಗೆ ಹುಡಿ ತುಂಬುವ ಶಾಸ್ತ್ರ ನಡೆಯುತ್ತಿದೆ. ಈ ವೇಳೆ ಅನುಗೆ ಮೂರು ತಿಂಗಳು ತುಂಬುವ ಮೊದಲೇ ಮಾಡಬೇಕಿತ್ತು. ಈಗ ಮಾಡುತ್ತಿರುವುದು ಎಷ್ಟು ಸರಿ ಎಂದು ರಮ್ಯಾ ತಾಯಿ ರಜಿನಿ ಕೇಳುತ್ತಾಳೆ. ಆಗ ಮಾಡುವುದಕ್ಕೆ ಪರಿಸ್ಥಿತಿ ಸರಿ ಹೋಗಲಿಲ್ಲ ಎಂದು ಪುಷ್ಪಾ ಹೇಳುತ್ತಾಳೆ. ಇನ್ನು ಅನುಗೆ ಅರಿಶಿಣ ಕುಂಕುಮ ಇಡಬಹುದೇ ಎಂದು ಕೇಳುತ್ತಾಳೆ. ಆಗ ಎಲ್ಲರೂ ಬೇಸರ ಮಾಡಿಕೊಳ್ಳುತ್ತಾರೆ. ಆದರೆ ಪ್ರಿಯದರ್ಶಿನಿ ಹೇಳುತ್ತಾಳೆ. ಅರಿಶಿನ ಕುಂಕುಮ ಇಡಬಹುದು. ಆರ್ಯ ನನ್ನ ಮಗ ಅವನು ನನಗೆ ಸಿಗುವುದಕ್ಕೆ ನಾನು 40 ವರ್ಷ ಕಾಯಬೇಕಾಯ್ತು. ಇನ್ನು ಅನು ಹೆಚ್ಚು ದಿನ ಕಾಯಬೇಕಾಗಿಲ್ಲ. ಆರ್ಯ ಬಂದೇ ಬರುತ್ತಾನೆ ಎಂಬಂತೆ ಭರವಸೆ ನೀಡಿ ಮಾತನಾಡುತ್ತಾಳೆ. ಇದರಿಂದ ಅನು ಖುಷಿ ಪಡುತ್ತಾಳೆ. ನನಗೆ ಹೀಗೆ ಹೇಳುವವರು ಒಬ್ಬರು ಬೇಕಿತ್ತು. ಥ್ಯಾಂಕ್ಸ್ ಅಮ್ಮಾ ಎಂದು ಹೇಳುತ್ತಾಳೆ.

ಆಫೀಸ್‌ನಲ್ಲಿ ಸಂಜು ಕಂಡು ಮೀರಾ ಶಾಕ್
ಮನೆಯಲ್ಲಿರುವ ಸಂಜು ಫೋನ್‌ಗೆ ಆರಾಧನಾ ಫೋನ್ ಮಾಡುತ್ತಲೇ ಇರುತ್ತಾಳೆ. ಇವರು ಯಾರು ನನಗೆ ನೆನಪೇ ಆಗುತ್ತಿಲ್ಲ. ಇವರ ಬಳಿ ಏನು ಅಂತ ಮಾತನಾಡಲಿ ಎಂದು ಒಬ್ಬನೇ ಹೇಳಿಕೊಳ್ಳುತ್ತಾನೆ. ಅಷ್ಟರಲ್ಲಿ ನಾನು ಹೊರಗೆ ಹೋಗಿ ಬೇಗ ಬರುತ್ತೇನೆ ಎಂದು ಮಂದಾಗೆ ಹೇಳಿ ಸೀದಾ ಆರ್ಯವರ್ಧನ್ ಆಫೀಸಿಗೆ ಹೋಗುತ್ತಾನೆ. ಆಫೀಸಿನಲ್ಲಿ ಮಾನ್ಸಿ ಅನು ಮನೆಗೆ ಹೋಗಲು ಸಿದ್ಧಳಾಗಿರುತ್ತಾಳೆ. ಅಷ್ಟೊತ್ತಿಗೆ ಸಂಜು ಬಂದದ್ದನ್ನು ನೋಡಿದ ಮಾನ್ಸಿ ಶಾಕ್ ಆಗುತ್ತಾಳೆ. ಇದೇನು ಇವತ್ತು ಬಂದಿದ್ದೀರಾ..? ನೀವು ಬರುತ್ತೀರಾ ಎಂದು ಹೇಳಿದ್ದರು. ಆದರೆ, ಇವತ್ತೇ ಬರುತ್ತೀರಾ ಎಂದುಕೊಂಡಿರಲಿಲ್ಲ ಎಂದು ಹೇಳಿ ಅವನನ್ನು ಕರೆದುಕೊಂಡು ಸೀದಾ ಅನು ಮನೆಗೆ ಬರುತ್ತಾಳೆ. ಇವರು ಆಫೀಸಿಗೆ ಬಂದಿದ್ದರು. ಹಾಗೆ ಇಲ್ಲಿಗೆ ಕರೆದುಕೊಂಡು ಬಂದೆ ಎನ್ನುತ್ತಾಳೆ.

ಅನುಗೆ ಅಕ್ಷತೆ ಹಾಕಿ ಆಶೀರ್ವಾದ ಮಾಡಿದ ಸಂಜು
ಇನ್ನು ಪುಷ್ಪಾ ಅನುಗೆ ಹುಡಿ ತುಂಬಿ ಅಕ್ಷತೆ ಹಾಕುತ್ತಾಳೆ. ಆಗ ಅನು ಆರ್ಯನನ್ನು ನೆನಪಿಸಿಕೊಂಡು ಈಗ ನೀವಿರಬೇಕಿತ್ತು ಆರ್ಯ ಸರ್ ಎಂದು ಕಣ್ಣೀರು ಹಾಕುತ್ತಾಳೆ. ಇದೇ ವೇಳೆಗೆ ಸಂಜು, ಪ್ರಿಯದರ್ಶಿನಿ ಬಳಿ ನಾನು ಅವರಿಗೆ ಅಕ್ಷತೆ ಹಾಕಬಹುದೇ ಎಂದು ಕೇಳುತ್ತಾನೆ. ಆಗ ಪುಷ್ಪಾ ಅದಕ್ಕೇನು ಹಾಕಿ ಬನ್ನಿ ಎನ್ನುತ್ತಾಳೆ. ಸಂಜು ಒಳಗೆ ಬಂದು ಅನುಗೆ ಅಕ್ಷತೆ ಹಾಕಿ ಒಳ್ಳೆಯದಾಗಲಿ ಎಂದು ಹೇಳುತ್ತಾನೆ.

ಅನು ಹಿಂದೆ ಬಿದ್ದಿರುವವರು ಯಾರು..?
ಇನ್ನು ಇಷ್ಟೆಲ್ಲಾ ಆದ ಮೇಲೆ ಸಂಜು ಮನದಲ್ಲಿ ಅನುಗೆ ಆಗದವರು ಯಾರೋ ಆಕೆಯ ಕೊಲೆಗೆ ಸಂಚು ರೂಪಿಸಿದ್ದಾರೆ ಎಂಬ ಅನುಮಾನ ಕಾಡುತ್ತಿದೆ. ಈ ವಿಚಾರವನ್ನು ಅನುಗೆ ಹೇಳಲು ಪ್ರಯತ್ನಿಸಿದರು ಆಗಿಲ್ಲ. ಹಾಗಾಗಿ ಶಾರದಾ ಬಳಿ ಸಂಜು ಹೋಗಿ ಈ ಮಾತನ್ನು ಹೇಳುತ್ತಾನೆ. ಅನುಗೆ ಯಾರಾದರೂ ಆಗದವರು ಇದ್ದಾರಾ..? ಎಂದು ಪ್ರಶ್ನೆ ಮಾಡುತ್ತಾನೆ. ಈ ಮಾತನ್ನು ಕೇಳಿದ ಶಾರದಾ ಶಾಕ್ ಆಗುತ್ತಾಳೆ. ಈಗ ಸಂಜು ಅನು ಹಿಂದೆ ಬಿದ್ದಿರುವವರನ್ನು ಕಂಡು ಹಿಡಿಯುತ್ತಾನಾ ಕಾದು ನೋಡಬೇಕಿದೆ.


Click it and Unblock the Notifications











