Jothe Jotheyali: ಸುಬ್ಬು ಬಾಡಿಗೆ ಮನೆ ಮಾಡಲು ಕಾರಣವೇನು..?

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಸುಬ್ಬುಗೆ ತನ್ನ ಮಗಳು ಅನುಗೆ ರಾಜನಂದಿನಿ ವಿಲಾಸದಲ್ಲಿ ನೆಮ್ಮದಿ ಇಲ್ಲ. ಮದುವೆಯಾಗಿ ಬಂದ ದಿನದಿಂದಲೂ ಒಂದಲ್ಲ ಒಂದು ಕಷ್ಟವನ್ನು ಅನುಭವಿಸುತ್ತಿದ್ದಾಳೆ.

ಅದಕ್ಕೆ ಅವಳನ್ನು ತನ್ನ ಮನೆಗೆ ವಾಪಸ್ ಕರೆದುಕೊಂಡು ಹೋಗಬೇಕು ಎಂದು ನಿರ್ಧಾರ ಮಾಡಿದ್ದಾನೆ. ಸುಬ್ಬು ನಿರ್ಧಾರ ಯಾರಿಗೂ ಇಷ್ಟವಿಲ್ಲ. ಆದರೂ ಎಲ್ಲರೂ ಸುಮ್ಮನಿದ್ದಾರೆ.

ಇದಕ್ಕೆ ಕಾರಣ, ಸುಬ್ಬುವಿಗೆ ಈಗಾಗಲೇ ಒಮ್ಮೆ ಹಾರ್ಟ್ ಅಟ್ಯಾಕ್ ಆಗಿರುವುದು. ಸುಬ್ಬುಗೆ ಹಾರ್ಟ್ ಪ್ರಾಬ್ಲಮ್ ಮತ್ತೆ ಸಮಸ್ಯೆ ಆಗಬಹುದು ಎಂದು ಅನುಳನ್ನು ಕಳಿಸಲು ಎಲ್ಲರೂ ಒಪ್ಪಿದ್ದಾರೆ.

ಅನುಗೆ ತಾಂಬೂಲ ಕೊಟ್ಟು ಕಳಿಸಿದ ಮಾನ್ಸಿ

ಅನುಗೆ ತಾಂಬೂಲ ಕೊಟ್ಟು ಕಳಿಸಿದ ಮಾನ್ಸಿ

ಅನು ಬಟ್ಟೆಗಳನ್ನೆಲ್ಲಾ ಪ್ಯಾಕ್ ಮಾಡಿಕೊಂಡು ಹೊರಟಿದ್ದು, ಹರ್ಷ ಇದಕ್ಕೆ ಬೇಸರ ಮಾಡಿಕೊಂಡಿದ್ದಾನೆ. ಅದಕ್ಕಾಗಿ ಅನು ಹರ್ಷನನ್ನು ಸಪರೇಟ್ ಆಗಿ ಕರೆದುಕೊಂಡು ಹೋಗಿ ಸಮಾಧಾನ ಮಾಡುತ್ತಿದ್ದಾಳೆ. ಬೇಗ ಬರುತ್ತೀನಿ. ಈಗ ಅಪ್ಪನ ಆರೋಗ್ಯ ಮುಖ್ಯ ಎನ್ನುತ್ತಾಳೆ. ಹರ್ಷ ಕೂಡ ಮನಸ್ಸಿಲ್ಲದಿದ್ದರೂ ಅತ್ತಿಗೆಯನ್ನು ಕಳಿಸಿಕೊಡಲು ಒಪ್ಪಿಕೊಳ್ಳುತ್ತಾನೆ. ಮಾನ್ಸಿ ಕೂಡ ಅಳುತ್ತಾ ಅನುಗೆ ತಾಂಬುಲ ಕೊಡುತ್ತಾಳೆ. ಅನು ಮನಸ್ಸಿಲ್ಲದಿದ್ದರೂ, ತಾಂಬುಲ ಸ್ವೀಕರಿಸಿ ಹೊರಡಲು ಸಜ್ಜಾಗುತ್ತಾಳೆ. ಶಾರದಾ ಅನುಗೆ ಹುಷಾರಾಗಿ ಹೋಗಿ ಬರುವುದಕ್ಕೆ ಹೇಳುತ್ತಾಳೆ.

ಸುಬ್ಬುಗೆ ಬೈದ ಪುಷ್ಪಾ

ಸುಬ್ಬುಗೆ ಬೈದ ಪುಷ್ಪಾ

ಸುಬ್ಬುಗೆ ಅನು ನಿಮ್ಮ ಮಗಳು ಮಾತ್ರವಲ್ಲ. ಅವಳು ನನ್ನ ಮಗಳು ಕೂಡ ಜೋಪಾನ ಎಂದು ಶಾರದಾ ದೇವಿ ಹೇಳುತ್ತಾಳೆ. ಇದರಿಂದ ಕೋಪಗೊಂಡ ಸುಬ್ಬು ಅನುಳನ್ನು ಕೈ ಹಿಡಿದು ಎಳೆದುಕೊಂಡು ಹೋಗುತ್ತಾನೆ. ಸುಬ್ಬು ಕ್ಯಾಬ್ ಕೂಡ ಬುಕ್ ಮಾಡಿರುತ್ತಾನೆ. ಪುಷ್ಪಾ ಬೇಸರದಲ್ಲೇ ಅಳುತ್ತಾ ಹೊರಡುತ್ತಾಳೆ. ಆಚೆ ಹೋದ ಮೇಲೆ ಪುಷ್ಪಾ, ಅನುಗೆ ಬೈಯುತ್ತಾಳೆ. ಅನು ವಠಾರದವರಿಗೆ ಏನು ಹೇಳುತ್ತೀರಾ ಎಂದು ಕೇಳುತ್ತಾಳೆ. ಅದಕ್ಕೆ ಸುಬ್ಬು ಬೇರೆಯವರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಎಂದು ಹೇಳಿ ಕಾರನ್ನು ಹತ್ತುತ್ತಾನೆ.

ಬಾಡಿಗೆ ಮನೆ ಮಾಡಿದ ಸುಬ್ಬು

ಬಾಡಿಗೆ ಮನೆ ಮಾಡಿದ ಸುಬ್ಬು

ಇತ್ತ ಅನು ಮನೆಯಿಂದ ಹೊರಗೆ ಬಂದ ಕೂಡಲೇ ಶಾರದಾಳನ್ನು ಹರ್ಷ ವಿಚಾರಿಸುತ್ತಾನೆ. ಅನು ಅತ್ತಿಗೆ ಕರೆದುಕೊಂಡು ಹೋಗುತ್ತಿದ್ದರೂ ಯಾಕೆ ನೀವೇನೂ ಮಾತನಾಡಿಲ್ಲ ಎಂದು ಪ್ರಶ್ನೆ ಮಾಡುತ್ತಾನೆ. ಅದಕ್ಕೆ ಶಾರದಾ ನಾನು ಸುಮ್ಮನಿದ್ದೀನಿ ಅಂದುಕೊಳ್ಳಬೇಡ ಇದಕ್ಕೆಲ್ಲಾ ಕಾರಣ ಇದೆ. ಅನುಗೆ ವಠಾರದಲ್ಲಿ ನೆಮ್ಮದಿ ಇರುತ್ತೆ ಅನ್ನೋದು ಸುಬ್ಬು ವಾದ. ಆದರೆ ಅನುಗೆ ರಾಜನಂದಿನಿ ವಿಲಾಸದಲ್ಲಿ ನೆಮ್ಮದಿ ಇರೋದು. ಅನುಳನ್ನು ಇಲ್ಲಿಗೆ ಕರೆದುಕೊಂಡು ಬರೋದಕ್ಕೆ ನನ್ನ ಬಳಿ ಸಾಕ್ಷಿಗಳಿವೆ. ಆದರೆ ಸುಬ್ಬು ಹಾರ್ಟ್ ಪ್ರಾಬ್ಲಮ್ ಇದೆ ಅನ್ನೋ ಒಂದೇ ಕಾರಣಕ್ಕೆ ಸುಮ್ಮನಿದ್ದೇನೆ ಎಂದು ಹೇಳುತ್ತಾಳೆ. ಇದೇ ವೇಳೆಗೆ ಸುಬ್ಬು ತನ್ನ ಆಫೀಸ್ ಮ್ಯಾನೇಜರ್‌ಗೆ ಕಾಲ್ ಮಾಡಿ ಬಾಡಿಗೆ ಮನೆ ಬಗ್ಗೆ ಮಾತನಾಡುತ್ತಾನೆ. ತನ್ನ ಮನೆ ರಿಪೇರಿ ಇದೆ ಹಾಗಾಗಿ ಬಾಡಿಗೆಗೆ ಮನೆ ಬೇಕು ಎಂದು ಕೇಳುತ್ತಾನೆ. ಈ ಮಾತನ್ನು ಕೇಳಿದ ಪುಷ್ಪಾ ಮತ್ತೆ ಜಗಳ ಮಾಡುತ್ತಾಳೆ.

ಝೇಂಡೇಗೆ ಹುಚ್ಚನಿಂದ ಬಿಡುಗಡೆ ಸಿಗುತ್ತಾ..?

ಝೇಂಡೇಗೆ ಹುಚ್ಚನಿಂದ ಬಿಡುಗಡೆ ಸಿಗುತ್ತಾ..?

ಇತ್ತ ಝೇಂಡೇ ಮನೆಗೆ ಬಂದ ಹುಚ್ಚ ಊಟ ಊಟ ಎಂದು ಕೇಳುತ್ತಿರುತ್ತಾನೆ. ಝೇಂಡೇ ಕಿಟಕಿಯಿಂದ ಹುಚ್ಚನನ್ನು ನೋಡಿ ಬೀಗ ತೆಗೆಯಲು ಹೇಳುತ್ತಾನೆ. ಆಗ ಹುಚ್ಚ ಪಾಯಸ ಕೇಳುತ್ತಾನೆ. ಅದಕ್ಕೆ ಝೇಂಡೇ ಪಾಯಸ, ಹೋಳಿಗೆ ಎಲ್ಲಾ ಕೊಡಿಸುತ್ತೀನಿ ಆದರೆ ರೂಮ್ ಬೀಗ ತೆಗಿ ಎಂದು ಹೇಳುತ್ತಾನೆ. ಇದಕ್ಕೆ ಹುಚ್ಚ ಮನೆಯೊಳಗೆ ಬಂದು ಬೀಗ ತೆಗೆಯಲು ಬರುತ್ತಾನೆ. ಆದರೆ ಹುಚ್ಚ ಬೀಗ ತೆಗೆಯುತ್ತಾನಾ..? ಇಲ್ಲ ಬೇಕಂತ ಕೂಡಿ ಹಾಕುತ್ತಾನಾ..?

More from Filmibeat

English summary
Jothe Jotheyali Serial 15th February Episode Written Update. While subbu taking anu in cab he speaks with owner for rent house. Pushpa scolds subbu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X