Jothe Jotheyali: ಆರ್ಯನನ್ನು ಮಗಳಿಂದ ದೂರ ಇಡಲು ಪ್ರಯತ್ನಿಸುತ್ತಿರುವ ಸುಬ್ಬು

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರಾಧನಾ, ಅನು ಹೇಳಿದಂತೆ ಶಾರದಾ ದೇವಿ ಅನ್ನು ಪ್ರೀತಿಯಿಂದ ಕಾಳಜಿ ವಹಿಸಿ ನೋಡಿಕೊಳ್ಳುತ್ತಿದ್ದಾಳೆ. ಊಟ ಬೇಡ ಎಂದರೂ ಬಲವಂತವಾಗಿ ಶಾರದಾಳಿಗೆ ಊಟ ಬಡಿಸಿದ್ದಾಳೆ.

ಇದೇ ವೇಳೆಗೆ ಆರ್ಯ ಬಂದಿದ್ದು, ಆತನಿಗೂ ಬಲವಂತವಾಗಿ ಊಟ ಬಡಿಸಲು ಮುಂದಾಗುತ್ತಾಳೆ. ಆಗ ಆರ್ಯ ನೀವು ನಮ್ಮ ಮನೆಯ ಅತಿಥಿ ಎಂದು ಹೇಳಿ ಆರ್ಯನೇ ಆರಾಧನಾಳಿಗೆ ಊಟ ಬಡಿಸುತ್ತಾನೆ.

ಆಗ ಆರಾಧನಾ ಮತ್ತೆ ವಿಶ್ವಾಸ್ ದೇಸಾಯಿ ಅನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕುತ್ತಾಳೆ. ಆರ್ಯ, ಆರಾಧನಾಗೆ ಸಮಾಧಾನ ಹೇಳುತ್ತಾನೆ. ನಂತರ ಎಲ್ಲರೂ ಒಟ್ಟಿಗೆ ಊಟ ಮಾಡುತ್ತಾರೆ.

ಆರ್ಯನ ಕಪಾಳಕ್ಕೆ ಹೊಡೆದ ಶಾರದಾ

ಆರ್ಯನ ಕಪಾಳಕ್ಕೆ ಹೊಡೆದ ಶಾರದಾ

ಆರ್ಯ ತನ್ನ ರೂಮಿನ ಬಾಲ್ಕನಿಯಲ್ಲಿ ನಿಂತು ವಿಂಡ್ ಚೈನ್ ಬೆಲ್ ಅನ್ನು ನೋಡುತ್ತಾ ಅನುಳನ್ನು ಮಿಸ್ ಮಾಡಿಕೊಳ್ಳುತ್ತಿರುತ್ತಾನೆ. ಈ ವೇಳೆ ಬಂದ ಶಾರದಾ, ಆರ್ಯನಿಗೆ ಬುದ್ಧಿ ಹೇಳುತ್ತಾಳೆ. ಅನುಳನ್ನು ಕರೆದುಕೊಂಡು ಬಾ ಎನ್ನುತ್ತಾಳೆ. ಆದರೆ, ಆರ್ಯ ಅನು ಅಲ್ಲಿ ತನ್ನ ಬದುಕನ್ನು ಕಟ್ಟಿಕೊಳ್ಳಲಿ ಎಂದು ಬೇಜವಾಬ್ದಾರಿಯಿಂದ ಮಾತನಾಡುತ್ತಾನೆ. ಅಷ್ಟೇ ಅಲ್ಲದೇ ಆರ್ಯ, ಅನು ತನ್ನ ಜೊತೆಗೆ ಇದ್ದರೆ, ತಾನು ಝೇಂಡೇ ಜೊತೆಗೆ ಇರುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಅನು ದೂರವೇ ಇರಲಿ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿಸಿಕೊಂಡು ಸಿಟ್ಟಾದ ಶಾರದಾ ಆರ್ಯನ ಕೆನ್ನೆಗೆ ಬಾರಿಸುತ್ತಾಳೆ. ನಂತರ ಅನು ಕೇವಲ ಸುಬ್ಬು ಮಗಳಾಗಿ ಈ ಮನೆಯಿಂದ ಹೋಗಿಲ್ಲ. ಅವಳು ನಿನ್ನ ಮಗುವಿನ ತಾಯಿ ಆಗಿ ಹೋಗಿದ್ದಾಳೆ. ಅದು ಏನು ಮಾಡುತ್ತೀಯೋ ಏನೋ ಗೊತ್ತಿಲ್ಲ. ಅನು ನಮ್ಮ ಮನೆಗೆ ಬರಬೇಕು ಅಷ್ಟೇ ಎಂದು ಬೈದು ಹೋಗುತ್ತಾಳೆ.

ಅನುಗೆ ಫೋನ್ ಮಾಡಿದ ಆರ್ಯ

ಅನುಗೆ ಫೋನ್ ಮಾಡಿದ ಆರ್ಯ

ಅನು ತನ್ನ ಮಗುವಿಗೆ ತಾಯಿ ಆಗುತ್ತಿದ್ದಾಳೆ ಎಂಬುದನ್ನು ತಿಳಿದ ಆರ್ಯ ಖುಷಿ ಪಡುತ್ತಾನೆ. ಅನುಳನ್ನು ನೋಡಬೇಕು ಎಂದು ಚಡಪಡಿಸುತ್ತಾನೆ. ನಾನು ತಂದೆ ಆಗುತ್ತಿದ್ದೇನೆ. ಅನು ಹೊಟ್ಟೆಯಲ್ಲಿ ನನ್ನ ಮಗು ಬೆಳೀತಿದೆ ಎಂದು ಒದ್ದಾಡುತ್ತಾನೆ. ಅನುಳನ್ನು ಮನೆಗೆ ವಾಪಸ್ ಕರೆಸಿಕೊಳ್ಳಬೇಕು ಎಂದು ಅನುಗೆ ಫೋನ್ ಮಾಡುತ್ತಾನೆ. ಅನು ಫೋನ್ ಅನ್ನು ಎಲ್ಲೋ ಇಟ್ಟಿರುತ್ತಾಳೆ. ಹಾಗಾಗಿ ಮೊಬೈಲ್ ವೈಬ್ರೇಟ್ ಆಗುತ್ತಿರುತ್ತದೆ. ನಂತರ ರಿಸೀವ್ ಮಾಡಿದರೆ ಆಯ್ತು ಎಂದು ಸುಮ್ಮನಾಗುತ್ತಾರೆ.

ತಪ್ಪಿಸಿಕೊಂಡ ಝೇಂಡೇ

ತಪ್ಪಿಸಿಕೊಂಡ ಝೇಂಡೇ

ಅನು, ಸುಬ್ಬು ಹಾಗೂ ಪುಷ್ಪಾ ಬಾಡಿಗೆ ಮನೆಗೆ ಬರುತ್ತಾರೆ. ಪುಷ್ಪಾ ಅನುಗೆ ಬೈಯುತ್ತಾಳೆ. ನಿನ್ನ ಗಂಡನ ಮನೆಗೆ ಹೋಗು ಇದು ಸರಿಯಲ್ಲ. ಅಪ್ಪನ ಜೊತೆ ಸೇರಿಕೊಂಡು ನಿನ್ನ ಬದುಕನ್ನು ಹಾಳು ಮಾಡಿಕೊಳ್ಳಬೇಡ ಎಂದು ಬುದ್ಧಿ ಹೇಳುತ್ತಾಳೆ. ಆದರೆ, ಅನು ಇಲ್ಲ ಈ ಬ್ರೇಕ್ ನನಗೂ ಬೇಕಿತ್ತು. ಅಪ್ಪನ ಆರೋಗ್ಯಕ್ಕೆ ಸಮಸ್ಯೆ ಆಗಬಾರದು. ಆರ್ಯ ಸರ್ ನನ್ನ ಮಿಸ್ ಮಾಡಿಕೊಂಡರೆ ಅವರಿಗೆ ನನ್ನ ಬೆಲೆ ಗೊತ್ತಾಗುತ್ತೆ. ಸ್ವಲ್ಪ ದಿನ ಇಲ್ಲೇ ಇರುತ್ತೀನಿ ಎಂದು ಹೇಳುತ್ತಾಳೆ. ಇತ್ತ ಹುಚ್ಚ ಝೇಂಡೇ ಇದ್ದ ರೂಮಿನ ಬೀಗವನ್ನು ತೆಗೆಯುತ್ತಾನೆ. ಝೇಂಡೇ ಬಾಗಿಲು ತೆರೆಯುತ್ತಿದ್ದಂತೆ ಹುಚ್ಚನನ್ನು ತಳ್ಳಿ ಓಡಿ ಹೋಗುತ್ತಾನೆ.

ಅನುಳನ್ನು ಕಳೆದುಕೊಳ್ಳುತ್ತಾನಾ ಆರ್ಯ?

ಅನುಳನ್ನು ಕಳೆದುಕೊಳ್ಳುತ್ತಾನಾ ಆರ್ಯ?

ಎರಡನೇ ಬಾರಿಗೆ ಆರ್ಯ ಅನುಗೆ ಕಾಲ್ ಮಾಡುತ್ತಾನೆ. ಆಗ ಸುಬ್ಬು ರಿಸೀವ್ ಮಾಡುತ್ತಾನೆ. ಆರ್ಯನಿಗೆ ನಿಮ್ಮಿಂದ ದೂರಾಗಬೇಕು ಎಂದರೆ, ನನ್ನ ಮಗಳಿಗೆ ನಿಮ್ಮ ನೆನಪು ಬರಬಾರದು. ಆದಷ್ಟು ದೂರವಿದ್ದರೆ, ನನ್ನ ಮಗಳಿಗೆ ಒಳ್ಳೆಯದು ಎಂದು ಹೇಳುತ್ತಾನೆ. ಇದರಿಂದ ಬೇಸರಗೊಂಡ ಆರ್ಯ ಫೋನ್ ಕಟ್ ಮಾಡುತ್ತಾನೆ. ಸುಬ್ಬು ಕೋಪದಿಂದ ಆರ್ಯ ಮತ್ತು ಅನು ಸಂಪೂರ್ಣವಾಗಿ ದೂರಾಗುತ್ತಾರಾ..?

More from Filmibeat

English summary
Jothe Jotheyali Serial 17th February Episode Written Update. Subbu brings pushpa and anu for rented house. Subbu warns arya not to keep in touch with anu. know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X