'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಹೊಸ ಪಾತ್ರ ಎಂಟ್ರಿ : ಸುಚಿ ಅಲ್ಲ ಭಾವನಾ

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿ ಕಥೆಗೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಅನು ವಾಪಸ್ ತನ್ನ ಮನೆಗೆ ಆಗಮಿಸುತ್ತಿದ್ದಾಳೆ. ಇದರಿಂದ ಎಲ್ಲರೂ ಖುಷಿ ಪಟ್ಟಿದ್ದಾರೆ.

ಇನ್ನು ಮಾನ್ಸಿ ಈಗ ಯಾರದ್ದೋ ಮಾತನ್ನು ಕೇಳಿ ಈಗ ತನ್ನ ಮನೆಯವರ ಮೇಲೆ ಕೋಪಗೊಂಡಿದ್ದಾಳೆ. ಮನೆಯನ್ನು ಬಿಟ್ಟು ಬ್ಯಾಗ್ ಪ್ಯಾಕ್ ಮಾಡಿಕೊಂಡು ಹೋಗಿದ್ದಾಳೆ.

ಆರಾಧನಾ ಬೇರೆ ಆರ್ಯನ ಜೊತೆಗಿರಲು ಸದಾ ಬಯಸಿದ್ದು, ಅನು ಮೇಲೆ ಕಾರಣವೇ ಇಲ್ಲದೇ, ಕಿಡಿ ಕಾರುತ್ತಿದ್ದಾಳೆ. ಹೀಗಿರುವಾಗಲೇ ಧಾರಾವಾಹಿಯಲ್ಲಿ ಹೊಸ ಹೊಸ ಪಾತ್ರಗಳು ಎಂಟ್ರಿ ಕೊಡುತ್ತಿವೆ.

ಆರಾಧನಾ ತಂಗಿ ಪಾತ್ರದಲ್ಲಿ ನಟನೆ

ಆರಾಧನಾ ತಂಗಿ ಪಾತ್ರದಲ್ಲಿ ನಟನೆ

ಒಂದು ಪಾತ್ರವನ್ನು ಈಗಾಗಲೇ ಪರಿಚಯಿಸಲಾಗಿದೆ. ಮತ್ತೊಂದು ಪಾತ್ರ ಶೀಘ್ರದಲ್ಲೇ ಎಂಟ್ರಿ ಕೊಡಲಿದೆ. ಇದರಲ್ಲಿ ಆರಾಧನಾ ಪಾತ್ರದ ಸಹೋದರಿಯಾಗಿ ಭಾವನಾ ಎಂಬ ಪಾತ್ರ ಬರ್ತಿದೆ. ಇನ್ನು ಆರಾಧನಾಳನ್ನು ನೋಡಲು ಫಾರಿನ್‌ನಿಂದ ಭಾವನಾ ಬಂದಿದ್ದಾಳೆ. ಅವಳ ಜೊತೆಗೆ ತಾಯಿಯನ್ನು ಕರೆ ತಂದಿದ್ದಾಳೆ. ಆದರೆ ತಾಯಿಯ ದರ್ಶನ ಆಗಿಲ್ಲ. ಭಾವನಾ ಆರ್ಯನನ್ನು ವಿಶ್ವಾಸ್ ಭಾವ ಎಂದು ಭಾವಿಸಿದ್ದಾಳೆ. ಆರಾಧನಾ, ವಿಶ್ವಾಸ್ ಸಾವನ್ನಪ್ಪಿರುವ ವಿಚಾರವನ್ನು ಹೇಳೇ ಇಲ್ಲ. ಇದರಿಂದ ಮುಂದೆ ಮತ್ಯಾವ ಸಂಕಷ್ಟ ಕಾದಿದ್ಯೋ ಗೊತ್ತಿಲ್ಲ.

ಅಣ್ಣನನ್ನು ಗೋಳಾಡಿಸುವ ತಂಗಿ

ಅಣ್ಣನನ್ನು ಗೋಳಾಡಿಸುವ ತಂಗಿ

ಇನ್ನು ಈ ಭಾವನಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ಬೇರೆ ಯಾರೂ ಅಲ್ಲ 'ಕನ್ನಡತಿ' ಧಾರಾವಾಹಿಯ ಸುಚಿ. ಅಂದರೆ, ಈ ನಟಿಯ ಹೆಸರು ಅಮೃತಾ ಮೂರ್ತಿ. ಕನ್ನಡತಿ ಧಾರಾವಾಹಿಯಲ್ಲಿ ಸುಚಿತ್ರಾ ಆಗಿ ನಟಿಸಿದ್ದ ಅಮೃತಾ ಎಲ್ಲರ ಮನ ಗೆದ್ದಿದ್ದರು. ಪ್ರತಿಯೊಂದು ವಿಚಾರದಲ್ಲೂ ಅಣ್ಣನನ್ನು ಗೋಳಾಡಿಸುತ್ತಿದ್ದ ಸುಚಿ ಪಾತ್ರವನ್ನು ಎಲ್ಲರೂ ಇಷ್ಟ ಪಟ್ಟಿದ್ದರು. ಸುಚಿ ಪಾತ್ರದಿಂದ ಚಿರಪರಿಚಿತರಾಗಿದ್ದ ಅಮೃತಾ ಮೂರ್ತಿ ಅವರನ್ನು ಧಾರಾವಾಹಿ ಮುಗಿದ ಮೇಲೆ ಪ್ರೇಕ್ಷಕರು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ರಿಯಾಲಿಟಿ ಶೋನಲ್ಲೂ ಭಾಗಿ

ರಿಯಾಲಿಟಿ ಶೋನಲ್ಲೂ ಭಾಗಿ

ಇನ್ನು ನಟಿ ಅಮೃತಾ ಮೂರ್ತಿ ಅವರು ಮೂಲತಃ ಚಿಕ್ಕಮಗಳೂರಿನ ಹುಡುಗಿ. ಪಿಯುಸಿ ಮುಗಿಯುತ್ತಿದ್ದಂತೆಯೇ ನಟಿಸುವ ಆಸೆಯಿಂದ ಆಡಿಷನ್‌ ನೀಡುತ್ತಿದ್ದರು. ಬಿಎಸ್ಸಿ ಫ್ಯಾಷನ್ ಮತ್ತು ಅಪಾರೆಲ್ ಡಿಸೈನಿಂಗ್ ಕಲಿತರು. ಓದು ಮುಗಿದ ಬಳಿಕ ಮಾಡೆಲಿಂಗ್ ಕ್ಷೇತ್ರಕ್ಕೆ ಬಂದು ಈಗ ನಟಿಯಾಗಿ ಹೊರ ಹೊಮ್ಮಿದ್ದಾರೆ. ಇನ್ನು ನಟಿ ಅಮೃತಾ ಮೂರ್ತಿ ಡ್ಯಾನ್ಸಿಂಗ್ ಚಾಂಪಿಯನ್ಶಿಪ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಇದರಲ್ಲಿ ತಮ್ಮ ಬಿಂದಾಸ್ ಡ್ಯಾನ್ಸ್‌ನಿಂದ ಎಲ್ಲರ ಗಮನ ಸೆಳೆದಿದ್ದರು.

ಸಿನಿಮಾದಲ್ಲಿ ನಟನೆ

ಸಿನಿಮಾದಲ್ಲಿ ನಟನೆ

ನಟಿ ಅಮೃತಾ ಮೂರ್ತಿ ಅವರು ಧಾರಾವಾಹಿ ಅಷ್ಟೇ ಅಲದೇ, 'ಅಪರಾಧಿ ನಾನಲ್ಲ' ಎಂಬ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಪ್ರಶಾಂತ್ ಆಳ್ವ ಕಲ್ಲಡ್ಕ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಹಲವರು ಸೇರಿ ನಿರ್ಮಾಣ ಮಾಡಿದ್ದಾರೆ. ನವೀನ್ ಡಿ. ಪಡೀಲ್, ಅನೂಪ್ ಸಾಗರ್, ಸ್ರುಶಾ ಸಾಮಾನಿ, ಪ್ರಮೋದ್ ಶೆಟ್ಟಿ, ದಿನೇಶ್ ಮಂಗಳೂರು, ನೀತು ಶೆಟ್ಟಿ, ಜ್ಯೋತಿ ರೈ, ತಿಮ್ಮಪ್ಪ ಕುಲಾಲ್, ಅರ್ಜುನ್ ಕಜೆ, ಪ್ರತೀಕ್ ಶೆಟ್ಟಿ ಸೇರಿದಂತೆ ಹಲವರು ನಟಿಸಿದ್ದಾರೆ. ಇದರಲ್ಲಿ ಹೆಚ್ಚು ಹೊಸಬರೇ ನಟಿಸಿದ್ದಾರೆ.

More from Filmibeat

English summary
jothe jotheyali Serial 17th March Episode Written Update. Here is the details about new character bhavana entry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X