Jothe Jotheyali: ಅನು ಕತ್ತು ಹಿಸುಕಿದ ಝೇಂಡೇ: ಅನು ಕಥೆ ಮುಗೀತಾ..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ರಮ್ಯಾ ಹಾಗೂ ಕರುಣಾಕರ ತಮಗೆ ಗೊತ್ತಿಲ್ಲದೇ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ. ಕಾರಣಾಂತರಗಳಿಂದ ಇಬ್ಬರ ಎಂಗೇಜ್‌ಮೆಂಟ್ ಮುರಿದು ಬಿದ್ದಿತ್ತು. ಹೀಗಿದ್ದರೂ ಕೂಡ ರಮ್ಯಾ ಹಾಗೂ ಕರುಣಾಕರ ಮದುವೆಯಾಗಲು ಮುಂದಾಗಿದ್ದರು. ಇದಕ್ಕೆ ಅನು ಅಡ್ಡ ಬರುತ್ತಿದ್ದಳು. ಅಂದರೆ ರಮ್ಯಾ ಯಾವಾಗಲೂ ಅನು ಲೈಫ್ ಸರಿ ಹೋಗುವವರೆಗೂ ಮದುವೆಯಾಗಲ್ಲ ಎಂದು ಮುಂದೆ ತಳ್ಳುತ್ತಿದ್ದಳು.
ಕರುಣಾಕರ ಫೋನ್ ಮಾಡಿದಾಗಲೆಲ್ಲಾ ಅನು ಬಗ್ಗೆ ಹೇಳುತ್ತಿದ್ದಳು. ಆದರೆ ಕರುಣಾಕರನ ಒಂದು ಮಾತನ್ನು ಕೂಡ ಕೇಳುತ್ತಿರಲಿಲ್ಲ. ಈಗ ಅನು ಜೀವನ ಸರಿ ಹೋಯ್ತು ಎನ್ನುವಾಗ ಕರುಣಾಕರ, ರಮ್ಯಾ ಕೈಗೆ ತನ್ನ ಮದುವೆಯ ಆಹ್ವಾನ ಪತ್ರಿಕೆಯನ್ನು ನೀಡಿ ಗುಡ್ ಬೈ ಹೇಳುತ್ತಾನೆ. ಇದರಿಂದ ರಮ್ಯಾಗೆ ನಿರಾಸೆ ಆಗುತ್ತದೆ.

ಆರಾಧನಾಳಿಗೆ ಆರ್ಯನ ಬಿಟ್ಟು ಕೊಟ್ಟ ಅನು
ಇನ್ನು ಅನು, ಆರಾಧನಾಳಿಗೆ ಫೋನ್ ಮಾಡಿ ತಾನು ಬೆಟ್ಟಕ್ಕೆ ಹೋಗುತ್ತಿದ್ದು, ಅಲ್ಲಿ ಝೇಂಡೇ ಅಸಲಿ ಬಣ್ಣವನ್ನು ಬಯಲು ಮಾಡುವುದಾಗಿ ಹೇಳುತ್ತಾಳೆ. ಈ ಸಂದರ್ಭದಲ್ಲಿ ತಾನು ಸಾವನ್ನಪ್ಪಿದರೂ ಆಶ್ಚರ್ಯವಿಲ್ಲ ಎಂದು ಹೇಳಿದ್ದು, ಏನೇ ಆದರೂ ಪರವಾಗಿಲ್ಲ. ಆರ್ಯನ ಜೊತೆಗೆ ನೀವು ಮುಂದಿನ ಬದುಕನ್ನು ನಡೆಸಿ. ಇದಕ್ಕೆ ನನ್ನ ಒಪ್ಪಿಗೆ ಇದೆ ಎಂದು ಹೇಳಿರುತ್ತಾಳೆ. ಈ ಮಾತಿನಿಂದ ಆರಾಧನಾಳಿಗೆ ಖುಷಿಯಾಗುತ್ತದೆ.
ಪಾರ್ಟಿಗೆ ಬಂದ ಆರ್ಯ ಅನುಳನ್ನು ಮನೆಯಲ್ಲಿ ಹುಡುಕುತ್ತಿರುತ್ತಾನೆ. ಇದೇ ವೇಳೆಗೆ ಆರಾಧನಾ ಬರುತ್ತಾಳೆ. ಆಗ ಆರ್ಯನಿಗೆ ಬೇಸರವಾಗುತ್ತದೆ. ಆದರೆ, ಆರಾಧನಾ ನಿಮ್ಮನ್ನು ನನಗೆ ಅನು ಉಡುಗೊರೆಯಾಗಿ ಕೊಟ್ಟು ಹೋಗಿದ್ದಾಳೆ. ನನ್ನ ಗಂಡನಂತಿರುವ ನಿಮ್ಮ ಜೊತೆಗೆ ನನ್ನ ಮುಂದಿನ ಬದುಕನ್ನು ನಡೆಸಬಹುದಾ ಎಂದು ಕೇಳುತ್ತಾಳೆ. ಆಗ ಆರ್ಯನಿಗೆ ಶಾಕ್ ಆಗುತ್ತದೆ. ಜೊತೆಗೆ ಕೋಪವೂ ಬರುತ್ತದೆ. ಆದರೆ, ಆರಾಧನಾ ನಾನು ಅಷ್ಟು ಕೆಟ್ಟವಳಲ್ಲ. ನಿಮ್ಮನ್ನು ನನ್ನ ವಿಶ್ವಾಸ್ ಜಾಗದಲ್ಲಿ ನೋಡಿದ್ದು ನಿಜವೇ. ಆದರೆ, ನಿಮ್ಮ ಬದುಕು ನನಗೆ ಬೇಡ. ಅನು ಬೆಟ್ಟಕ್ಕೆ ಹೋಗಿದ್ದಾಳೆ. ಎಂದು ಇರುವ ಸತ್ಯವನ್ನು ಹೇಳುತ್ತಾಳೆ.

ಪುಷ್ಪಾಳಿಗೆ ಪರಿಹಾರ ತಿಳಿಸಿದ ಜೋಗ್ತವ್ವ
ಇತ್ತ ಪುಷ್ಪಾ ಹಾಗೂ ಸುಬ್ಬು ಇಬ್ಬರೂ ಪಾರ್ಟಿಗೆ ಹೋಗಲು ಕಾರಿನಲ್ಲಿ ಬರುತ್ತಿರುತ್ತಾರೆ. ಈ ವೇಳೆ ದಾರಿಯಲ್ಲಿ ಜೋಗ್ತವ್ವ ಕಾಣಿಸಿಕೊಳ್ಳುತ್ತಾಳೆ. ಆಗ ಪುಷ್ಪಾ ಹಾಗೂ ಸುಬ್ಬು ಹೋಗಿ ಜೋಗ್ತವ್ವನನ್ನು ಮಾತನಾಡಿಸುತ್ತಾರೆ. ಆಗ ಜೋಗ್ತವ್ವ ಮೊದಲು ದೇವಸ್ಥಾನಕ್ಕೆ ಹೋಗಿ ಮಗಳು ಮತ್ತು ಅಳಿಯನ ಹೆಸರಲ್ಲಿ ಪೂಜೆ ಮಾಡಿಸಿ. ಇಬ್ಬರಿಗೂ ಪ್ರಸಾದವನ್ನು ಕೊಟ್ಟು. ನಾನು ಕೊಟ್ಟ ಅರಿಶಿನದ ಕೊಂಬನ್ನು ಅಳಿಯನ ಕೈಯಲ್ಲಿ ಮಗಳಿಗೆ ಕಟ್ಟಿಸು ಎಲ್ಲಾ ಒಳ್ಳೆಯದಾಗುತ್ತದೆ ಎಂದು ಹೇಳುತ್ತಾಳೆ.
ಬೆಟ್ಟದಲ್ಲಿ ಝೇಂಡೇ ಭೇಟಿ ಮಾಡಿದ ಅನು
ಅನು ದೇವಸ್ಥಾನಕ್ಕೆ ತೆರಳಿ ರಾಜನಂದಿನಿ ಹೆಸರಲ್ಲಿ ಅರ್ಚನೆಯನ್ನು ಮಾಡಿಸಿ, ಝೇಂಡೇ ಅನ್ನು ಮಟ್ಟ ಹಾಕಲು ಶಕ್ತಿ ಕೊಡು ಎಂದು ಬೇಡಿಕೊಂಡು ಬೆಟ್ಟಕ್ಕೆ ತೆರಳಿದ್ದಾಳೆ. ಝೇಂಡೇ, ರಾಜನಂದಿನಿಯನ್ನು ಕೊಂದ ಕ್ಷಣವನ್ನು ನೆನಪಿಸಿಕೊಂಡು ನಿಂತಿರುವಾಗಲೇ ಝೇಂಡೇ ಅಲ್ಲಿಗೆ ಬರುತ್ತಾನೆ. ಆಗ ಅನು, ಝೇಂಡೇಗೆ ನೀವೇ ಬರ್ತೀರಾ ಅಂತ ನನಗೆ ಚೆನ್ನಾಗಿ ಗೊತ್ತಿತ್ತು ಎಂದಾಗ ಝೇಂಡೇಗೆ ಒಂದು ಕ್ಷಣ ಭಯವಾಗುತ್ತದೆ.

ಅನುಳನ್ನು ಕೊಲ್ಲಲು ಯತ್ನಿಸಿದ ಝೇಂಡೇ
ಹಾಗಿದ್ದರೂ ಕೂಡ ಝೇಂಡೇ ಮತ್ತದೇ ಹಳೆಯ ಚಾಳಿಯಲ್ಲಿ ಮಾತನಾಡುತ್ತಿರುತ್ತಾನೆ. ಅನು, ಝೇಂಡೇಯ ಬಣ್ಣವನ್ನು ಬಯಲಿಗೆಳೆಯಲು ಪ್ರಯತ್ನಿಸುತ್ತಾಳೆ. ಆಗ ನನ್ನ ಬಗ್ಗೆ ನಿನಗೆ ಗೊತ್ತಾದ ಮೇಲೆ ನೀನು ಈ ಭೂಮಿಯ ಮೇಲೆ ಇರಬಾರದು ಎಂದು ಅನು ಕತ್ತು ಹಿಸುಕಲು ಮುಂದಾಗುತ್ತಾನೆ. ಆಗ ಝೇಂಡೆಯ ಹಣೆಗೆ ಶಾರದಾ ದೇವಿ ಗನ್ ಪಾಯಿಂಟ್ ಅನ್ನು ಹಿಡಿಯುತ್ತಾಳೆ.


Click it and Unblock the Notifications











