ಮತ್ತೆ ಆರ್ಯನ ಕಿಡ್ನ್ಯಾಪ್ ಮಾಡುತ್ತಾನಾ ಝೇಂಡೇ..?

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ರಮ್ಯಾ ನಿಶ್ಚಿತಾರ್ಥಕ್ಕಾಗಿ ಅನು ವಠಾರಕ್ಕೆ ಬಂದಿದ್ದಾಳೆ. ರಮ್ಯಾ, ಅನು ಜೊತೆಗೆ ಮಾತನಾಡಬೇಕು ಎಂದು ಟೆರೆಸ್‌ಗೆ ಕರೆದುಕೊಂಡು ಹೋಗುತ್ತಾಳೆ. ಆದರೆ ಕರುಣಾಕರ ಇದೇ ವೇಳೆಗೆ ಫೋನ್ ಮಾಡುತ್ತಾನೆ.

ಹೀಗಾಗಿ ರಮ್ಯಾ, ಅನು ಬಳಿ ಸಂಪಿಗೆಪುರದ ಬಂಗಲೆಯ ಬಗ್ಗೆ ಏನನ್ನೂ ಹೇಳುವುದಕ್ಕೆ ಆಗುವುದಿಲ್ಲ. ಝೇಂಡೇನೇ ಮುಂದೆ ನಿಂತು ಆ ಬಂಗಲೆಯನ್ನು ತನ್ನ ಹೆಸರಿಗೆ ಮಾಡಿಕೊಂಡಿರುವ ಬಗ್ಗೆ ಅನುಗೆ ಗೊತ್ತಾಗುವುದಿಲ್ಲ.

ಝೇಂಡೇ ಬಹಳ ಚಾಣಾಕ್ಷತನದಿಂದ ನಡೆದುಕೊಂಡಿದ್ದಾನೆ. ಪ್ರಿಯದರ್ಶಿನಿಗೆ ತನಗೆಲ್ಲಾ ಗೊತ್ತು, ಮನಸಿನ ಮಾತುಗಳನ್ನು ಹೇಳಿಕೊಳ್ಳುವಂತೆ ಹೇಳಿದ್ದಾನೆ. ಝೇಂಡೇ ಮಾತನ್ನು ನಂಬಿ ಪ್ರಿಯದರ್ಶಿನಿ ಎಲ್ಲಾ ಸತ್ಯವನ್ನು ಹೇಳಿಬಿಟ್ಟಿದ್ದಾಳೆ.

ಆರ್ಯನನ್ನು ಅನು ಕೊಲ್ಲುತ್ತಾಳೆ ಎಂದ ಕೇಶವ

ಆರ್ಯನನ್ನು ಅನು ಕೊಲ್ಲುತ್ತಾಳೆ ಎಂದ ಕೇಶವ

ಪ್ರಿಯದರ್ಶಿನಿ ಆತುರದಲ್ಲಿ ಝೇಂಡೇಗೆ ಸಂಜುನೇ ಆರ್ಯ ಎಂಬ ಸತ್ಯವನ್ನು ಹೇಳಿದ್ದಾಳೆ. ಝೇಂಡೇ, ಆರ್ಯ ಬದುಕಿರುವ ಸುದ್ದಿಯನ್ನು ಕೇಳಿ ಶಾಕ್ ಆಗಿದ್ದಾನೆ. ಅಲ್ಲದೇ, ಇದೆಲ್ಲಾ ಸತ್ಯವೂ ತನಗೆ ಮುಂಚೆಯೇ ಗೊತ್ತಿತ್ತು ಎಂದು ಕೂಡ ಸುಳ್ಳು ಹೇಳಿದ್ದಾನೆ. ಇನ್ನು ಆರ್ಯನಿಗೆ ಶತ್ರುಗಳಿದ್ದಾರೆ ಎಂದು ಹೇಳುವ ಝೇಂಡೇ, ಈ ಸತ್ಯವನ್ನು ಮತ್ಯಾರಿಗೂ ಹೇಳಬೇಡಿ ಎನ್ನುತ್ತಾನೆ. ಅಲ್ಲದೇ, ಆರ್ಯನನ್ನು ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದು, ಅನು. ಅವಳು ರಾಜನಂದಿನಿ ಎಂದು ಹೇಳಿಕೊಂಡು ಆರ್ಯನಿಗೆ ಮೋಸ ಮಾಡಿದಳು. ಅವನನ್ನು ಕೊಲ್ಲಲು ಯತ್ನಿಸಿದಳು ಎಂದು ಹೇಳುತ್ತಾನೆ. ಪ್ರಿಯದರ್ಶಿನಿ, ಝೇಂಡೇ ಹೇಳಿದ ಮಾತುಗಳನ್ನೆಲ್ಲಾ ಸತ್ಯ ಎಂದು ನಂಬುತ್ತಾಳೆ.

ವೈದ್ಯರನ್ನು ಭೇಟಿಯಾದ ಆರಾಧನಾ

ವೈದ್ಯರನ್ನು ಭೇಟಿಯಾದ ಆರಾಧನಾ

ಇನ್ನು ಝೇಂಡೇ, ಪ್ರಿಯದರ್ಶಿನಿ ಅವರಿಗೆ ಊರಿಗೆ ಹೋಗಿ. ನಿಮಗೇನೇ ಬೇಕಿದ್ದರೂ ನನ್ನನ್ನು ಕೇಳಿ ಎಂದು ಹೇಳುತ್ತಾನೆ. ವೈದ್ಯರು ಆಸ್ಪತ್ರೆಗೆ ಇನ್ನೂ ಬಾರದ ಕಾರಣ ಪ್ರಭು ದೇಸಾಯಿ ಬಂದು ಮನೆಗೆ ಹೋಗೋಣ. ಇನ್ನೊಮ್ಮೆ ಫೋನ್ ಮಾಡಿಕೊಂಡು ಬರೋಣ ಎನ್ನುತ್ತಾನೆ. ಪ್ರಿಯದರ್ಶಿನಿ ತನಗೆ ಝೇಂಡೇ ಸಿಕ್ಕಿದ್ದು, ಆತನಿಗೆ ಎಲ್ಲಾ ಸತ್ಯವನ್ನು ಹೇಳಿದ್ದನ್ನು ಪ್ರಭು ದೇಸಾಯಿಗೆ ತಿಳಿಸುವುದೇ ಇಲ್ಲ. ಮನೆಗೆ ಹಾಗೆ ಹೊರಟು ಬಿಡುತ್ತಾಳೆ. ಇತ್ತ ಆರಾಧನಾ ವೈದ್ಯರನ್ನು ಭೇಟಿಯಾಗಿ ಮಾಹಿತಿ ಪಡೆಯುತ್ತಾಳೆ. ಆಗ ವೈದ್ಯರು ಸಂಜು ಸರಿಯಾಗಿ ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿದ್ದನ್ನು ಕೇಳಿ ಆರಾಧನಾ ಶಾಕ್ ಆಗುತ್ತಾಳೆ.

ವಠಾರದಲ್ಲಿ ಝೇಂಡೇ ಹುಡುಗರು

ವಠಾರದಲ್ಲಿ ಝೇಂಡೇ ಹುಡುಗರು

ಇನ್ನು ಸಂಜು, ಅನುಳನ್ನು ಭೇಟಿ ಮಾಡಲು ವಠಾರಕ್ಕೆ ಬಂದಿರುತ್ತಾನೆ. ಈ ವೇಳೆ ರಮ್ಯಾ, ಸಂಜುನನ್ನು ಎಂಗೇಜ್ ಮೆಂಟ್ ಮುಗಿಸಿಕೊಂಡೇ ಹೋಗಿ. ಅಲ್ಲಿಯವರೆಗೂ ಇಲ್ಲೇ ಇರಿ ಎಂದು ಬಲವಂತ ಮಾಡುತ್ತಾಳೆ. ಇದೇ ವೇಳೆಗೆ ಸಂಜು ಟೆರೆಸ್ ಮೇಲಿನಿಂದ ಕೆಳಗೆ ನೋಡುತ್ತಾನೆ. ಅಲ್ಲಿ ನಾಲ್ಕು ಜನ ಗನ್ ಮ್ಯಾನ್ ಗಳು ಸಂಜುಗಾಗಿ ಹುಡುಕಾಡುತ್ತಿರುತ್ತಾರೆ. ಝೇಂಡೇ, ಸಂಜುನನ್ನು ಕಿಡ್ನ್ಯಾಪ್ ಮಾಡಲು ಗನ್ ಮ್ಯಾನ್ ಗಳನ್ನು ಬಿಟ್ಟಿದ್ದಾನೆ.

ಮತ್ತೆ ಆರ್ಯನ ಕಿಡ್ನ್ಯಾಪ್ ಆಗುತ್ತಾ..?

ಮತ್ತೆ ಆರ್ಯನ ಕಿಡ್ನ್ಯಾಪ್ ಆಗುತ್ತಾ..?

ಅನುಳನ್ನು ಕಿಡ್ನ್ಯಾಪ್ ಮಾಡಲು ಅವರೆಲ್ಲಾ ಬಂದಿದ್ದಾರೆ ಎಂದು ತಿಳಿಯುವ ಸಂಜು, ಆಕೆಯನ್ನು ರಕ್ಷಿಸಬೇಕು ಎಂದು ಅಂದುಕೊಳ್ಳುತ್ತಾನೆ. ಹಾಗಾಗಿ ಸಂಜು ವಠಾರದಿಂದ ಹೋಗದಿರಲು ತೀರ್ಮಾನಿಸುತ್ತಾನೆ. ಇನ್ನು ಮನೆಗೆ ಹೋಗಿ ಶುಂಠಿ ಟೀ ಕುಡಿದ ಮೇಲೆ ಇಡ್ಲಿ ಉಪ್ಪಿಟ್ಟು ಮಾಡಿಕೊಡುವಂತೆ ಕೇಳುತ್ತಾನೆ. ಪುಷ್ಪಾ ನಿಮಗೆ ನಾನ್ಯಾವತ್ತೂ ಇಡ್ಲಿ ಉಪ್ಪಿಟ್ ಮಾಡಿಕೊಟ್ಟಿಲ್ಲ. ನಿಮಗೆ ಹೇಗೆ ಗೊತ್ತು ಎಂದು ಅನುಮಾನದಿಂದಲೇ ಕೇಳುತ್ತಾಳೆ. ಹಾಗೆ ಸುಬ್ಬು ಆ ಮಾತನ್ನು ಮರೆಸುತ್ತಾನೆ. ಈಗ ಎಲ್ಲರಲ್ಲೂ ಉಳಿದಿರುವ ಪ್ರಶ್ನೆ ಎಂದರೆ ಸಂಜುನನ್ನು ಝೇಂಡೇ ಮತ್ತೆ ಕಿಡ್ನ್ಯಾಪ್ ಮಾಡಿಸುತ್ತಾನಾ..?

More from Filmibeat

English summary
jothe jotheyali Serial 17th november Episode Written Update. Jhende comes to know all the truth about sanju. Now he planned to kidnap aryavardhan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X