Jothe Jotheyali: ಅನು ಹೊಟ್ಟೆಯಲ್ಲಿ ಮಗು ಇಲ್ಲ: ಮತ್ತೆ ಆರ್ಯ ಕಿಡ್ನ್ಯಾಪ್
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನುಗೆ ಅಪಘಾತವಾಗಿದ್ದು, ಅವಳ ಹೊಟ್ಟೆಯಲ್ಲಿ ಯಾವುದೇ ಮಗು ಇರಲಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಈ ಮಾತಿನಿಂದ ಮನೆಯವರೆಲ್ಲಾ ಶಾಕ್ ಆಗಿದ್ದಾರೆ. ಅಲ್ಲದೇ ಅನು, ಆರ್ಯ ಸರ್ ಹೆಸರನ್ನೇ ಕನವರಿಸುತ್ತಿದ್ದು, ಮೀರಾ ಆರ್ಯನನ್ನು ಮನೆಗೆ ವಾಪಸ್ ಕರೆಸಿಕೊಳ್ಳಲು ವ್ಯವಸ್ಥೆ ಮಾಡಿದ್ದಾಳೆ. ಆಸ್ಪತ್ರೆಗೆ ಪುಷ್ಪಾ- ಸುಬ್ಬು ಕೂಡ ಬಂದಿದ್ದಾರೆ.
ಜೋಗ್ತವ್ವ ಪುಷ್ಪಾ ಸುಬ್ಬುಗೆ ನಿಮ್ಮ ಮಗಳನ್ನು ಉಳಿಸಿಕೊಳ್ಳಿ. ಅವಳ ಜೊತೆಗಿದ್ದು ಕಾಪಾಡಿಕೊಳ್ಳಿ ಎಂದು ಹೇಳಿದ್ದಾರೆ. ಇದರಿಂದ ಪುಷ್ಪಾ ಹಾಗೂ ಸುಬ್ಬು ಗಾಬರಿ ಕೂಡ ಆಗಿದ್ದಾರೆ. ಶಾರದಾ ದೇವಿ ಅನು ಹೊಟ್ಟೆಯಲ್ಲಿ ಮಗು ಇಲ್ಲ ಎಂಬ ವಿಷಯ ತಿಳಿದು ಗಾಬರಿಯಿಂದ ಆಸ್ಪತ್ರೆಗೆ ಬಂದಿದ್ದಾಳೆ. ವೈದ್ಯರನ್ನು ಭೇಟಿಯಾಗಿದ್ದಾಳೆ. ವೈದ್ಯರು ಖಡಾಖಂಡಿತವಾಗಿ ಅನು ಹೊಟ್ಟೆಯಲ್ಲಿ ಮಗು ಇಲ್ಲವೇ ಇಲ್ಲ ಎಂದು ಹೇಳಿದ್ದಾರೆ. ಶಾರದಾ ವೈದ್ಯರ ಜೊತೆಗೆ ವಾದ ಮಾಡಿದ್ದಾಳೆ.

ಸಿಟ್ಟಾದ ವೈದ್ಯರು ಆಕೆ ಗರ್ಭಿಣಿ ಆಗಿದ್ದು ಸತ್ಯವೇ ಇರಬಹುದು. ಆದರೆ, ಗರ್ಭಪಾತ ಮಾಡಿಸಿಕೊಂಡಿರಬಹುದು. ಇಲ್ಲಿಗೆ ಬಂದಾಗ ಅಂತೂ ಆಕೆಯ ಹೊಟ್ಟೆಯಲ್ಲಿ ಯಾವುದೇ ಮಗು ಇಲ್ಲ ಎಂದು ಹೇಳಿ ಹೋಗುತ್ತಾರೆ. ಇದರಿಂದ ಶಾರದಾಳಿಗೆ ಆತಂಕ ಹೆಚ್ಚಾಗುತ್ತೆ. ಹಾಗಾದರೆ, ಅನು ಹೊಟ್ಟೆಯಲ್ಲಿ ಇದ್ದ ಮಗು ಏನಾಯ್ತು..? ಇಷ್ಟು ದಿನ ಅನು ನಮಗೆ ಸುಳ್ಳು ಹೇಳಿದ್ದಳಾ ಎಂದು ಆಲೋಚಿಸುತ್ತಾಳೆ.
ಇತ್ತ ಸಂಜೀವಿನಿಗೆ ಶಾರದಾ ಫೋನ್ ಮಾಡಿ ಆರ್ಯ ಅಮೆರಿಕಾದಿಂದ ಮನೆಗೆ ಬರುತ್ತಿದ್ದಾನೆ. ಅವನ ಬಳಿ ಅನುಗೆ ಅಪಘಾತವಾಗಿರುವ ವಿಚಾರವನ್ನು ಯಾರೂ ಹೇಳಬೇಡಿ. ನಾನು ಈಗಲೇ ಮನೆಗೆ ಬರುತ್ತಿದ್ದೇನೆ. ಅವನ ಮನಸ್ಥಿತಿಯನ್ನು ನೋಡಿಕೊಂಡು ಬಳಿಕ ನಾನೇ ಹೇಳುತ್ತೇನೆ ಎಂದು ಹೇಳುತ್ತಾಳೆ. ಬಳಿಕ ಸಂಜೀವಿನಿ, ಝೇಂಡೇಗೆ ಫೋನ್ ಮಾಡಿ ಮಾತನಾಡುತ್ತಾಳೆ.
ಆರ್ಯ ವಾಪಸ್ ಬರುತ್ತಿದ್ದಾನೆ. ನಾನು ನಿನಗೆ ಹೇಳಿದ್ದು, ಅನುಳನ್ನು ಈ ಮನೆಯಿಂದ ದೂರ ಮಾಡುವುದಕ್ಕೆ. ಅದನ್ನು ನನ್ನ ತಲೆಗೆ ತುಂಬಿದ್ದು ಕೂಡ ನೀನೇ. ಅದು ಬಿಟ್ಟು ನನ್ನದೇನೂ ಪಾತ್ರವಿಲ್ಲ. ಈಗ ಅನುಗೆ ಅಪಘಾತವಾಗಲು ನಾನು ಕಾರಣವೇ ಅಲ್ಲ. ಇದ್ಯಾವ ವಿಚಾರವೂ ನನಗೆ ಗೊತ್ತೇ ಇಲ್ಲ ಎಂಬಂತೆ ಮಾತನಾಡುತ್ತಾಳೆ. ಇದನ್ನೆಲ್ಲಾ ಸಂಜೀವಿನಿ ಮಗಳು ಭಾವನಾ ಕೇಳಿಸಿಕೊಳ್ಳುತ್ತಾಳೆ. ಅಮ್ಮನ ಬಳಿ ಪ್ರಶ್ನೆ ಮಾಡಿದರೆ, ಸಂಜೀವಿನಿ ಏನೇನೋ ಮಾತನಾಡಿ ಬಾಯಿ ಮುಚ್ಚಿಸುತ್ತಾಳೆ.

ಇತ್ತ ಅನುಗೆ ಎಚ್ಚರವಾಗುತ್ತದೆ. ಎಚ್ಚರವಾಗುತ್ತಿದ್ದಂತೆ ಆರ್ಯ ಸರ್ ಎಲ್ಲಿ ಎಂದು ಕೇಳುತ್ತಾಳೆ. ಮನೆಯವರೆಲ್ಲಾ ಬರುತ್ತಿದ್ದಾರೆ ಎಂದು ಹೇಳುತ್ತಾರೆ. ಈಗಲೇ ನೋಡಬೇಕು ಎಂದು ಅನು ಹಠ ಮಾಡುತ್ತಾಳೆ. ಆಗ ಸುಬ್ಬು ಕಣ್ಣು ಮುಚ್ಚಿ ಮಲಗು ನೀನು ಏಳುವುದರೊಳಗೆ ಆರ್ಯ ಸರ್ ಬರುತ್ತಾರೆ ಎಂದು ಹೇಳುತ್ತಾನೆ. ಈ ಮಾತಿಗೆ ಅನು ನಾನು ಈಗ ನಿದ್ದೆ ಮಾಡಿ ಮತ್ತೆ ಎದ್ದೇಳದೇ ಹೋದರೆ ಎನ್ನುತ್ತಾಳೆ. ಈ ಮಾತಿನಿಂದ ಎಲ್ಲರೂ ಶಾಕ್ ಆಗಿ, ಅನುಗೆ ಸಮಾಧಾನ ಮಾಡುತ್ತಾರೆ.
ಇನ್ನು ಆರ್ಯ ಏರ್‌ಪೋರ್ಟ್‌ನಿಂದ ಬರುತ್ತಿರುವುದನ್ನು ತಿಳಿದ ಝೇಂಡೇ ಕಿಡ್ನ್ಯಾಪ್ ಮಾಡುತ್ತಾನೆ. ಇದರಿಂದ ಆರ್ಯನಿಗೆ ಕೋಪ ಬರುತ್ತದೆ. ಯಾಕೆ ಹೀಗೆಲ್ಲಾ ಮಾಡುತ್ತಿದ್ದೀಯಾ ಝೇಂಡೇ, ಬಿಡು ನನ್ನ. ನನಗೆ ಸುಸ್ತಾಗಿದೆ ಎಂದು ಹೇಳುತ್ತಾನೆ. ಅದಕ್ಕೆ ಝೇಂಡೇ ಏನನ್ನು ಹೇಳದೇ. ನಿನ್ನನ್ನ ನಾನು ಎಲ್ಲಿಗೆ ಕರೆದುಕೊಂಡು ಹೋಗಬೇಕೋ ಅಲ್ಲಿಗೆ ಕರೆದುಕೊಂಡು ಹೋಗುತ್ತೇನೆ ಎನ್ನುತ್ತಾನೆ. ಒಂದು ಕಡೆ ಅನು ಆಸ್ಪತ್ರೆ ಪಾಲಾಗಿದ್ದರೆ, ಇತ್ತ ಆರ್ಯ ಮತ್ತೆ ಝೇಂಡೇ ಪಾಲಾಗಿದ್ದಾನೆ. ಮುಂದೇನಾಗುತ್ತೋ ಕಾದು ನೋಡಬೇಕಿದೆ.


Click it and Unblock the Notifications











