Jothe Jotheyali: ಆರಾಧನಾ ಕೂಡ ವರ್ಧನ್ ಕುಟುಂಬದ ಸಂಬಂಧಿಕಳೇ..!
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಈಗ ಸಂಭ್ರಮವೋ ಸಂಭ್ರಮ. ಕಳೆದ ಮೂರೆವರೆ ವರ್ಷದಿಂದ ಪ್ರಸಾರವಾಗುತ್ತಿರುವ ಈ ಧಾರಾವಾಹಿ ಈಗ 900 ಸಂಚಿಕೆಗಳನ್ನು ಪೂರೈಸಿದೆ.
900 ಸಂಚಿಕೆಗಳನ್ನು ಪೂರೈಸಿದ ಸಂಭ್ರಮದಲ್ಲಿ ಚಿತ್ರ ತಂಡವಿದ್ದು, ಇದನ್ನು ಸೆಲಬ್ರೇಟ್ ಮಾಡಿದ್ದಾರೆ. ಇನ್ನು ಮುಂದೆ ದೊಡ್ಡ ಅನಾಹುತ ನಡೆಯುವ ಸಂದರ್ಭ ಎದುರಾಗಿದೆ.
ಧಾರಾವಾಹಿಯಲ್ಲಿ ಹೊಸ ಹೊಸ ಪಾತ್ರಗಳು ಕೂಡ ಎಂಟ್ರಿ ಆಗುತ್ತಿವೆ. ಈ ಮೂಲಕ ಧಾರಾವಾಹಿಯಲ್ಲಿ ಹೊಸ ಕಥೆಯೂ ಆರಂಭವಾಗುತ್ತಿದೆ. ಇದರಿಂದ ಅನು ಮತ್ತೆ ಯಾವೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೋ.?

ಸಂಜೀವಿನಿ, ರಾಜವರ್ಧನ್ ಸಹೋದರಿ
ಅನುಳನ್ನು ಮನೆಗೆ ಕರೆದುಕೊಂಡು ಹೋಗಲು ಶಾರದಾ ದೇವಿ ಮೊದಲು ಅಮ್ಮನವರ ದೇವಸ್ಥಾನಕ್ಕೆ ಬಂದಿದ್ದಾರೆ. ಇದೇ ವೇಳೆಗೆ ಶಾರದಾ ದೇವಿ, ಸಂಜೀವಿನಿ ಎಂಬಾಕೆಯನ್ನು ನೋಡಿದ್ದಾಳೆ. ಆಕೆಯನ್ನು ಮಾತನಾಡಿಸಿದ್ದಾಳೆ. ಸಂಜೀವಿನಿ ಕೂಡ ಶಾರದಾಳನ್ನು ಗುರುತು ಹಿಡಿದಿದ್ದಾಳೆ. ಇಬ್ಬರೂ ಮಾತನಾಡಿದ್ದಾರೆ. ನನ್ನ ಮಗಳು ನಿಮ್ಮ ಮನೆಯಲ್ಲಿದ್ದಾಳೆ. ಹಾಗಾಗಿ ಇಲ್ಲಿಗೆ ಬಂದೆ ಎನ್ನುತ್ತಾಳೆ. ಅಷ್ಟರಲ್ಲಿ ಆರಾಧನಾ, ಭಾವನಾ ಹಾಗೂ ಆರ್ಯ ಕೂಡ ಬರುತ್ತಾರೆ. ಎಲ್ಲರೂ ಬಂದ ಬಳಿಕ ಸಂಜೀವಿನಿ ರಾಜವರ್ಧನ್ ತಂಗಿ. 30 ವರ್ಷಗಳ ಹಿಂದೆಯೇ ಗಲಾಟೆ ಮಾಡಿಕೊಂಡು ಹೋಗಿದ್ದರು ಎಂದು ಹೇಳುತ್ತಾಳೆ.

ವಿಷಯ ತಿಳಿದು ಎಲ್ಲರಿಗೂ ಶಾಕ್
ಸಂಜೀವಿನಿ ಹಾಗೂ ರಾಜವರ್ಧನ್ ಇಬ್ಬರೂ ಕೆಲ ವಿಚಾರಗಳಿಂದ ಬೇಸರ ಮಾಡಿಕೊಂಡಾಗ ಸಂಜೀವಿನಿ ಮನೆ ಬಿಟ್ಟು ಹೊರಟು ಹೋಗಿರುತ್ತಾಳೆ. ಆಗಲೇ ರಾಜವರ್ಧನ್ ಕೂಡ ತನ್ನ ತಂಗಿ ಇನ್ನಿಲ್ಲ ಎಂದು ಹೇಳಿರುತ್ತಾನೆ. ಇದೀಗ ಸಂಜೀವಿನಿ ತನ್ನ ಮಗಳು ಆರಾಧನಾಳನ್ನು ಹುಡುಕಿಕೊಂಡು ಬಂದಿರುತ್ತಾಳೆ. ಆಗ ಎಲ್ಲರೂ ಆರಾಧನಾ, ಸಂಜೀವಿನಿ ಅವರ ಮಗಳು, ಸಂಜೀವಿನಿ ವರ್ಧನ್ ಕುಟುಂಬಕ್ಕೆ ಸೇರಿದಾಕೆ ಎಂದು ತಿಳಿಯುತ್ತದೆ. ಆಗ ಎಲ್ಲರೂ ಶಾಕ್ ಆಗುತ್ತಾರೆ. ಇನ್ನು ಸಂಜೀವಿನಿ, ಆರ್ಯನನ್ನು ವಿಶ್ವಾಸ್ ಎಂದೇ ತಿಳಿದು ಮಾತನಾಡಿಸುತ್ತಾಳೆ. ಆಗ ಆರಾಧನಾ ಅವರು ಆರ್ಯವರ್ಧನ್ ಎಂದು ಹೇಳುತ್ತಾಳೆ. ಮಿಕ್ಕಿದ್ದನ್ನೆಲ್ಲಾ ಆಮೇಲೆ ಹೇಳುತ್ತೇನೆ ಎಂದು ಹೇಳುತ್ತಾಳೆ.

ಮನೆಗೆ ಕರೆದ ಶಾರದಾ ದೇವಿ
ಇನ್ನು ಶಾರದಾ ದೇವಿ ಹಳೆಯದನ್ನೆಲ್ಲಾ ಮರೆತು ಮನೆಗೆ ಕರೆಯುತ್ತಾಳೆ. ಸಂಜೀವಿನಿಗೂ ಮನೆಗೆ ಬರಲು ಇಷ್ಟವಿದ್ದರೂ ಪಶ್ಚಾತ್ತಾಪದಿಂದ ಪದೇ ಪದೇ ಬರಬಹುದೇ ಎಂದು ಕೇಳುತ್ತಾಳೆ. ಶಾರದಾ, ಅನು, ಆರ್ಯ ಮೂವರು ಕೂಡ ಹಳೆಯದನ್ನೆಲ್ಲಾ ಮರೆತು ಮನೆಗೆ ಬನ್ನಿ ಎಂದು ಕರೆಯುತ್ತಾರೆ. ಸಂಜೀವಿನಿ ಬೇಸರ ಮಾಡಿಕೊಳ್ಳುತ್ತಾಳೆ. ನಂತರ ಎಲ್ಲರೂ ಮನೆಗೆ ಹೊರಡೋಣ ಎಂದು ಮನೆ ಕಡೆಗೆ ಪಯಣವನ್ನು ಬೆಳೆಸುತ್ತಾರೆ. ಆದರೆ, ಈಗ ಈ ಹೊಸ ಪಾತ್ರಗಳು ಆಗಮಿಸಿದ್ದರಿಂದ ಅನುಗೆ ಮತ್ಯಾವ ಕಷ್ಟಗಳು ಕಾದಿವೆಯೋ ಗೊತ್ತಿಲ್ಲ.

ಮಾನ್ಸಿ ಇಲ್ಲದೇ ಕಂಗೆಟ್ಟ ಹರ್ಷ
ಇತ್ತ ಮಾನ್ಸಿ ಬೇಕಂತಲೇ ಮನೆಯಿಂದ ಹೊರಗೆ ಹೋಗಿದ್ದಾಳೆ. ಹರ್ಷನಿಗೆ ಮಾನ್ಸಿ ಮೇಲೆ ಕೋಪ ಹೆಚ್ಚಾಗಿದ್ದು, ಅವಳು ಇಲ್ಲ ಎಂಬ ಕಾರಣಕ್ಕೆ ಬೇಸರವೂ ಹೆಚ್ಚಾಗಿದೆ. ಮಾನ್ಸಿ ಏನನ್ನು ಹೇಳದೇ ಹೋಗಿರುವುದಕ್ಕೆ ಕೋಪಗೊಂಡಿರುವ ಹರ್ಷ, ಅವಳೇ ಬರಲಿ ಎಂದು ಕಾಯುತ್ತಿದ್ದಾನೆ. ಮಾನ್ಸಿ ನೋಡಿದರೆ, ಮನೆಯವರೇ ಕರೆಯಲಿ ಎಂದು ಕಾಯುತ್ತಿದ್ದಾಳೆ. ಆದರೆ, ಮಾನ್ಸಿ ಮನೆಯಲ್ಲಿ ಇಲ್ಲದಾಗ ಭಾವನಾ ಹಾಗೂ ಸಂಜೀವಿನಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮಾನ್ಸಿ ಇಲ್ಲದೇ, ಮನೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ.


Click it and Unblock the Notifications











