Jothe Jotheyali: ಝೇಂಡೇನ ಕೊಲ್ಲದೇ ಅನು, ಆರ್ಯ ಬದುಕಿಸಲು ಕಾರಣವೇನು..?
'ಜೊತೆ ಜೊತೆಯಲಿ' ಧಾರಾವಾಹಿ ಮುಗಿಯುವ ಹಂತ ತಲುಪಿದೆ. ನಾಳೆಯೇ(ಮೇ 19) ಜೊತೆ ಜೊತೆಯಲಿ ಧಾರಾವಾಹಿಯ ಕೊನೆಯ ಸಂಚಿಕೆ ಪ್ರಸಾರವಾಗಲಿದೆ. ಇಷ್ಟು ದಿನ ಎಲ್ಲರೂ ನಿತ್ಯ 'ಜೊತೆ ಜೊತೆಯಲಿ' ಧಾರಾವಾಹಿಯನ್ನು ಇಷ್ಟಪಟ್ಟು ನೋಡುತ್ತಿದ್ದರು. ಆದರೆ ಈಗ ಇದ್ದಕ್ಕಿದ್ದ ಹಾಗೆ ಮುಕ್ತಾಯಗೊಳ್ಳುತ್ತಿರುವುದಕ್ಕೆ ಬೇಸರ ಕೆಲವರು ವ್ಯಕ್ತಪಡಿಸಿದ್ದಾರೆ. ಝೇಂಡೇ ಬಣ್ಣವನ್ನು ಬಯಲಿಗೆಳೆಯಲು ಅನು ಈಗ ಬೆಟ್ಟಕ್ಕೆ ಹೋಗಿದ್ದಾಳೆ.
ಝೇಂಡೇ, ಅನು ವಿರುದ್ಧವೇ ತಿರುಗಿ ಬಿದ್ದಿದ್ದು, ಕೊಲ್ಲಲು ಮುಂದಾಗಿದ್ದಾನೆ. ತನ್ನ ಬಗ್ಗೆ ಎಲ್ಲಾ ತಿಳಿದಿರುವ ನೀನು ಬದುಕಿರಬಾರದು ಎಂದು ಝೇಂಡೇ ಅನುಳ ಕತ್ತು ಹಿಸುಕಲು ಮುಂದಾಗುತ್ತಾನೆ. ಇದೇ ಸಂದರ್ಭದಲ್ಲಿ ಶಾರದಾ ದೇವಿ, ಝೇಂಡೇಯ ಹಣೆಗೆ ಗನ್ ಪಾಯಿಂಟ್ ಅನ್ನು ಹಿಡಿಯುತ್ತಾಳೆ. ನಿನ್ನಂತಹ ಕೆಟ್ಟವರು ಈ ಭೂಮಿಯ ಮೇಲೆ ಇರಬಾರದು ಎಂದು ಹೇಳುತ್ತಾಳೆ. ಇದೇ ಸಮಯಕ್ಕೆ ಬರುವ ಆರ್ಯ ಅಮ್ಮಾ ಎಂದು ಹೇಳಿದಾಗ ಶಾರದಾ ಬೆಚ್ಚಿ ಬೀಳುತ್ತಾಳೆ.

ಝೇಂಡೇ ಗನ್ ಅನ್ನು ಕಿತ್ತುಕೊಂಡು ಅನುಗೆ ಹಿಡಿಯುತ್ತಾನೆ. ಆಗ ಆರ್ಯನಿಗೆ ಕೋಪ ಬರುತ್ತದೆ. ಅನುಳನ್ನು ಬಿಟ್ಟು ಬಿಡು ಎಂದು ಕೇಳಿಕೊಳ್ಳುತ್ತಾನೆ. ಆದರೆ ಝೇಂಡೇ ಇಲ್ಲ. ಇವಳಿದ್ದರೆ, ನನ್ನ ಗುರಿ ಸಾಧಿಸಲು ಆಗುವುದಿಲ್ಲ. ನಾನು ನೀನು ಒಟ್ಟಿಗೆ ಇರುವುದಕ್ಕೆ ಸಾಧ್ಯವಿಲ್ಲ. ಇವಳನ್ನು ಕೊಂದು ಬಿಡುತ್ತೇನೆ. ಆಗ ನಾವು ಅರಾಮವಾಗಿರಬಹುದು ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಆರ್ಯನಿಗೆ ಸಂಕಟವಾಗುತ್ತದೆ. ಆಗ ಶಾರದಾ, ಆರ್ಯ ನೀನೇ ನಿರ್ಧಾರ ಮಾಡು ಗೆಳೆಯ ಬೇಕಾ ಇಲ್ಲ ಅನು ಬೇಕಾ ಯೋಚಿಸು ಎಂದು ಹೇಳುತ್ತಾಳೆ.
ಝೇಂಡೇನ ಕೊಲ್ಲಲು ಬಂದ ಹುಚ್ಚ
ಆಗ ಆರ್ಯ ಇಲ್ಲ ಅನುಳನ್ನು ಬಿಟ್ಟಿರೋದಕ್ಕೆ ಸಾಧ್ಯವಿಲ್ಲ. ನನ್ನನ್ನು ತಾಯಿಯಂತೆ ಸಾಕಿದ ನೀನು ಒಳ್ಳೆಯವನಾಗುತ್ತೀಯಾ ಎಂದು ಇಷ್ಟು ವರ್ಷ ಎಲ್ಲವನ್ನೂ ಸಹಿಸಿಕೊಂಡೆ. ಇನ್ಮುಂದೆ ಸಾಧ್ಯವಿಲ್ಲ ಎಂದು ಆರ್ಯ ಹೇಳುತ್ತಾನೆ. ಅಷ್ಟು ಹೊತ್ತಿಗೆ ಹುಚ್ಚನಂತೆ ತಿರುಗಾಡುತ್ತಿದ್ದ ವ್ಯಕ್ತಿ ಬಂದು ಝೇಂಡೇ ಅನ್ನು ತಳ್ಳಿ ಬಿಡುತ್ತಾನೆ. ಝೇಂಡೇ ಬಳ್ಳಿಯನ್ನು ಹಿಡಿದುಕೊಂಡು ಕಾಪಾಡಿ ಎಂದಾಗ, ಹುಚ್ಚ ಇವನು ಬದುಕಿರಬಾರದು, ರಾಜನಂದಿನಿ ಅನ್ನು ಹೀಗೆ ಕೊಂದ. ಇವನನ್ನು ಕೊಲ್ಲುವುದಕ್ಕಾಗಿಯೇ ನಾನು ಇಷ್ಟು ವರ್ಷ ಹುಚ್ಚನಂತೆ ಅಲೆದಾಡಬೇಕಾಯ್ತು ಎಂದು ಹೇಳಿ ಬಳ್ಳಿಯನ್ನು ಕತ್ತರಿಸಲು ಮುಂದಾಗುತ್ತಾನೆ.

ಝೇಂಡೇನ ಬದುಕಿಸಿದ ಅನು
ಆಗ ಅನು ಆತನನ್ನು ತಡೆದು ಇಲ್ಲ ಕೊಲ್ಲಲು ನಮಗೆ ಯಾವುದೇ ಹಕ್ಕಿಲ್ಲ. ತಪ್ಪನ್ನು ತಿದ್ದಿಕೊಂಡು ಬದುಕುವುದಾದರೆ ಝೇಂಡೇಗೆ ಅವಕಾಶವಿದೆ. ಕೊಲ್ಲಲು ನಾವ್ಯಾರು ಎಂದು ಹೇಳುತ್ತಾಳೆ. ಆದರೆ, ಹುಚ್ಚು, ಶಾರದಾ ದೇವಿ ಎಲ್ಲರೂ ಅನುಗೆ ಬೇಡ, ಝೇಂಡೇ ಸಾಯಲಿ ಎಂದು ಹೇಳುತ್ತಾರೆ. ಆದರೂ ಅನು ಕೇಳದೇ, ಝೇಂಡೇ ಬಳಿ ಮಾತು ಕೇಳುತ್ತಾಳೆ. ತಪ್ಪನ್ನು ತಿದ್ದಿಕೊಂಡು ನಮ್ಮ ಜೊತೆಗೆ ಒಳ್ಳೆಯವನಾಗಿ ಬದುಕುತ್ತೀರಾ ಎಂದು ಕೇಳುತ್ತಾಳೆ. ಅದಕ್ಕೆ ಝೇಂಡೇ ಅನು ಮೇಲೆ ಆಣೆ ಮಾಡಿ ಹೇಳುತ್ತಾನೆ. ನಂತರ ಎಲ್ಲರೂ ಸೇರಿ ಝೇಂಡೇ ಅನ್ನು ಬದುಕಿಸುತ್ತಾರೆ.
ಪತ್ರ ಬರೆದಿಟ್ಟಿರುವ ಆರಾಧನಾ
ಇತ್ತ ಪಾರ್ಟಿ ಮಾಡಲು ಎಲ್ಲರೂ ಬಂದಿದ್ದು, ಅನು, ಶಾರದಾ, ಆರ್ಯ ಕಾಣದೇ ಕಂಗಾಲಾಗಿರುತ್ತಾರೆ. ಅಷ್ಟೊತ್ತಿಗೆ ಝೇಂಡೇ ಜೊತೆಗೆ ಎಲ್ಲರೂ ಬರುತ್ತಾರೆ. ಎಲ್ಲರ ಮುಂದೆ ಝೇಂಡೇ ನಾನು ನನ್ನ ತಪ್ಪನ್ನು ತಿದ್ದಿಕೊಂಡಿದ್ದೇನೆ ಎಂದು ಹೇಳುತ್ತಾನೆ. ಇನ್ನು ಆರಾಧನಾ ಬರೆದ ಪತ್ರವನ್ನು ಶಾರದಾ ದೇವಿ ಓದುತ್ತಾರೆ.
ಆರಾಧನಾ ತಾನು ಇಷ್ಟು ದಿನ ಮಾಡಿದ ತಪ್ಪನ್ನು ಪತ್ರದಲ್ಲಿ ಬರೆದು, ಅನು ಮತ್ತು ಆರ್ಯ ಚೆನ್ನಾಗಿರುವುದೇ ನನಗೆ ಖುಷಿ. ನಾನು ನನ್ನ ಪಾಡಿಗೆ ನನ್ನ ಬದುಕನ್ನು ಕಟ್ಟಿಕೊಳ್ಳುತ್ತೇನೆ ಎಂದು ಬರೆದಿರುತ್ತಾಳೆ.


Click it and Unblock the Notifications











