ರಾಜನಂದಿನಿ ರೂಮಿಗೆ ಹೋದ ಸಂಜು: ಅಲ್ಲಿ ಆಗಿದ್ದೇನು..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಸಂಜುಗೆ ತಾನು ಆರ್ಯ ಎಂಬುದು ಇನ್ನೂ ನೆನಪಾಗಿಲ್ಲ. ಆದರೂ ಕೂಡ ಆತನಿಗೆ ತನಗೂ, ತಾನಿರುವ ಸ್ಥಿತಿಗೂ ತುಂಬಾ ಬದಲಾವಣೆ ಇದೆ. ಇಲ್ಲಿರುವವರು ಹೇಳುವುದಕ್ಕಿಂತಲೂ ಸತ್ಯವೇನೋ ಬೇರೆಯೇ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾನೆ.
ಸಂಜುಗೆ ತಾನು ಮಾಡಿದ ಕೆಲಸಗಳೆಲ್ಲವೂ ನೆನಪಿರುತ್ತದೆ. ಅಲ್ಲದೇ, ಅನು ನೆನಪಾಗುತ್ತಾಳೆ. ಆದರೆ ಅನು ಮುಖ ಕಣ್ಣ ಮುಂದೆ ಬರದಿದ್ದರೂ, ಅನುಗೂ ತನಗೂ ಏನೋ ಹತ್ತಿರದ ಸಂಬಂಧವಿದೆ ಎಂಬಂತೆ ಭಾಸವಾಗುತ್ತದೆ. ಅನು ಎಂದರೆ ಸಂಜು ಮನದಲ್ಲಿ ಏನೋ ಖುಷಿಯಾಗುತ್ತಿರುತ್ತದೆ.
ಇತ್ತ ಅನುಗೂ ಕೂಡ ಸಂಜುನನ್ನು ನೋಡಿದಾಗಲೆಲ್ಲಾ ಆರ್ಯನೇ ನೆನಪಾಗುತ್ತಾನೆ. ಯಾಕೆ ಹೀಗಾಗುತ್ತದೆ ಎಂಬುದು ಅನುಗೆ ಗೊತ್ತಾಗುವುದಿಲ್ಲ. ಅಲ್ಲದೇ, ಸಂಜು ಹತ್ತಿರವಿದ್ದಾಗ ಸ್ವಲ್ಪ ಹಿಂಸೆ ಕೂಡ ಅನುಗೆ ಆಗುತ್ತದೆ.

22 ವರ್ಷದ ರಹಸ್ಯ ಬಯಲು?
ಸಂಜುಗೆ ಆಫೀಸಿನಲ್ಲಿ ಮೂರು ವರ್ಷದ ಅಕೌಂಟ್ ಚೆಕ್ ಮಾಡಲು ಮೀರಾ ಟಾಸ್ಕ್ ಕೊಟ್ಟಿರುತ್ತಾಳೆ. ಆದರೆ ಸಂಜು ಕಳೆದ 22 ವರ್ಷದ ಅಕೌಂಟ್ ಅನ್ನು ಚೆಕ್ ಮಾಡಿರುತ್ತಾನೆ. ಅದರಲ್ಲಿ ಮೋಸ ನಡೆದಿದೆ ಎಂಬುದನ್ನು ಕೂಡ ಹುಡುಕುವ ಸಂಜು ಈ ವಿಚಾರವನ್ನು ಮೀರಾ ಬಳಿ ಹೇಳುತ್ತಾನೆ. ಮೀರಾ ಈ ಮಾತನ್ನು ಕೇಳಿ ಶಾಕ್ ಆಗುತ್ತಾನೆ. ಇದೆಲ್ಲಾ ಹೇಗೆ ಸಾಧ್ಯ ಎಂದು ಕೇಳಿದ್ದಕ್ಕೆ ಸಂಜು, ಇದೆಲ್ಲಾ ನನಗೆ ಗೊತ್ತಿದೆ ಎಂಬಂತೆ ಅನಿಸಿತು ಹಾಗಾಗಿ ಮಾಡಿದೆ ಎಂದು ಹೇಳುತ್ತಾನೆ. ಮೀರಾ ಈ ವಿಚಾರವನ್ನು ಯಾರಿಗೂ ಹೇಳಬೇಡಿ ಎಂದು ಸಂಜುಗೆ ಹೇಳಿ ಕಳಿಸುತ್ತಾಳೆ. ಇದೇ ವಿಚಾರವನ್ನು ಮಾನ್ಸಿಗೂ, ಹರ್ಷನಿಗೂ ಹೇಳಿ ಮೀರಾ ಶಾಕ್ ನೀಡುತ್ತಾಳೆ. ಹರ್ಷ ಇದನ್ನು ಹೊಗಳಿದರೆ, ಮಾನ್ಸಿ ಮತ್ತೆ ಕೊಂಕಾಗಿ ಮಾತನಾಡುತ್ತಾಳೆ.

ಪ್ರಿಯದರ್ಶಿನಿ ಹಿಂದೆ ಬಿದ್ದ ಝೇಂಡೇ
ಝೇಂಡೇ ಈಗ ಆರ್ಯನ ಸಾವು ಹಾಗೂ ಈ ಸಂಜು ಯಾರು ಎಂಬ ಬಗ್ಗೆ ಹುಡುಕಾಡುತ್ತಿದ್ದಾನೆ. ಹಾಗಾಗಿ ಮತ್ತೆ ಪ್ರಿಯದರ್ಶಿನಿ ಅವರ ಮನೆಗೆ ಬಂದಿದ್ದಾನೆ. ಆದರೆ ಝೇಂಡೇ ಬುದ್ಧಿ ಗೊತ್ತಿಲ್ಲದ ಪ್ರಭು ದೇಸಾಯಿ ಮತ್ತು ಪ್ರಿಯದರ್ಶಿನಿ ಝೇಂಡೇಗೆ ಊಟ ಕೊಟ್ಟು ಮಾತನಾಡಿಸುತ್ತಾರೆ. ಇಲ್ಲಿಗೆ ಯಾಕೆ ಬಂದದ್ದು ಎಂದಿದ್ದಕ್ಕೆ, ಆರ್ಯನ ಕೆಲ ಡಾಕ್ಯುಮೆಂಟ್ಸ್ ಅನ್ನು ತೆಗೆದುಕೊಂಡು ಹೋಗುವುದಕ್ಕೆ ಬಂದೆ. ಅದರೆ ಮನೆಯವರಿಗೆ ಮಾತ್ರ ಕೊಡುತ್ತಾರಂತೆ. ಅದೇ ಕೆಲಸದ ಮೇಲೆ ಇನ್ನಷ್ಟು ದಿನ ಇಲ್ಲೇ ಇರುತ್ತೀನಿ. ರೂಮ್ ನೋಡುತ್ತಿದ್ದೇನೆ ಎಂದಿದ್ದಕ್ಕೆ, ಇಲ್ಲೇ ಉಳಿದುಕೊಳ್ಳಿ ಎಂದು ಹೇಳುತ್ತಾರೆ. ಪ್ರಿಯದರ್ಶಿನಿ ಮನಸಲ್ಲಿ ಆರ್ಯ ಬದುಕಿರುವ ಸತ್ಯವನ್ನು ಝೇಂಡೇಗೆ ಹೇಳಬೇಕು ಎಂದುಕೊಳ್ಳುತ್ತಾಳೆ. ಝೇಂಡೇ ಕೂಡ ಬಾಯಿ ಬಿಡಿಸಲು ಪ್ರಯತ್ನ ಮಾಡುತ್ತಾನೆ. ಆಗ ಪ್ರಿಯದರ್ಶನಿಯನ್ನು ಪ್ರಭು ದೇಸಾಯಿ ತಡೆಯುತ್ತಾನೆ.

ರಾಜನಂದಿನಿ ರೂಮಿಗೆ ಹೋದ ಸಂಜು
ಸಂಜುಗೆ ಮಲಗಿರುವಾಗ ಅನು ಕನಸಿನಲ್ಲಿ ಬರುತ್ತಾಳೆ. ಇದರಿಂದ ಡಿಸ್ಟರ್ಬ್ ಆಗಿ ಸಂಜು ಇದ್ದಕ್ಕಿದ್ದ ಹಾಗೆಯೇ ರಾಜನಂದಿನಿ ರೂಮಿಗೆ ಹೋಗುತ್ತಾನೆ. ಇದನ್ನು ನೋಡಿದ ಹೊಸಮನಿ ಅಜ್ಜಯ್ಯ ಏನು ಮಾಡುವುದು ಎಂದು ಗೊತ್ತಾಗುವುದಿಲ್ಲ. ಸಂಜು, ರಾಜನಂದಿನಿ ರೂಮಿನಿಂದ ವಾಪಸ್ ಬರುತ್ತಾನೆ. ಈ ವಿಚಾರವನ್ನು ಹೊಸಮನಿ, ಶಾರದಾ ದೇವಿಗೆ ಹೇಳಬೇಕು ಎಂದುಕೊಳ್ಳುತ್ತಾರೆ.

ಸಂಜುನಿಂದ ಡಿಸ್ಟರ್ಬ್ ಆದ ಅನು
ಇತ್ತ ಅನು ಕೂಡ ಮಲಗಿರುವಾಗ ಆರ್ಯ ಸರ್ ನೆನಪಾಗುತ್ತದೆ. ಅವರು ನಂಬಿಕೆ ಎಂದು ಹೇಳುತ್ತಿದ್ದ ಮಾತುಗಳೇ ನೆನಪಾಗುತ್ತಿರುತ್ತದೆ. ಇದ್ದಕ್ಕಿದ್ದ ಹಾಗೆಯೇ ಎದ್ದ ಅನು, ಸಂಜುನನ್ನು ನೆನಪು ಮಾಡಿಕೊಳ್ಳುತ್ತಾಳೆ. ಸಂಜು ಕೂಡ ಆರ್ಯ ಸರ್ ಥರಾನೇ ಮಾತನಾಡುತ್ತಾರೆ. ಆರ್ಯ ಸರ್ ಥರ ಇನ್ನೊಬ್ಬರು ಇರುತ್ತಾರಾ ಎಂದು ಅಂದುಕೊಳ್ಳುತ್ತಾಳೆ. ಅಲ್ಲದೇ ತಾನು ಆದಷ್ಟು ಸಂಜುನಿಂದ ದೂರಾ ಇರಬೇಕು ಎಂದು ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾಳೆ. ಇನ್ನು ಸಂಜು, ರಾಜನಂದಿನಿ ರೂಮಿನಲ್ಲಿ ನಡೆದಿದ್ದೇನು ಗೊತ್ತಾ..?


Click it and Unblock the Notifications











