Jothe Jotheyali: ಗೊಂದಲ ಸೃಷ್ಟಿಸಿದ ಅನು ಸಿರಿಮನೆ ಮಾತು

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಎಲ್ಲವೂ ಗೊಂದಲಮಯವಾಗಿದೆ. ಆರಾಧನಾ ತಾಯಿ ಎಂದು ಹೇಳಿ ಬಂದಿರುವ ಸಂಜೀವಿನಿಗೂ ಝೇಂಡೇಗೂ ಏನು ಸಂಬಂಧ. ಅವರಿಬ್ಬರ ಪರಿಚಯ ಹೇಗಾಯ್ತು. ಝೇಂಡೇ ಮತ್ತು ಸಂಜೀವಿನಿ ಇಬ್ಬರು ಸೇರಿ ರಾಜನಂದಿನಿ ವಿಲಾಸವನ್ನು ಒಡೆಯಲು ಯತ್ನಿಸುತ್ತಿರುವುದು ಯಾಕೆ? ಈಗ ಆಗಿರುವ ಅನಾಹುತ ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ ಎಂಬ ಆತಂಕ ವೀಕ್ಷಕರಲ್ಲಿದೆ.

ಮುಖ್ಯವಾಗಿ ಅನು ಗರ್ಭಿಣಿ ಅಲ್ಲ ಎಂಬ ವಿಚಾರ ಎಲ್ಲರಿಗೂ ಕನ್ಫ್ಯೂಸ್ ಕ್ರಿಯೇಟ್ ಮಾಡುತ್ತಿದೆ. ಧಾರಾವಾಹಿಯ ಕಥೆ ಎಲ್ಲಿಂದಲೋ ಮತ್ತೆಲ್ಲಿಗೋ ಹೋಗುತ್ತಿದೆ ಎಂದು ಹೇಳುತ್ತಿದ್ದಾರೆ. ಅನು ಸದ್ಯ ಆಸ್ಪತ್ರೆಯಲ್ಲಿ ಆರ್ಯನಿಗಾಗಿ ಎದುರು ನೋಡುತ್ತಿದ್ದಾಳೆ. ಆದರೆ ಆರ್ಯನನ್ನು ಝೇಂಡೇ ಕಿಡ್ನ್ಯಾಪ್ ಮಾಡಿದ್ದಾನೆ. ಆರ್ಯನಿಗೆ ನೋವು ಮಾಡದ ಝೇಂಡೇ, ತನ್ನ ಸ್ನೇಹದ ಬಗ್ಗೆ ತಿಳಿಸಲು ಪದೇ ಪದೇ ಆರ್ಯನಿಗೆ ಸಮಸ್ಯೆ ಅನ್ನು ಉಂಟು ಮಾಡುತ್ತಿದ್ದಾನೆ.

Jothe Jotheyali Serial 19th April episode written update

ಆರ್ಯ, ಝೇಂಡೇಗೆ ಎಷ್ಟೇ ಅರ್ಥ ಮಾಡಿಸಲು ಯತ್ನಿಸಿದರೂ ವ್ಯರ್ಥವಾಗುತ್ತಿದೆ. ಪ್ರತಿ ಬಾರಿಯೂ ಝೇಂಡೇ ಅನು, ರಾಜನಂದಿನಿ ಮತ್ತೆ ಹುಟ್ಟಿ ಬಂದಿದ್ದಾಳೆ. ಅದೂ ಕೂಡ ನಿನ್ನ ಅಂತ್ಯ ಕಾಣಿಸಲು. ನೀನು, ನಾನು ಮಾಡಿದ್ದನ್ನೆಲ್ಲಾ ಬಹಿರಂಗ ಮಾಡಲು ಬಂದಿದ್ದಾಳೆ. ಅವಳ ಸಹವಾಸ ಬೇಡ ಎಂದೇ ಹೇಳುತ್ತಿದ್ದಾನೆ. ಆದರೆ ಆರ್ಯ, ಅನು ರಾಜನಂದಿನಿಯ ಮರು ಜನ್ಮ ಪಡೆದವಳು ಎಂಬುದನ್ನು ನಂಬುತ್ತಿಲ್ಲ. ಸಾಕ್ಷಿ ಕೊಡು ಎಂದು ಕೇಳಿದ್ದಕ್ಕೆ, ಝೇಂಡೇ ಈಗ ಅನು ಗರ್ಭಿಣಿನೇ ಅಲ್ಲ. ಅದು ಮೊದಲ ಸಾಕ್ಷಿ. ಬೇಕಿದ್ರೆ ಹೋಗಿ ಕೇಳು ಎಂದು ಹೇಳುತ್ತಾನೆ. ಇದರಿಂದ ಆರ್ಯನ ಮನಸ್ಸಿಗೆ ಬಹಳ ಘಾಸಿಯಾಗುತ್ತದೆ.

ಇತ್ತ ಶಾರದಾ ದೇವಿ, ಅನುಳನ್ನು ಮನೆಗೆ ಕರೆದುಕೊಂಡು ಹೋಗಲು ನಿರ್ಧರಿಸುತ್ತಾಳೆ. ಹೀಗಾಗಿ ವೈದ್ಯರ ಬಳಿ ಮನೆಗೆ ಕರೆದುಕೊಂಡು ಹೋಗಬಹುದೇ ಎಂದು ಕೇಳುತ್ತಾಳೆ. ಆಗ ವೈದ್ಯರು ಅನುಳನ್ನು ಪರೀಕ್ಷೆ ಮಾಡಿ. ಮನೆಗೆ ಕರೆದುಕೊಂಡು ಹೋಗಬಹುದು. ಆದರೆ, ಅವರು ವೀಕ್ ಆಗಿದ್ದಾರೆ. ಅವರಿಗೆ ಆಸ್ಪತ್ರೆಯಲ್ಲಿ ನೀಡಿದ್ದೇವೆ. ಮತ್ತೆ ಚಿಕಿತ್ಸೆ ನೀಡಬೇಕು ಎಂದು ವೈದ್ಯರು ಹೇಳುತ್ತಾರೆ. ಇದಕ್ಕೆ ಶಾರದಾ ಆಯ್ತು ಎಂದು ಹೇಳುತ್ತಾಳೆ. ಮನೆಯಲ್ಲಿ ಅನು ರೆಸ್ಟ್ ಮಾಡುತ್ತೀನಿ ಎಂದು ಹೇಳಿ ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಬರುತ್ತಾಳೆ.

ಮಾನ್ಸಿ, ಅನು ರೂಮ್ ಅನ್ನು ಸಿದ್ಧ ಪಡಿಸಲು ಮುಂಚಿತವಾಗಿಯೇ ಬರುತ್ತಾಳೆ. ಆಗ ಸಂಜೀವಿನಿ, ಮಾನ್ಸಿ ಬಳಿ ಅನು ಬಗ್ಗೆ ವಿಚಾರಿಸುತ್ತಾಳೆ. ಅದಕ್ಕೆ ಕೋಪದಲ್ಲಿರುವ ಮಾನ್ಸಿ, ಅನು ಹುಷಾರಾಗುತ್ತಾಳೆ. ಆಮೇಲೆ ಎಲ್ಲವೂ ನಿಮಗೆ ಅರ್ಥವಾಗುತ್ತೆ ಎಂದು ಹೇಳುತ್ತಾಳೆ. ಸಂಜೀವಿನಿ, ಮಾನ್ಸಿ ಅನ್ನು ಮಾಲಿನಿ ಎಂದು ಕರೆದಿದ್ದಕ್ಕೆ ಮಾನ್ಸಿಗೆ ಇನ್ನಷ್ಟು ಕೋಪ ಬರುತ್ತದೆ. ಕೋಪದಲ್ಲೇ ತಾನ್ಯಾರು ಎಂಬುದನ್ನು ಅನುಗೆ ಮನವರಿಕೆ ಮಾಡಿಕೊಡುತ್ತಾಳೆ.

Jothe Jotheyali Serial 19th April episode written update

ಇನ್ನು ಅನು ರೂಮ್ ಗೆ ಹೋಗದೇ, ನನಗೆ ಕೆಲಸ ಇದೆ ಎನ್ನುತ್ತಾಳೆ. ಎಲ್ಲರೂ ರೆಸ್ಟ್ ಮಾಡಲು ಹೇಳಿದರೂ ಒಪ್ಪುವುದಿಲ್ಲ. ಬದಲಿಗೆ ಅನು ಇವತ್ತು ಆರ್ಯ ಸರ್ ಹುಟ್ಟುಹಬ್ಬ. ಅದಕ್ಕೆ ವ್ಯವಸ್ಥೆ ಮಾಡಬೇಕು. ಇವತ್ತೇ ನಾನೊಂದು ಕೆಲಸವನ್ನು ಮಾಡಬೇಕು. ಅದನ್ನು ಮಾಡಿದ ಮೇಲೆ ನಾನು ರೆಸ್ಟ್ ಮಾಡುತ್ತೀನಿ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿ ಎಲ್ಲರೂ ಆಶ್ಚರ್ಯ ಪಡುತ್ತಾರೆ.

ಅನು ಏನು ಹೇಳುತ್ತಿದ್ದಾಳೆ ಎಂಬುದೇ ತಿಳಿಯುವುದಿಲ್ಲ. ಇನ್ನು ಅನುಳ ಈ ಹೇಳಿಕೆ ವೀಕ್ಷಕರಲ್ಲೂ ಗೊಂದಲ ಸೃಷ್ಟಿಸಿದೆ. ಅನು ತಾನು ಗರ್ಭಿಣಿ ಅಲ್ಲದಿದ್ದರೂ ಇಷ್ಟು ದಿನ ಸುಳ್ಳು ಹೇಳಿದ್ದಳಾ..? ಅದಕ್ಕೆ ಕಾರಣ ಏನಿರಬಹುದು..? ಅನುಗೆ ಸಂಜೀವಿನಿ ಬಗ್ಗೆ ಗೊತ್ತಿದ್ಯಾ ಎಂಬ ಪ್ರಶ್ನೆಗಳು ಮೂಡಿವೆ.

More from Filmibeat

English summary
Jothe Jotheyali Serial 19th April episode written update. Here is Detials about Anu comes home from hospital. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X