ಮತ್ತೆ ಮನೆ ಬಳಿ ಬಂದ ಝೇಂಡೇ ಗ್ರಹಚಾರ ಬಿಡಿಸಿದ ಶಾರದಾ ದೇವಿ!

By ಪ್ರಿಯಾ ದೊರೆ

ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರ್ಯವರ್ಧನ್ ಅಂತ್ಯ ಸಂಸ್ಕಾರ ನಡೆದಾಗಿದೆ. ವರ್ಧನ್ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ. ಇದೇ ಹೊತ್ತಲ್ಲಿ ಅನುಳನ್ನು ಅರೆಸ್ಟ್ ಮಾಡಿರುವುದು ವರ್ಧನ್ ಕುಟುಂಬಕ್ಕೆ ಮತ್ತೊಂದು ಶಾಕ್ ಕೊಟ್ಟಿದೆ.

ರಾಜನಂದಿನಿ ಸಾವಿನ ರಹಸ್ಯ ತಿಳಿದ ಅನು ಆರ್ಯವರ್ಧನ್ ಹಾಗೂ ಝೇಂಡೇ ಮೇಲೆ ದ್ವೇಷದಿಂದ ಅವರ ತಪ್ಪು ಅವರೇ ಒಪ್ಪಿಕೊಳ್ಳುವಂತೆ ಮಾಡಬೇಕು ಎಂದು ಮುಂದಾದಳು. ಅಷ್ಟರಲ್ಲಿ ಅನು ಗರ್ಭಿಣಿಯಾಗಿರುವುದು ತಿಳಿದು ಅನುಗೆ ಏನು ಮಾಡಬೇಕು ಎಂಬುದೇ ತಿಳಿಯಲಿಲ್ಲ. ಆರ್ಯವರ್ಧನ್ ತನ್ನ ತಪ್ಪನ್ನು ಎಲ್ಲರ ಮುಂದೆ ಒಪ್ಪಿಕೊಳ್ಳುವ ಹಾಗೆ ಪ್ಲ್ಯಾನ್ ಮಾಡಿದಳು.

ಇನ್ನೇನು ಎಲ್ಲವೂ ಮುಗಿದು ಆರ್ಯ ಹಾಗೂ ಅನು ಸುಖ ಸಂಸಾರವನ್ನು ಆರಂಭಿಸಬೇಕು ಅಷ್ಟರಲ್ಲಿ ಆರ್ಯವರ್ಧನ್ ಸಾವನ್ನಪ್ಪಿದ್ದಾನೆ. ಎಲ್ಲರ ಲೆಕ್ಕಾಚಾರ ಉಲ್ಟಾ ಪಲ್ಟಾ ಆಗಿದೆ. ಮುಂದೆ ಧಾರಾವಾಹಿಯ ಕಥೆ ಹೇಗೆ ಸಾಗುತ್ತದೆ ಎಂಬುದೇ ಕುತೂಹಲವಾಗಿದೆ.

 ಪೊಲೀಸ್ ಠಾಣೆಗೆ ಹೋದ ಅನು

ಪೊಲೀಸ್ ಠಾಣೆಗೆ ಹೋದ ಅನು

ಪೊಲೀಸರಿಗೆ ನಾವು ತೊಂದರೆ ಕೊಡಬಾರದು. ಅವರ ಕರ್ತವ್ಯವನ್ನು ಅವರು ಮಾಡಲಿ. ನಾನು ಕೊಲೆ ಮಾಡಿಲ್ಲ ಎಂದಮೇಲೆ ನನಗ್ಯಾಕೆ ಭಯ ಇರಬೇಕು ಎಂದು ಮನೆಯವರನ್ನೆಲ್ಲಾ ಸಮಾಧಾನ ಮಾಡಿ ಅನು ಪೊಲೀಸರೊಂದಿಗೆ ಹೋಗುತ್ತಾಳೆ. ಅನು ಪೊಲೀಸರ ಜೊತೆಗೆ ಜೀಪಿನಲ್ಲಿ ಹೋಗುವಾಗ ಜೋಗ್ತವ್ವ ಎದುರಿಗೆ ಬರುತ್ತಾಳೆ. ಆದರೆ ಏನನ್ನೂ ಹೇಳದೇ ಹೋಗುತ್ತಾಳೆ. ಜೋಗ್ತವ್ವನನ್ನು ನೋಡುವ ಅನು ನನ್ನನ್ನು ನೀನೇ ಕಾಪಾಡು ತಾಯಿ. ನೀನು ನಡೆಸುವ ದಾರಿಯಲ್ಲೇ ನಡೆಯುತ್ತೇನೆ ಎಂದು ಮನಸ್ಸಿನಲ್ಲೇ ಮಾತನಾಡಿಕೊಳ್ಳುತ್ತಾಳೆ. ಇನ್ನು ಪೊಲೀಸ್ ಠಾಣೆಗೆ ಹೋದ ಅನು ಪೊಲೀಸರ ಬಳಿ ಮಾತನಾಡಿ, ನೀವು ನನ್ನ ಗಂಡನ ಕೊಂದವರನ್ನು ಹಿಡಿದಿದ್ದರೆ ಖುಷಿಯಾಗುತ್ತಿತ್ತು. ಆದರೆ ನನ್ನ ಅರೆಸ್ಟ್ ಮಾಡಿರುವುದು ಬೇಸರವಾಗಿದೆ. ಅದೇನೆ ಇರಲಿ ನ್ಯಾಯಕ್ಕೆ ಬೆಲೆ ಸಿಗಲಿ ಎಂದು ಹೇಳುತ್ತಾಳೆ.

 ಅನು ಅರೆಸ್ಟ್ ಆಗಿದ್ದಕ್ಕೆ ಝೇಂಡೇ ಖುಷ್

ಅನು ಅರೆಸ್ಟ್ ಆಗಿದ್ದಕ್ಕೆ ಝೇಂಡೇ ಖುಷ್

ಇತ್ತ ಅನುಳನ್ನು ಪೊಲೀಸರು ಬಂದು ಕರೆದುಕೊಂಡು ಹೋಗುವುದನ್ನು ದೂರದಲ್ಲಿ ನಿಂತು ಝೇಂಡೇ ನೋಡುತ್ತಾನೆ. ನಂತರ ಆರ್ಯವರ್ಧನ್ ಅಂತ್ಯಕ್ರಿಯೆ ಮಾಡಿದ ಸ್ಥಳಕ್ಕೆ ಬಂದು ಒಬ್ಬನೇ ಮಾತನಾಡುತ್ತಾನೆ. ನನ್ನ ನಿನ್ನ ಸ್ನೇಹ ಎಂತಹದ್ದು. ಸದಾ ಒಟ್ಟಿಗೆ ಇರುತ್ತಿದ್ದೆವು. ನಿನಗೆ ಏನೂ ಆಗದಂತೆ ನೋಡಿಕೊಂಡಿದ್ದೆ. ಆದರೆ ಅನು ಬಂದು ಎಲ್ಲವನ್ನೂ ಹಾಳು ಮಾಡಿದಳು. ನೀನು ನನ್ನ ಮಾತನ್ನು ಕೇಳಲೇ ಇಲ್ಲ. ಈಗ ನೋಡು ನನ್ನ ಬಿಟ್ಟು ಹೋಗಿದ್ದೀಯಾ. ನಿನ್ನ ಬಿಟ್ಟು ನಾನು ಹೇಗಿರಲಿ. ನಿನಗೆ ಈ ಸ್ಥಿತಿ ತಂದವರನ್ನು ನಾನು ಸುಮ್ಮನೇ ಬಿಡುವುದಿಲ್ಲ ಎಂದು ಹೇಳುತ್ತಾನೆ.

 ಅನುಳನ್ನು ಬಿಡಿಸಲು ಬರದ ಹರ್ಷ-ಮಾನ್ಸಿ

ಅನುಳನ್ನು ಬಿಡಿಸಲು ಬರದ ಹರ್ಷ-ಮಾನ್ಸಿ

ಆರ್ಯವರ್ಧನ್ ಸಂಸ್ಕಾರ ನಡೆಸಿ ಎಲ್ಲರೂ ಮನೆಗೆ ಬರುತ್ತಾರೆ. ಆಗ ಶಾರದಾ ಹರ್ಷನ ಬಳಿ ಹೋಗಿ ಅನುಳನ್ನು ಬಿಡಿಸಿಕೊಂಡು ಬರೋಣ ಪೊಲೀಸ್ ಠಾಣೆಗೆ ಬಾ ಎಂದು ಕರೆಯುತ್ತಾಳೆ. ಆಗ ಹರ್ಷ, ಮಾನ್ಸಿ ಮುಖವನ್ನು ನೋಡುತ್ತಾನೆ. ಸಿಟ್ಟು ಬಂದ ಶಾರದಾ ದೇವಿ ನೀನೇನು ಬರುವುದು ಬೇಡ ನಾನೇ ಹೋಗುತ್ತೇನೆ ಎಂದು ಹೊರಡುತ್ತಾಳೆ. ಮೀರಾಗೆ ಮನೆ ಕಡೆ ಜೋಪಾನ ನನ್ನ ಮಗಳನ್ನು ನಾನು ಕರೆದುಕೊಂಡು ಬರುತ್ತೇನೆ ಎಂದು ಹೊರಡುತ್ತಾಳೆ.

 ಶಾರದಾ ದೇವಿಗೆ ಅಡ್ಡಗಟ್ಟಿದ ಝೇಂಡೇ

ಶಾರದಾ ದೇವಿಗೆ ಅಡ್ಡಗಟ್ಟಿದ ಝೇಂಡೇ

ಪೊಲೀಸ್ ಸ್ಟೇಷನ್‌ಗೆ ಹೊರಟು ನಿಂತ ಶಾರದಾ ದೇವಿಯವರಿಗೆ ಊಟ ಮಾಡಿಕೊಂಡು ಹೋಗಲು ಮಂದಾ ಹೇಳುತ್ತಾಳೆ. ಶಾರದಾ ನನ್ನ ಮಗಳು ಕೂಡ ಬೆಳಗ್ಗಿನಿಂದ ಏನೂ ತಿಂದಿಲ್ಲ. ಅವಳನ್ನು ಬಿಟ್ಟು ನಾನು ಹೇಗೆ ತಿನ್ನಲಿ. ನನ್ನ ಮಗಳನ್ನು ನೋಡಬೇಕು ಎಂದು ಹೇಳಿ ಹೊರಟಾಗ ಗೇಟ್ ಬಳಿ ಝೇಂಡೇ ಕಾರಿಗೆ ಅಡ್ಡ ಹಾಕುತ್ತಾನೆ. ಆಗ ಶಾರದಾ ಝೇಂಡೇ ಬಳಿ ಗಲಾಟೆ ಮಾಡುತ್ತಿರುತ್ತಾಳೆ.

More from Filmibeat

English summary
jothe jotheyali Serial 19th September Episode Written Update.anu and vardhan family lost arya. And police came to arrested anu blaming she planned to kill arya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X