Jothe Jotheyali: ಆರ್ಯನಿಗೆ ಎಲ್ಲಾ ನೆನಪನ್ನು ಮರುಕಳಿಸುವಂತೆ ಮಾಡಲು ಅನು ಯತ್ನ
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಸುಮಾರು ನಾಲ್ಕು ತಿಂಗಳಿನಿಂದ ಆರ್ಯವರ್ಧನ್ ಹಾಗೂ ಅನು ಇಬ್ಬರೂ ದೂರಾಗಿದ್ದರು. ಈಗ ಇಬ್ಬರೂ ಮತ್ತೆ ಒಂದಾಗಿದ್ದಾರೆ. ಧಾರಾವಾಹಿ ವೀಕ್ಷಕರ ತಾಳ್ಮೆ ಪರೀಕ್ಷೆ ಮಾಡುತ್ತಿರುವುದು ಸುಳ್ಳಲ್ಲ.
ಆರ್ಯವರ್ಧನ್ ಸತ್ತಿಲ್ಲ. ಬದುಕಿದ್ದಾನೆ ಎಂಬ ಸತ್ಯ ತಿಳಿದ ಮೇಲೂ ಸಾಕಷ್ಟು ದಿನ ಅನು ತ್ಯಾಗಕ್ಕೆ ಸಿದ್ಧಳಾಗಿದ್ದಳು. ಈಗ ಆರ್ಯನ ಜೊತೆಗೆ ಮತ್ತೆ ಹೊಸ ಬದುಕನ್ನು ಶುರು ಮಾಡಿದ್ದಾಳೆ.
ಆರ್ಯ ಮಧ್ಯದಲ್ಲಿನ ಎರಡು ವರ್ಷವನ್ನು ಮರೆತಿದ್ದು, ಅದನ್ನು ಈಗ ಮನೆಯವರು ಎಲ್ಲರೂ ಸೇರಿ ನೆನಪು ಮಾಡಲು ಮುಂದಾಗಿದ್ದಾರೆ. ಆರ್ಯನೂ ಮರೆತಿರುವುದನ್ನು ನೆನಪು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ.

ಝೇಂಡೇ ಇಲ್ಲದೇ ಆರ್ಯನ ಒದ್ದಾಟ
ಆರ್ಯನಿಗೆ ಅನು ಕೆಲವೊಂದು ವಿಚಾರಗಳನ್ನು ನೆನಪು ಮಾಡಲು ಪ್ರಯತ್ನಿಸುತ್ತಿದ್ದಾಳೆ. ಅವರ ಮದುವೆಯಾದದನ್ನು ಹೇಳುತ್ತಾಳೆ. ಆರ್ಯನಿಗೆ ಯಾವುದೂ ನೆನಪಾಗುವುದಿಲ್ಲ. ಇಬ್ಬರ ಮದುವೆಯೂ ಹೇಗೆ ನಡೆಯಿತು ಎಂದು ವಿವರಿಸುತ್ತಾಳೆ. ಹಾಗೆಯೇ ಮದುವೆಯ ದಿನ ಅನು ತಾಳಿ ಕಟ್ಟಿಸಿಕೊಂಡಂತೆ ಆರ್ಯನಿಗೆ ಬ್ರೇಸ್ ಲೈಟ್ ಹಾಕಿದ್ದನ್ನು ತೋರಿಸುತ್ತಾಳೆ. ಆದರೂ ಆರ್ಯನಿಗೆ ನೆನಪಾಗುವುದಿಲ್ಲ. ಆಗ ಝೇಂಡೇ ಅನ್ನು ನೆನೆದ ಆರ್ಯ ನನ್ನ ಜೊತೆಗೆ ಯಾರೂ ಉಳಿಯಲ್ಲ ಎಲ್ಲಾ ದೂರ ಆಗುತ್ತಾರೆ. ಝೇಂಡೇ ಕೂಡ ಇಲ್ಲ. ನೀನೂ ಹೋಗು ಎಂದು ಹುಚ್ಚನಂತೆ ಆಡುತ್ತಾನೆ. ಆದರೆ ಅನು ಸಮಾಧಾನ ಮಾಡುತ್ತಾಳೆ.

ಹೊಸಮನಿ ಬಳಿ ಬಂದ ಝೇಂಡೇ
ಝೇಂಡೇ ರಾತ್ರಿ ಪೂರ ಆರ್ಯ ಮನೆಯ ಎದುರಿಗೆ ಕಾಯುತ್ತಿದ್ದ. ಈಗ ಬೆಳ್ಳಂಬೆಳಗ್ಗೆ ಝೇಂಡೇ ಹೊಸಮನಿ ಬಳಿ ಬರುತ್ತಾನೆ. ಹೇಗಾದರೂ ಮಾಡಿ ಆರ್ಯನ ಜೊತೆಗೆ ಮಾತನಾಡಲು ಅವಕಾಶ ಮಾಡಿಕೊಡುವಂತೆ ಕೇಳುತ್ತಾನೆ. ಆದರೆ ಹಿಸಮನಿ, ಝೇಂಡೇಗೆ ಬೈಯುತ್ತಾನೆ. ಆದರೂ ಝೇಂಡೇ ಅಲ್ಲಿಂದ ಹೋಗುವುದಿಲ್ಲ. ಆರ್ಯ ಬರುವವರೆಗೂ ಕಾಯುತ್ತೀನಿ. ಬಂದ ಮೇಲೆಯೇ ಮಾತನಾಡುತ್ತೀನಿ ಎಂದು ಹೇಳಿ ಝೇಂಡೇ ಅಲ್ಲೇ ನಿಂತು ಕಾಯುತ್ತಿರುತ್ತಾನೆ.

ಶಾರದಾ ದೇವಿ ಬಳಿ ಮೀರಾ ಮಾತು
ಇನ್ನು ಮೀರಾ ಮನೆಗೆ ಬರುತ್ತಾಳೆ. ಶಾರದಾ ದೇವಿ ಬಳಿ ಮಾತನಾಡುತ್ತಾಳೆ. ಝೇಂಡೇ ಫೋನ್ ಮಾಡಿ ಏನೇನೋ ಮಾತನಾಡಿದ. ಆಸ್ತಿ ಬೇಡ. ದುಡ್ಡು ಬೇಡ. ನನಗೆ ಆರ್ಯ ಬೇಕು ಎಂದು ಕೇಳಿದ. ನನಗೆ ಏನು ಹೇಳಬೇಕು. ಆ ಪರಿಸ್ಥಿತಿಯನ್ನು ಹೇಗೆ ಮ್ಯಾನೇಜ್ ಮಾಡಬೇಕು ಎಂಬುದೇ ಗೊತ್ತಾಗಲಿಲ್ಲ ಎನ್ನುತ್ತಾಳೆ. ಅದಕ್ಕೆ ಶಾರದಾ ತಲೆಕೆಡಿಸಿಕೊಳ್ಳಬೇಡ. ಆರ್ಯನಿಗೆ ನೆನಪಾಗದ ಎರಡು ವರ್ಷಗಳನ್ನು ನೆನಪಾಗುವಂತೆ ಮಾಡಬೇಕು. ಆ ಕೆಲಸವನ್ನು ನೀನು ಕೂಡ ಮಾಡಬೇಕು ಎನ್ನುತ್ತಾಳೆ. ಇದಕ್ಕೆ ಮೀರಾ ಹ್ಞೂಂ ಎನ್ನುತ್ತಾಳೆ. ನಂತರ ಆರ್ಯನ ಬಗ್ಗೆ ಯೋಚಿಸುತ್ತಾಳೆ.

ಅನು-ಆರ್ಯ ಮಧ್ಯೆ ಮತ್ತೆ ಝೇಂಡೇ ಎಂಟ್ರಿ?
ಅನು ಮತ್ತು ಆರ್ಯ ಇಬ್ಬರೂ ವಾಕ್ ಮಾಡುತ್ತಿರುತ್ತಾರೆ. ಆಗ ಅನು ಬೇಕಂತಲೇ ಆಟೋ ಬಂದಾಗ ಓಡಿ ಹೋಗಿ ಹತ್ತುತ್ತಾಳೆ. ಆಗ ಆರ್ಯನು ಬರುತ್ತಾನೆ. ಇಬ್ಬರೂ ಮಾತನಾಡುತ್ತಾ ಅವರಿಬ್ಬರ ಭೇಟಿ ಆಗಿದ್ದು ಎಂದು ನೆನಪು ಮಾಡುತ್ತಾಳೆ. ಇನ್ನು ಆರ್ಯ ಮೊದಲ ಬಾರಿಗೆ ಅನುಗೆ ಐ ಲವ್ ಯೂ ಎಂದು ಹೇಳಿದ್ಯಾವಾಗ ಎಂಬ ಬಗ್ಗೆಯೂ ಇಬ್ಬರೂ ಮಾತನಾಡುತ್ತಾರೆ. ಆದರೆ, ಇವರಿಬ್ಬರನ್ನು ಹೀಗೆ ಒಂದಾಗಿರಲು ಝೇಂಡೇ ಬಿಡುತ್ತಾನಾ..? ಇಲ್ಲ ಮತ್ಯಾವ ಹೊಸ ಐಡಿಯಾವನ್ನು ಮಾಡುತ್ತಾನೋ ಗೊತ್ತಿಲ್ಲ.


Click it and Unblock the Notifications











