Jothe Jotheyali: ಕೆಲಸಕ್ಕೆ ರಾಜೀನಾಮೆ ಕೊಡುತ್ತಿರುವ ಅನು: ಆರಾಧನಾಳಿಗೆ ಪ್ರೇಕ್ಷಕರ ಹಿಡಿಶಾಪ

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿ ಕಥೆ ಸಿಕ್ಕಾಪಟ್ಟೆ ತಿರುವುಗಳು ತೆಗೆದುಕೊಳ್ಳುತ್ತಿದೆ. ರಾಜನಂದಿನಿ ಕಥೆ ಶುರುವಾಗಿನಿಂದಲೂ 'ಜೊತೆ ಜೊತೆಯಲಿ' ಧಾರಾವಾಹಿ ಬಹಳಷ್ಟು ಟ್ವಿಸ್ಟ್‌ಗಳನ್ನು ಪಡೆದಿವೆ.

ಸುಬ್ಬು ಮಗಳ ಜೀವನ ಹಾಳಾಗುತ್ತಿದೆ ಎಂಬುದನ್ನೇ ನೆಪ ಮಾಡಿಕೊಂಡು ಅಳಿಯನಿಂದ ದೂರ ಇಡುತ್ತಿದ್ದಾನೆ. ರಾಜನಂದಿನಿ ವಿಲಾಸದಿಂದ ಕರೆದುಕೊಂಡು ಬಂದಿದ್ದಾನೆ.

ಇದೀಗ ಅನುಗೆ ಆಫೀಸಿಗೆ ಹೋಗಬೇಡ. ರಾಜೀನಾಮೆ ಕೊಟ್ಟುಬಿಡು ಎಂದಿದ್ದಾನೆ. ಇದಕ್ಕೆ ಅನು ಕೂಡ ತಲೆ ಆಡಿಸಿದ್ದು, ಆಫೀಸಿಗೆ ರಾಜೀನಾಮೆ ಕೊಡಲು ಮುಂದಾಗಿದ್ದಾಳೆ.

ರಾಜೀನಾಮೆ ನೀಡಲು ಮುಂದಾದ ಅನು

ರಾಜೀನಾಮೆ ನೀಡಲು ಮುಂದಾದ ಅನು

ಆರಾಧನಾ, ವರ್ಧನ್ ಗ್ರೂಪ್ಸ್ ಜೊತೆಗೆ ಕೈ ಜೋಡಿಸಿದ್ದಾಳೆ. ಆರ್ಯ ಮತ್ತು ಆರಾಧನಾ ಇಬ್ಬರೂ ಮನೆಯಿಂದ ಒಟ್ಟಿಗೆ ಆಫೀಸಿಗೆ ಹೊರಟಿದ್ದಾರೆ. ಈ ವೇಳೆ ಶಾರದಾ ದೇವಿ, ಅನುಳನ್ನು ಆದಷ್ಟು ಬೇಗ ಮನೆಗೆ ಕರೆದುಕೊಂಡು ಬಾ ಎಂದು ಆರ್ಯನಿಗೆ ಹೇಳುತ್ತಾಳೆ. ಈ ಮಾತನ್ನು ಕೇಳಿದ ಆರಾಧನಾ ಬೇಸರ ಮಾಡಿಕೊಳ್ಳುತ್ತಾಳೆ. ಆರ್ಯನ ಜೊತೆಗೆ ಅನುಳನ್ನು ನೋಡುವುದು ಅಸಾಧ್ಯ ಎಂದು ಅಂದುಕೊಳ್ಳುತ್ತಾಳೆ. ಕಾರಿನಲ್ಲಿ ಆರ್ಯನ ಜೊತೆಗೆ ಹೋಗುವಾಗಲೂ ಅನು ಬಗ್ಗೆ ಹೊಟ್ಟೆ ಉರಿದುಕೊಂಡು ಮಾತನಾಡುತ್ತಾಳೆ. ಅನು ಆಫೀಸಿಗೆ ಬಂದ ಮೇಲೆ ಆರ್ಯನ ಬಳಿ ಮಾತನಾಡುತ್ತಾಳೆ. ನಾನು ರಾಜೀನಾಮೆ ಕೊಡುತ್ತಿದ್ದೇನೆ ಎಂದು ಹೇಳುತ್ತಾಳೆ.

ರಾಜಿನಾಮೆ ವಿಷಯ ಕೇಳಿ ಆರ್ಯ ಶಾಕ್

ರಾಜಿನಾಮೆ ವಿಷಯ ಕೇಳಿ ಆರ್ಯ ಶಾಕ್

ಅನು ರಾಜಿನಾಮೆ ವಿಚಾರವನ್ನು ಕೇಳಿದ ಮೀರಾ, ಆರ್ಯ ಶಾಕ್ ಆಗುತ್ತಾರೆ. ಆದರೆ, ಆರಾಧನಾ ಮನದಲ್ಲೇ ಖುಷಿಪಡುತ್ತಾಳೆ. ಇದನ್ನೆಲ್ಲಾ ಮೀರಾ ಗಮನಿಸುತ್ತಿರುತ್ತಾಳೆ. ಆರ್ಯ, ಅನು ಮೇಲೆ ಬೇಸರವನ್ನು ತೋರಿಸುತ್ತಿದ್ದಾನೆ. ನೀನಿಲ್ಲದೇ ನನಗೆ ಇರೋದಕ್ಕೆ ಆಗೋದಿಲ್ಲ. ಇದೆಲ್ಲಾ ಯಾಕೆ ಸುಬ್ಬುಗೆ ಅರ್ಥವಾಗುತ್ತಿಲ್ಲವೋ ಗೊತ್ತಾಗುತ್ತಿಲ್ಲ. ನಾನು ಹೇಗೆ ನಿನ್ನನ್ನು ಬಿಟ್ಟಿರಲಿ. ನಾನು ಮತ್ತೆ ಒಂಟಿ ಆಗುತ್ತೇನೆ ಎಂದು ಗೋಳಾಡುತ್ತಾನೆ. ಆಗ ಆರಾಧನಾ ನೀವು ಒಂಟಿ ಅಲ್ಲ ಆರ್ಯ, ನಾವೆಲ್ಲಾ ಇದೀವಲ್ಲ ಎಂದು ಹೇಳುತ್ತಾಳೆ. ಆಗ ಮೀರಾ, ಆರಾಧನಾಳನ್ನು ಕಂಟ್ರೋಲ್ ಮಾಡುತ್ತಾಳೆ. ಆರಾಧನಾಳ ಪ್ರತಿ ಮಾತನ್ನು ಗಮನಿಸುವ ಮೀರಾ ಎಲ್ಲದಕ್ಕೂ ಕಂಟ್ರೋಲ್ ಮಾಡುತ್ತಿರುತ್ತಾಳೆ.

 ಅನು ಕೈ ತಪ್ಪುತ್ತಿದ್ದಾನಾ ಆರ್ಯ..?

ಅನು ಕೈ ತಪ್ಪುತ್ತಿದ್ದಾನಾ ಆರ್ಯ..?

ಆರಾಧನಾ, ವಿಶ್ವಾಸ್ ದೇಸಾಯಿ ಮುಖವನ್ನು ಹೊತ್ತಿರುವ ಆರ್ಯನಲ್ಲಿ ಸತ್ತಿರುವ ತನ್ನ ಪತಿಯನ್ನು ನೋಡುತ್ತಿದ್ದಾಳೆ. ಹಾಗಾಗಿ ಆರಾಧನಾ ಕೂಡ ಫಾರಿನ್‌ಗೆ ಹೋಗದೆಯೇ ಇಲ್ಲೇ ಉಳಿದುಕೊಂಡಿದ್ದಾಳೆ. ಇಷ್ಟು ದಿನ ಏನಾದರೂ ಒಂದು ನೆಪವನ್ನು ಮಾಡಿಕೊಂಡು ಉಳಿದಿದ್ದ ಆರಾಧನಾ ಈಗ ವರ್ಧನ್ ಗ್ರೂಪ್ ಸದಸ್ಯಳಾಗಿದ್ದಾಳೆ. ವಿಶು ಅಂತೆ ಆರ್ಯ ಕಾಣುತ್ತಿದ್ದಾನೆ ಎಂಬ ಕಾರಣಕ್ಕೆ ಆರಾಧನಾ ಹಾದಿ ತಪ್ಪುತ್ತಿದ್ದಾಳೆ. ಇತ್ತ ಆರ್ಯನೂ ಆರಾಧನಾಳನ್ನು ಸಲುಗೆ ಇಂದ ಮಾತನಾಡಿಸುತ್ತಾ, ಮನೆಯಲ್ಲೇ ಉಳಿಯುವಂತೆ ಮಾಡಿ ಬದುಕಿನಲ್ಲಿ ಮತ್ತೊಂದು ಎಡವಟ್ಟನ್ನು ಮಾಡುತ್ತಿದ್ದಾನೆ.

ಸುಬ್ಬುನನ್ನು ಬೈಯುತ್ತಿರುವ ವೀಕ್ಷಕರು

ಸುಬ್ಬುನನ್ನು ಬೈಯುತ್ತಿರುವ ವೀಕ್ಷಕರು

ಧಾರಾವಾಹಿ ನೋಡುತ್ತಿರುವ ಪ್ರೇಕ್ಷಕರು ಈಗ ಆರಾಧನಾಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಝೇಂಡೇ ಕಣ್ತಪ್ಪಿಸಿಕೊಂಡಿದ್ದಾನೆ. ಈಗ ಅನು ಮತ್ತು ಆರ್ಯನನ್ನು ಆರಾಧನಾ ಬೇರೆ ಮಾಡುತ್ತಿದ್ದಾಳೆ. ಆರ್ಯನ ಮೇಲೆ ಕಣ್ಣು ಹಾಕಿದ್ದಾಳೆ ಎಂದು ಬೈಯುತ್ತಿದ್ದಾರೆ. ಅಷ್ಟೇ ಅಲ್ಲದೇ ಮಗಳು ಮತ್ತು ಅಳಿಯನನ್ನು ದೂರ ಮಾಡುತ್ತಿರುವ ಸುಬ್ಬುನನ್ನು ಕೂಡ ಪ್ರೇಕ್ಷಕರು ಬೈಯುತ್ತಿದ್ದಾರೆ. ಧಾರಾವಾಹಿಯಲ್ಲಿ ಸುಬ್ಬು ಹಾಗೂ ಆರಾಧನಾಳಿಂದ ಹೊಸ ತಿರುವು ಪಡೆಯುತ್ತಿದೆ.

More from Filmibeat

English summary
Jothe Jotheyali Serial 1st March Episode Written Update. Subbu separated anu and arya. Now anu is decided to resign For Job. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X