Jothe Jotheyali: ಸಂಜೀವಿನಿ ಹಾಗೂ ಅವರ ಮಕ್ಕಳಿಗೆ ಅವಮಾನಿಸಿದ ಮಾನ್ಸಿ
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಝೇಂಡೇ, ಆರ್ಯನನ್ನು ಕರೆದುಕೊಂಡು ಹೋಗಿದ್ದು, ಮತ್ತೆ ಅವನ ತಲೆ ಕೆಡಿಸಿದ್ದಾನೆ. ನಾನೇ ನಿನ್ನ ಜೀವನ, ಅನು ಏನೂ ಅಲ್ಲ ಎಂಬುದನ್ನು ತಲೆಗೆ ತುಂಬುತ್ತಿದ್ದಾನೆ. ನಾನೇ ರಾಜನಂದಿನಿ ಎಂದು ಹೇಳಿ ನಿನ್ನ ಜೀವನದಲ್ಲಿ ಅನು ಆಟ ಆಡುತ್ತಿದ್ದಾಳೆ ಎಂದು ತಲೆಗೆ ತುಂಬಿದ್ದಾನೆ. ಆರ್ಯ ಕೂಡ ಝೇಂಡೇ ಮಾತನ್ನು ನಂಬಿದ್ದಾನೆ.
ಅನುಳನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಆರ್ಯ ಈಗ ಅನು ಮೇಲೆ ಅನುಮಾನ ಹೆಚ್ಚಿಸಿಕೊಂಡಿದ್ದಾನೆ. ಅನು ಗರ್ಭಿಣಿ ಹೌದೋ ಅಲ್ಲವೋ ಎಂದು ತಿಳಿಯಲು ಕಾತುರನಾಗಿದ್ದಾನೆ. ಇತ್ತ ಅನು ನೋಡಿದರೆ, ಆರ್ಯ ಸರ್ ಬರ್ತಡೇ ಇವತ್ತು. ನಾನು ರೆಸ್ಟ್ ಮಾಡುವುದಿಲ್ಲ. ಇವತ್ತು ನಾನು ಮುಖ್ಯವಾದ ಕೆಲಸವೊಂದನ್ನು ಮಾಡಬೇಕಿದೆ. ಅದಾದ ಬಳಿಕವೇ ನಾನು ರೆಸ್ಟ್ ಮಾಡುವುದು ಎಂದು ಹೇಳಿ, ರೆಡಿಯಾಗಲು ರೂಮಿಗೆ ಹೊರಟಿದ್ದಾಳೆ.

ಅನು ನಡವಳಿಕೆಯಿಂದ ಮನೆಯವರೆಲ್ಲಾ ಶಾಕ್ ಆಗಿದ್ದಾರೆ. ಹರ್ಷ ಯಾಕೆ ಅತ್ತಿಗೆ ಹೀಗೆಲ್ಲಾ ನಡೆದುಕೊಳ್ಳುತ್ತಿದ್ದಾರೆ ಎಂದು ಕೇಳುತ್ತಾನೆ. ಅದಕ್ಕೆ ಶಾರದಾ, ಅನುಗೆ ನಾವ್ಯಾರು ಏನೇ ಹೇಳಿದರೂ ಅವಳು ಕೇಳುವುದಿಲ್ಲ ಎಂದು ಅಸಮಾಧಾನವನ್ನು ಹೊರ ಹಾಕುತ್ತಾಳೆ.
ಇದೇ ಸಂದರ್ಭದಲ್ಲಿ ಹರ್ಷ, ದಾದ ಯಾಕೆ ಇಷ್ಟು ಹೊತ್ತಾದರೂ ಬಂದಿಲ್ಲ. ದಾದ ಎಲ್ಲಿಗೆ ಹೋದರು, ಅವರಿಗೇನಾಯ್ತು ಎಂದು ಪ್ರಶ್ನೆ ಮಾಡುತ್ತಾನೆ. ಇದಕ್ಕೆ ಮಾನ್ಸಿ, ಇದಕ್ಕೆಲ್ಲಾ ಕಾರಣ ಮನೆಗೆ ಬಂದು ಸೇರಿಕೊಂಡಿರುವವರೇ. ಯಾವ ಉದ್ದೇಶ ಇಟ್ಟುಕೊಂಡು ಮನೆಗೆ ಬಂದಿದ್ದಾರೋ ಅದನ್ನು ಅವರೇ ಹೇಳಬೇಕು ಎಂದು ಕಟುವಾಗಿ ಮಾತನಾಡುತ್ತಾಳೆ. ಇದರಿಂದ ಭಾವನಾಳಿಗೆ ಹರ್ಟ್ ಆಗುತ್ತದೆ. ಆರ್ಯ ಅವರು ಮನೆಗೆ ಬರದೇ ಇರುವುದಕ್ಕೆ ನಾವು ಕಾರಣವೇ..? ಅದು ಯಾಕೆ ಹಾಗೆ ಹೇಳುತ್ತೀರಾ..? ನಾನು ಯಾವತ್ತೂ ಹಾಗೆಲ್ಲಾ ಯೋಚಿಸುವುದಿಲ್ಲ ಎಂದಿದ್ದಾಳೆ.
ಇನ್ನು ಈ ಮನೆಯಲ್ಲಿ ಇರಬೇಕಾ. ನಾವು ಹೋಗೋಣ ಬನ್ನಿ ಇಲ್ಲಿಂದ ಎಂದು ಭಾವನಾ ಎಲ್ಲರನ್ನೂ ಕರೆಯುತ್ತಾಳೆ. ಆಗಲೂ ಮಾನ್ಸಿ ಈಗ ಹೇಳಿದ್ದನ್ನ ಮೊದಲು ಮಾಡಿ ಎನ್ನುತ್ತಾಳೆ. ಆಗ ಆರಾಧನಾ ನಾವೇನು ಇಷ್ಟಪಟ್ಟು ಇಲ್ಲಿ ಉಳಿದುಕೊಂಡಿಲ್ಲ. ಅನು ಹೇಳಿದ್ದಕ್ಕೆ ಇದ್ದದ್ದು ಎಂದು ಹೊರಡುತ್ತಾರೆ. ಸಂಜೀವಿನಿ ಅಲ್ಲೇ ನಿಂತಿರುತ್ತಾಳೆ. ಆಗ ಮಾನ್ಸಿ ನಿಮಗೆ ಸಪರೇಟ್ ಆಗಿ ಹೇಳಬೇಕಾ ಎಂಬಂತೆ ಪ್ರಶ್ನಿಸುತ್ತಾಳೆ. ಅವಮಾನದಿಂದ ಸಂಜೀವಿನಿ ಹೊರಡುತ್ತಾಳೆ.

ಇದೇ ವೇಳೆಗೆ ಝೇಂಡೇ ಆರ್ಯನನ್ನು ಕರೆದುಕೊಂಡು ಬರುತ್ತಾನೆ. ಝೇಂಡೇ ಆಚೆಯೇ ನಿಂತಿರುತ್ತಾನೆ. ಆದರೆ, ಆರ್ಯ ಮನೆಗೆ ಬರುತ್ತಾನೆ. ಅನು ಪ್ರೀತಿಯಿಂದ ಆರ್ಯನನ್ನು ಮಾತನಾಡಿಸುತ್ತಾಳೆ. ಆದರೆ, ಆರ್ಯ ಕೋಪದಲ್ಲಿ ಮಾತನಾಡುತ್ತಾನೆ. ಆರ್ಯನ ಹುಟ್ಟುಹಬ್ಬಕ್ಕೆ ಮನೆಯನ್ನು ಅಲಂಕರಿಸಲಾಗಿರುತ್ತದೆ. ಈ ವೇಳೆ ಅನು ಎಲ್ಲಾ ಆಸ್ತಿಯನ್ನು ನಿಮಗೆ ಕೊಡುತ್ತೇನೆ. ನೀವೇ ಇದರ ವಾರಸುದಾರ. ನನಗೇನು ಬೇಡ. ಝೇಂಡೇ ಕೂಡ ಕದ್ದು ಮುಚ್ಚಿ ಹಣ ತೆಗೆದುಕೊಳ್ಳುವುದು ಬೇಡ ಎಂದು ಹೇಳುತ್ತಾಳೆ.
ಈ ಮಾತನ್ನು ಕೇಳಿದ ಆರ್ಯ ಕೋಪ ಹೆಚ್ಚಾಗಿ ನೀನೀಗ ನನ್ನ ಮಗುವಿನ ಬದಲಿಗೆ ಈ ಆಸ್ತಿಯನ್ನು ಕೊಡುತ್ತಿದ್ದೀಯಾ..? ನನ್ನ ಮಗು ಜೀವದ ಬದಲು ಆಸ್ತಿ ಕೊಟ್ಟು ಸಮಾಧಾನ ಮಾಡುತ್ತಿದ್ದೀಯಾ ಎಂದು ಕೇಳುತ್ತಾನೆ. ಈ ಪ್ರಶ್ನೆಯನ್ನು ಕೇಳಿದ ಕೂಡಲೇ ಅನು ಶಾಕ್ ಆಗುತ್ತಾಳೆ. ಇದೇನು ಕೇಳುತ್ತಿದ್ದೀರಾ ಎಂದು ಒಂದು ಕ್ಷಣ ದಂಗಾಗುತ್ತಾಳೆ.
ಇದೇ ವೇಳೆಗೆ ಬ್ಯಾಗ್ ಸಮೇತ ಬರುವ ಸಂಜೀವಿನಿ ಬೇಕಂತಲೇ ಹೊರಡುತ್ತೇನೆ. ಇದನ್ನೆಲ್ಲಾ ನೋಡೋದಕ್ಕೆ ಅಣ್ಣ ಇಲ್ಲ. ಅಣ್ಣನ ಆಸ್ತಿಯನ್ನು ಯಾರಿಗೋ ಕೊಡುವುದು ಎಂದು ಕೊಂಕು ಮಾತನಾಡುತ್ತಾಳೆ. ಆಗ ಅನು ನಾನು ರಾಜನಂದಿನಿ. ನನ್ನ ಅಪ್ಪನ ಆಸ್ತಿ ಇದು ಎಂದು ಮಾತನಾಡುತ್ತಾಳೆ.


Click it and Unblock the Notifications











