Jothe Jotheyali: ಸೈಕಲ್ ಏರಿ ಹೊರಟ ಆರ್ಯನಿಗೆ ಝೇಂಡೇ ಏದುರಾಗುತ್ತಾನಾ..?

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರ್ಯ ರೂಮಿನಲ್ಲಿ ಕೂಡಿ ಹಾಕಿದ್ದರೂ, ಝೇಂಡೇ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾನೆ. ಆದರೆ ಝೇಂಡೇ ತಪ್ಪಿಸಿಕೊಂಡು ಬಂದಿರುವುದು ಆರ್ಯನಿಗೆ ಇನ್ನೂ ಗೊತ್ತಾಗಿಲ್ಲ.

ಸುಬ್ಬು, ಪುಷ್ಪಾ ಹಾಗೂ ಅನುಳನ್ನು ಕರೆದುಕೊಂಡು ಬಾಡಿಗೆ ಮನೆಗೆ ಬಂದಿದ್ದಾನೆ. ಇದರಿಂದ ಪುಷ್ಪಾಗೆ ಕೋಪ ಬಂದಿದೆ. ಆದರೆ ಅನು ಮಾತ್ರ ತನ್ನ ಅಪ್ಪ ಏನೇ ಮಾಡಿದರೂ ಅದು ಸರಿ ಎಂಬಂತೆ ನಡೆದುಕೊಂಡಿದ್ದಾಳೆ.

ಸುಬ್ಬು ಬಾಡಿಗೆ ಮನೆಗೆ ಬಂದಿರುವುದು ಮಾಲೀಕರ ಪತ್ನಿಗೆ ಅನುಮಾನವನ್ನು ತರಿಸಿದೆ. ಅಷ್ಟು ದೊಡ್ಡ ಶ್ರೀಮಂತರು ಮನೆಯ ಸೊಸೆ, ಇಲ್ಲಿ ಯಾಕೆ ಬಂದಿದ್ದಾಳೆ ಎಂದು ತಲೆ ಕೆಡಿಸಿಕೊಂಡಿದ್ದಾರೆ.

ಸಲಹೆ ಕೊಟ್ಟ ಆರಾಧನಾ

ಸಲಹೆ ಕೊಟ್ಟ ಆರಾಧನಾ

ಆರ್ಯ ಮತ್ತು ಆರಾಧನಾ ಇಬ್ಬರೂ ಮಲಗುವ ಮುನ್ನ ಎದುರಾಗುತ್ತಾರೆ. ಈ ವೇಳೆ ಆರಾಧನಾ, ಆರ್ಯನನ್ನು ಮಾತನಾಡಿಸುತ್ತಾಳೆ. ನಿಮ್ಮ ಮನದಲ್ಲಿ ಏನಾದರೂ ಇದ್ದರೆ ನನ್ನ ಬಳಿ ಹೇಳಿಕೊಳ್ಳಿ ಎಂದು ಆರಾಧನಾ, ಆರ್ಯನನ್ನು ಕೇಳುತ್ತಾಳೆ. ನಂತರ ಸ್ವಲ್ಪ ಸಂಕೋಚ ಪಟ್ಟುಕೊಳ್ಳುತ್ತಾಳೆ. ಆಗ ಆರ್ಯ, ಆರಾಧನಾಳಿಗೆ ಹೀಗೆಲ್ಲಾ ಮುಜುಗರ ಪಟ್ಟುಕೊಳ್ಳುವ ಅಗತ್ಯವಿಲ್ಲ. ಈ ಮನೆಯಲ್ಲಿದ್ದೀರಾ ಎಂದರೆ, ಪ್ರಶ್ನೆ ಮಾಡುವ ಹಕ್ಕು ನಿಮಗೂ ಇದೆ ಎಂದು ಹೇಳುತ್ತಾನೆ. ಬಳಿಕ, ಅನು ನನ್ನನ್ನು ಅವಾಯ್ಡ್ ಮಾಡುತ್ತಿದ್ದಾಳೆ. ಅದೇ ಬೇಸರ ಎಂದು ಹೇಳುತ್ತಾನೆ. ಇದಕ್ಕೆ ಆರಾಧನಾ ನೀವು ಅನುಳನ್ನು ಆದಷ್ಟು ಬೇಗ ಮನೆಗೆ ಕರೆಸಿಕೊಳ್ಳುವುದು ಉತ್ತಮ ಎಂದು ಹೇಳುತ್ತಾಳೆ.

 ಆರ್ಯನಿಗೆ ಫೋನ್, ಮೆಸೇಜ್ ಮಾಡದ ಅನು

ಆರ್ಯನಿಗೆ ಫೋನ್, ಮೆಸೇಜ್ ಮಾಡದ ಅನು

ಆರ್ಯ ರಾತ್ರಿಯೆಲ್ಲಾ ಅನುಳನ್ನು ಮಿಸ್ ಮಾಡಿಕೊಳ್ಳುತ್ತಾನೆ. ಪದೇ ಪದೇ ಅನು ಮೆಸೇಜ್ ಅಥವಾ ಕಾಲ್ ಮಾಡಿರಬಹುದಾ ಎಂದು ಮೊಬೈಲ್ ಚೆಕ್ ಮಾಡುತ್ತಿರುತ್ತಾನೆ. ಆದರೆ, ಅನು ಮೆಸೇಜ್ ಅಥವಾ ಕಾಲ್ ಎರಡನ್ನೂ ಮಾಡಿರುವುದಿಲ್ಲ. ಇದರಿಂದ ಬೇಸರಗೊಳ್ಳುತ್ತಾನೆ. ಇತ್ತ ಅನು ಮಲಗುವಾಗ ಫೋನ್ ನೋಡುತ್ತಾಳೆ. ಅದರಲ್ಲಿ ಆರ್ಯನ ಮೆಸೇಜ್ ನೋಡುತ್ತಾಳೆ. ಹಾಗಿದ್ದರೂ ಅನು ಆರ್ಯನಿಗೆ ರಿಪ್ಲೈ ಮಾಡುವುದಿಲ್ಲ. ಸುಮ್ಮನೆ ಮೊಬೈಲ್ ನೋಡಿ ಮಲಗುತ್ತಾಳೆ. ಅನು ಮೊಬೈಲ್ ಅನ್ನು ನೋಡುವಾಗ ಸುಬ್ಬು ಹೆದರುತ್ತಾನೆ. ಏಕೆಂದರೆ, ಅವನೇ ಆರ್ಯನ ಜೊತೆಗೆ ಮಾತನಾಡಿ ಫೋನ್ ಆಫ್ ಮಾಡಿದ್ದ.

ಆರ್ಯನ ಸೈಕಲ್ ಸವಾರಿ

ಆರ್ಯನ ಸೈಕಲ್ ಸವಾರಿ

ಬೆಳಗ್ಗೆ ಎದ್ದ ಆರ್ಯ ಬಾಕ್ಸ್‌ಗೆ ತಿಂಡಿಯನ್ನು ಹಾಕಿಕೊಂಡು ಝೇಂಡೇಗೆ ತೆಗೆದುಕೊಂಡು ಹೊರಟಿರುತ್ತಾನೆ. ಈ ವೇಳೆಗೆ ಶಾರದಾ ಎದುರಾಗುತ್ತಾಳೆ. ಯಾರಿಗೆ ಊಟ ಎಂದು ಕೇಳಿದ್ದಕ್ಕೆ ಆರ್ಯ ತಬ್ಬಿಬ್ಬಾಗುತ್ತಾನೆ. ಝೇಂಡೇಗೆ ಅಲ್ವಾ ಎಂದು ಹೇಳಿ, ತೆಗೆದುಕೊಂಡು ಹೋಗು ಆರ್ಯ ಎಂದು ಹೇಳುತ್ತಾಳೆ. ಇನ್ನು ಆರ್ಯ ಕಾರನ್ನು ಹತ್ತುವ ಮುನ್ನ ಸೈಕಲ್ ಅನ್ನು ನೋಡುತ್ತಾನೆ. ಆಗ ಸೈಕಲ್‌ನಲ್ಲೇ ಹೋಗುತ್ತೇನೆ ಎಂದು ಹೇಳಿ ಸೈಕಲ್ ಹತ್ತುತ್ತಾನೆ.

ಆಫೀಸಿಗೆ ಅನು ಹೋಗಲು ಸುಬ್ಬು ಬಿಡುತ್ತಾನಾ..?

ಆಫೀಸಿಗೆ ಅನು ಹೋಗಲು ಸುಬ್ಬು ಬಿಡುತ್ತಾನಾ..?

ಆರಾಧನಾ, ಆರ್ಯ ಸೈಕಲ್‌ನಲ್ಲಿ ಹೋಗುವುದನ್ನು ನೋಡಿ ಆಶ್ಚರ್ಯ ಪಡುತ್ತಾಳೆ. ಅಷ್ಟೊತ್ತಿಗೆ ಆರ್ಯನಿಗೆ ಅನು ಕಾಲ್ ಮಾಡುತ್ತಾಳೆ. ಮನೆಯಲ್ಲಿ ಎಲ್ಲರ ಪರಿಸ್ಥಿತಿ ಹೇಗಿದೆ ಎಂದು ಕೇಳುತ್ತಾಳೆ. ಆರಾಧನಾ ನೀವಿಲ್ಲ ಅನ್ನೋದೆ ಇಲ್ಲಿ ಸಮಸ್ಯೆ ಎಂದು ಹೇಳುತ್ತಾಳೆ. ಇದೆಲ್ಲವನ್ನೂ ಮಾತನಾಡಲು ಆಫೀಸಿಗೆ ಬನ್ನಿ ಎಂದು ಅನು, ಆರಾಧನಾಳನ್ನು ಕರೆಯುತ್ತಾಳೆ. ಅದಕ್ಕೆ ಅನು ಓಕೆ ಎನ್ನುತ್ತಾಳೆ.

More from Filmibeat

English summary
Jothe Jotheyali Serial 20th February Episode Written Update. Arya takes food for jhende and goes in cycle. Will jhende and arya meets..?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X