Jothe Jotheyali: ಸಂಜೀವಿನಿ ವಾಪಸ್ ಅಣ್ಣನ ಮನೆಗೆ ಬರಲು ಕಾರಣವೇನು..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಪದೇ ಪದೇ ಹಳೆಯ ಕಥೆಗಳನ್ನು ಹಿಡಿದು ಸೀರಿಯಲ್ ಮುಂದುವರೆಯುತ್ತಿದೆ. ರಾಜನಂದಿನಿ ಹಾಗೂ ರಾಜವರ್ಧನ್ ಕಥೆಯೊಂದಿಗೆ ಇಷ್ಟು ದಿನ ಸಾಗಿತ್ತು.
ಬಳಿಕ ಪ್ರಿಯದರ್ಶಿನಿ ಹಾಗೂ ಅವರ ಮಗ ವಿಶ್ವಾಸ್ ದೇಸಾಯಿ ಕಥೆಯ ಮೂಲಕ ಧಾರಾವಾಹಿ ನಡೆಯುತ್ತಿತ್ತು. ಇದೀಗ ಮತ್ತೆರಡು ಹೊಸ ಪಾತ್ರಗಳು ಬಂದಿವೆ.
ಇದರಲ್ಲಿ ಸಂಜೀವಿನಿ ಪಾತ್ರ ಈಗ ವರ್ಧನ್ ಕುಟುಂಬದ ಮಗಳಾಗಿದ್ದು, ರಾಜವರ್ಧನ್ ಸಹೋದರಿ. ಹಳೆಯ ಕಥೆಯನ್ನು ಇನ್ನು ಶುರು ಮಾಡಿಲ್ಲವಾದರೂ ಮಿಸ್ಟರಿ ಇದೆ ಎಂಬುದಂತೂ ಪಕ್ಕಾ ಆಗಿದೆ.

ಅಣ್ಣನ ಮನೆಗೆ ಬಂದ ಸಂಜೀವಿನಿ
ಅಣ್ಣ ರಾಜವರ್ಧನ್ ಮನೆಗೆ ಬರುವ ಸಂಜೀವಿನಿ, ರಾಜನಂದಿನಿ ರೂಮ್ ಅನ್ನು ತನಗಾಗಿ ನಿರ್ಮಿಸಿದ್ದು. ನಾನು ಅಲ್ಲೇ ಇರಬಹುದೇ ಎಂದು ಕೇಳುತ್ತಾಳೆ. ಆಗ ಅನು ಅದು ರಾಜನಂದಿನಿ ರೂಮ್ ಎಂದಾಗ, ಈಗ ಅವಳು ಇಲ್ಲ ನಾನು ಅಲ್ಲೇ ಇರುತ್ತೇನೆ ಎಂದು ಹೇಳುತ್ತಾಳೆ. ಆಗ ಅನು ಅದು ಆರ್ಯವರ್ಧನ್ ಅವರ ಪ್ರೈವೇಟ್ ರೂಮ್. ಅಲ್ಲಿ ನನಗೂ ಕೂಡ ಎಂಟ್ರಿ ಇಲ್ಲ. ಅವರ ಪಾಲಿಗೆ ರಾಜನಂದಿನಿ ಇನ್ನು ಈ ಮನೆಯಲ್ಲಿ ಬದುಕಿದ್ದಾರೆ ಅಂತ ಶಾರದಾ ದೇವಿ ಹಾಗೂ ಅನು ಇಬ್ಬರೂ ಹೇಳುತ್ತಾರೆ. ಸಂಜೀವಿನಿ ಮನಸ್ಸಿಗೆ ಇದು ಬೇಸರವನ್ನುಂಟು ಮಾಡುತ್ತದೆ. ಆದರೂ ಬೇರೆ ದಾರಿ ಇಲ್ಲದೇ, ಆರಾಧನಾ ಜೊತೆಗೆ ಅವಳ ರೂಮಿನಲ್ಲಿರಲು ಒಪ್ಪುತ್ತಾಳೆ.

ಅಮ್ಮನಿಗೆ ಬುದ್ಧಿ ಹೇಳಿದ ಆರಾಧನಾ
ಆರಾಧನಾ ರೂಮಿಗೆ ಕರೆದುಕೊಂಡು ಹೋಗಿ ತನ್ನ ತಾಯಿಗೆ ಬೈಯುತ್ತಾಳೆ. ನೀನು ಯಾಕೆ ಹೀಗೆ ಮಾಡುತ್ತೀಯ. ನಿನಗೆ ಸಂಬಂಧಗಳನ್ನು ಉಳಿಸಿಕೊಳ್ಳುವುದೇ ಗೊತ್ತಿಲ್ಲ. ಮಾವ ಸತ್ತ ಮೇಲೆ ಇಲ್ಲಿಗೆ ಬಂದು ಈಗ ಏನೇನೋ ಮಾತನಾಡುತ್ತೀಯ. ಅಲ್ಲಿ ಅಪ್ಪನ ಜೊತೆಗೆ ಸುಖವಾಗಿರಲಿಲ್ಲ. ನಮ್ಮ ಜೊತೆಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡವಳಲ್ಲ. ಈಗ ಬಂದು ಇಲ್ಲಿ ಅಧಿಕಾರದಿಂದ ಮಾತನಾಡುತ್ತೀಯ ಎಂದು ಬೈಯುತ್ತಾಳೆ. ಇದಕ್ಕೆ ಸಂಜೀವಿನಿ ಇಲ್ಲ ನನ್ನ ತಪ್ಪನ್ನು ತಿದ್ದಿಕೊಳ್ಳಲು ಬಂದಿದ್ದೇನೆ ಎಂದು ಹೇಳುತ್ತಾಳೆ. ಆದರೆ, ಮನದಲ್ಲಿ ಸಂಜೀವಿನಿ ಮಾತನಾಡುವ ಮಾತುಗಳು ಪ್ರೇಕ್ಷಕರಿಗೆ ಈಗ ಸಂಜೀವಿನಿನೇ ವಿಲನ್ ಆಗುತ್ತಿದ್ದಾಳೆ ಎನಿಸಲು ಶುರುವಾಗಿದೆ.

ಆರ್ಯನ ಮೇಲೆ ಅನುಗೆ ಕೋಪ
ಇನ್ನು ಎಲ್ಲರೂ ಕುಳಿತು ಊಟ ಮಾಡುತ್ತಿರುತ್ತಾರೆ. ಆಗ ಮನೆಯಲ್ಲಿ ಇರೋದು ಇಷ್ಟೇ ಜನರ ಎಂದು ಕೇಳುವ ಪ್ರಶ್ನೆಗೆ ಹರ್ಷ ಹೌದು ಎಂದು ಹೇಳುತ್ತಾನೆ. ಇದರಿಂದ ಶಾರದಾ, ಆರ್ಯ, ಅನು ಹಾಗೂ ಆರಾಧನಾ ಶಾಕ್ ಆಗುತ್ತಾರೆ. ಮಾನ್ಸಿ ಬಗ್ಗೆ ಹೇಳಲಿಲ್ಲವಲ್ಲ ಎಂದು. ಇನ್ನು ಇವರೆಲ್ಲಾ ಊಟ ಮಾಡುವ ವೀಡಿಯೋವನ್ನು ನೋಡಿ ಮಾನ್ಸಿ ಹೊಟ್ಟೆ ಉರಿದುಕೊಳ್ಳುತ್ತಾಳೆ. ನಾನು ಮನೆಯಲ್ಲಿ ಇಲ್ಲದಿದ್ದರೂ ಎಲ್ಲರೂ ಆರಾಮಾಗಿದ್ದಾರೆ ಎಂದು ಬೇಸರ ಮಾಡಿಕೊಳ್ಳುತ್ತಾಳೆ. ಇತ್ತ ಆರ್ಯ, ಅನುಳನ್ನು ಮಾತನಾಡಿಸಲು ಪ್ರಯತ್ನಿಸಿದರೂ ಮಾತನಾಡುವುದಿಲ್ಲ. ತನ್ನನ್ನು ಕರೆದುಕೊಂಡು ಹೋಗಲು ಬರಲಿಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾಳೆ.

ಮಾನ್ಸಿ ಮನೆ ಬಿಟ್ಟು ತಪ್ಪು ಮಾಡಿದ್ಲಾ?
ಇನ್ನು ಹರ್ಷ, ಭಾವನಾ ಜೊತೆಗೆ ಮಾತನಾಡುತ್ತಿರುತ್ತಾನೆ. ಪದೇ ಪದೇ ಭಾವನಾ ಕೂಡ ಹರ್ಷನೊಂದಿಗೆ ಮಾತನಾಡುತ್ತಾಳೆ. ಇದರಿಂದ ಮಾನ್ಸಿ ಮನೆಯಿಂದ ಈ ಸಂದರ್ಭದಲ್ಲಿ ಹೊರಟು ಹೋಗಿ ತಪ್ಪು ಮಾಡಿದಳಾ ಎಂದು ಅನಿಸುತ್ತಿದೆ. ಹರ್ಷನಿಗೆ ಮಾನ್ಸಿ ಮೇಲೆ ತುಂಬಾ ಕೋಪವಿದೆ. ಅವಳಾಗಿ ಅವಳು ಬರುವವರೆಗೂ ಫೋನ್ ಮಾಡಬಾರದು ಎಂದು ಅಂದುಕೊಂಡಿದ್ದಾರೆ.


Click it and Unblock the Notifications











