For Quick Alerts
  ALLOW NOTIFICATIONS  
  For Daily Alerts

  ಬೇಲ್ ಪಡೆದು ಮನೆಗೆ ವಾಪಸ್ ಬಂದ ಅನು ಸಿರಿಮನೆ!

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಒಬ್ಬೊರದ್ದು ಒಂದೊಂದು ದಿಕ್ಕಾಗಿದೆ. ಮಾನ್ಸಿ ಮತ್ತು ಹರ್ಷ ಒಂದು ದಿಕ್ಕಾಗಿದ್ದಾರೆ. ಇಬ್ಬರೂ ಮನೆಯವರ ಯಾವ ವಿಚಾರಕ್ಕೂ ತಲೆ ಹಾಕದಂತೆ ಗಮನ ಹರಿಸಿದ್ದಾರೆ. ಇವರಿಬ್ಬರಿಗೂ ಈಗ ತಮ್ಮ ಸಂಸಾರದ ಬಗ್ಗೆ ಚಿಂತೆ ಹೆಚ್ಚಾಗಿದೆ.

  ಹೀಗಾಗಿ ಮಾನ್ಸಿ ಹರ್ಷನನ್ನು ಎಲ್ಲದರಿಂದಲೂ ತಡೆಯುತ್ತಿರುತ್ತಾಳೆ. ಹರ್ಷನಿಗೆ ಪ್ರತಿ ಬಾರಿಯೂ ಮುಜುಗರವಾಗುತ್ತಿರುತ್ತದೆ. ಅನುಳನ್ನು ಸ್ಟೇಷನ್‌ನಿಂದ ಕರೆದುಕೊಂಡು ಬರಲು ಕೂಡ ಮಾನ್ಸಿ ಅವಕಾಶ ಮಾಡಿಕೊಡುವುದಿಲ್ಲ. ಮನೆಯವರಿಗೆ ಸಾಂತ್ವಾನ ಮಾಡಲು ಬಿಡದೇ ರೂಮಿಗೆ ಕರೆದುಕೊಂಡು ಬರುತ್ತಾಳೆ.

  'ಜೊತೆ ಜೊತೆಯಲಿ' ಬದಲು 'ಶ್ರೀರಸ್ತು ಶುಭಮಸ್ತು'? ಎರಡು ಧಾರಾವಾಹಿಗಳ ಭವಿಷ್ಯವೇನು?'ಜೊತೆ ಜೊತೆಯಲಿ' ಬದಲು 'ಶ್ರೀರಸ್ತು ಶುಭಮಸ್ತು'? ಎರಡು ಧಾರಾವಾಹಿಗಳ ಭವಿಷ್ಯವೇನು?

  ಪುಷ್ಪಾ ಹಾಗೂ ಸುಬ್ಬು ಮಗಳ ಬಗ್ಗೆಯೇ ಯೋಚಿಸುತ್ತಿರುತ್ತಾರೆ. ಸುಬ್ಬು ನನ್ನ ಮಗಳಿಗೆ ಈ ಮದುವೆ ಮಾಡಬಾರದಿತ್ತು. ನನ್ನ ಮಗಳು ಮದುವೆಯಾಗಿ ಬಂದಾಗಿನಿಂದ ಒಂದು ದಿನವೂ ಸುಖವಾಗಿಲ್ಲ. ನಾವು ತಪ್ಪು ಮಾಡಿ ಬಿಟ್ಟೆವು ಎಂದು ಕಣ್ಣೀರು ಇಡುತ್ತಿರುತ್ತಾರೆ.

   ಹರ್ಷನನ್ನು ಕಂಟ್ರೋಲ್ ಮಾಡುತ್ತಿರುವ ಮಾನ್ಸಿ

  ಹರ್ಷನನ್ನು ಕಂಟ್ರೋಲ್ ಮಾಡುತ್ತಿರುವ ಮಾನ್ಸಿ

  ಮಾನ್ಸಿಗೆ ಅನು ಮೇಲೆ ಕೋಪ, ಅನುಮಾನ ಎಲ್ಲವೂ ಶುರುವಾಗಿದೆ. ಯಾಕೆಂದರೆ ಅನು ಆರ್ಯವರ್ಧನ್ ಮೇಲೆ ದ್ವೇಷ ಸಾಧಿಸುತ್ತಿದ್ದಳು. ಆದರೆ ಅದು ಹೇಗೆ ಗರ್ಭಿಣಿ ಆದಳು. ಎಲ್ಲಾ ಆಸ್ತಿಗೋಸ್ಕರ ಈ ರೀತಿ ಪ್ಲ್ಯಾನ್ ಮಾಡಿದ್ದಾಳೆ ಎಂಬುದು ಮಾನ್ಸಿ ಆಲೋಚನೆ. ಹಾಗಾಗಿ ಮಾನ್ಸಿ ಅನುಳಿಂದ ದೂರ ಇರಲು ಮುಂದಾಗಿದ್ದಾಳೆ.

  ಅರ್ಧಾಂಗಿ: ದಿಗಂತ್ ವಿಚಾರದಲ್ಲಿ ಸೌಭಾಗ್ಯ ಗೇಮ್ ಆಡಿದ್ದೇಕೆ? ಮೈತ್ರಿಗಿಂತ ಲಾಭ ಜಾಸ್ತಿನಾ?ಅರ್ಧಾಂಗಿ: ದಿಗಂತ್ ವಿಚಾರದಲ್ಲಿ ಸೌಭಾಗ್ಯ ಗೇಮ್ ಆಡಿದ್ದೇಕೆ? ಮೈತ್ರಿಗಿಂತ ಲಾಭ ಜಾಸ್ತಿನಾ?

   ಝೇಂಡೇಗೆ ಮತ್ತೆ ಬೈದ ಶಾರದಾ

  ಝೇಂಡೇಗೆ ಮತ್ತೆ ಬೈದ ಶಾರದಾ

  ಇತ್ತ ಪೊಲೀಸ್ ಠಾಣೆಗೆ ಬಂದ ಶಾರದಾ ದೇವಿ, ಅನುಗೆ ಸೌಮಯಾಜಿ ಲಾಯರ್ ಇಂದ ಬೇಲ್ ಕೊಡಿಸಿದ್ದಾರೆ. ಇದೇ ವೇಳೆಗೆ ಸ್ಥಳಕ್ಕೆ ಝೇಂಡೇ ಬಂದಿದ್ದಾನೆ. ಆಗಲೂ ಸಿಟ್ಟಾದ ಶಾರದಾ ಝೇಂಡೇಗೆ ಬೈದಿದ್ದಾರೆ. ಮುಖ ತೋರಿಸಬೇಡ ಎಂದರೂ ಬಂದಿದ್ದೀಯಾ. ನಿನಗೆಷ್ಟು ಧೈರ್ಯ ಇರಬೇಕು. ಮಾಡುವ ಕೆಲಸ ಮಾಡುವುದು ಬಿಟ್ಟು ಈಗ ಬರುತ್ತಿರೋದ್ಯಾಕೆ ಎಂದು ಬೈಯುತ್ತಾಳೆ. ಬಳಿಕ ಅನುಳನ್ನು ಕರೆದುಕೊಂಡು ಮನೆಗೆ ಬರುತ್ತಾಳೆ.

   ಝೇಂಡೇ ಮಾತಿಗೆ ಬೆಲೆ ಕೊಡದ ಪೊಲೀಸರು

  ಝೇಂಡೇ ಮಾತಿಗೆ ಬೆಲೆ ಕೊಡದ ಪೊಲೀಸರು

  ಪೊಲೀಸ್ ಠಾಣೆಯಿಂದ ಅನು ಬರುತ್ತಿದ್ದಂತೆ ಇತ್ತ ಝೇಂಡೇ ಅದು ಹೇಗೆ ಅಷ್ಟು ಬೇಗ ಬಿಟ್ಟು ಕಳಿಸಿದ್ದೀರಾ. ಇದು ಎಷ್ಟು ಸರಿ. ನಿಮಗೆ ಕೊಡಬೇಕಾದ ಸಾಕ್ಷಿ ಎಲ್ಲಾ ಕೊಟ್ಟಿದ್ದೀನಿ. ಆರ್ಯವರ್ಧನ್ ಕಾರನ್ನು ಚೇಸ್ ಮಾಡಿದ್ದು, ಹಾಗೆ ಯಾರು ಈ ಕೆಲಸವನ್ನು ಮಾಡಲು ಹೇಳಿದ್ದು ಎಂಬ ವಿಚಾರವನ್ನು ಸಾಕ್ಷಿ ಸಮೇತ ಕೊಟ್ಟಿದ್ದೀನಿ ಎನ್ನುತ್ತಾನೆ. ಪೊಲೀಸರು ಝೇಂಡೇಗೆ ಬೈದು ಕಳಿಸುತ್ತಾರೆ. ಬಳಿಕ ಪೊಲೀಸರು ವೈದ್ಯರಿಗೆ ಕರೆ ಮಾಡಿ ಆರ್ಯನ ಆರೋಗ್ಯದ ಬಗ್ಗೆ ವಿಚಾರಿಸುತ್ತಾರೆ. ಆಗ ವೈದ್ಯರು, ಆರ್ಯನಿಗೆ ಈಗಷ್ಟೇ ಪ್ರಜ್ಞೆ ಬಂದಿದೆ. ಆದರೆ, ಹಳೆಯದೆಲ್ಲಾ ಮರೆತು ಹೋಗಿದೆ. ಅವರು ಅವರ ಮನೆಯಲ್ಲೇ ಉಳಿಯುವ ಕೆಲಸವನ್ನು ಮಾಡಬೇಕು ಎಂದು ಮಾತನಾಡಿಕೊಳ್ಳುತ್ತಾರೆ.

  ಸ್ನೇಹಳ ಮಾತಿಗೆ ಬಂಗಾರಮ್ಮ ಕಿಡಿ, ಹಾಳಾಗುತ್ತಾ ಪುಟ್ಟಕ್ಕ-ಬಂಗಾರಮ್ಮನ ಗೆಳೆತನ?ಸ್ನೇಹಳ ಮಾತಿಗೆ ಬಂಗಾರಮ್ಮ ಕಿಡಿ, ಹಾಳಾಗುತ್ತಾ ಪುಟ್ಟಕ್ಕ-ಬಂಗಾರಮ್ಮನ ಗೆಳೆತನ?

   ಪ್ರಿಯದರ್ಶಿನಿ ಕನಸಲ್ಲಿ ಬಂದ ಜೋಗ್ತವ್ವ

  ಪ್ರಿಯದರ್ಶಿನಿ ಕನಸಲ್ಲಿ ಬಂದ ಜೋಗ್ತವ್ವ

  ಇತ್ತ ಜೋಗ್ತವ್ವ ಪ್ರಿಯದರ್ಶಿನಿ ಕನಸಲ್ಲಿ ಬಂದು ನಿನ್ನ ಮಗನನ್ನು ಅವನು ಮೊದಲಿದ್ದ ಮನೆಗೆ ಕಳಿಸು. ಬೇಗ ಹುಷಾರಾಗುತ್ತಾನೆ ಎಂದು ಹೇಳುತ್ತಾಳೆ. ಆಗ ಎಚ್ಚರಗೊಳ್ಳುವ ಪ್ರಿಯದರ್ಶಿನಿ, ಪ್ರಭು ದೇಸಾಯಿ ಬಳಿ ಮಾತು ತೆಗೆದುಕೊಂಡು ತಮ್ಮ ಮಗನನ್ನು ಆರ್ಯನ ಮನೆಗೆ ಕಳಿಸುವಂತೆ ಕೇಳುತ್ತಾಳೆ. ಆಗ ವೈದ್ಯರು ಕೂಡ ಅದೇ ಸಲಹೆಯನ್ನು ನೀಡುತ್ತಾರೆ. ಈ ಮಾತುಗಳೆಲ್ಲವೂ ಪ್ರಭು ದೇಸಾಯಿ ಅವರಿಗೆ ಗೊಂದಲವನ್ನು ಸೃಷ್ಟಿ ಮಾಡುತ್ತದೆ. ಆರ್ಯನ ಡಿಸ್ಚಾರ್ಜ್ ತಯಾರಿ ನಡೆಸುತ್ತಾರೆ. ಇನ್ನು ಅನು ಮನೆಗೆ ಬರುತ್ತಾಳೆ. ತಾನು ಮೊದಲ ದಿನ ಮನೆಗೆ ಬಂದ ರೀತಿಯನ್ನೆಲ್ಲಾ ಯೋಚಿಸುತ್ತಿರುತ್ತಾಳೆ. ನಂತರ ನನ್ನನ್ನು ಹಾಗೂ ನನ್ನ ಆರ್ಯನನ್ನು ದೂರ ಮಾಡಲು ಯತ್ನಿಸಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿ ಒಳಗೆ ಬರುತ್ತಾಳೆ.

  English summary
  jothe jotheyali Serial 20th September Episode Written Update. Know More.
  Wednesday, September 21, 2022, 19:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X