ಆರ್ಯವರ್ಧನ್ ಬದುಕಿರುವ ಸತ್ಯ ಬಯಲಾಗುತ್ತಾ..?

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಎಲ್ಲಾ ಅಯೋಮಯವಾಗಿ ಬಿಟ್ಟಿದೆ. ಆರ್ಯವರ್ಧನ್ ಬದುಕಿದ್ದರೂ, ಸತ್ತಿದ್ದಾನೆ ಎಂದು ಬಿಂಬಿಸಲಾಗುತ್ತಿದೆ. ಇದರಿಂದ ಅನುಳ ಮೇಲೆ ಪೊಲೀಸರು ಅನುಮಾನ ಪಟ್ಟು ಅರೆಸ್ಟ್ ಮಾಡಬೇಕಾಯ್ತು. ಆರ್ಯನನ್ನು ಕಳೆದುಕೊಂಡ ದುಃಖದಲ್ಲಿ ವರ್ಧನ್ ಕುಟುಂಬವಿದೆ.

ಮಾನ್ಸಿಗೆ ಅನು ಮೇಲಿದ್ದ ನಂಬಿಕೆ ಸಂಪೂರ್ಣವಾಗಿ ಹೋಗಿದೆ. ಅನು ಹೇಳಿದ್ದೊಂದು ಮಾಡಿದ್ದೊಂದು ಎಂದು ಬೇಸರ ಮಾಡಿಕೊಂಡಿದ್ದಾಳೆ. ಆದರೆ ಮಾನ್ಸಿಗೆ ಸತ್ಯಾಸತ್ಯತೆ ಅರ್ಥ ಮಾಡಿಸಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಹರ್ಷನಿಗೆ ಹೆಂಡತಿ ಪರ ನಿಲ್ಲಬೇಕಾ ಇಲ್ಲ ಅತ್ತಿಗೆ ಜೊತೆ ಇರಬೇಕಾ ಎಂಬ ನಿರ್ಧಾರವನ್ನೂ ತೆಗೆದುಕೊಳ್ಳಲು ಆಗುತ್ತಿಲ್ಲ.

ಅನುಳನ್ನು ಶಾರದಾ ದೇವಿ ಬೇಲ್ ಕೊಡಿಸಿ ಕರೆದುಕೊಂಡು ಬಂದಿದ್ದಾರೆ. ಇದೇ ವೇಳೆಗೆ ಸುಬ್ಬು ಮಗಳನ್ನು ತನ್ನ ಮನೆಗೆ ಬರುವಂತೆ ಕರೆಯುತ್ತಾನೆ. ಈ ಮಾತಿನಿಂದ ಶಾರದಾ ದೇವಿ ಬೇಸರಗೊಂಡಿದ್ದು, ಇದು ಅನು ಮನೆ. ಅವಳು ಈ ಮನೆ ಮಗಳು ಎಂದು ಹೇಳುತ್ತಾಳೆ. ಅದಕ್ಕೆ ಸುಬ್ಬು ನನ್ನ ಮಗಳಿಗೆ ಈ ಮನೆಯಲ್ಲಿ ಇನ್ಯಾವ ಸುಖ ಸಿಗುತ್ತೆ ಎಂದು ಇಬ್ಬರೂ ಸ್ವಲ್ಪ ವಾದ ಮಾಡುತ್ತಾರೆ. ಅನು ಮಾತ್ರ ಮೌನವಾಗಿಯೇ ರೂಮಿಗೆ ಹೋಗುತ್ತಾಳೆ.

 ಮಾನ್ಸಿ ಮಾತು ಕೇಳಿ ಹರ್ಷ, ಮೀರಾ ಶಾಕ್

ಮಾನ್ಸಿ ಮಾತು ಕೇಳಿ ಹರ್ಷ, ಮೀರಾ ಶಾಕ್

ಅನು ಮನೆಗೆ ಬಂದಿದ್ದಾಳೆ. ಆದರೆ ಮಾನ್ಸಿ ಸಮಾಧಾನದ ಮಾತುಗಳನ್ನಾಡಲೂ ತಯಾರಿಲ್ಲ. ಈ ಬಗ್ಗೆ ಹರ್ಷ, ಮೀರಾ ಹಾಗೂ ಮಾನ್ಸಿ ಮಾತನಾಡುವಾಗ ಅನು, ಆರ್ಯನನ್ನು ಕೊಲೆ ಮಾಡಿರುವುದು ಎಂದು ಮಾನ್ಸಿ ಹೇಳುತ್ತಾಳೆ. ಈ ಮಾತಿನಿಂದ ಮೀರಾ ಶಾಕ್ ಆಗುತ್ತಾಳೆ. ಅನು ಬಗ್ಗೆ ಹೀಗೆಲ್ಲಾ ಮಾತನಾಡುವುದು ಸರಿಯಲ್ಲ ಎಂದು ಮೀರಾ ಹಾಗೂ ಹರ್ಷ ಹೇಳುತ್ತಾರೆ. ಅದಕ್ಕೆ ಮಾನ್ಸಿ ಇದೇ ಸತ್ಯವನ್ನ ನಾನು ಪೊಲೀಸರಿಗೂ ಹೇಳಿದ್ದಾಯ್ತು ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿ ಮೀರಾ ಹಾಗೂ ಹರ್ಷ ಶಾಕ್ ಆಗುತ್ತಾರೆ. ಆದರೆ ಮಾನ್ಸಿ ತಾನು ಮಾಡಿದ್ದು ಕರೆಕ್ಟ್ ಆಗಿದೆ. ಸತ್ಯ ಹೇಳಬೇಕು ಎಂದೆಲ್ಲಾ ವಾದ ಮಾಡುತ್ತಿರುತ್ತಾಳೆ.

 ಪತಿಗೆ ಸತ್ಯ ಹೇಳಿದ ಪ್ರಿಯದರ್ಶಿನಿ

ಪತಿಗೆ ಸತ್ಯ ಹೇಳಿದ ಪ್ರಿಯದರ್ಶಿನಿ

ಇತ್ತ ವೈದ್ಯರು ಪ್ರಿಯದರ್ಶಿನಿ ಅವರಿಗೆ ವಿಶ್ವಾಸ್ ಸಾವನ್ನಪ್ಪಿದ್ದು, ಬದುಕಿರುವುದು ಆರ್ಯ ಎಂಬ ಸತ್ಯವನ್ನು ನಿಮ್ಮ ಪತಿಗೆ ಹೇಳಿ ಬಿಡಿ ಎಂದು ಹೇಳುತ್ತಾರೆ. ಹಾಗಾಗಿ ಪ್ರಿಯದರ್ಶಿನಿ, ಪ್ರಭು ದೇಸಾಯಿ ಬಳಿ ನಡೆದ ಘಟನೆಯನ್ನೆಲ್ಲಾ ವಿವರಿಸುತ್ತಾಳೆ. ಆದರೆ ಪ್ರಭು ದೇಸಾಯಿ ನಂಬದೇ, ನಿನಗೆಲ್ಲೋ ಭ್ರಮೆ. ಅದು ನಮ್ಮ ವಿಶ್ವಾಸ್. ಅವನ ಮುಖ ನೋಡಿದರೆ ಗೊತ್ತಾಗುವುದಿಲ್ಲವಾ..? ಯಾಕೆ ಪ್ರಿಯ ಹೀಗೆಲ್ಲಾ ಮಾತನಾಡುತ್ತೀಯಾ ಎಂದು ಹೇಳುತ್ತಾನೆ. ಇಲ್ಲ. ನಾನು ಹೇಳುತ್ತಿರುವುದೇ ಸತ್ಯ, ನನ್ನನ್ನು ಕ್ಷಮಿಸಿ ಬಿಡಿ. ನಿಮಗೆ ಮೊದಲೇ ಸತ್ಯ ಹೇಳಬೇಕಿತ್ತು. ಆದರೆ ಆ ಸಂದರರ್ಭದಲ್ಲಿ ನನ್ನ ಕೈಯಲ್ಲಿ ಏನೂ ಹೇಳಲು ಆಗಲಿಲ್ಲ ಎಂದು ಪ್ರಿಯದರ್ಶನಿ ಹೇಳುತ್ತಾಳೆ.

 ಹೆಂಡತಿ ಮಾತು ಕೇಳಿ ಪ್ರಭು ದೇಸಾಯಿ ಶಾಕ್

ಹೆಂಡತಿ ಮಾತು ಕೇಳಿ ಪ್ರಭು ದೇಸಾಯಿ ಶಾಕ್

ಪತ್ನಿಯ ಮಾತು ಕೇಳಿ ಮೊದಮೊದಲು ನಂಬದ ಪ್ರಭು ದೇಸಾಯಿ ದಿಗ್ಬ್ರಾಂತನಾಗುತ್ತಾನೆ. ನಂತರ ಪ್ರಿಯದರ್ಶಿನಿ ಬಳಿ ಕೋಪ ಮಾಡಿಕೊಳ್ಳುತ್ತಾನೆ. ನೀನು ನನಗೆ ಮತ್ತೆ ಸುಳ್ಳು ಹೇಳಿದ್ಯ. ಕೆಲ ವಿಚಾರಗಳನ್ನು ಮುಚ್ಚಿಟ್ಟಿದ್ದಕ್ಕೆ ಅರ್ಥವಿದೆ. ಆದರೆ, ನನ್ನ ಮಗನ ಮುಖವನ್ನು ಕೊನೆಯ ಬಾರಿ ನೋಡಲು ಬಿಡದೇ ಇದ್ದುದು ಮಹಾ ತಪ್ಪು. ನಿನ್ನ ಮೇಲಿದ್ದ ನಂಬಿಕೆಯನ್ನೆಲ್ಲಾ ಕಳೆದುಕೊಂಡು ಬಿಟ್ಟೆ. ನನ್ನ ಮಗನ ಕಾರ್ಯ ಮಾಡುವುದಕ್ಕೂ ಬಿಡಲಿಲ್ಲ ನೀನು. ಈಗ ಸೊಸೆಗೆ ಏನೆಂದು ಉತ್ತರ ಕೊಡುತ್ತೀಯಾ ಎಂದೆಲ್ಲಾ ಮಾತನಾಡುತ್ತಾನೆ.

 ಅನು ಮನೆಯಲ್ಲಿ ಏನಾಗಬಹುದು..?

ಅನು ಮನೆಯಲ್ಲಿ ಏನಾಗಬಹುದು..?

ಈಗ ಪ್ರಿಯದರ್ಶಿನಿ ಪ್ರಭು ದೇಸಾಯಿಗೆ ಸತ್ಯ ಹೇಳಿದ್ದಾಳೆ. ವಿಶ್ವಾಸ್ ಮುಖ ಹೊತ್ತಿರುವ ಆರ್ಯವರ್ಧನ್‌ನನ್ನು ಅವನ ಮನೆಗೆ ತಲುಪಿಸುತ್ತಾರಾ ಎಂಬುದು ಪ್ರಶ್ನೆಯಾಗಿದೆ. ಇಂದಿನ ಪ್ರೋಮೋ ಪ್ರಕಾರ, ಪ್ರಿಯದರ್ಶನಿ ಆರ್ಯವರ್ಧನನ್ನು ವರ್ಧನ್ ಮನೆಗೆ ಕರೆದುಕೊಂಡು ಬರುತ್ತಿರುತ್ತಾರೆ. ಇತ್ತ ಆಫೀಸಿನಲ್ಲಿ ಮೀರಾ, ಶಾನುಭೋಗರು ಮತ್ತು ಝೇಂಡೇ ಶೋಕಾಚರಣೆಯನ್ನು ಮಾಡುತ್ತಿರುತ್ತಾರೆ. ಇನ್ನು ಮನೆಯಲ್ಲಿ ಆರ್ಯನ ಫೋಟೋ ಇಡುವುದು ಬೇಡ ಎಂದು ಅನು ಹೇಳುತ್ತಾಳೆ. ಆರ್ಯ ಮನೆಗೆ ಬಂದರೆ ಏನಾಗುತ್ತದೆ ಎಂಬುದೇ ಈಗ ಕುತೂಹಲವಾಗಿದೆ.

More from Filmibeat

English summary
jothe jotheyali Serial 21th September Episode Written Update. Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X