Jothe Jotheyali: ಝೇಂಡೇ ಹಾಗೂ ಸಂಜೀವಿನಿಗೆ ಏನು ಸಂಬಂಧ..? ಆರಾಧನಾ ಬೆಂಬಲಕ್ಕೆ ನಿಂತ ತಾಯಿ

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮಾನ್ಸಿ ಮನೆಯಲ್ಲಿ ಇಲ್ಲದ ಕಾರಣ, ಹರ್ಷ ಆಕೆಯ ಮೇಲೆ ಬೇಸರ ಮಾಡಿಕೊಂಡಿದ್ದಾನೆ. ಮಾನ್ಸಿಗೆ ಕಾಲ್ ಕೂಡ ಮಾಡದೇ ಇದ್ದಾನೆ.

ಈ ಬಗ್ಗೆ ಮನೆಯಲ್ಲಿ ಎಲ್ಲರೂ ಇದ್ದಾರೆ ಎಂದು ಸುಮ್ಮನಿದ್ದ ಶಾರದಾ ದೇವಿ, ಹರ್ಷನ ಬಳಿ ಸಪರೇಟ್ ಆಗಿ ಮಾತನಾಡಿದ್ದಾಳೆ. ನಿನ್ನ ಹಾಗೂ ಮಾನ್ಸಿ ನಡುವೆ ಏನಾಯ್ತು ಎಂದು ವಿಚಾರಿಸಿದ್ದಾಳೆ.

ಆದರೆ, ಹರ್ಷ ತನಗೇನು ಗೊತ್ತಿಲ್ಲ. ಮಾನ್ಸಿ ಇದ್ದಕ್ಕಿದ್ದ ಹಾಗೆ ಈ ನಿರ್ಧಾರ ತೆಗೆದುಕೊಂಡಿದ್ದಾಳೆ. ಅವಳ ಈ ನಡವಳಿಕೆ ನನಗೆ ಬೇಸರ ತಂದಿದೆ ಎಂದು ಹರ್ಷ ಹೇಳಿಕೊಳ್ಳುತ್ತಾನೆ.

ಝೇಂಡೇ ನೋಡಿ ಭಾವನಾ ಗಾಬರಿ

ಝೇಂಡೇ ನೋಡಿ ಭಾವನಾ ಗಾಬರಿ

ಇತ್ತ ಸಂಜೀವಿನಿ ತನ್ನ ಅಣ್ಣನ ಆಸ್ತಿಯ ಮೇಲೆ ಕಣ್ಣು ಹಾಕಿದ್ದು, ಮೂವತ್ತು ವರ್ಷಗಳ ಬಳಿಕ ಮನೆಗೆ ಬಂದಿದ್ದಾಳೆ. ಅಣ್ಣನ ಆಸ್ತಿಯನ್ನು ಪಡೆಯಲು ಪ್ಲ್ಯಾನ್ ಮಾಡಿಕೊಂಡಿದ್ದಾಳೆ. ಇನ್ನು ಸಂಜೀವಿನಿ, ಝೇಂಡೇ ಜೊತೆಗೆ ಫೋನ್‌ನಲ್ಲಿ ಮಾತನಾಡುತ್ತಾಳೆ. ಝೇಂಡೇ ಮನೆಯವರನ್ನು ಹೇಗೆಲ್ಲಾ ಆಟ ಆಡಿಸಬೇಕು ಎಂಬುದನ್ನು ಹೇಳಿಕೊಡುತ್ತಾನೆ. ಸಂಜೀವಿನಿ ಕೂಡ ಝೇಂಡೇ ಹೇಳುವಂತೆಯೇ ಕೇಳುತ್ತಿರುತ್ತಾಳೆ. ಆದರೆ, ಝೇಂಡೇ ಹಾಗೂ ಸಂಜೀವಿನಿ ಹೇಗೆ ಪರಿಚಯ? ಝೇಂಡೇ ಯಾವ ಹೊಸ ಪ್ಲ್ಯಾನ್‌ಗಳನ್ನು ಮಾಡಿಕೊಂಡಿದ್ದಾನೆ? ವರ್ಧನ್ ಕುಟುಂಬಕ್ಕೆ ಮತ್ತೊಂದು ದೊಡ್ಡ ಕಂಟಕ ಕಾದಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

ಮಗಳಿಗೆ ಸಂಜೀವಿನಿ ಸಾಥ್

ಮಗಳಿಗೆ ಸಂಜೀವಿನಿ ಸಾಥ್

ಇನ್ನು ಆರಾಧನಾ ಮನದಲ್ಲಿ ವಿಶ್ವಾಸ್ ದೇಸಾಯಿ ಅಂತೇ ಕಾಣುವ ಆರ್ಯವರ್ಧನ್ ಮೇಲೆ ಸ್ವಲ್ಪ ಪೊಸೆಸ್ಸಿವ್ ಆಗಿದ್ದಾಳೆ. ಈ ಬಗ್ಗೆ ಸಂಜೀವಿನಿಗೆ ಕ್ಲೂ ಕೂಡ ಸಿಕ್ಕಿದೆ. ಅಲ್ಲದೇ ಆರಾಧನಾ ತನ್ನ ಕಂಪನಿಯನ್ನು ಮರ್ಜ್ ಮಾಡಿರುವುದಕ್ಕೆ ಸಂಜೀವಿನಿ ಖುಷಿ ಪಟ್ಟಿದ್ದಾಳೆ. ನೀವಿಬ್ಬರು ಒಟ್ಟಿಗೆ ಇರುವುದೇ ಸರಿ. ನಿಧಾನವಾಗಿ ಎಲ್ಲವೂ ಸರಿ ಹೋಗುತ್ತದೆ ಎಂದು ಹೇಳಿ ಕೊಡುತ್ತಾಳೆ. ಮೊದಲು ಆರಾಧನಾ ಇದನ್ನು ತಿರಸ್ಕರಿಸಿದರೂ ಮನದಲ್ಲೇ ತನ್ನ ಆಸೆಗೆ ನೀರೆರೆದಂತೆ ಭಾವಿಸುತ್ತಾಳೆ. ಇನ್ನು ಆರ್ಯನಿಗೆ ತಿಂಡಿ ತಿನ್ನುವಾಗ ಆಫಿಸಿನಲ್ಲಿ ಬಹಳ ಕೆಲಸವಿದೆ. ಆದಷ್ಟು ಬೇಗ ಹೋಗೋಣ ಎಂದು ಹೇಳುತ್ತಾಳೆ. ಆದರೆ, ಆರ್ಯ ಆರಾಧನಾ ಮಾತಿಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದೇ ಇಲ್ಲ.

ಕೋಪ ಮಾಡಿಕೊಂಡ ಅನು

ಕೋಪ ಮಾಡಿಕೊಂಡ ಅನು

ಇನ್ನು ಭಾವನಾ ಪದೇ ಪದೇ ಆರ್ಯನನ್ನು ಜೇಜು, ಜೇಜು ಎಂದು ಕರೆಯುತ್ತಿರುತ್ತಾಳೆ. ಅನು ಕೂಡ ತುಂಬಾನೇ ಕಂಟ್ರೋಲ್ ಮಾಡಿಕೊಳ್ಳುತ್ತಿರುತ್ತಾಳೆ. ತಿಂಡಿ ತಿನ್ನುವಾಗ ಭಾವನಾ ನೀನು ಡಿಟ್ಟೋ ನನ್ನ ಜೇಜು ಥರಾನೇ ಇದೀರಾ ಎಂದು ಹೇಳುತ್ತಾಳೆ. ಆಗ ಅನುಗೆ ಕೋಪ ಬರುತ್ತದೆ. ಭಾವನಾ ಅವರು ಆರ್ಯವರ್ಧನ್, ವಿಶ್ವಾಸ್ ದೇಸಾಯಿ ಅಲ್ಲ ಎಂದು ಹೇಳುತ್ತಾಳೆ. ಭಾವನಾ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾಳೆ.

ಆರ್ಯನಿಗೆ ಆರಾಧನಾ ಹತ್ತಿರವಾಗುತ್ತಾಳಾ..?

ಆರ್ಯನಿಗೆ ಆರಾಧನಾ ಹತ್ತಿರವಾಗುತ್ತಾಳಾ..?

ಅನು ಆಫೀಸಿಗೆ ಹೋಗಬೇಕೆಂದು ಪ್ಲ್ಯಾನ್ ಮಾಡಿರುತ್ತಾಳೆ. ಆದರೆ ಆಕೆ ಗರ್ಭಿಣಿ ಎಂದು ತಿಳಿದ ಸಂಜೀವಿನಿ, ಆಕೆ ರೆಸ್ಟ್ ಮಾಡಲಿ. ಆಫೀಸ ನೋಡಿಕೊಳ್ಳಲು ಆರಾಧನಾ ಹಾಗೂ ಭಾವನಾ ಇದ್ದಾರೆ. ಅನು ರೆಸ್ಟ್ ಮಾಡುವ ಸಮಯ, ರಿಸ್ಕ್ ಬೇಡ ಎಂದು ಹೇಳುವ ಮೂಲಕ ಆರಾಧನಾ ಆರ್ಯನಿಗೆ ಕ್ಲೋಸ್ ಆಗಲು ದಾರಿ ಮಾಡಿಕೊಡುತ್ತಾಳೆ. ಇದೆಲ್ಲವೂ ಮುಂದೆ ಸಮಸ್ಯೆ ಎದುರಾಗುವ ಎಲ್ಲಾ ಸಾಧ್ಯತೆಯೂ ಕಾಣುತ್ತಿದೆ.

More from Filmibeat

English summary
Jothe Jotheyali Serial 22nd March episode written update. Here is details about sanjeevini tries to make close aradhana and arya. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X