For Quick Alerts
  ALLOW NOTIFICATIONS  
  For Daily Alerts

  ಅನು ಮನೆಗೆ ಬಂದ ಆರ್ಯವರ್ಧನ್: ಮನೆಯವರೆಲ್ಲರೂ ಕಹಿ ಸತ್ಯವನ್ನು ಒಪ್ಪಿಕೊಳ್ಳುತ್ತಾರಾ..?

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಈಗ ಪ್ರಭು ದೇಸಾಯಿ ಅವರಿಗೆ ಸತ್ಯದ ಅರಿವಾಗಿದೆ. ತಮ್ಮ ಮಗ ವಿಶ್ವಾಸ್ ಸಾವನ್ನಪ್ಪಿದ್ದು, ಆತನ ಮುಖವನ್ನೇ ಆರ್ಯವರ್ಧನ್‌ಗೆ ಅಳವಡಿಸಲಾಗಿದೆ ಎನ್ನುವುದು ಗೊತ್ತಾಗಿದೆ. ಇದರಿಂದ ಪ್ರಭು ದೇಸಾಯಿ ಅವರು ಪ್ರಿಯದರ್ಶಿನಿ ಮೇಲೆ ಕೋಪ ಮಾಡಿಕೊಂಡಿದ್ದಾರೆ.

  ನನ್ನ ಮಗನ ಅಂತ್ಯ ಕ್ರಿಯೆಯನ್ನೂ ಮಾಡಲು ಬಿಡಲಿಲ್ಲ. ನನ್ನ ಹಕ್ಕನ್ನು ಕಿತ್ತುಕೊಂಡಿದ್ದೀಯಾ ಎಂದು ಪ್ರಿಯದರ್ಶಿನಿ ಮೇಲೆ ಕೋಪ ಮಾಡಿಕೊಂಡಿದ್ದಾರೆ. ಇನ್ನು ಸೊಸೆಗೆ ಏನೆಂದು ಉತ್ತರ ಕೊಡುತ್ತೀಯಾ..? ಅವಳಿಗೆ ವಿಶ್ವಾಸ್ ಇಲ್ಲ ಆದರೆ ಅವನ ರೂಪ ಹಾಗೆ ಇದೆ ಎಂದು ಹೇಳುತ್ತೀಯಾ ಎಂದು ಪ್ರಶ್ನಿಸಿದ್ದಾನೆ.

  ಬಿಗ್ ಬಾಸ್ ಸೀಸನ್ 9: ಮೊದಲ ಸೀಸನ್‌ನ ಪ್ರಮುಖ ಸ್ಪರ್ಧಿ ಸೇರಿ ಸಂಭಾವ್ಯ ಪಟ್ಟಿಗೆ ಇಬ್ಬರ ಸೇರ್ಪಡೆಬಿಗ್ ಬಾಸ್ ಸೀಸನ್ 9: ಮೊದಲ ಸೀಸನ್‌ನ ಪ್ರಮುಖ ಸ್ಪರ್ಧಿ ಸೇರಿ ಸಂಭಾವ್ಯ ಪಟ್ಟಿಗೆ ಇಬ್ಬರ ಸೇರ್ಪಡೆ

  ಇತ್ತ ಅನು ನನಗೆ ಈಗ ಯಾರ ಸಾಂತ್ವನದ ಮಾತೂ ಬೇಕಿಲ್ಲ. ನನ್ನನ್ನು ನನ್ನ ಪಾಡಿಗೆ ಮೌನವಾಗಿರಲು ಬಿಟ್ಟು ಬಿಡಿ ಎಂದು ರಮ್ಯ ಬಳಿ ಹೇಳುತ್ತಾಳೆ. ನಾನು ನನ್ನ ಆರ್ಯ ಸರ್‌ನ ಕಳೆದುಕೊಂಡಿದ್ದೇನೆ. ಅವರಿಲ್ಲದೇ ನಾನೀಗ ಬದುಕಬೇಕು. ನನ್ನ ಮಗುವಿಗಾಗಿಯಾದರೂ ನಾನು ಸ್ಟ್ರಾಂಗ್ ಆಗಿ ಇರಬೇಕು ಎಂದು ಹೇಳುತ್ತಾಳೆ.

  ತನಗೇನು ನೆನಪಾಗುತ್ತಿಲ್ಲ ಎಂದ ಆರ್ಯ

  ತನಗೇನು ನೆನಪಾಗುತ್ತಿಲ್ಲ ಎಂದ ಆರ್ಯ

  ಪ್ರಿಯದರ್ಶನಿ, ಆರ್ಯನನ್ನು ಆತನ ಮನೆಗೆ ಸೇರಿಸಲು ಮುಂದಾಗಿದ್ದಾಳೆ. ಆರ್ಯನಿಗೆ ಎಚ್ಚರವಾದ ಮೇಲೂ ಪ್ರಿಯದರ್ಶಿನಿಯನ್ನು ಗುರುತು ಹಿಡಿಯಲಿಲ್ಲ. ಆರ್ಯನಿಗೆ ನೆನಪಿನ ಶಕ್ತಿ ಬರಲು ರಾಜನಂದಿನಿ ನಿವಾಸಕ್ಕೆ ಕರೆದುಕೊಂಡು ಹೊರಟಿದ್ದಾಳೆ. ದಾರಿ ಮಧ್ಯೆ ಆರ್ಯ ನಾವೀಗ ಎಲ್ಲಿಗೆ ಹೋಗುತ್ತಿದ್ದೇವೆ ಎಂದು ಕೇಳುತ್ತಾನೆ. ಆಗ ಪ್ರಿಯದರ್ಶಿನಿ, ರಾಜನಂದಿನಿ ನಿವಾಸ ಎಂದು ಹೇಳಿದಾಗ, ನನಗೆ ಯಾರೂ ನೆನಪಾಗುತ್ತಿಲ್ಲ. ಅವರಿಗೆಲ್ಲಾ ನನ್ನ ಗುರುತು ಇದೆಯಾ ಎಂದು ಪ್ರಶ್ನಿಸುತ್ತಾನೆ.

  ಊರ ತುಂಬಾ ಕಂಠಿ-ಸ್ನೇಹಾ ಪೋಸ್ಟರ್: ಸ್ನೇಹಾ-ಕಂಠಿ ಗೆಳೆತನ ಅಂತ್ಯ?ಊರ ತುಂಬಾ ಕಂಠಿ-ಸ್ನೇಹಾ ಪೋಸ್ಟರ್: ಸ್ನೇಹಾ-ಕಂಠಿ ಗೆಳೆತನ ಅಂತ್ಯ?

  ಆರ್ಯ ನೆನೆದು ಶೋಕಾಚರಣೆ

  ಆರ್ಯ ನೆನೆದು ಶೋಕಾಚರಣೆ

  ಆಫೀಸಿನಲ್ಲಿ ಮೀರಾ, ಝೇಂಡೇ ಎಲ್ಲರೂ ಆರ್ಯ ಸರ್ ಅಗಲಿಕೆಗೆ ಶೋಕಾಚರಣೆಯನ್ನು ಮಾಡುತ್ತಾರೆ. ಈ ವೇಳೆ ಆಫೀಸಿನಲ್ಲಿದ್ದವರು ಆರ್ಯ ತಮಗೂ ತಮ್ಮ ಕುಟುಂಬಕ್ಕೂ ಮಾಡಿದ ಕೆಲ ಸಹಾಯಗಳನ್ನು ಮೆಲುಕು ಹಾಕುತ್ತಾರೆ. ಅವರು ಮಾಡಿದ ಒಳ್ಳೆಯ ಕೆಲಸಗಳನ್ನು ನೆನೆದು ಕಣ್ಣೀರಿಡುತ್ತಾರೆ.

  ಫೋಟೋ ತೆಗೆಸಿದ ಅನು

  ಫೋಟೋ ತೆಗೆಸಿದ ಅನು

  ಇತ್ತ ಅನು ಸ್ವಲ್ಪ ಧೈರ್ಯವಾಗಿಯೇ ರೂಮಿನಿಂದ ಹೊರಗೆ ಬಂದಿದ್ದಾಳೆ. ಆರ್ಯ ಸರ್ ನಮ್ಮ ಮನೆಗೆ ದಸರಾ ಹಬ್ಬಕ್ಕೆ ಮೊದಲ ಬಾರಿಗೆ ಬಂದಿದ್ದರು. ನಾನೆಂದೂ ಅವರ ಜೊತೆಗೆ ಹಬ್ಬವನ್ನು ಆಚರಿಸುತ್ತೀನಿ ಅಂತ ಅಂದುಕೊಂಡಿರಲಿಲ್ಲ. ಆದರೆ ಈ ವರ್ಷ ಗೊಂಬೆಗಳ ಹಬ್ಬದಲ್ಲಿ ಅವರು ನಮ್ಮ ಜೊತೆಗಿಲ್ಲ. ಹಾಗಂತ ದುಃಖದಲ್ಲಿ ಇರುವುದನ್ನು ಆರ್ಯ ಸರ್ ಇಷ್ಟಪಡುತ್ತಿರಲಿಲ್ಲ. ಬದಲಿಗೆ ಎಲ್ಲರೂ ಖುಷಿಯಾಗಿರಬೇಕು ಎಂದು ಬಯಸುತ್ತಿದ್ದರು. ಈ ಫೋಟೋ ಇಲ್ಲಿದ್ದರೆ ಅವರಿಲ್ಲ ಅನ್ನೋ ನೆನಪು ಕಾಡುತ್ತೆ. ಇದು ಇಲ್ಲಿರುವುದು ಬೇಡ ಎಂದು ಹೇಳುತ್ತಾಳೆ. ಆಗ ಮಾನ್ಸಿ ಒಂದು ಫೋಟೋ ಇರಲಿ ಎಂದಾಗ ಶಾರದಾ ದೇವಿ ಮಂದಾಗೆ ಹೇಳಿ ಆ ಫೋಟೋವನ್ನು ಅಲ್ಲಿಂದ ತೆಗೆಸಿಬಿಡುತ್ತಾಳೆ.

  ಮನೆಗೆ ಬಂದವನನ್ನು ಆರ್ಯ ಎಂದು ಒಪ್ಪುತ್ತಾರಾ..?

  ಮನೆಗೆ ಬಂದವನನ್ನು ಆರ್ಯ ಎಂದು ಒಪ್ಪುತ್ತಾರಾ..?

  ಅನು ದೇವರ ಮನೆಗೆ ದೀಪ ಹಚ್ಚಲು ಹೋಗುತ್ತಾಳೆ. ದೀಪ ಹಚ್ಚಿ ಕುಂಕುಮ ಇಟ್ಟುಕೊಂಡು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಾಳೆ. ಅಷ್ಟೊತ್ತಿಗೆ ಪ್ರಿಯದರ್ಶಿನಿ ಹಾಗೂ ಆರ್ಯ ಇಬ್ಬರೂ ಅವರ ಮನೆಗೆ ಬರುತ್ತಾರೆ. ಇವರಿಬ್ಬರನ್ನೂ ಶಾರದಾ ದೇವಿ ಬರ ಮಾಡಿಕೊಳ್ಳುತ್ತಾಳೆ. ಈಗ ಮನೆಯವರೆಲ್ಲರಿಗೂ ಪ್ರಿಯದರ್ಶಿನಿ ಸತ್ಯ ಹೇಳುತ್ತಾಳಾ..? ಮನೆಗೆ ಬಂದ ಆರ್ಯನಿಗೆ ತನ್ನ ಹಳೆಯ ದಿನಗಳ ನೆನಪಾಗುತ್ತಾ..? ಮುಂದೆ ಏನಾಗಬುದು ಎಂಬುದೇ ಧಾರಾವಾಹಿಯ ಕುತೂಹಲವಾಗಿದೆ.

  English summary
  jothe jotheyali Serial 22th September Episode Written Update. priyadarshini brings arya to rajanandini house. know more.
  Friday, September 23, 2022, 18:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X