For Quick Alerts
  ALLOW NOTIFICATIONS  
  For Daily Alerts

  ತನ್ನ ಮನೆಗೆ ವಾಪಸ್ ಬಂದ ಆರ್ಯನಿಗೆ ಎಲ್ಲಾ ನೆನಪಾಗುತ್ತಾ..?

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರ್ಯವರ್ಧನ್, ವಿಶ್ವಾಸ್ ರೂಪದಲ್ಲಿ ರಾಜನಂದಿನಿ ನಿವಾಸಕ್ಕೆ ಎಂಟ್ರಿಕೊಟ್ಟಿದ್ದಾನೆ. ಇನ್ಮುಂದೆ ತನ್ನ ಮನೆಯಲ್ಲೇ ಇರಲು ಬಂದಿದ್ದಾನೆ. ಅವನಿಗೆ ಹಳೆಯ ನೆನಪುಗಳು ಮರುಕಳಿಸುತ್ತಾ ಎಂಬುದು ಕುತೂಹಲವಾಗಿದೆ.

  ಇನ್ನು ವರ್ಧನ್ ಮನೆಯವರು ಆರ್ಯವರ್ಧನ್ ಬದುಕಿದ್ದಾನೆ ಎಂಬ ಸತ್ಯವನ್ನು ಒಪ್ಪಿಕೊಳ್ಳುತ್ತಾರಾ..? ಪ್ರಿಯದರ್ಶಿನಿ ಹೇಗೆ ಮನೆಯವರಿಗೆ ನಡೆದ ಸತ್ಯವನ್ನು ವಿವರಿಸುತ್ತಾರೆ. ಮುಂದೆ ಧಾರಾವಾಹಿಯಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

  Bigg Boss: ಅಮೂಲ್ಯಗೆ ಪ್ರಥಮ್‌ ಮೇಲೆ ಸಿಟ್ಟು: ಅಂಥಹದ್ದೇನು ಮಾಡಿದ್ರು ಪ್ರಥಮ್Bigg Boss: ಅಮೂಲ್ಯಗೆ ಪ್ರಥಮ್‌ ಮೇಲೆ ಸಿಟ್ಟು: ಅಂಥಹದ್ದೇನು ಮಾಡಿದ್ರು ಪ್ರಥಮ್

  ಅನು ಮಾತಿನಂತೆ ಮನೆಯಲ್ಲಿ ಆರ್ಯವರ್ಧನ್ ಫೊಟೋವನ್ನು ತೆಗೆಯಲಾಗಿದೆ. ಶಾರದಾ ದೇವಿ, ಮಂದಾಳಿಗೆ ಹೇಳಿ ಫೋಟೋವನ್ನು ಕೊಡುತ್ತಾಳೆ. ಮಂದಾ ಫೋಟೊ ತೆಗೆದುಕೊಂಡು ಹೋಗುತ್ತಿದ್ದಂತೆ ಆರ್ಯ ಕಾರಿನಿಂದ ಇಳಿಯುತ್ತಾನೆ.

  ರಾಜನಂದಿನಿ ನಿವಾಸದಲ್ಲಿ ಆರ್ಯ

  ರಾಜನಂದಿನಿ ನಿವಾಸದಲ್ಲಿ ಆರ್ಯ

  ಕಾರಿಂದ ಇಳಿದ ಆರ್ಯ ನಾವು ಇಲ್ಲಿರುತ್ತೀವಾ ಅಮ್ಮ..? ಇದು ಯಾರ ಮನೆ.? ನಾವಿಲ್ಲಿ ಇರುವುದರಿಂದ ಯಾರಿಗೂ ತೊಂದರೆಯಾಗುವುದಿಲ್ಲ ಅಲ್ವಾ ಎಂದು ಕೇಳುತ್ತಾನೆ. ಆಗ ಪ್ರಿಯದರ್ಶಿನಿ ಹೌದು ಇದೇ ಮನೆಯಲ್ಲೇ ನೀನು ಇರಬೇಕು ಎಂದು ಹೇಳುತ್ತಾಳೆ. ಆಗ ಆರ್ಯ ನನಗೆ ಏನೂ ಯೋಚಿಸೋದಕ್ಕೆ ಆಗುತ್ತಿಲ್ಲ. ಕ್ಷಮಿಸಿ ಎಲ್ಲವನ್ನೂ ನಿಮ್ಮ ಬಳಿಯೇ ಕೇಳುತ್ತಿದ್ದೇನೆ ಎನ್ನುತ್ತಾನೆ. ಆಗ ಇವತ್ತು ವಿಜಯದಶಮಿ ಇಂದು ನೀನು ಇಲ್ಲಿಗೆ ಬಂದಿರೋದು ಎಲ್ಲವೂ ಒಳ್ಳೆಯದೇ ಆಗುತ್ತದೆ ಬಾ ಎಂದು ಕರೆದುಕೊಂಡು ಹೋಗುತ್ತಾಳೆ. ಪ್ರಭು ದೇಸಾಯಿಗೆ ಪತ್ರ ಬರೆದಿಟ್ಟು ಪ್ರಿಯದರ್ಶಿನಿ ಬಂದಿರುತ್ತಾಳೆ. ಆ ಪತ್ರವನ್ನು ಪ್ರಭು ದೇಸಾಯಿ ಓದುತ್ತಾರೆ.

  ದೇವರಿಗೆ ಆರತಿ ಬೆಳಗಿದ ಅನು

  ದೇವರಿಗೆ ಆರತಿ ಬೆಳಗಿದ ಅನು

  ಅನು ಮನೆಯಲ್ಲಿ ದೇವರಿಗೆ ಪೂಜೆ ಮಾಡಿ ಮಂಗಳಾರತಿ ಮಾಡಿ ಎಲ್ಲರ ಮುಂದೆ ಆರತಿ ತಟ್ಟೆ ಹಿಡಿದು ಬರುತ್ತಾಳೆ. ಆಗ ಪುಷ್ಪ ಇನ್ನೂ ಸ್ವಲ್ಪ ದಿನ ಇದೆಲ್ಲಾ ಬೇಡ. ಸೂತಕದ ಮನೆ ಇದು ಎನ್ನುತ್ತಾಳೆ. ಆಗ ಅನು ಜಗತ್ತೇ ಒಂದು ಕುಟುಂಬ ಎಂದ ಮೇಲೆ ದಿನವೂ ಸೂತಕ ಅಲ್ವಾ ಅಮ್ಮ. ಇದು ನನ್ನ ಸಮಾಧಾನಕ್ಕೋಸ್ಕರ ಎಂದು ಹೇಳುತ್ತಾಳೆ. ಆಗ ಶಾರದಾ ದೇವಿ ನಿನಗೆ ಹೇಗೆ ಬೇಕೋ ಹಾಗೆಯೇ ಇರು. ಇದು ನಿನ್ನ ಮನೆ ಎನ್ನುತ್ತಾಳೆ. ಅಷ್ಟರಲ್ಲಿ ಆರ್ಯ ಮತ್ತು ಪ್ರಿಯದರ್ಶಿನಿ ಮನೆಗೆ ಬರುತ್ತಾರೆ. ಆಗ ಮನೆಯವರೆಲ್ಲರ ಗಮನ ಅವರ ಕಡೆಗೆ ಹೋಗುತ್ತದೆ.

  ರಾಜನಂದಿನಿ ರೂಮಿನತ್ತ ಆರ್ಯ..?

  ರಾಜನಂದಿನಿ ರೂಮಿನತ್ತ ಆರ್ಯ..?

  ಇನ್ನು ಶಾರದಾ ಪ್ರಿಯದರ್ಶಿನಿ ಅವರನ್ನು ಸ್ವಾಗತ ಮಾಡಿಕೊಳ್ಳುತ್ತಾಳೆ. ಆರ್ಯನನ್ನು ನನ್ನ ಮಗ ಸಂಜು ಎಂದು ಹೇಳುತ್ತಾಳೆ. ಆಗ ಎಲ್ಲರೂ ಶಾಕ್ ಆಗುತ್ತಾರೆ. ನನಗೆ ಈ ಹೆಸರಿನ ಮೇಲೆ ತುಂಬಾ ಪ್ರೀತಿ ಅದಕ್ಕೆ ಇವನನ್ನು ಸಂಜು ಅಂತ ಕರೀತೀನಿ ಎಂದು ಹೇಳುತ್ತಾರೆ. ಮಂದಾ ಅವರನ್ನು ರೂಮಿಗೆ ಕರೆದುಕೊಂಡು ಹೋಗುತ್ತಾರೆ. ಇನ್ನು ಆರ್ಯವರ್ಧನ್ ಮೇಲೆ ರೂಮಿಗೆ ಹೋಗುವಾಗ ರಾಜನಂದಿನಿ ರೂಮನ್ನು ನೋಡಿ ಅಲ್ಲಿಗೆ ಅವನ ಮನಸ್ಸು ಎಳೆಯುತ್ತಿರುತ್ತದೆ. ಆದರೆ ಹೋಗುವ ಮುನ್ನವೇ ಮಂದಾ ತಡೆದು, ನಿಮ್ಮ ರೂಮ್ ಮೇಲಿದೆ ಎಂದು ಕರೆದುಕೊಂಡು ಹೋಗುತ್ತಾಳೆ.

  ಆರ್ಯವರ್ಧನ್‌ಗೆ ಎಲ್ಲವೂ ನೆನಪಾಗುತ್ತಾ..?

  ಆರ್ಯವರ್ಧನ್‌ಗೆ ಎಲ್ಲವೂ ನೆನಪಾಗುತ್ತಾ..?

  ಅನು ಫೋನ್ ರಿಂಗ್ ಆಗುತ್ತಿರುತ್ತದೆ ಆಗ ಆರ್ಯ ಬಂದು ಫೋನ್ ಅನ್ನು ತೆಗೆದುಕೊಳ್ಳುತ್ತಾನೆ. ಅನು ಬಂದು ನೀವ್ಯಾಕೆ ನನ್ನ ಫೊನ್ ಅನ್ನು ತೆಗೆದುಕೊಂಡಿದ್ದೀರಿ ಎಂದು ಕೇಳಿದಾಗ, ರಿಂಗ್ ಆಗುತ್ತಿತ್ತು. ಯಾರದು ಎಂದು ಕೇಳಲು ತೆಗೆದುಕೊಂಡೆ ಎನ್ನುತ್ತಾನೆ. ಅನು ಅಲ್ಲಿಂದ ಫೋನ್ ತೆಗೆದುಕೊಂಡು ಹೋಗುತ್ತಾಳೆ. ಪ್ರಿಯದರ್ಶಿನಿ, ವಿಶ್ವಾಸ್ ಅಸ್ತಿಯನ್ನು ಶಾರದಾ ಬಳಿಯಿಂದ ಪಡೆದುಕೊಳ್ಳುತ್ತಾಳೆ. ಹಾಗಾದರೆ ಎಲ್ಲಾ ಸತ್ಯವನ್ನು ಶಾರದಾ ಬಳಿ ಮಾತ್ರ ಹೇಳಿದ್ದಾರಾ..? ಮನೆಯವರಿಗೆಲ್ಲಾ ಯಾಕೆ ಹೇಳಿಲ್ಲ..? ಪ್ರಿಯದರ್ಶಿನಿ ಆರ್ಯವರ್ಧನ್ ನನ್ನು ಅಲ್ಲೇ ಬಿಟ್ಟು ತನ್ನ ಊರಿಗೆ ಹೊರಡುತ್ತಾಳಾ..? ಧಾರಾವಾಹಿಯ ಕಥೆ ಮುಂದೆ ಹೇಗೆ ಸಾಗುತ್ತದೆ..? ಅನು ಅದೇ ಮನೆಯಲ್ಲಿ ಇರುತ್ತಾಳಾ ಇಲ್ಲ ತನ್ನ ವಠಾರಕ್ಕೆ ಹೋಗುತ್ತಾಳಾ ಎಂದು ನೋಡಬೇಕಿದೆ.

  English summary
  Arya and Priyadarshini came to sharada house. But arya still not able to recollect his memory
  Sunday, September 25, 2022, 17:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X