Jothe Jotheyali: ಎಲ್ಲಿಗೂ ಹೋಗದೇ ಉಳಿದುಕೊಂಡ ಆರಾಧನಾ
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮಾನ್ಸಿ, ಸಂಜೀವಿನಿ ಹಾಗೂ ಅವರ ಮಕ್ಕಳಿಗೆ ಅವಮಾನಿಸಿದರೂ, ಬಾಯಿ ಬಿಟ್ಟು ಮನೆಯಿಂದ ಹೊರಡಿ ಎಂದು ಹೇಳಿದರೂ ಸಂಜೀವಿನಿ ಒಂದೇ ಒಂದು ಮಾತನ್ನು ಆಡಿಲ್ಲ. ಭಾವನಾ ಮಾತ್ರ ಅವಮಾನದಿಂದ ಮನೆಯಿಂದ ಹೊರಗೆ ಹೋಗಲು ಸಿದ್ಧಳಾಗಿದ್ದಾಳೆ. ಮಾನ್ಸಿ ಮಾತುಗಳಿಂದ ಬೇಸರವಾದರೂ ಆರಾಧನಾಳಿಗೆ ಹೋಗಲು ಮನಸ್ಸಿಲ್ಲ.
ಇನ್ನು ಸಂಜೀವಿನಿಗೆ ಮನೆಯಿಂದ ಹೋದರೆ, ಆಸ್ತಿಯನ್ನು ತನ್ನ ಪಾಲಾಗಿಸಿಕೊಳ್ಳುವುದು ತಪ್ಪುತ್ತದೆ ಎಂಬ ಆತಂಕ ಹೆಚ್ಚಿದೆ. ಹಾಗಾಗಿ ಆಸ್ತಿಯನ್ನು ಧಕ್ಕಿಸಿಕೊಳ್ಳಲು ಏನು ಮಾಡುವುದು ಎಂದು ಯೋಚಿಸುತ್ತಿದ್ದಾಳೆ. ಆರ್ಯ ಸರ್ ಮಗು ಇಲ್ಲ ಎಂಬ ಕಾರಣಕ್ಕೆ ತನ್ನನ್ನು ಬಿಟ್ಟು ಹೋದರು ಎಂದು ಅನು ಕೊರಗುತ್ತಿದ್ದಾಳೆ. ಆದರೆ, ಶಾರದಾ ದೇವಿ ಅನುಳನ್ನು ಸಮಾಧಾನ ಮಾಡುತ್ತಿದ್ದು, ಅನು ಅಳುವುದನ್ನೇ ನಿಲ್ಲಿಸುತ್ತಿಲ್ಲ.

ಮನೆಯವರೆಲ್ಲರೂ ಅನುಗೆ ಸಮಾಧಾನದ ಮಾತುಗಳನ್ನು ಹೇಳುತ್ತಿದ್ದಾರೆ. ಮೀರಾ ಕೂಡ ಅನುಗೆ ಆರ್ಯ ಸರ್ ಬಗ್ಗೆ ಯೋಚಿಸಬೇಡ. ಅವರು ಬಂದೇ ಬರುತ್ತಾರೆ ಎಂದು ಹೇಳಿದರೂ ಅನುಗೆ ನಂಬಿಕೆಯೆ ಬರುತ್ತಿಲ್ಲ. ಆರ್ಯ ಸರ್ ತಾನು ಎಷ್ಟು ಹೇಳಿದರೂ ಕೇಳದೇ, ಕೋಪ ಮಾಡಿಕೊಂಡು ಹೋಗಿದ್ದಾರೆ. ಅವರಿಗೆ ನಾನು ಮಗುವಿನ ವಿಚಾರದಲ್ಲಿ ನೋವು ಮಾಡಿದ್ದೀನಿ. ಅವರು ತನ್ನನ್ನು ತಿರಸ್ಕರಿಸಿದ್ದಾರೆ ಎಂದು ಭಾವಿಸಿದ್ದಾಳೆ. ಇನ್ನು ಮನೆಯವರೆಲ್ಲರೂ ಅನು ರೆಸ್ಟ್ ಮಾಡಲಿ ಎಂದು ಬಿಟ್ಟಿದ್ದಾರೆ.
ಇತ್ತ ಝೇಂಡೇ ಆರ್ಯನನ್ನು ಟೀ ಅಂಗಡಿಗೆ ಕರೆದುಕೊಂಡು ಹೋಗಿ ಟೀ ಮತ್ತು ಬನ್ ಅನ್ನು ಕೊಡಿಸುತ್ತಾನೆ. ಇದನ್ನು ನೋಡಿ ಆರ್ಯ ಖುಷಿ ಪಡುತ್ತಾನೆ. ಟೀ ಮತ್ತೆ ಬನ್ ನನ್ನ ಜೊತೆಗಿದ್ದಾಗಲೇ ಚೆನ್ನಾಗಿತ್ತು ಎಂದು ಹೇಳುತ್ತಾನೆ. ಆಗ ಝೇಂಡೇ ನನಗೆ ಗೊತ್ತು ನಿನಗೆ ಟೀ ಮತ್ತೆ ಬನ್ ಕೊಡಿಸಿದರೆ ಖುಷಿ ಪಡುತ್ತೀಯಾ ಅಂತ. ಅದಕ್ಕೆ ಇಲ್ಲಿಗೆ ಕರೆದುಕೊಂಡು ಬಂದೆ ಎಂದು ಹೇಳುತ್ತಾನೆ.
ಆರ್ಯ ನಾನು ಇಷ್ಟರಲ್ಲೇ ಸುಮ್ಮನಿದಿದ್ದರೆ ಸಾಕಾಗಿತ್ತು. ಆದರೆ, ಮತ್ತೇನು ಪಡೆಯುವ ಸಲುವಾಗಿ ಅದರ ಹಿಂದೆ ಬಿದ್ದು, ಅದರ ನಂತರ ಮತ್ತೊಂದರ ಹಿಂದೆ ಬಿದ್ದು, ಟೀ ಮತ್ತು ಬನ್‌ನಲ್ಲಿದ್ದ ಸುಖವನ್ನು ಕಳೆದುಕೊಂಡು ಬಿಟ್ಟೆ ಎಂದು ಹೇಳುತ್ತಾನೆ. ಆಗ ಝೇಂಡೇ ನಿನಗೆಲ್ಲಾ ವಾಪಸ್ ಸಿಗುವಂತೆ ನಾನು ಮಾಡುತ್ತೀನಿ ಎನ್ನುತ್ತಾನೆ.

ಅಲ್ಲಿಂದ ಝೇಂಡೇ ಆರ್ಯನನ್ನು ಮನೆಯೊಂದಕ್ಕೆ ಕರೆದುಕೊಂಡು ಹೋಗುತ್ತಾನೆ. ಇದು ನಿನ್ನ ಮನೆನಾ ಎಂದು ಕೇಳಿದ್ದಕ್ಕೆ, ಇಲ್ಲ ಆರ್ಯ ಇದೆಲ್ಲಾ ನಿನ್ನದೇ. ನಾನು ನಿನ್ನ ಸೇವಕ. ಈ ಅರಮನೆಯಲ್ಲಿ ನೀನು ನೆಮ್ಮದಿಯಾಗಿ ಆಯಾಗಿ ಇರು ಎನ್ನುತ್ತಾನೆ. ಅದು ಹೇಗೆ ಸಾಧ್ಯ ಝೇಂಡೇ ಎಂದು ಕೇಳಿದಾಗ, ನೀನು ಕಷ್ಟಪಟ್ಟು ದುಡಿದ ಕಂಪನಿಯ ಬೊಕ್ಕಸದಿಂದ ದೋಚಿದರಲ್ಲಿ ಕಟ್ಟಿದ ಮನೆ ಇದು. ಇದು ಸಣ್ಣದಷ್ಟೇ, ನಿನಗೆ ಸಲ್ಲಬೇಕಿರುವುದು ಇನ್ನೂ ಇದೆ ಎನ್ನುತ್ತಾನೆ.
ಇನ್ನು ಶಾರದಾ ದೇವಿ ಸಂಜೀವಿನಿಗೆ ಇದು ನಿನ್ನ ತವರು ಮನೆ ಇಲ್ಲಿಂದ ಹೊರಡು ಎಂದು ಹೇಳಲಾರೆ. ಆದರೆ, ಈಗ ಮನೆಯ ಪರಿಸ್ಥಿತಿ ಸರಿ ಇಲ್ಲ. ಮೊದಲು ನಾನು ಅನು ಆರೋಗ್ಯದ ಬಗ್ಗೆ ಗಮನಿಸಬೇಕು. ಇದೇ ಸಂದರ್ಭದಲ್ಲಿ ನೀನು ಹೊರಟಿದ್ದೀಯಾ. ನಿನಗೆ ಯಾವುದು ಸರಿ ಅನಿಸುತ್ತೋ ಅದನ್ನೇ ಮಾಡು ಎಂದು ಹೇಳುತ್ತಾಳೆ. ಆಗ ಭಾವನಾಳನ್ನು ಸಂಜೀವಿನಿ ಇನ್ನೊಂದೆರಡು ದಿನ ಇದ್ದು ಹೋಗೋಣ ಎನ್ನುತ್ತಾಳೆ. ಇದಕ್ಕೆ ಭಾವನಾ ಒಪ್ಪುವುದಿಲ್ಲ.
ಸಂಜೀವಿನಿಗೆ ಹೋಗಲು ಮನಸ್ಸಿರುವುದಿಲ್ಲ. ಆದರೆ, ಭಾವನಾ ಒಬ್ಬಳನ್ನೇ ಕಳಿಸಲು ಇಷ್ಟವಾಗಲ್ಲ. ಆರಾಧನಾ, ಅನು ಹುಷಾರಾಗುವವರೆಗೂ, ನನ್ನ ಕಂಪನಿ ಮರ್ಜ್ ಆಗಿರುವುದರಿಂದ ನಾನು ಇಲ್ಲೇ ಇರುತ್ತೇನೆ ಎನ್ನುತ್ತಾಳೆ. ಸಂಜೀವಿನಿ ಸರಿ ಎಂದು ಭಾವನಾ ಜೊತೆಗೆ ಹೊರಟು ಬಿಡುತ್ತಾಳೆ. ಇದರಿಂದ ಆರಾಧನಾಳಿಗೆ ಬೇಸರವಾಗುತ್ತದೆ.


Click it and Unblock the Notifications











