Jothe Jotheyali: ಝೇಂಡೇ ವಿಚಾರಕ್ಕೆ ಎಮೋಷನಲ್ ಆದ ಆರ್ಯ
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ಮತ್ತು ಆರ್ಯ ದೂರ ಆಗಿದ್ದಾರೆ. ಆದರೆ ಇಬ್ಬರ ಮನಸ್ಸು ಹತ್ತಿರವಾಗುತ್ತಿದ್ದು, ಇದು ಸುಬ್ಬುಗೆ ಅರ್ಥವಾಗುತ್ತಿಲ್ಲ.
ಅನು ಪದೇ ಪದೇ ಆರಾಧನಾಳಿಗೆ ಒಂದಲ್ಲ ಒಂದು ಜವಾಬ್ದಾರಿಯನ್ನು ನೀಡುತ್ತಿದ್ದಾಳೆ. ಹೊರಟು ನಿಂತಿದ್ದ ಆರಾಧನಾಳಿಗೆ ಅನು, ಶಾರದಾ ದೇವಿ ಜವಾಬ್ದಾರಿಯನ್ನು ಕೊಟ್ಟಿರುತ್ತಾಳೆ.
ಅನುಳನ್ನು ಭೇಟಿಯಾಗಲು ಬಂದ ಆರಾಧನಾಳಿಗೆ ಮೀರಾ ವರ್ಧನ್ ಕಂಪನಿಯ ಬೋರ್ಡ್ ಮೆಂಬರ್‌ನ ಜವಾಬ್ದಾರಿಯನ್ನು ಕೊಟ್ಟಿರುತ್ತಾಳೆ. ಇದನ್ನು ಆಫೀಸಿನವರು ಸತ್ಯ ಎಂದು ನಂಬಿರುತ್ತಾರೆ.

ಒಂದಾಗಿರುವ ಆರ್ಯ-ಅನು
ಝೇಂಡೇ ತಪ್ಪಿಸಿಕೊಂಡು ಹೋಗಿರುವುದು ತಿಳಿದ ಆರ್ಯ ಆತನನ್ನು ಹುಡುಕುತ್ತಾ ಸೈಕಲ್ ನಲ್ಲಿ ತಿರುಗುತ್ತಿರುತ್ತಾನೆ. ಆಫೀಸಿಗೆ ಹೊರಟ ಅನು ಎದುರಾಗುತ್ತಾಳೆ. ಇಬ್ಬರೂ ಮುಕ್ತವಾಗಿ ಮಾತನಾಡುತ್ತಾ ಆರ್ಯ ತನ್ನ ಪ್ರೀತಿಯನ್ನು ತೋರಿಸುತ್ತಾನೆ. ಅನುಗು ಕೂಡ ಆರ್ಯನನ್ನು ಮನೆಗೆ ಕರೆದುಕೊಂಡು ಹೋಗಿ ಎಂದು ಕೇಳುತ್ತಾಳೆ. ಇದಕ್ಕೆ ಆರ್ಯನೂ ಒಪ್ಪುತ್ತಾನೆ. ಆದರೆ ಅನು ತಾಯಿಯಾಗುತ್ತಿರುವ ವಿಚಾರ ತನಗೆ ತಿಳಿದಿದೆ ಎಂಬುದನ್ನು ಮುಚ್ಚಿಡುತ್ತಾನೆ. ಆದಷ್ಟು ಬೇಗ ಸುಬ್ಬು ಹತ್ತಿರ ಮಾತನಾಡಿ ಅನುಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಬೇಕು ಎಂದು ಆರ್ಯ ಅಂದುಕೊಳ್ಳುತ್ತಾನೆ. ವಾಪಸ್ ತನ್ನ ಮನೆಗೆ ಹೋಗಲು ಅನು ಕೂಡ ಆಸೆಯಿಂದಿದ್ದಾಳೆ.

ಸುಬ್ಬು ಬಗ್ಗೆ ಯಜಮಾನರು ಕೊಟ್ರು ಶಾಕ್
ಸುಬ್ಬು ಮಗಳು ಹಾಗೂ ಅಳಿಯನನ್ನು ಬೇರೆ ಮಾಡಿದ ಎಂಬ ಕಾರಣಕ್ಕೆ ಪುಷ್ಪಾಗೆ ಕೋಪವಿರುತ್ತದೆ. ಅಲ್ಲದೇ ವಠಾರಕ್ಕೆ ಹೋಗುವ ಬದಲು ಬಾಡಿಗೆ ಮನೆಗೆ ಬಂದಿರುವುದು ಇನ್ನೂ ಬೇಸರವಾಗಿರುತ್ತದೆ. ಸುಬ್ಬುಗೆ ಸದಾ ಬೈಯುತ್ತಿರುತ್ತಾಳೆ. ಇನ್ನು ಸುಬ್ಬು ಬಾಡಿಗೆ ಮನೆ ಮಾಡಿರುವುದು ಆತ ಕೆಲಸ ಮಾಡುವ ಯಜಮಾನರ ಮನೆಯಲ್ಲೇ. ಹೀಗಿರುವಾಗ ಸುಬ್ಬು ಯಜಮಾನರು ಮನೆಗೆ ಬಂದು ಕೆಲಸದ ವಿಚಾರದಲ್ಲಿ ವಾರ್ನಿಂಗ್ ಕೊಡುತ್ತಾರೆ. ಇನ್ನು ಮುಂದೆ ರಜೆ ಹಾಕಿದರೆ, ಸಂಬಳವನ್ನು ಕಟ್ ಮಾಡುವುದಾಗಿ ಹೇಳುತ್ತಾರೆ. ಇದು ಸುಬ್ಬುಗೆ ಶಾಕ್ ಆಗುತ್ತದೆ. ಇನ್ನು ಸುಬ್ಬುನನ್ನು ಎಲ್ಲರೂ ಆರ್ಯವರ್ಧನ್ ಹೆಸರಿನಿಂದ ಗುರುತಿಸುವುದು ಕೂಡ ಬೇಸರವನ್ನುಂಟು ಮಾಡಿರುತ್ತದೆ.

ಆರ್ಯ-ಆರಾಧನಾ ಮಾತು
ಆರಾಧನಾಳನ್ನು ವರ್ಧನ್ ಕಂಪನಿಯ ಮೆಂಬರ್ ಎಂದು ತಿಳಿದ ಉದ್ಯೋಗಿಗಳೆಲ್ಲರೂ ಸಂಭ್ರಮಿಸುತ್ತಿರುತ್ತಾರೆ. ಈ ವಿಚಾರ ತಿಳಿದ ಆರ್ಯ, ಆರಾಧನಾ ಅವರು ನಿಜವಾಗಲೂ ನಮ್ಮ ಕಂಪನಿಯ ಮೆಂಬರ್ ಆಗಲಿ ಎಂದು ಹೇಳುತ್ತಾನೆ. ಈ ವಿಚಾರದಿಂದ ಮೀರಾಗೆ ಮುಜುಗರವಾಗುತ್ತದೆ. ಇನ್ನು ಆರ್ಯ ಮತ್ತು ಆರಾಧನಾ ಒಟ್ಟಿಗೆ ಕಾರಿನಲ್ಲಿ ಹೋಗುತ್ತಿರುತ್ತಾರೆ. ಆಗ ಆರಾಧನಾ ಹಾಗೂ ಆರ್ಯ ಇಬ್ಬರೂ ಮಾತನಾಡುತ್ತಾರೆ. ಆರಾಧನಾ ಈ ಟ್ರ್ಯಾಕ್ ಸೂಟ್ ಏಕೆ ಹಾಕಿದ್ದು ಎಂದು ಕೇಳಿದ್ದಕ್ಕೆ ಆರ್ಯ, ಝೇಂಡೇ ಅನ್ನು ನೆನಪು ಮಾಡಿಕೊಳ್ಳುತ್ತಾನೆ. ಸ್ವಲ್ಪ ಎಮೋಷನಲ್ ಆಗುತ್ತಾನೆ.

ಆರ್ಯನ ಬಳಿ ಝೇಂಡೇ ಬರುತ್ತಾನಾ..?
ನನ್ನನ್ನು ನನ್ನ ತಂದೆ-ತಾಯಿ ಬಿಟ್ಟು ಹೋದರು. ಅನು ಕೂಡ ಇಲ್ಲ. ಈಗ ಝೇಂಡೇ ಕೂಡ ಬಿಟ್ಟು ಹೋಗಿದ್ದಾನೆ ಎಂದು ಆರಾಧನಾ ಬಳಿ ಹೇಳಿಕೊಂಡು ಆರ್ಯ ಕೊಂಚ ಬೇಸರ ಮಾಡಿಕೊಳ್ಳುತ್ತಾನೆ. ಝೇಂಡೇ, ಆರ್ಯ ಕೂಡಿ ಹಾಕಿದ್ದ ರೂಮಿನಿಂದ ಎಸ್ಕೇಪ್ ಆಗಿದ್ದಾನೆ. ವಾಪಸ್ ಆರ್ಯನ ಬಳಿಗೆ ಬರುತ್ತಾನಾ..? ಇಲ್ಲವೇ ಆರ್ಯನನ್ನು ಆಟವಾಡಿಸುತ್ತಾನಾ ಎಂಬ ಕುತೂಹಲ ಧಾರಾವಾಹಿಯಲ್ಲಿ ಮೂಡಿದೆ.


Click it and Unblock the Notifications











