Jothe Jotheyali: ಮನೆ ಕೆಲಸದವಳಾದ ಮಾನ್ಸಿ: ವಿಲನ್ ಆಗುತ್ತಾಳಾ ಆರಾಧನಾ..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಸಂಜೀವಿನಿ ಮನೆಗೆ ಬಂದಿದ್ದೇ ತಡ ಎಲ್ಲವನ್ನೂ ತನ್ನ ಮುಷ್ಟಿಯಲ್ಲಿ ಹಿಡಿಯಲು ಯತ್ನಿಸುತ್ತಿದ್ದಾಳೆ. ಆರಾಧನಾ ಹಾಗೂ ಭಾವನಾಳಿಗೆ ಆಫಿಸ್ ಜವಾಬ್ದಾರಿಯನ್ನು ನೀಡಿ, ಅನುಳನ್ನು ಮನೆಯಲ್ಲೇ ಇರುವಂತೆ ಮಾಡಿದ್ದಾಳೆ. ತನ್ನ ಮಕ್ಕಳಿಬ್ಬರನ್ನು ಹರ್ಷ ಹಾಗೂ ಆರ್ಯನ ಜೊತೆಗೆ ಮದುವೆ ಮಾಡಿಸುವ ಪ್ಲಾನ್ ನಲ್ಲೂ ಸಂಜೀನಿ ಇದ್ದು, ಇದನ್ನು ಜಾರಿಗೆ ತರಲು ಮುಂದಾಗಿದ್ದಾಳೆ.
ಆದರೆ, ಇಬ್ಬರಿಗೂ ಮದುವೆಯಾಗಿದೆ ಎಂಬುದೇ ಈಗ ಸಂಜೀವಿನಿಯ ಪ್ರಾಬ್ಲಮ್ ಆಗಿದೆ. ಹೀಗಾಗಿ ಸಂಜೀವಿನಿ ಸದ್ಯ ಮನೆಯ ಹಿಡಿತವನ್ನು ಸಾಧಿಸಲು ಮುಂದಾಗಿದ್ದಾಳೆ. ಇನ್ನು ಆಫಿಸಿಗೆ ಆರಾಧನಾ ಹಾಗೂ ಆರ್ಯ ಇಬ್ಬರೇ ಬಂದಿದ್ದು ಮೀರಾಳಿಗೆ ಶಾಕ್ ಆಗಿದೆ. ಅನು ರೆಸ್ಟ್ ಮಾಡುತ್ತಾಳೆ. ಹಾಗಾಗಿ ಆಫಿಸಿಗೆ ಬರುವುದಿಲ್ಲ ಎಂಬುದನ್ನು ತಿಳಿದು, ಮೀರಾ, ಆರಾಧನಾಳ ಓಟಕ್ಕೆ ಬ್ರೇಕ್ ಹಾಕಬೇಕು ಎಂದು ಅಂದುಕೊಂಡಿದ್ದಾಳೆ. ಇನ್ನು ಆರಾಧನಾ ತನ್ನ ಕಂಪನಿಯನ್ನು ವರ್ಧನ್ ಗ್ರೂಪ್ಸ್ ಜೊತೆಗೆ ಮರ್ಜ್ ಮಾಡುತ್ತಿದ್ದಾಳೆ. ಅದಕ್ಕೆ ಸಂಬಂಧಿಸಿದ ಪೇಪರ್‌ಗಳನ್ನು ಆರ್ಯನಿಗೆ ತೋರಿಸುತ್ತಾಳೆ.

ಆರ್ಯ ಪೇಪರ್ ನೋಡಿ ಮೀರಾ ನೋಡಿ ಓಕೆ ಮಾಡಿದರೆ ಆಯ್ತು ಎಂದು ಹೇಳಿದ್ದು ಆರಾಧನಾಳಿಗೆ ಹರ್ಟ್ ಆಗಿದೆ. ಇನ್ನು ಮೀರಾ ಬಳಿ ತೋರಿಸಿದಾಗ ಇದಕ್ಕೆಲ್ಲಾ ಅನು ಸಹಿ ಬೇಕು. ಈ ಆಫೀಸಿನಲ್ಲಿ ಎಲ್ಲರಿಗಿಂತ ಮೇಲಿನ ಸ್ಥಾನದಲ್ಲಿರುವುದು ಅನು. ಆಕೆ ಸಹಿ ಇಲ್ಲದೇ ಯಾವ ಕೆಲಸವೂ ನಡೆಯೋದಿಲ್ಲ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಆರಾಧನಾಳಿಗೆ ಕೋಪವನ್ನು ತರಿಸಿದೆ.
ಹರ್ಷ ತನ್ನ ಮೇಲೆ ಕಾಳಜಿ ತೋರಿಸುತ್ತಿಲ್ಲ. ಮನೆಯಲ್ಲಿ ತಾನಿಲ್ಲದಿದ್ದರೂ ಎಲ್ಲರೂ ಆರಾಮಾಗಿದ್ದಾರೆ. ಮನೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಯುವ ಸಲುವಾಗಿ ಮಾಲಿನಿ ವೇಷದಲ್ಲಿ ಮನೆ ಕೆಲಸಕ್ಕಾಗಿ ಬಂದಿದ್ದಾಳೆ. ಮಾನ್ಸಿ ಮನೆಗೆ ಎಂಟ್ರಿ ಕೊಡುತ್ತಿದ್ದಂತೆಯೇ, ಸಂಜೀವಿನಿ ಆಕೆಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾಳೆ. ಇದರಿಂದ ಮಾನ್ಸಿಗೆ ಇರಿಟೇಟ್ ಆಗಿದೆ. ಆದರೆ, ಸಂಜೀವಿನಿಯ ಅಧಿಕ ಪ್ರಸಂಗತನವನ್ನು ಕಂಟ್ರೋಲ್ ಮಾಡಲಾಗದೇ ಸುಮ್ಮನಾಗಿದ್ದಾಳೆ. ಮಾನ್ಸಿಯೇ ಮಾಲಿನಿ ಎಂಬ ಸತ್ಯ ಮನೆಯಲ್ಲಿ ಕೆಲಸ ಮಾಡುತ್ತಿರುವ ಶಶಿಗೆ ಗೊತ್ತಿದೆ.

ಅನುಳನ್ನು ವಿಚಾರಿಸಿಕೊಳ್ಳುವುದಕ್ಕಾಗಿ ಆರ್ಯ ಫೋನ್ ಮಾಡಿದಾಗ, ಅನು ಮಾನ್ಸಿ ಬಗ್ಗೆ ಮಾತನಾಡಿದ್ದಾಳೆ. ಈ ಮಾತುಗಳನ್ನು ಕೇಳಿದ ಮಾನ್ಸಿಗೆ ಅಯ್ಯೋ ಎನಿಸಿದೆ. ಅನು, ಮಾನ್ಸಿ ಅಕ್ಕ ಇಲ್ಲದೇ ಮನೆಯಲ್ಲಿ ಬೇಸರವಾಗುತ್ತಿದೆ. ಈ ಮನೆಯಲ್ಲಿ ನೇರವಾಗಿ ಮಾತನಾಡುವುದು ಅವರೊಬ್ಬರೇ ಎಂದು ಹೇಳುತ್ತಾಳೆ. ಅನು ಮತ್ತು ಆರ್ಯ ಓನಿನಲ್ಲಿ ಮಾತನಾಡುವುದನ್ನು ಮಾನ್ಸಿ ಕೇಳಿಸಿಕೊಳ್ಳುತ್ತಾಳೆ. ಇನ್ನು ಆರ್ಯ ಅನುಳನ್ನು ನೋಡುವುದಕ್ಕಾಗಿ ಮನೆಗೆ ಹೊರಡುತ್ತಾನೆ.
ಇದೇ ಸಂದರ್ಭದಲ್ಲಿ ಆರ್ಯನ ಕ್ಯಾಬಿನ್‌ಗೆ ಬರುವ ಆರಾಧನಾ, ಎಲ್ಲಿಗೆ ಹೊರಟಿರಿ ಎಂದು ಕೇಳುತ್ತಾಳೆ. ಇದರಿಂದ ಬೇಸರಗೊಂಡ ಆರಾಧನಾ, ನಾವು ಲಂಚ್‌ಗೆ ಹೋಗಲು ಅರೇಂಜ್ ಮಾಡಿದ್ದೇನೆ ಎಂದು ಸುಳ್ಳು ಹೇಳಿದ್ದಾಳೆ. ಆರಾಧನಾ ಮಾತನ್ನು ನಂಬಿದ ಆರ್ಯ, ಅನುಳನ್ನು ನೋಡಲು ಹೋಗದೇ, ಆರಾಧನಾ ಜೊತೆಗೆ ಊಟಕ್ಕೆ ಹೋಗುತ್ತಾನೆ. ಆರಾಧನಾ ಈಗ ಅನು ಮತ್ತು ಆರ್ಯನನ್ನು ದೂರ ಮಾಡಿ ವಿಲನ್ ಆಗುತ್ತಾಳಾ ಎಂಬ ಪ್ರಶ್ನೆ ಎದ್ದಿದೆ.


Click it and Unblock the Notifications











