ಸಂಜುನನ್ನು ನಂಬುತ್ತಿರುವ ಹರ್ಷವರ್ಧನ್ ಮತ್ತೆ ಬದುಕಿನಲ್ಲಿ ಮೋಸ ಹೋಗುತ್ತಾನಾ..?

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ಆಫೀಸಿನಿಂದ ಮನೆಗೆ ಬಂದಿದ್ದಾಳೆ. ಅನು ಆಫೀಸಿಗೆ ಹೋಗಿದ್ದಕ್ಕೆ ಪುಷ್ಪಾ ಸುಬ್ಬುಗೆ ಹೇಳಿದ್ದಾಳೆ. ಹೀಗಾಗಿ ಹೆದರಿಕೊಂಡು ಮನೆಗೆ ಬಂದ ಸುಬ್ಬು, ಅನುಳನ್ನು ಆಫೀಸಿಗೆ ಕಳಿಸಬಾರದಿತ್ತು ಎಂದು ಕೇಳುತ್ತಾನೆ. ಅದಕ್ಕೆ ಅನು ಆಫೀಸಿನಲ್ಲಿ ನಡೆದ ಘಟನೆ ಬಗ್ಗೆ ಹೇಳುತ್ತಾಳೆ.

ನಾನು ಆಫೀಸಿಗೆ ಹೋಗಲೇ ಬೇಕಾಗಿತ್ತು. ಅಲ್ಲದೇ, ನಾನು ಹೋಗುವುದರಲ್ಲಿ, ಸಂಜು ಅವರೇ ಅಲ್ಲಿದ್ದ ಸಮಸ್ಯೆಯನ್ನು ಸುಲಭವಾಗಿ ಬಗೆ ಹರಿಸಿದ್ದರು. ನಾನು ಆಫಿಸಿಗೆ ಸುಮ್ಮನೆ ಹೋದ ಹಾಗಅಯ್ತು ಅಷ್ಟೇ. ನನಗೆ ಯಾವುದೇ ಶ್ರಮವಾಗಲಿಲ್ಲ ಎಂದು ಹೇಳುತ್ತಾಳೆ.

ಇನ್ನು ಈ ಸಮಯದಲ್ಲಿ ನೀನು ರೆಸ್ಟ್ ಮಾಡಬೇಕು ಎಂದು ಪುಷ್ಪಾ ಹಾಗೂ ಸುಬ್ಬು ಇಬ್ಬರೂ ಹೇಳುತ್ತಾರೆ. ಆಗ ಅನು ಡಾಕ್ಟರ್ ಹೇಳಿರುವುದು ಸುಸ್ತಾದಾಗ ರೆಸ್ಟ್ ಮಾಡುವುದಕ್ಕೆ. ನಾನೀಗ ಅರಾಮವಾಗಿದ್ದೀನಿ ಎಂದು ಹೇಳುತ್ತಾಳೆ.

ಬೇಸರ ಮಾಡಿಕೊಂಡ ಅನು

ಬೇಸರ ಮಾಡಿಕೊಂಡ ಅನು

ಸಂಜು ಆಫೀಸಿನಿಂದ ಮನೆಗೆ ಬಂದಾಗ, ಶಾರದಾ ಆತನನ್ನು ವಿಚಾರಿಸುತ್ತಾಳೆ. ಆದರೆ ಸಂಜು ತನ್ನ ಬಗ್ಗೆ ಮಾತನಾಡುವ ಬದಲು, ಅನು ಅವರು ಸೇಫ್ ಆಗಿ ಮನೆ ತಲುಪಿದರಾ ಇಲ್ವಾ ಗೊತ್ತಾಗಲಿಲ್ಲ. ನನ್ನ ಬಳಿ ಫೋನ್ ಇಲ್ಲ ಎಂದು ಹೇಳುತ್ತಾನೆ. ಆಗ ಶಾರದಾ ಅನುಗೆ ಫೋನ್ ಮಾಡಿ ಮಾತನಾಡುತ್ತಾಳೆ. ಅನು ತಾನು ಸೇಫ್ ಆಗಿ ಮನೆ ತಲುಪಿದೆ ಎಂದು ಹೇಳುತ್ತಾಳೆ. ಆಗ ಶಾರದಾ ತನ್ನ ಬಗ್ಗೆ ಸಂಜು ತೋರಿದ ಕಾಳಜಿಯನ್ನು ಹೇಳುತ್ತಾಳೆ. ಇದರಿಂದ ಅನು ಸ್ವಲ್ಪ ಬೇಸರ ಮಾಡಿಕೊಳ್ಳುತ್ತಾಳೆ.

ಸಂಜು ರೀತಿಗೆ ಸೋತ ಸುಬ್ಬು

ಸಂಜು ರೀತಿಗೆ ಸೋತ ಸುಬ್ಬು

ಇನ್ನು ಸಂಜು ಆಫೀಸಿನಲ್ಲಿ ಸಮಸ್ಯೆ ಬಗೆಹರಿದ ರೀತಿ ಕೇಳಿ, ಜೊತೆಗೆ ಅನು ಬಗ್ಗೆ ಕಾಳಜಿ ತೋರಿದ ಬಗ್ಗೆ ಸುಬ್ಬು ಗಮನ ಹರಿಸಿದ್ದು, ಸಂಜು ಎಷ್ಟು ಒಳ್ಳೆಯ ಹುಡುಗ ಎಂದಿದ್ದಾನೆ. ಅಲ್ಲದೇ, ಪುಷ್ಪಾ ಬಳಿ ಮಾತನಾಡುತ್ತಾ, ಸಂಜು ಅವರಿಗೆ ಏನೂ ನೆನಪಿಲ್ಲ ಎಂದರೂ ಕೂಡ. ಅವರನ್ನು ನೋಡಿದಾಗಲೆಲ್ಲಾ ಏನೋ ಒಂದು ರೀತಿ ಹತ್ತಿರವೆನಿಸುತ್ತಾರೆ ಎಂದು ಸುಬ್ಬು ಹೇಳುತ್ತಾನೆ. ಈ ಮಾತನ್ನು ಕೇಳಿಸಿಕೊಳ್ಳುವ ಅನು ಏನನ್ನೂ ಮಾತನಾಡುವುದಿಲ್ಲ.

ಮಾನ್ಸಿಯನ್ನು ಅತ್ತಿಗೆ ಎಂದ ಸಂಜು

ಮಾನ್ಸಿಯನ್ನು ಅತ್ತಿಗೆ ಎಂದ ಸಂಜು

ಇನ್ನು ಮಾನ್ಸಿಗೆ ಆಫಿಸಿನಲ್ಲಿ ನಡೆದ ಘಟನೆಯಿಂದಾಗಿ ಅವಮಾನವಾಗಿದೆ. ಇನ್ನು ಸಂಜು ಆಫಿಸಿನಲ್ಲಿ ಸಮಸ್ಯೆ ಬಗೆಹರಿಸಲು ಮಾಡಿದ ಪ್ಲಾನ್ ನಿಂದ ಮಾನ್ಸಿ ಕೋಪ ಹೆಚ್ಚಾಗಿದೆ. ಇದರಿಂದ ಆಫಿಸಿನಿಂದ ಮನೆಗೆ ಬಂದ ಮಾನ್ಸಿ ಯಾರ ಜೊತೆಗೂ ಮಾತನಾಡುತ್ತಿರಲಿಲ್ಲ. ಇನ್ನು ಎಲ್ಲರೂ ಊಟಕ್ಕೆ ಹೋಗುವಾಗ ಹರ್ಷ ನಿಮ್ಮ ಜೊತೆಗೆ ಮಾತನಾಡಬೇಕು ಬ್ರೋ ಎಂದು ಸಂಜುಗೆ ಹೇಳುತ್ತಾನೆ. ಇದೇ ವೇಳೆಗೆ ಬರುವ ಮಾನ್ಸಿ ಕೋಪದಲ್ಲೇ ನನ್ನ ಬಿಟ್ಟು ಊಟಕ್ಕೆ ಹೊರಟೆಯ ಹರ್ಷ ಎಂದು ಹೇಳುತ್ತಾಳೆ. ಈ ಮಅತುಗಳ ನಡುವೆ ಸಂಜು ಮಾನ್ಸಿ ಅನ್ನು ನನ್ನನ್ನು ಕ್ಷಮಿಸಿ ಅತ್ತಿಗೆ. ಇಷ್ಟಕ್ಕೆಲ್ಲಾ ನಾನೇ ಕಾರಣ ಎಂದಾಗ ಮಾನ್ಸಿ ಶಾಕ್ ಆಗುತ್ತಾಳೆ.

ಮಾನ್ಸಿ ಶಾರದಾ ದೇವಿಗೆ ಹೇಳಿದ್ದೇನು..?

ಮಾನ್ಸಿ ಶಾರದಾ ದೇವಿಗೆ ಹೇಳಿದ್ದೇನು..?

ಇನ್ನು ಊಟವಾದ ಮೇಲೆ ಸಂಜು ಮತ್ತು ಹರ್ಷ ಇಬ್ಬರು ಸ್ವಲ್ಪ ಹೊತ್ತು ಮಾತನಾಡುತ್ತಾರೆ. ತನ್ನ ವೀಕ್ ನೆಸ್ ಹಾಗೂ ಪ್ಲಸ್ ಎರಡೂ ಮಾನ್ಸಿ ಮತ್ತು ದಾದ ಎಂದು ಮನದ ನೋವನ್ನು ಇಂಡೈರೆಕ್ಟ್ ಆಗಿ ಹೇಳಿಕೊಳ್ಳುತ್ತಾನೆ. ಇನ್ನು ಬೆಳಗೆದ್ದು, ಸಂಜು ನನ್ನು ವರ್ಕೌಟ್ ಗೆ ಕರೆದುಕೊಂಡು ಹೋಗುತ್ತಾನೆ. ಇದನ್ನೆಲ್ಲಾ ಗಮನಿಸುವ ಮಾನ್ಸಿ ಶಾರದಾ ಬಳಿ, ಮಾತನಾಡುತ್ತಾಳೆ. ಹರ್ಷ ಹೀಗೆ ಸಂಜುನ ಹಚ್ಚಿಕೊಂಡರೆ, ಮುಂದೆ ಅವನಿಗೆ ಕಷ್ಟ ಎಂದು ವಾರ್ನ್ ಮಾಡುತ್ತಾಳೆ. ಮಾನ್ಸಿ ವಾರ್ನಿಂಗ್ ಕೊಡುವುದಕ್ಕೆ ಕಾರಣವೇಣು ಎಂದು ಮುಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.

More from Filmibeat

English summary
Mansi is worried about Harsha’s behavior. And she warns Sharadamma about Sanju and Harsha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X