Jothe Jotheyali: ವರ್ಧನ್ ಗ್ರೂಪ್ಸ್‌ಗೆ ರಿಸೈನ್ ಮಾಡಲಿರುವ ಆರ್ಯ

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನುಗೆ ಎಷ್ಟು ಸಲ ಆರ್ಯನಿಗೆ ಫೋನ್ ಮಾಡಿದರೂ ಕೂಡ ಆರ್ಯ ರಿಸೀವ್ ಮಾಡುತ್ತಿಲ್ಲ. ಜಗಳವಾಡಿಕೊಂಡು ಮನೆಬಿಟ್ಟು ಹೋಗಿದ್ದಾನೆ. ಆರ್ಯ ಹೋಗಿ ಒಂದು ದಿನವಾದರೂ ಇನ್ನೂ ಆರ್ಯ, ಅನುಗೆ ಫೋನ್ ಮಾಡಿಲ್ಲ. ಇದರಿಂದ ಅನು ಬೇಸರ ಮಾಡಿಕೊಂಡಿದ್ದಾಳೆ. ಆರ್ಯ ಸರ್ ತುಂಬಾ ಕೋಪ ಮಾಡಿಕೊಂಡಿದ್ದಾರೆ ಎಂದು ಬೇಸರ ಮಾಡಿಕೊಂಡಿದ್ದಾರೆ.

ಆರ್ಯ ಮತ್ತೆ ಮನೆಗೆ ಬರುತ್ತಾರೋ ಇಲ್ಲ ಝೇಂಡೇ ಜೊತೆಗೆ ಉಳಿದುಕೊಳ್ಳುತ್ತಾರೋ ಎಂದು ಯೋಚಿಸುತ್ತಿರುತ್ತಾಳೆ. ಇದೇ ಬೇಸರದಲ್ಲಿರುತ್ತಾಳೆ. ಇದೇ ವೇಳೆಗೆ ರೂಮಿಗೆ ಪುಷ್ಪಾ ಬಂದು ಅನುಗೆ ಟೀ ಕೊಡುತ್ತಾಳೆ. ಅನು, ಪುಷ್ಪಾಳಿಗೆ ವಠಾರಕ್ಕೆ ಹೋಗಿ ಎಂದು ಹೇಳುತ್ತಾಳೆ. ಆದರೆ, ಅನು ಮಾತನ್ನು ಒಪ್ಪದ ಪುಷ್ಪಾ ನೀನು ನನ್ನ ಜೊತೆಗೆ ಬಾ ಎನ್ನುತ್ತಾಳೆ.

Jothe Jotheyali Serial 25th April episode written update

ಇದೇ ವೇಳೆಗೆ ಸುಬ್ಬು ಕೂಡ ಬರುತ್ತಾನೆ. ನೀನು ಇಲ್ಲೇ ಸುಖವಾಗಿ ಇರುತ್ತೀಯಾ. ನಮ್ಮ ವಠಾರದಲ್ಲಿ ಬಯಸಿದ್ದೆಲ್ಲವೂ ಸಿಗುವುದಿಲ್ಲ. ನೀನು ಒಪ್ಪಿದರೆ, ಅಳಿಯಂದಿರು ಬರುವವರೆಗೂ ನಾವು ಕೂಡ ಇಲ್ಲೇ ಇರುತ್ತೀವಿ ಎಂದು ಹೇಳುತ್ತಾನೆ. ಈ ಮಾತಿಗೆ ಅನು ಇಲ್ಲ ನೀವು ಆರಾಮಾಗಿ ವಠಾರದಲ್ಲಿ ಇರಿ. ಏನಾದರೂ ಅವಶ್ಯಕತೆ ಇದ್ದರೆ ಕರೆ ಮಾಡುತ್ತೀನಿ ಎಂದು ಹೇಳಿ ಕಳಿಸುತ್ತಾಳೆ.

ಇತ್ತ ಆರ್ಯ, ಅನು ಫೋನ್ ಬಂದಾಗಲೆಲ್ಲಾ ಇರಿಟೇಟ್ ಮಾಡಿಕೊಳ್ಳುತ್ತಾನೆ. ನಾನು ನನ್ನ ಬದುಕನ್ನು ಮೊದಲಿನಂತೆ ನಡೆಸಬೇಕು. ನಾನು ಅನುಳನ್ನು ವಠಾರದ ಹುಡುಗಿ ಎಂದು ನಂಬಿ ಮೋಸ ಹೋದೆ. ನಾನು ಅವಳನ್ನು ತುಂಬಾ ನಂಬಿ ಬಿಟ್ಟೆ. ಅನು, ರಾಜನಂದಿನಿ ಎಂದು ಸುಳ್ಳು ಹೇಳಿ ಎಲ್ಲರನ್ನೂ ನಂಬಿಸಿದ್ದಾಳೆ. ಆದರೆ, ಯಾವುದೇ ಕಾರಣಕ್ಕೂ ನನ್ನನ್ನು ನಂಬಿಸಲು ಸಾಧ್ಯವಿಲ್ಲ. ರಾಜನಂದಿನಿ ಬದುಕಿದ್ದರೆ, ಈಗ ಅವಳಿಗೆ 40ಕ್ಕೂ ಅಧಿಕ ವಯಸ್ಸಾಗುತ್ತಿತ್ತು. ರಾಜನಂದಿನಿ ಎಲ್ಲಿ, ಇವಳೆಲ್ಲಿ ಎಂದು ಹೇಳುತ್ತಾನೆ. ಝೇಂಡೇಗೆ ಆರ್ಯನ ಮಾತುಗಳನ್ನು ಕೇಳಿ ಖುಷಿಯಾಗುತ್ತದೆ.

ಇನ್ನು ಆರ್ಯ ವರ್ಕೌಟ್ ಮಾಡುವಾಗ ತಿಂಡಿ ತೆಗೆದುಕೊಂಡು ಬರುತ್ತಾನೆ. ಹೀಗೆ ಮಾತನಾಡುತ್ತಾ ಆರ್ಯ ನಾನು ಮೊದಲು ವರ್ಧನ್ ಕಂಪನಿಗೆ ರಿಸೈನ್ ಮಾಡುತ್ತೇನೆ. ನನ್ನ ಬದುಕನ್ನು ಮೊದಲಿನಿಂದ ಆರಂಭಿಸುತ್ತೇನೆ. ಖಾಲಿ ಕೈನಲ್ಲಿ ಊರೂರು ಅಲೆಯುತ್ತಾ ಬಿಟ್ಟಿ ಅನ್ನ ತಿನ್ನುತ್ತಾ ತಿರುಗಾಡುವುದೇ ಸುಖ ಎಂದು ಹೇಳುತ್ತಾನೆ. ಝೇಂಡೇಗೆ ಈ ಮಾತುಗಳನ್ನು ಕೇಳಿ ಶಾಕ್ ಆಗುತ್ತದೆ. ಆದರೆ, ಆರ್ಯ ಹೇಳುತ್ತಿರುವುದು ಎಷ್ಟು ಸತ್ಯ ಎಂಬುದು ಗೊತ್ತಾಗುವುದಿಲ್ಲ.

Jothe Jotheyali Serial 25th April episode written update

ಇನ್ನು ಆರ್ಯ, ಝೇಂಡೇನ ಶಾಪಿಂಗ್ ಮಾಲ್‌ಗೆ ಕರೆದುಕೊಂಡು ಹೋಗಿ ಬಟ್ಟೆಗಳನ್ನು ಖರೀದಿಸುತ್ತಾನೆ. ಝೇಂಡೇ ಈಗ ಇದೆಲ್ಲಾ ಯಾಕೆ ಎಂದು ಕೇಳಿದರೆ ನೀನು ಮೊದಲು ಬಿಲ್ ಕಟ್ಟು. ನನ್ನ ಹಣ ನಿನ್ನ ಬಳಿ ಇದೆಯಲ್ಲಾ. ನಂತರ ನಾನು ಕಂಪನಿಗೆ ರಿಸೈನ್ ಮಾಡುತ್ತೇನೆ ಎಂದು ಹೇಳುತ್ತಾನೆ. ಸೈಡ್‌ಗೆ ಬಂದು ಮೀರಾಳಿಗೆ ಫೋನ್ ಮಾಡುತ್ತಾನೆ.

ಮೀರಾ ಬಳಿ ಅನು ಬಗ್ಗೆ ಎಚ್ಚರಿಕೆಯಿಂದ ಇರು. ಅವಳಿಗೆ ನೋವಾಗದಂತೆ ನೋಡಿಕೋ. ಸದ್ಯ ನಮ್ಮ ಕಂಪನಿ ಲಾಸ್ ನಲ್ಲಿದೆ. ಕಂಪನಿಯ ಶೇರ್ ಗಳನ್ನು ಝೇಂಡೇ ವಶಕ್ಕೆ ಪಡೆದುಕೊಂಡಿದ್ದು, ಅದನ್ನೆಲ್ಲಾ ವಾಪಸ್ ತೆಗೆದುಕೊಳ್ಳುವವರೆಗೂ ನಾನು ಯಾರಿಗೂ ಸಿಗುವುದಿಲ್ಲ. ವರ್ಧನ್ ಕಂಪನಿಗೆ ರಿಸೈನ್ ಮಾಡುತ್ತೇನೆ ಎಂದು ಝೇಂಡೇ ಬಳಿ ಹೇಳಿದ್ದೇನೆ. ನಾನು ಬರುವವರೆಗೂ ಅನುಳನ್ನು ಹುಷಾರಾಗಿ ನೋಡಿಕೋ ಎಂದು ಹೇಳುತ್ತಾನೆ. ಆರ್ಯನ ಈ ನಡೆ ನೋಡಿದರೆ, ಈಗ ಆತ ಮಾತ್ತಿರುವುದೆಲ್ಲಾ ನಾಟಕ ಎಂಬುದು ತಿಳಿಯುತ್ತಿದೆ.

More from Filmibeat

English summary
Jothe Jotheyali Serial 25th April episode written update. here is detials about Arya is acting in front of Jhende. He is planning to teach lesson for jhende. Meera knows the truth. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X