Jothe Jotheyali: ಆರಾಧನಾ ನಡೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಹರ್ಷ

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಝೇಂಡೇ, ಅನು ವಿರುದ್ಧ ಸಿಡಿದೆದ್ದಿದ್ದು, ವರ್ಧನ್ ಗ್ರೂಪ್ಸ್‌ನ ಭಂಡಾರವನ್ನು ದೋಚಿದ್ದಾನೆ. ಆದರೆ, ಈ ಬಗ್ಗೆ ಕಂಪನಿಗೆ ಮಾಹಿತಿಯೇ ಸಿಗದಂತೆ ಕೋಟಿಗಟ್ಟಲೆ ಹಣವನ್ನು ಲಪಟಾಯಿಸಿದ್ದಾನೆ. ಆರ್ಯನನ್ನು ಕೂಡ ತನ್ನತ್ತ ಸೆಳೆದುಕೊಳ್ಳಲು ಹಲವು ಬಾರಿ ಪ್ರಯತ್ನಿಸಿದ್ದಾನೆ. ಆರ್ಯನನ್ನು ಪದೇ ಪದೇ ಕಿಡ್ನ್ಯಾಪ್ ಮಾಡುವುದು ಸೇರಿದಂತೆ ಅನುಳನ್ನು ಪದೇ ಪದೇ ಕಾಡುವ ಪ್ರಯತ್ನ ಮಾಡಿದ್ದಾನೆ.

ಹೇಗಾದರೂ ಸರಿ ಅನುಗೆ ತೊಂದರೆಯಾಗಬೇಕು ಎಂದು ಝೆಂಡೇ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡಿದ್ದಾನೆ. ಆದರೆ, ಪ್ರತಿ ಬಾರಿಯೂ ಅನು ತನ್ನ ಯುಕ್ತಿಯಿಂದ ಸಮಾಧಾನಕರವಾಗಿಯೇ ಗೆದ್ದಿದ್ದಾಳೆ. ಇದೀಗ ಅಂತಹದ್ದೇ ಮತ್ತೊಂದು ಪರೀಕ್ಷೆಯನ್ನು ಅನು ಎದುರಿಸುತ್ತಿದ್ದಾಳೆ. ಆದರೆ ಈ ಬಾರಿ ಅನು ಕೊಂಚ ಜಾಸ್ತಿ ಸಂಕಷ್ಟದಲ್ಲಿ ಸಿಲುಕಿದ್ದು, ಈಗ ಹೇಗೆ ಪಾರಾಗುತ್ತಾಳೋ ಗೊತ್ತಿಲ್ಲ.

Jothe Jotheyali Serial 26th April episode written update

ಒಂದು ಕಡೆ ತಾನು ತಾಯಿ ಅಲ್ಲ ಎಂಬ ಸತ್ಯದ ಅರಿವಾಗಿದ್ದು, ಈಗ ಆರ್ಯ ಸರ್ ತನ್ನಿಂದ ದೂರಾಗಿರುವುದರಿಂದ ಕೊಂಚ ಕುಗ್ಗಿದ್ದಾಳೆ. ಆದರೆ, ಝೇಂಡೇಯ ಆಟಕ್ಕೆ ಆರ್ಯ ಸೆಡ್ಡು ಹೊಡೆದಿದ್ದು, ಪ್ರಾಣ ಸ್ನೇಹಿತನ ಕುತಂತ್ರವನ್ನು ಎದುರಿಸಲು ಮುಂದಾಗಿದ್ದಾನೆ. ಈ ಬಾರಿ ಅನುಳಿಂದ ದೂರ ಉಳಿದು, ಝೇಂಡೇ ಜೊತೆಗೆ ಇದ್ದುಕೊಂಡು ಹೊಸ ಸಾಹಸಕ್ಕೆ ಕೈ ಹಾಕಿದ್ದಾನೆ. ಇದರಲ್ಲಿ ಯಾರು ಗೆಲ್ಲುತ್ತಾರೆ ಎಂಬ ಪ್ರಶ್ನೆ ಎದುರಾಗಿದೆ.

ಅನು ಒಬ್ಬಳೇ ಮನೆಯಲ್ಲಿ ತನ್ನ ಕೆಲಸಗಳನ್ನು ಮಾಡಿಕೊಳ್ಳಲಾಗದೇ ಒದ್ದಾಡುತ್ತಿರುತ್ತಾಳೆ. ಈ ವೇಳೆಗೆ ಮಾನ್ಸಿ ಬಂದು ಅನುಗೆ ಸಹಾಯ ಮಾಡುತ್ತಾಳೆ. ಇನ್ನು ಹರ್ಷ ಆಫಿಸಿಗೆ ಹೊರಟಿರುತ್ತಾನೆ. ಇದೇ ಸಮಯಕ್ಕೆ ಆರಾಧನಾ ಕೂಡ ಆಫಿಸಿಗೆ ಹೊರಡುತ್ತೇನೆ ಎಂದು ಶಾರದಾ ಬಳಿ ಹೇಳುತ್ತಾಳೆ. ಆರಾಧನಾ ಹೊರಟ ಮೇಲೆ ಹರ್ಷ ಮತ್ತು ಶಾರದಾ ಮಾತನಾಡಿಕೊಳ್ಳುತ್ತಾರೆ.

Jothe Jotheyali Serial 26th April episode written update

ಸಂಜೀವಿನಿ ಮತ್ತು ಭಾವನಾ ಮನೆಯಿಂದ ಹೋದರೂ ಕೂಡ ಆರಾಧನಾ ಇಲ್ಲೇ ಉಳಿದುಕೊಂಡಿರುವುದು ಅನುಮಾನ ಬರುತ್ತಿದೆ. ಆರಾಧನಾ ಕಂಪನಿ ಮರ್ಜ್ ಆಗಿದೆ ಎಂಬ ಒಂದೇ ಕಾರಣ ಕೊಟ್ಟು ಉಳಿದಿರುವುದು ಸದ್ಯ ಮನೆಯವರಿಗೆಲ್ಲರಿಗೂ ಅನುಮಾನ ಸೃಷ್ಟಿ ಮಾಡಿದೆ. ಆರಾಧನಾ ಯಾವ ಕಾರಣಕ್ಕಾಗಿ ಇಲ್ಲಿ ಉಳಿದುಕೊಂಡಿದ್ದಾಳೆ ಎಂಬುದು ಯಾರಿಗೂ ಗೊತ್ತಿಲ್ಲ.

ಇನ್ನು ಆಫಿಸಿನಲ್ಲಿ ಮೀರಾ ಅರ್ಜೆಂಟ್ ಆಗಿ ಮೀಟಿಂಗ್ ಅನ್ನು ಅರೇಂಜ್ ಮಾಡಿರುತ್ತಾಳೆ. ಅಲ್ಲಿ ಎಲ್ಲರಿಗೂ ಸಿಇಒ ಪೋಸ್ಟ್‌ಗೆ ಆರ್ಯ ಸರ್ ರಿಸೈನ್ ಮಾಡಿದ್ದಾರೆ ಎಂದು ಹೇಳುತ್ತಾಳೆ. ಇದಕ್ಕೆ ಎಲ್ಲರೂ ಕಾರಣವನ್ನು ಕೇಳುತ್ತಾರೆ. ಅಲ್ಲದೇ, ಆರ್ಯ ಸರ್ ಇಲ್ಲ ಎಂದರೆ ನಾವೂ ಕೆಲಸ ಮಾಡುವುದಿಲ್ಲ. ಅವರು ಬೇರೆ ಕಂಪನಿಯನ್ನು ಶುರು ಮಾಡಿದರೆ ನಾವು ಕೂಡ ಅಲ್ಲಿಗೆ ಹೋಗುತ್ತೇವೆ. ಆರ್ಯ ಸರ್ ಇಲ್ಲದ ಕಂಪನಿಯಲ್ಲಿ ನಾವು ಇರುವುದಿಲ್ಲ ಎಂದು ಹೇಳುತ್ತಾರೆ.

Jothe Jotheyali Serial 26th April episode written update

ಆಗ ಆರಾಧನಾ, ಆರ್ಯ ಸರ್‌ಗೆ ಬ್ರೇಕ್ ಬೇಕಿದೆ. ಅದಕ್ಕಾಗಿಯೇ ಅವರು ರಿಸೈನ್ ಮಾಡಿದ್ದಾರೆ. ಸ್ವಲ್ಪ ಸಮಯ ಆದ ಮೇಲೆ ಎಲ್ಲವೂ ಸರಿ ಹೋಗುತ್ತೆ ಎಂದು ಸಮಾಧಾನ ಮಾಡುತ್ತಾಳೆ. ಇನ್ನು ಆರ್ಯ ಕೆಲಸ ಹುಡುಕಿಕೊಂಡು ಹೊರಡುತ್ತಾನೆ. ಆರ್ಯನ ನಡೆ ಝೇಂಡೇಗೆ ಗೊಂದಲ ಸೃಷ್ಟಿಸುತ್ತದೆ. ಆರ್ಯ ಏನು ಮಾಡುತ್ತಿದ್ದಾನೆ ಎಂಬುದೇ ತಿಳಿಯುವುದಿಲ್ಲ. ಮನೆಯಿಂದ ಹೊರಗೆ ಬರುವ ಆರ್ಯ, ಮೀರಾಳಿಗೆ ಫೋನ್ ಮಾಡುತ್ತಾನೆ.

ನಾನು ರಿಸೈನ್ ಮಾಡಿರುವ ವಿಚಾರವನ್ನು ಎಲ್ಲರಿಗೂ ತಿಳಿಸಿ ನಂತರ ನೀನು ಹೊಸ ಸಿಇಒ ಯಾರೆಂಬುದನ್ನು ಅನೌನ್ಸ್ ಮಾಡು ಎನ್ನುತ್ತಾನೆ. ಆಗ ಮೀರಾ ಅನುಗೆ ಕಷ್ಟ ಆಗುತ್ತಿದೆ. ಅವಳ ಜೊತೆಗೆ ಫೋನ್‌ನಲ್ಲಿಯಾದರೂ ಮಾತನಾಡಿ ಎಂದು ಕೇಳುತ್ತಾಳೆ. ಇದಕ್ಕೆ ಆರ್ಯ ಅದು ಸದ್ಯಕ್ಕೆ ಆಗುವುದಿಲ್ಲ ಎನ್ನುತ್ತಾನೆ. ಇನ್ನು ಹೊಸ ಸಿಇಒ ಝೇಂಡೇ ಎಂದು ಅನೌನ್ಸ್ ಮಾಡುತ್ತಾರಾ ಎಂಬ ಅನುಮಾನ ಮೂಡಿದೆ.

More from Filmibeat

English summary
Jothe Jotheyali Serial 26th April episode written update. Here is Detials about Arya is acting in front of jhende. He has resigned for vardhan groups CEO post. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X