Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವರ್ಧನ್ ಕಂಪನಿಯಲ್ಲಾದ ಸಮಸ್ಯೆಗೆ ಮೀರಾ ಕಾರಣ: ಆತ್ಮಹತ್ಯೆ ಮಾಡಿಕೊಂಡಳಾ ಆರಾಧನಾ..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಝೇಂಡೇ ಮತ್ತು ಸಂಜು ಇಬ್ಬರೂ ಒಂದಾಗಿದ್ದಾರೆ. ಇದನ್ನು ನೋಡಿದ ಕರುಣಾಕರ ಹೊಟ್ಟೆ ಉರಿದುಕೊಂಡು ರಮ್ಯಾ ಬಳಿ ಹೇಳಿಕೊಂಡಿದ್ದಾನೆ. ಆದರೆ, ಕರುಣಾಕರನ ಮೆಸೇಜ್‌ಗೆ ರಮ್ಯಾ ಏನೂ ಹೇಳಿಲ್ಲ.
ಹೀಗಾಗಿ ರಮ್ಯಾ ಆಫೀಸಿಗೆ ಹೋಗುವಾಗ ಕರುಣಾಕರ ಬಂದು ಮಾತನಾಡಿಸುತ್ತಾನೆ. ನಾವು ಮದುವೆಯಾಗೋಣ. ಅವತ್ತು ಜಗಳ ಮಾಡಿ ನಮ್ಮ ಎಂಗೇಜ್‌ಮೆಂಟ್ ಹಾಳು ಮಾಡಿದವರೇ ಚೆನ್ನಾಗಿದ್ದಾರೆ ಎಂದು ಹೇಳುತ್ತಾನೆ. ಇದಕ್ಕೂ ರಮ್ಯಾ ಏನೂ ಮಾತನಾಡುವುದಿಲ್ಲ.
ಸತ್ಯ
ಮಾಡಿದ
ಕೆಲಸದಿಂದ
ಕಾರ್ತಿಕ್
ಬಚಾವ್:
ಕೀರ್ತನಾ
ಗ್ರಹಚಾರ
ನೆಟ್ಟಗಿಲ್ಲ..!
ಆಗ ಕರುಣಾಕರ ನಿಮ್ಮಂತ ಹುಡುಗಿಯನ್ನು ಮಿಸ್ ಮಾಡಿಕೊಳ್ಳಲು ಇಷ್ಟವಿಲ್ಲ ಎಂದು ಹೇಳುತ್ತಾನೆ. ರಮ್ಯಾ ನಾನೇನು ಹೇಳೋಕೆ ಆಗಲ್ಲ ಎಂದು ಹೇಳಿ ಆಫೀಸಿಗೆ ಹೋಗಬೇಕು. ಸಂಜೆ ಸಿಗುತ್ತೀನಿ ಎಂದು ಅಲ್ಲಿಂದ ಹೊರಟು ಬಿಡುತ್ತಾಳೆ.

ನಾಪತ್ತೆಯಾಗಿರುವ ಝೇಂಡೇ
ಇತ್ತ ವರ್ಧನ್ ಆಫೀಸಿನಲ್ಲಿ ಎಡವಟ್ಟಾಗಿದೆ. ಆಫೀಸಿನ ಬ್ಯಾಂಕ್ ಅಕೌಂಟ್ ಕ್ಲೋಸ್ ಆಗಿದ್ದು, ಕೊಟ್ಟಿರುವ ಚೆಕ್‌ಗಳೆಲ್ಲವೂ ಬೌನ್ಸ್ ಆಗುತ್ತಿದೆ. ಇದರಿಂದ ಎಲ್ಲರೂ ಗಾಬರಿಯಾಗಿದ್ದಾರೆ. ಆದರೆ, ಈ ಕೆಲಸವೆಲ್ಲಾ ಝೇಂಡೇಯದ್ದೇ ಎಂದು ತಿಳಿದಿರುವ ಸಂಜು ಆತನನ್ನು ಹುಡುಕುಕೊಂಡಿ ಹೊರಟಿದ್ದಾನೆ. ಝೇಂಡೇ ಇರುವ ಜಾಗಗಳನ್ನೆಲ್ಲಾ ಹುಡುಕಾಡಿದರೂ ಝೇಂಡೇ ಎಲ್ಲೂ ಕಾಣಿಸುವುದಿಲ್ಲ. ಝೇಂಡೇ ಎಲ್ಲಾ ನಿನಗಾಗಿ ಎಂದು ಹೇಳುತ್ತಾ ಎಲ್ಲರಿಗೂ ಮೋಸ ಮಾಡುತ್ತಿದ್ದಾನೆ. ಸಂಸ್ಥೆಗೆ ದ್ರೋಹ ಮಾಡಿದ್ದಾನೆ. ಅವನು ಸಿಕ್ಕರೆ, ಈಗ ಆಫೀಸಿನಲ್ಲಿ ಆಗಿರುವ ಸಮಸ್ಯೆಗಳೆಲ್ಲಾ ಸರಿ ಹೋಗುತ್ತದೆ ಎಂದು ಹುಡುಕುತ್ತಾನೆ. ಆದರೆ ಝೇಂಡೇ ಎಲ್ಲೂ ಕಾಣಿಸುವುದಿಲ್ಲ.

ಬ್ಯಾಂಕ್ ಅಕೌಂಟ್ ಕ್ಲೋಸ್
ಶಾರದಾ ಬಳಿ ಬಂದು ಝೇಂಡೇ ಒಂದು ಫೈಲ್‌ಗೆ ಸಹಿ ಹಾಕಿಸಿಕೊಂಡು ಹೋಗಿರುತ್ತಾನೆ. ಇದರ ನೆನಪು ಮಾಡಿಕೊಂಡ ಅನು, ಝೇಂಡೇ ಏನೋ ಕಿತಾಪತಿ ಮಾಡಿದ್ದಾನೆ. ಆ ಫೈಲ್ ನೋಡಿದರೆ, ಎಲ್ಲವೂ ಸರಿ ಹೋಗುತ್ತದೆ ಎಂದು ಶಾರದಾ ಬಳಿ ಆ ಫೈಲ್ನ ಕಾಪಿ ಕೊಡಲು ಕೇಳುತ್ತಾಳೆ. ಆದರೆ, ಶಾರದಾ ಅದು ತನ್ನ ಬಳಿ ಇಲ್ಲ ಎಂದು ಹೇಳುತ್ತಾಳೆ. ಇತ್ತ ಬ್ಯಾಂಕ್‌ಗೆ ತೆರಳಿದ ಹರ್ಷ, ಸಮಸ್ಯೆ ಬಗ್ಗೆ ವಿಚಾರಿಸುತ್ತಾನೆ. ಅಲ್ಲಿ ಮ್ಯಾನೇಜರ್, ನಿಮ್ಮ ಅಕೌಂಟ್ ಕ್ಲೋಸ್ ಆಗಿದೆ. ಶಾರದಾ ಅವರು ಕಳಿಸಿದ ರಿಕ್ವೆಸ್ಟ್ ಲೆಟರ್ ಬಂತು. ಹಾಗಾಗಿ ಎಲ್ಲಾ ಅಕೌಂಟ್ ಅನ್ನು ಕ್ಲೋಸ್ ಮಾಡಿದ್ದೇವೆ ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿದ ಹರ್ಷ ಶಾಕ್ ಆಗುತ್ತಾನೆ.

ಆತ್ಮಹತ್ಯೆಗೆ ಯತ್ನಿಸಿದ ಆರಾಧನಾ
ಅನು ಆರಾಧನಾ ಅಳುತ್ತಿರುವುದನ್ನು ಕೇಳಿಸಿಕೊಂಡು, ಸಮಾಧಾನ ಮಾಡುತ್ತಾಳೆ. ಆರಾಧನಾ ತನಗೆ ವಿಶು ಇಲ್ಲದೇ ಇರಲು ಸಾಧ್ಯವಾಗುತ್ತಿಲ್ಲ ಎಂದು ದುಃಖವನ್ನು ಹಂಚಿಕೊಳ್ಳುತ್ತಾಳೆ. ನಂತರ ಅನು ಆಫೀಸಿಗೆ ಹೊರಡುತ್ತಾಳೆ. ಅಷ್ಟರಲ್ಲಿ ಆರಾಧನಾ ರೂಮಿನಿಂದ ಶಬ್ಧವಾಗುತ್ತದೆ. ಓಡಿ ಹೋಗಿ ನೋಡಿದರೆ ಆರಾಧನಾ ಆತ್ಮಹತ್ಯೆಗೆ ಪ್ರಯತ್ನಿಸಿರುತ್ತಾಳೆ. ಇದನ್ನು ನೋಡಿದ ಅನು ಶಾಕ್ ಆಗುತ್ತಾಳೆ. ಅನು, ಶಾರದಾ, ಮಾನ್ಸಿ ಎಲ್ಲರೂ ಆರಾಧನಾಳಿಗೆ ಬೈದು ಬುದ್ಧಿವಾದ ಹೇಳುತ್ತಾರೆ.

ಎಲ್ಲಾ ಕೆಲಸ ಕೆಟ್ಟೋಯ್ತಾ..?
ಹರ್ಷ, ಮೀರಾಗೆ ಫೋನ್ ಮಾಡಿ ಬೈಯುತ್ತಾನೆ. ಬ್ಯಾಂಕ್ ನಲ್ಲಿ ನಮ್ಮ ಅಕೌಂಟ್ ಕ್ಲೋಸ್ ಆಗಿದೆ. ಆದರೆ, ಈ ವಿಚಾರ ನಿನಗೆ ಗೊತ್ತಿಲ್ಲ ಎಂದರೆ ಹೇಗೆ, ಕೋಟ್ಯಾಂತರ ರೂಪಾಯಿ ಕಳ್ಳತನವಾಗಿದೆ ಎಂದು ಬೈಯುತ್ತಾನೆ. ಈ ಮಾತನ್ನು ಕೇಳಿದ ಮೀರಾಗೆ ಇದೆಲ್ಲಾ ಝೇಂಡೇ ಕೆಲಸವೇ ಎಂಬುದು ತಿಳಿಯುತ್ತದೆ. ಅದರಲ್ಲೂ ತಾನೂ ಕೂಡ ಖಾಲಿ ಹಾಳೆಗಳಿಗೆ ಸಹಿ ಹಾಕಿದ್ದನ್ನು ನೆನಪು ಮಾಡಿಕೊಳ್ಳುತ್ತಾಳೆ. ಹಾಗಾಗಿ ಝೇಂಡೇ ಅನ್ನು ಹುಡುಕಿಕೊಂಡು ಹೋಗುವ ಮೀರಾಗೆ ಝೇಂಡೇ ಸಿಗುವುದಿಲ್ಲ. ಝೇಂಡೇ ನಾಪತ್ತೆಯಾಗಿರುತ್ತಾನೆ.