Don't Miss!
- Lifestyle
Horoscope Today 1 Feb 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ವಿವೋ Y100; ಖರೀದಿಗೆ ಕ್ಯೂ ಖಚಿತ!
- News
ಇಂದಿರಾ, ರಾಜೀವ್ ಗಾಂಧಿ ಹತ್ಯೆ ಆಕಸ್ಮಿಕ: ಉತ್ತರಖಂಡ ಸಚಿವ ವಿವಾದ
- Automobiles
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- Sports
ಕೌಂಟಿ ಚಾಂಪಿಯನ್ಶಿಪ್: ಲೂಸಿಸ್ಟರ್ಶೈರ್ ಪರ ಆಡಲಿದ್ದಾರೆ ಅಜಿಂಕ್ಯಾ ರಹಾನೆ
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಂಜು ಕುಡಿದ ಪಾಯಸದಲ್ಲಿ ರಜಿನಿ ವಿಷ ಬೆರೆಸಿದ್ದಳಾ..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ರತ್ನಾಕರ, ರಮ್ಯಾಳನ್ನು ಸೊಸೆ ಮಾಡಿಕೊಳ್ಳಲು ಹೋಗಿ ದೊಡ್ಡ ಸಮಸ್ಯೆಗೆ ಸಿಲುಕಿದ್ದಾನೆ. ಪ್ರೀತಿಯ ಗುಂಗಲ್ಲಿ ಕರುಣಾಕರ ರೆಡ್ಡಿ ಸಂಪಿಗೆಪುರದ ಬಂಗಲೆಯ ರಹಸ್ಯವನ್ನು ರಮ್ಯಾಗೆ ಹೇಳಿದ್ದೇ ದೊಡ್ಡ ತಪ್ಪಾಗಿದೆ.
ಸೀಕ್ರೆಟ್ ಆಗಿರಬೇಕಿದ್ದ ವ್ಯವಹಾರ ಈಗ ಬಯಲಾಗಿದೆ. ರಮ್ಯಾ ವಠಾರದಲ್ಲಿ ಎಲ್ಲರ ಎದುರಿಗೂ ರತ್ನಾಕರ ರೆಡ್ಡಿ ಹಾಗೂ ಝೇಂಡೇ ಮರಿಯಾದಿಯನ್ನು ತೆಗೆದಿದ್ದಾಳೆ. ಇದರಿಂದ ಈಗ ರತ್ನಾಕರ ಇಕ್ಕಟ್ಟಿಗೆ ಸಿಲುಕಿದ್ದಾನೆ.
BBK9:
ಈ
ವಾರದ
ಕ್ಯಾಪ್ಟನ್
ಆದ
ರಾಕೇಶ್:
ತಂದೆ
ನೀಡಿದ
ಸಲಹೆ
ಏನು?
ಝೇಂಡೇ ರತ್ನಾಕರನಿಗೆ ಬೈದಿದ್ದಾನೆ. ನಮ್ಮ ನಡುವೆ ಮಾತ್ರ ಇರಬೇಕಿದ್ದ ರಹಸ್ಯವಾದ ಈ ವ್ಯವಹಾರ ಈಗ ಎಲ್ಲರಿಗೂ ಗೊತ್ತಾಗಿದೆ. ನಿನ್ನ ಜೊತೆ ವ್ಯವಹಾರ ಮಾಡಿದ್ದಕ್ಕೆ ಇಷ್ಟು ವರ್ಷ ಕಾಪಾಡಿಕೊಂಡು ಬಂದಿದ್ದೆಲ್ಲವೂ ಹಾಳಾಯ್ತು ಎಂದು ಬೇಸರ ಮಾಡಿಕೊಂಡಿದ್ದಾನೆ.

ಹೊಸ ಪ್ಲ್ಯಾನ್ ಮಾಡುತ್ತಿರುವ ಝೇಂಡೇ
ರತ್ನಾಕರ ಕ್ಷಮೆ ಕೇಳಿದರೂ ಝೇಂಡೇಗೆ ಈಗ ಅನುಳದ್ದೇ ಯೋಚನೆಯಾಗಿದೆ. ರಮ್ಯಾಗೆ ಈ ವಿಚಾರ ಗೊತ್ತಾಗಿದೆ ಎಂದರೆ, ಅವಳು ಅನುಗೆ ಹೇಳೇ ಹೇಳುತ್ತಾಳೆ. ಆದರೆ ರಮ್ಯಾ ಅನುಗೆ ಹೇಳದಂತೆ ತಡೆಯಬೇಕು. ಅನುಗೆ ಈ ವಿಷಯ ತಿಳಿದರೆ, ಇಷ್ಟು ವರ್ಷದಿಂದ ಕಾಪಾಡಿಕೊಂಡು ಬಂದಿದ್ದೆಲ್ಲವೂ ಸರ್ವನಾಶವಾಗುತ್ತದೆ ಎಂದು ಭಯಗೊಂಡಿದ್ದಾನೆ. ಇದರಿಂದ ಹೊಸ ಪ್ಲ್ಯಾನ್ ಮಾಡಿದ್ದು ಶಾನುಭೋಗರನ್ನು ಕರೆಸಿಕೊಂಡಿದ್ದಾನೆ. ಇಷ್ಟು ವರ್ಷ ನಡೆದ ವ್ಯವಹಾರವೆಲ್ಲವೂ ಶಾನುಭೋಗರಿಂದಲೇ, ಅವರಿಗಾಗಿಯೇ ಎಂಬಂತೆ ಮಾತನಾಡಿ ಶಾಕ್ ಕೊಟ್ಟಿದ್ದಾನೆ. ಇನ್ನು ಮೀರಾಳನ್ನು ಕರೆಸಿಕೊಂಡಿದ್ದಾನೆ. ಆದರೆ, ಝೇಂಡೇ ಹೊಸ ಪ್ಲ್ಯಾನ್ ಏನು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ.
ನೀನು
ನೀನಾಗಿರು
ಎಂದು
ಕಾರ್ತಿಕ್
ಯಾರಿಗೆ
ಹೇಳಿದ್ದು?

ನೀವಂದ್ರೆ ನನಗೆ ಇಷ್ಟವಿಲ್ಲ ಎಂದ ಸಂಜು
ಆರಾಧನಾಳಿಗೆ ಸುಮ್ಮನಿರಲಾಗದೇ ಅವಳು ಸಂಜುಗೆ ಫೋನ್ ಮಾಡಿದ್ದಾಳೆ. ಸಂಜು ಫೋನ್ ರಿಸೀವ್ ಮಾಡಿ ಆರಾಧನಾ ಯಾಕಾದರೂ ಫೋನ್ ಮಾಡಿದಳೋ ಎಂಬಂತೆ ಮಾತನಾಡುತ್ತಾನೆ. ಆರಾಧನಾ ಮಾತ್ರ ತನಗೆ ಪ್ರೀತಿಯಿಂದ ಮಾತನಾಡುತ್ತಾಳೆ. ಇಲ್ಲಿಗೆ ಬಾ ಎಂದು ಕರೆಯುತ್ತಾಳೆ. ಆದರೆ ಸಂಜು ನಿಮ್ಮ ಪ್ರೀತಿ ನನಗೆ ಉಸಿರುಗಟ್ಟಿಸುತ್ತೆ. ಕ್ಷಮಿಸಿ ನಾನು ಬರೋದಿಕ್ಕೆ ಆಗಲ್ಲ. ನಾನು ಬರೋದಿಲ್ಲ ಎಂದು ಹೇಳಿ ಫೋನ್ ಕಟ್ ಮಾಡುತ್ತಾನೆ. ಇದರಿಂದ ಆರಾಧನಾ ಬೇಸರ ಮಾಡಿಕೊಳ್ಳುತ್ತಾಳೆ.

ಅನುಗಾಗಿ ಪಾಯಸ ತಂದ ರಮ್ಯಾ
ರಜಿನಿ, ಅನು ಹಾಗೂ ಪುಷ್ಪಾ ಇಬ್ಬರನ್ನೂ ಬೈದು ಮನೆಯಿಂದ ಹೊರಗೆ ಹಾಕುತ್ತಾಳೆ. ಅವರು ಎಷ್ಟೇ ಸಮಾಧಾನ ಮಾಡಿದರೂ ರಜಿನಿ ಕೇಳುವುದಿಲ್ಲ. ಅನು ಸಂತೋಷವನ್ನೆಲ್ಲಾ ಕಿತ್ತುಕೊಳ್ಳುವವರೆಗೂ ನಾನು ಬಿಡುವುದಿಲ್ಲ ಎಂದು ಕೂಗಾಡುತ್ತಾಳೆ. ನಂತರ ಪಾಯಸ ಮಾಡುವ ರಜಿನಿ ಇದ್ದಕ್ಕಿದ್ದ ಹಾಗೆ ರಮ್ಯಾಳನ್ನು ಕರೆದು ನಾನು ಹಾಗೆಲ್ಲಾ ಮಾತನಾಡಬಾರದಿತ್ತು. ಪುಷ್ಪಾ ಅವರಿಗೆ ಪಾಯಸ ಕೊಡುವಂತೆ ಹೇಳುತ್ತಾಳೆ. ಅದರಲ್ಲೂ ಅನು ಪಾಯಸವನ್ನು ಕುಡಿಯಲೇಬೇಕು ಎಂದು ಕ್ಷಮೆ ಕೇಳಿ ರಮ್ಯಾ ಕೈಯಲ್ಲಿ ಪಾಯಸ ಕೊಟ್ಟು ಕಳಿಸುತ್ತಾಳೆ. ಇದಕ್ಕೆ ರಜಿನಿ ವಿಷ ಬೆರೆಸಿರುತ್ತಾಳೆ. ಅನು ಮತ್ತು ಅವಳ ಹೊಟ್ಟೆಯಲ್ಲಿರುವ ಮಗು ಸಾಯಬೇಕು ಎಂದು ಒಬ್ಬಳೇ ಮಾತನಾಡಿಕೊಳ್ಳುತ್ತಾಳೆ.

ಸಂಜು ಸಾಯುತ್ತಾನಾ..?
ಪಾಯಸಕ್ಕೆ ವಿಷ ಬೆರೆಸಿರುವ ವಿಷಯ ತಿಳಿದ ಸಂಜು ಅನು ಮನೆಗೆ ಹೋಗುತ್ತಾನೆ. ಅಲ್ಲಿ ಅನು ಹಾಗೂ ಮನೆಯವರು ಪಾಯಸ ಕುಡಿಯಲು ಮುಂದಾದಾಗ ಸಂಜು ತಡೆಯುತ್ತಾನೆ. ಅದರಲ್ಲಿ ವಿಷವಿದೆ ಎಂದು ಹೇಳುತ್ತಾನೆ. ಆದರೆ, ಅನು ಮತ್ತು ರಮ್ಯಾ ಇಬ್ಬರೂ ಸಂಜುಗೆ ಬೈಯುತ್ತಾರೆ. ರಜಿನಿ ಅಷ್ಟು ಕೆಟ್ಟವರಲ್ಲ ಎಂದು ಹೇಳಿದ್ದಕ್ಕೆ ಅನುಳನ್ನು ನಂಬಿಸುವುದಕ್ಕೆ ಸಂಜು ಆ ಪಾಯಸವನ್ನು ತಾನೇ ಕುಡಿಯುತ್ತಾನೆ. ವಿಷವಿರುವ ಪಾಯಸ ಕುಡಿದ ಸಂಜು ಸಾಯುತ್ತಾನಾ..? ಕಾದು ನೋಡಬೇಕಿದೆ.