ಝೇಂಡೇ ಹಾಗೂ ಮೀರಾ ಕದ್ದು ಮೀಟ್ ಮಾಡಿದ್ದೇಕೆ..?

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನುಗೆ ಸಂಜು ಮೇಲೆ ಯಾವುದೇ ಕೋಪವಿಲ್ಲ. ಆದರೆ ಸಂಜು, ಅನು ಮೇಲೆ ತೋರುವ ಕಾಳಜಿ ಆಕೆಗೆ ಹಿಂಸೆಯಾಗುತ್ತದೆ. ಪದೇ ಪದೇ ಆರ್ಯನನ್ನು ನೆನೆಯುವಂತೆ ಮಾಡುತ್ತದೆ. ಹೀಗಾಗಿ ಅನು ಆದಷ್ಟು ಸಂಜುನಿಂದ ದೂರ ಇರಲು ಪ್ರಯತ್ನಿಸುತ್ತಾಳೆ.

ಆದರೆ ಸಂಜುಗೆ ಹಾಗಲ್ಲ. ತಾನು ಆರ್ಯ ಎಂಬುದು ತನಗೆ ಗೊತ್ತಿಲ್ಲವಾದರೂ, ಆಗಾಗ ತನಗೆ ಅನು ತೀರಾ ಕ್ಲೋಸ್ ಅನಿಸುತ್ತದೆ. ಅನು ಬಗ್ಗೆ ಸಂಜುಗೆ ಒಲವಿದ್ದು, ಇದು ಯಾಕೆ ಎಂಬುದು ಇನ್ನೂ ಆತನಿಗೆ ಅರ್ಥವಾಗಿಲ್ಲ.

ಇನ್ನು ಪ್ರಿಯದರ್ಶಿನಿ, ಸಂಜು ಬಗ್ಗೆ ಯಾರ ಬಳಿಯೂ ಹೇಳಿಲ್ಲ. ಸಂಜುನನ್ನು ಎಲ್ಲರೂ ವಿಶ್ವಾಸ್ ದೇಸಾಯಿ ಎಂದೇ ತಿಳಿದಿದ್ದಾರೆ. ಆರ್ಯವರ್ಧನ್‌ಗೆ ವಿಶ್ವಾಸ್ ಮುಖವನ್ನು ಹಾಕಿರುವ ಸಂಗತಿ ಗುಟ್ಟಾಗಿಯೇ ಇಡಲಾಗಿದೆ.

ಕೈ ಸುಟ್ಟುಕೊಂಡ ಪ್ರಿಯದರ್ಶಿನಿ

ಕೈ ಸುಟ್ಟುಕೊಂಡ ಪ್ರಿಯದರ್ಶಿನಿ

ಇದರಿಂದ ಶಾರದಾ ದೇವಿ, ಮಾನ್ಸಿ, ಪುಷ್ಪಾ ಎಲ್ಲರಲ್ಲೂ ಒಂದು ಬಗೆಯ ಅನುಮಾನ ಶುರುವಾಗಿದೆ. ಹೀಗಾಗಿ ಪ್ರಿಯದರ್ಶಿನಿ ಬಳಿ ಮಾತನಾಡಿದಾಗ ವಿಶ್ವಾಸ್ ಪತ್ನಿ ಆರಾಧನಾ ಅವರನ್ನು ಕರೆಸಿ ಎಂದು ಹೇಳುತ್ತಾರೆ. ಇದರಿಂದ ಪ್ರಿಯದರ್ಶಿನಿ ಯೋಚನೆಗೆ ಒಳಗಾಗಿದ್ದು, ಅಡುಗೆ ಮಾಡುವಾಗ ಶಾರದಾ ದೇವಿ ಮಾತನಾಡಿದ ಮಾತುಗಳನ್ನೇ ನೆನಪು ಮಾಡಿಕೊಳ್ಳುತ್ತಿರುತ್ತಾಳೆ. ಇದರಿಂದ ಅಡುಗೆ ಸೀದು ಹೋಗುತ್ತದೆ. ಆಗ ಗಾಬರಿಯಲ್ಲಿ ಪ್ರಿಯದರ್ಶಿನಿ ಬರಿಗೈನಲ್ಲಿ ಪಾತ್ರೆ ಮುಟ್ಟಿ ಬೆರಳುಗಳು ಸುಡುತ್ತವೆ. ಆಗ ಪ್ರಭು ದೇಸಾಯಿ ಬರುತ್ತಾನೆ. ಆಗ ಇನ್ನು ನಾನು ಸತ್ಯ ಮುಚ್ಚಿಡೋದಕ್ಕೆ ಆಗೋದಿಲ್ಲ. ನಾನು ಶಾರದಾ ದೇವಿ ಬಳಿ ಹೇಳುತ್ತೀನಿ ಎಂದು ಹೇಳುತ್ತಾರೆ.

ಹೆಂಡತಿ ಬಗ್ಗೆ ಮಾತನಾಡಲು ಯತ್ನಿಸಿದ ಸಂಜು

ಹೆಂಡತಿ ಬಗ್ಗೆ ಮಾತನಾಡಲು ಯತ್ನಿಸಿದ ಸಂಜು

ಇನ್ನು ಅನು ಫ್ಯಾಕ್ಟರಿಗೆ ಬೇಡ ವಠಾರಕ್ಕೆ ಹೋಗೋಣ ಎಂದು ಹೇಳುತ್ತಾಳೆ. ಆಗ ಸಂಜು ನನ್ನಿಂದ ನಿಮಗೆ ಬೇಸರವಾಯ್ತಾ.? ಎಂದು ಕೇಳಿದ್ದಕ್ಕೆ ಅನು ಇಲ್ಲ. ನನಗೆ ಈಗ ಫ್ಯಾಕ್ಟರಿಗೆ ಹೋಗುವ ಮನಸಿಲ್ಲ ಎಂದು ಮಾತು ಮುಂದುವರಿಸುತ್ತಾರೆ. ಮಾತನಾಡುತ್ತಾ, ಅನು ನಿಮ್ಮ ಹೆಂಡತಿಯನ್ನು ನೆನಪು ಮಾಡಿಕೊಳ್ಳಲು ಯತ್ನಿಸಿ ಎನ್ನುತ್ತಾಳೆ. ಅದಕ್ಕೆ ಸಂಜು ನನಗೆ ನಿಮ್ಮ ಹಾಗೆ ಎಂಕರೇಜ್ ಮಾಡುವವರು, ಮೋಟಿವೇಟ್ ಮಾಡುವವರು ಒಬ್ಬರು ಬೇಕಿತ್ತು. ಈಗ ನಾನು ನನ್ನವಳನ್ನು ನೆನಪಿಸಿಕೊಳ್ಳುತ್ತೇನೆ ಎಂದು ಹೇಳಿ ಅನು ಜೊತೆಗಿನ ಕೆಲ ಕ್ಷಣಗಳನ್ನು ನೆನಪು ಮಾಡಿಕೊಳ್ಳುತ್ತಾನೆ.

ಪಾನಿಪುರಿ ಸವಿದ ಸಂಜು - ಅನು

ಪಾನಿಪುರಿ ಸವಿದ ಸಂಜು - ಅನು

ನಂತರ ಅನು ಪಾನಿಪುರಿಯನ್ನು ಕಂಡು ಅದರ ಬಗ್ಗೆ ಪ್ರಶ್ನೆ ಮಾಡುತ್ತಾಳೆ. ಸಂಜು ಅದರ ಟೇಸ್ಟ್ ನೆನಪಿಲ್ಲ ಎಂದು ಹೇಳುತ್ತಾನೆ. ಅನು ಸೀದಾ ಕಾರನ್ನು ನಿಲ್ಲಿಸಿ ಪಾನಿಪುರಿ ತಿನ್ನಲು ಕರೆದುಕೊಂಡು ಹೋಗುತ್ತಾಳೆ. ಅಲ್ಲಿ ಪಾನಿಪುರಿ ತಿಂದಾಗಲು ಸಂಜುಗೆ ಅನು ಜೊತೆ ಪಾನಿಪುರಿ ತಿಂದ ನೆನಪಾಗುತ್ತದೆ. ಆದರೆ ಅದು ಯಾರೆಂದು ತಿಳಿಯದ ಕಾರಣ ನನ್ನ ಹುಡುಗಿ ಎಂದು ಹೇಳುತ್ತಾನೆ. ಬಳಿಕ ಸಂಜು ಪಾನಿಪುರಿ ಕೊಡಿಸಿದ್ದಕ್ಕೆ ಥ್ಯಾಂಕ್ಸ್ ಎಂದು ಅನುಳನ್ನು ಕೇಳುತ್ತಾನೆ. ಇಬ್ಬರು ಖುಷಿ ಖುಷಿಯಾಗಿ ಮಾತನಾಡುತ್ತಾರೆ.

ಝೇಂಡೇ ಮೀರಾಳನ್ನು ಭೇಟಿಯಾಗಿದ್ದೇಕೆ..?

ಝೇಂಡೇ ಮೀರಾಳನ್ನು ಭೇಟಿಯಾಗಿದ್ದೇಕೆ..?

ಇತ್ತ ಮೀರಾ ಸಂಜು ವಿಚಾರವಾಗಿ ಹರ್ಷನ ಬಳಿ ಮಾತನಾಡುತ್ತಾಳೆ. ಆಗ ಸಂಜು ಆರ್ಯನ ನಂಬರ್ ಹೇಳಿದ್ದು, ಝೇಂಡೇ ಅನ್ನು ನೋಡಿ ವಿಚಿತ್ರ ಮನುಷ್ಯ ಎಂದ ಬಗ್ಗೆ ಹೇಳುತ್ತಾಳೆ. ಆದರೆ ಹರ್ಷ ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ಸಂಜುಗೆ ಹೊಸ ಫೋನ್ ಕೊಡಿಸಬೇಕು ಎನ್ನುತ್ತಾನೆ. ಝೇಂಡೇ ಮಾತಿಗೆ ಬೆಲೆ ಕೊಡಬೇಡಿ ಎಂದು ಮೀರಾಗೆ ಹೇಳುತ್ತಾನೆ. ಇದರಿಂದ ಮೀರಾ, ಆರ್ಯ ಸರ್‌ನನ್ನು ಮಿಸ್ ಮಾಡಿಕೊಳ್ಳುತ್ತಾಳೆ. ಅಲ್ಲದೇ, ಯಾರಿಗೂ ಗೊತ್ತಿಲ್ಲದ ಹಾಗೆ ಮೀರಾ, ಝೇಂಡೇ ಅನ್ನು ಭೇಟಿ ಆಗುತ್ತಾಳೆ. ಝೇಂಡೇ ಮಾಡಿರುವ ಹೊಸ ಪ್ಲ್ಯಾನ್ ಏನು ಎಂಬುದೇ ಈಗಿನ ಕುತೂಹಲ.

More from Filmibeat

English summary
jothe jotheyali Serial 26th october Episode Written Update. Jhende tries to plan something new. And he meets meera in a secrete place. Meera is afraid of the situation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X