ಆರ್ಯನಂತೆ ನಡೆದುಕೊಳ್ಳುತ್ತಿರುವ ಸಂಜು: ಅನು ಈ ಸತ್ಯವನ್ನು ಕಂಡು ಹಿಡಿಯುತ್ತಾಳಾ..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ವಿಶ್ವಾಸ್ ಪತ್ನಿ ಆರಾಧನಾಳಿಗೆ ಇನ್ನೂ ಸಾವಿನ ಸುದ್ದಿಯನ್ನು ಹೇಳಿರುವುದಿಲ್ಲ. ಹಾಗಾಗಿ ಪ್ರಭು ದೇಸಾಯಿ ಅವರು ತನ್ನ ಸೊಸೆಗೆ ಕರೆ ಮಾಡುತ್ತಾರೆ. ಆದರೆ ಲೈನ್ ಕನೆಕ್ಟ್ ಆಗುವುದಿಲ್ಲ.
ಅಷ್ಟರಲ್ಲಿ ಪ್ರಿಯದರ್ಶಿನಿ ಕರೆ ಮಾಡಿ ವಿಶ್ವಾಸ್ ಅಸ್ತಿ ವಿಸರ್ಜನೆಗೆ ಪ್ರಭು ಅವರನ್ನು ಕರೆಯುತ್ತಾಳೆ. ಆಗ ಆರಾಧನಾ ಬಗ್ಗೆ ಮಾತನಾಡುತ್ತಾರೆ. ಪ್ರಿಯದರ್ಶಿನಿ ನಾನೇ ಆರಾಧನಾಗೆ ವಿಷಯ ತಿಳಿಸಲೇ ಎಂದು ಕೇಳುತ್ತಾನೆ. ಆಗ ಪ್ರಭು ಅದು ನಮ್ಮ ಕರ್ತವ್ಯ ತಿಳಿಸು ಎಂದು ಹೇಳುತ್ತಾನೆ.
ಇನ್ನು ಇತ್ತ ಅನು ರೆಗ್ಯುಲರ್ ಚೆಕಪ್‌ಗೆ ಬರುವಂತೆ ಆಸ್ಪತ್ರೆಯವರು ಕರೆ ಮಾಡಿ ಹೇಳುತ್ತಾರೆ. ಇದೇ ವಿಚಾರವನ್ನು ಅನು, ಶಾರದಾ ಅವರಿಗೆ ಹೇಳಿದಾಗ ಅವರು ಸಂಜುನನ್ನು ಕೂಡ ಕೇಳುತ್ತಾರೆ. ಆಗ ಸಂಜು ಅಮ್ಮನಿಗೆ ಗೊತ್ತು ನನಗೇನು ಗೊತ್ತಿಲ್ಲ ಎಂದು ಹೇಳುತ್ತಾನೆ.

ಮಗನ ಅಸ್ತಿಯನ್ನು ಪಡೆದ ಪ್ರಿಯದರ್ಶಿನಿ
ಮಗನ ಅಸ್ತಿಯನ್ನು ಶಾರದಾ ದೇವಿ ಪ್ರಿಯದರ್ಶಿನಿ ಕೈಗೆ ಕೊಡುತ್ತಾರೆ. ಮಗನ ಅಸ್ತಿಯನ್ನು ಯಾವ ತಾಯಿ ತಾನೇ ಹೀಗೆ ಪಡೆಯೋದಕ್ಕೆ ಸಾಧ್ಯ. ನನಗೆ ಯಾವಾಗಲೂ ಆರ್ಯನ ತಾಯಿ ಬಂದು ನನ್ನ ಮಗನನ್ನು ಕೇಳುತ್ತಾರೆ ಎಂಬ ಭಯದಲ್ಲೇ ಇದ್ದೆ. ಆದರೆ ಹೀಗೆ ಕೊಡಬೇಕಾಗುತ್ತೆ ಎಂದು ಬೇಸರ ಮಾಡಿಕೊಳ್ಳುತ್ತಾಳೆ. ಪ್ರಿಯದರ್ಶಿನಿ ಮನಸಲ್ಲೇ ನನ್ನನ್ನು ಕ್ಷಮಿಸಿ ಬಿಡು ವಿಶ್ವ. ನಿನ್ನನ್ನು ಕಳಿಸಿಕೊಡುವುದಕ್ಕೆ ನಾನು ಮತ್ತು ನಿನ್ನ ಅಪ್ಪ ಇಬ್ಬರೂ ಬರಲಿಲ್ಲ ಎಂದು ಹೇಳುತ್ತಾಳೆ.

ಆರ್ಯ ಸತ್ತಿಲ್ಲ ಎಂದು ಹೇಳಿದ ಪ್ರಿಯದರ್ಶಿನಿ
ಹೀಗೆ ಮಾತನಾಡುತ್ತಾ ಪುಷ್ಪಾ ಅನು ಗರ್ಭಿಣಿ ಎಂಬ ಮಾತನ್ನು ಹೇಳುತ್ತಾಳೆ. ಆಗ ಪ್ರಿಯದರ್ಶಿನಿ ಅನು ತಾಯಿ ಆಗುತ್ತಿದ್ದಾಳಾ ಎಂದಾಗ ಶಾರದಾ, ನಿಮಗೆ ಹೇಳೋದೆ ಮರೆತಿದ್ದೆ, ಅನು ಗರ್ಭಿಣಿ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಪ್ರಿಯಾ ಆರ್ಯನ ಬಗ್ಗೆ ಹೇಳೋಕೆ ಹೊರಡುತ್ತಾಳೆ. ಈ ಖುಷಿಯನ್ನು ಅನುಭವಿಸಲು ಆರ್ಯ ಸರ್ ಇಲ್ಲ ಎಂದು ಪುಷ್ಪಾ ಹೇಳುತ್ತಾಳೆ. ಆಗ ಆರ್ಯ ಸತ್ತಿಲ್ಲ. ಬದುಕಿದ್ದಾರೆ. ನಮ್ಮ ಸುತ್ತ ಇದ್ದಾರೆ ಎಂದು ಪ್ರಿಯದರ್ಶಿನಿ ಹೇಳುತ್ತಾಳೆ.

ಅನುಗೆ ಗಿಫ್ಟ್ ಕೊಟ್ಟ ಸಂಜು
ಇತ್ತ ಆರ್ಯ ಬರುತ್ತಾನೆ. ಆಗ ಕುಡಿಯೋದಕ್ಕೆ ಏನಾದರು ತಗೋ ಎಂದು ಶಾರದಾ ದೇವಿ ಕೇಳಿದಾಗ, ನಾನು ಗ್ರೀನ್ ಟೀ ಕುಡಿಯೋದು ಎಂದು ಹೇಳುತ್ತಾನೆ. ಆಗ ಮನೆಯವರೆಲ್ಲಾ ಕೊಂಚ ಶಾಕ್ ಆಗುತ್ತಾರೆ. ಹೀಗೆ ಆರ್ಯನ ರೂಮಿನಲ್ಲಿದ್ದ ಬ್ಯುಸಿನೆಸ್‌ಗೆ ಸಂಬಂಧಪಟ್ಟ ಪುಸ್ತಕಗಳನ್ನು ನೋಡುತ್ತಾ, ಅದರಲ್ಲೊಂದು ತನ್ನ ಫೇವರಿಟ್ ಎಂದು ಹೇಳುತ್ತಾನೆ. ಅದರಲ್ಲೊಂದು ಗಿಫ್ಟ್ ರ್ಯಾಪ್ ಮಾಡಿರುವ ಪುಸ್ತಕ ಇರುತ್ತದೆ. ಅದರಲ್ಲಿ ನನ್ನ ಪ್ರೀತಿಯ ಹೆಂಡತಿಗೆ ಎಂದು ಬರೆದಿರುತ್ತದೆ. ಆರ್ಯ ಆ ಪುಸ್ತಕವನ್ನು ನೋಡಿ ಆರ್ಯ ಇದು ನಿಮಗಾಗಿಯೇ ಕೊಡಬೇಕು ಎಂದು ತಂದಿದ್ದರು ಎನಿಸುತ್ತೆ ಅಂತ ಹೇಳಿ ಅನುಗೆ ಕೊಡುತ್ತಾನೆ.

ಆರ್ಯನಂತೆ ನಡೆದುಕೊಳ್ಳುವ ಸಂಜು
ಆರ್ಯ, ಅನುಗಾಗಿ ತಂದಿಟ್ಟಿದ್ದ ಆ ಗಿಫ್ಟ್ ಓಪನ್ ಮಾಡುತ್ತಾಳೆ. ಅದು ಗರ್ಭಿಣಿ ಆರೈಕೆಯ ಪುಸ್ತಕವಾಗಿರುತ್ತದೆ. ಇದನ್ನು ನೋಡಿ ಅನು ಅಳುತ್ತಾಳೆ. ಅಷ್ಟರಲ್ಲಿ ರಮ್ಯಾ ಬರುತ್ತಾಳೆ. ಇಬ್ಬರೂ ಸ್ವಲ್ಪ ಹೊತ್ತು ಮಾತನಾಡುತ್ತಿರುತ್ತಾರೆ. ಇನ್ನು ಆಸ್ಪತ್ರೆಗೆ ಹೋಗಲು ಅನು ರೆಡಿಯಾಗಿ ಕಾರಿನ ಬಳಿ ಬಂದಾಗ ಸಂಜು ಆರ್ಯನಂತೆಯೇ ಕಾರಿನ ಡೋರ್ ತೆರೆದು ನಿಂತಿರುತ್ತಾನೆ. ಇದನ್ನು ನೋಡಿದ ಅನುಗೆ ಆರ್ಯ ನೆನಪಾಗುತ್ತದೆ.


Click it and Unblock the Notifications











