ರಮ್ಯಾಗೆ ಝೇಂಡೇ ಬಗ್ಗೆ ಕರುಣಾಕರ ಕೊಟ್ಟ ಆ ಕ್ಲೂ ಏನು..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರಾಧನಾಳಿಗೆ ಅನು ಮತ್ತು ಶಾರದಾ ಬುದ್ಧಿವಾದ ಹೇಳುತ್ತಾರೆ. ನೀನು ಗಟ್ಟಿಯಾಗಿರಬೇಕಾದವಳು ಯಾಕಿಷ್ಟು ವೀಕ್ ಆಗಿದ್ದೀಯಾ ಎಂದು ಹೇಳುತ್ತಾರೆ.
ಆಗ ಆರಾಧನಾ ಸಂಜು ಬಿಹೇವಿಯರ್ ನನ್ ಕೈನಲ್ಲಿ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನಗೆ ಈ ಬದುಕೇ ಬೇಡ ಅನಿಸುತ್ತಿದೆ ಎಂದು ಹೇಳುತ್ತಾಳೆ. ಇನ್ನು ಮುಂದೆ ಇಂತಹ ಕೆಟ್ಟ ನಿರ್ಧಾರ ತೆಗೆದುಕೊಳ್ಳದಂತೆ ಅನು, ಆರಾಧನಾಗೆ ಮಾತು ಕೊಡುವಂತೆ ಹೇಳುತ್ತಾಳೆ.
ಶಾರದಾ ಆಗ ಅನುಗೆ ಬೈಯುತ್ತಾಳೆ. ದಯವಿಟ್ಟು ನಿನ್ನ ಆರೋಗ್ಯದ ಬಗ್ಗೆ ಗಮನಕೊಡು. ನಿನ್ನ ಹೊಟ್ಟೆಯಲ್ಲಿ ಒಂದು ಮಗು ಇದೆ ಎಂಬುದನ್ನು ಮರೆಯಬೇಡ. ನೀನು ಟೆಂಷನ್ ಮಾಡಿಕೊಳ್ಳಬೇಡ ಎಂದು ಹೇಳುತ್ತಾಳೆ.

ಸಂಜುಗೆ ಕಾಲ್ ಮಾಡಿದ ಅನು
ಅನು, ಸಂಜುಗೆ ಕಾಲ್ ಮಾಡಿ ಈ ಕೂಡಲೇ ಮನೆಗೆ ಬನ್ನಿ. ತುಂಬಾ ಎಮರ್ಜೆನ್ಸಿ ಎಂದು ಹೇಳುತ್ತಾಳೆ. ಸಂಜು ಫೋನ್‌ನಲ್ಲೇ ವಿಷಯ ಏನೆಂದು ಕೇಳಿದರೂ ಅನು ಹೇಳುವುದಿಲ್ಲ. ಸಂಜು ಮನೆಗೆ ಬರುತ್ತಿದ್ದಂತೆ ಅನು ಬೈಯುತ್ತಾಳೆ. ನಿಮ್ಮ ಹೆಂಡತಿಯನ್ನು ಹೀಗೆಲ್ಲಾ ಬಿಡಬೇಡಿ ಎಂದು ಹೇಳುತ್ತಾಳೆ. ನೀವು ಹೇಳುತ್ತಿರುವ ಮಾತುಗಳಿಂದ ಈ ಜೀವಕ್ಕೆ ಅಪಾಯವಿದೆ ಎಂದರೆ ಆ ಸತ್ಯವನ್ನು ನಾನು ನಂಬಲ್ಲ. ನಿಮ್ಮ ಹೆಂಡತಿ ಜೊತೆಗೆ ಕಾಲ ಕಳೆಯಿರಿ. ಪ್ರತಿಯೊಂದಕ್ಕೂ ಏನೇನೋ ಕಾರಣ ಕೊಡಬೇಡಿ. ನಿಮ್ಮ ಹೆಂಡತಿಯಿಂದ ನೀವು ದೂರವಿರುವುದು ಸರಿಯಲ್ಲ ಎಂದು ಅನು, ಸಂಜುಗೆ ಬುದ್ಧಿ ಹೇಳುತ್ತಾಳೆ.

ತನ್ನ ನೋವನ್ನು ಹೇಳಿಕೊಂಡ ಆರಾಧನಾ
ಸಂಜು ಹೋಗಿ ಆರಾಧನಾ ಜೊತೆಗೆ ಮಾತನಾಡುತ್ತಾನೆ. ಯಾಕೆ ಹೀಗೆಲ್ಲಾ ಮಾಡುತ್ತೀರಾ ಎಂದು ಕೇಳುತ್ತಾನೆ. ಆಗ ಆರಾಧನಾ, ಸಂಜುಗೆ ತನ್ನ ಪ್ರೀತಿ ಬಗ್ಗೆ ಹೇಳುತ್ತಾಳೆ. ವಿಶ್ವಾಸ್ ಹಾಗೂ ತನ್ನ ನಡುವಿನ ಸಂಬಂಧದ ಬಗ್ಗೆ ಮಾತನಾಡಿ, ನೀನ್ಯಾಕೆ ಹೀಗೆ ನಡೆದುಕೊಳ್ಳುತ್ತಿದ್ದೀಯೋ ಗೊತ್ತಿಲ್ಲ ಎಂದು ಹೇಳುತ್ತಾಳೆ. ಅಲ್ಲದೇ ನಮ್ಮಿಬ್ಬರ ಸಂಬಂಧಕ್ಕೆ ಸಾಕಷ್ಟು ಸಾಕ್ಷಿಗಳಿವೆ, ಫೊಟೋ, ಸರ್ಟಿಫಿಕೇಟ್ ಎಲ್ಲವೂ ನನ್ನ ಬಳಿ ಇವೆ ಎಂದು ಮಾತನಾಡುತ್ತಾಳೆ.

ರಮ್ಯಾಗೆ ಝೇಂಡೇ ಬಗ್ಗೆ ಸಿಕ್ಕ ಕ್ಲೂ ಏನು..?
ಈ ನಡುವೆ ಕರುಣಾಕರ, ರಮ್ಯಾಗೋಸ್ಕರ ಬೆಳಗ್ಗಿನಿಂದ ಕಾಯುತ್ತಿರುತ್ತಾನೆ. ರಮ್ಯಾ ಆಫೀಸಿನಿಂದ ಆಚೆ ಬಂದಮೇಲೆ, ಮಾತನಾಡಿಸುತ್ತಾನೆ. ಆದರೆ, ರಮ್ಯಾಗೆ ಹೆಚ್ಚಿಗೆ ಮಾತನಾಡಲು ಇಷ್ಟವಿರುವುದಿಲ್ಲ. ಕರುಣಾಕರ, ಝೇಂಡೇ ಬಗ್ಗೆ ತನಗೊಂದು ವಿಚಾರ ಗೊತ್ತಾಗಿದೆ ಎಂದು ಹೇಳುತ್ತಾನೆ. ಅದೇನು ಎಂದು ರಮ್ಯಾ ಕೇಳಿದಾಗ, ಆಫೀಸ್ ಹೆಸರನ್ನೆಲ್ಲಾ ಬದಲಾಯಿಸುವುದು ಹೇಗೆ ಎಂದು ಅಪ್ಪನ ಬಳಿ ಕೇಳುತ್ತಿದ್ದರು ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಕೂಡಲೇ ರಮ್ಯಾ ಹೇಗಾದರೂ ಮಾಡಿ ಅನುಗೆ ಈ ಸುದ್ದಿಯನ್ನು ಹೇಳಬೇಕು ಎಂದು ಮನದಲ್ಲಿ ಅಂದುಕೊಳ್ಳುತ್ತಾಳೆ.

ಅನುಗೆ ಸತ್ಯ ಗೊತ್ತಾಗುತ್ತಾ..?
ಇತ್ತ ಮೀರಾಗೆ ಝೇಂಡೇ ಖಾಲಿ ಹಾಳೆಗೆ ಸಹಿ ಮಾಡಿಸಿಕೊಂಡು ತಪ್ಪು ಮಾಡಿದ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾಳೆ. ಸಂಜು ಬಳಿ ತಾನು ಹಾಗೂ ಶಾರದಾ ದೇವಿ ಖಾಲಿ ಪೇಪರ್‌ಗೆ ಸಹಿ ಹಾಕಿದ ವಿಚಾರವನ್ನು ಹೇಳುತ್ತಾಳೆ. ಈ ಮಾತನ್ನು ಕೇಳಿದ ಸಂಜು ಕೂಡ ಶಾಕ್ ಆಗಿರುತ್ತಾನೆ. ಅಷ್ಟೇ ಅಲ್ಲದೇ, ಆಫೀಸಿನಲ್ಲಿ ಅಕೌಂಟ್ಸ್ ಸಿಸ್ಟಮ್‌ಗಳು ಹ್ಯಾಕ್ ಆಗುತ್ತಿರುತ್ತದೆ. ಇದನ್ನೆಲ್ಲಾ ನೋಡಿದ ಶಾನುಬೋಗರು ಕೂಡ ಝೇಂಡೇ ಮೇಲೆ ಅನುಮಾನ ಪಡುತ್ತಾರೆ. ಆದರೆ, ಯಾರ ಬಳಿಯೂ ಹೇಳುವುದಿಲ್ಲ. ಇನ್ನು ಮೀರಾ ಈ ಬಗ್ಗೆ ಅನುಗೆ ಹೇಳಬೇಕು. ಇಲ್ಲದಿದ್ದರೆ ಇನ್ನಷ್ಟು ಸಮಸ್ಯೆ ಆಗಬಹುದು ಎಂದು ಯೋಚಿಸುತ್ತಾಳೆ.


Click it and Unblock the Notifications











