For Quick Alerts
  ALLOW NOTIFICATIONS  
  For Daily Alerts

  ಮತ್ತೆ ಬೇಸರ ಮಾಡಿಕೊಂಡ ಮಾನ್ಸಿ: ವೈದ್ಯರ ಬಳಿ ಹೋದ ಸಂಜುಗೆ ಏನಾಯ್ತು..?

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು, ಆರ್ಯ ತೆಗೆದಿಟ್ಟಿದ್ದ ಪುಸ್ತಕವನ್ನು ನೋಡಿ ಅಳುತ್ತಿರುತ್ತಾಳೆ. ಇದೇ ಸಮಯಕ್ಕೆ ರಮ್ಯಾ ಬಂದು ಮಾತುಕತೆ ನಡೆಸುತ್ತಿರುತ್ತಾಳೆ. ನಾಳೆ ರೆಗ್ಯುಲರ್ ಚೆಕಪ್‌ಗೆ ನಿನ್ನ ಜೊತೆ ನಾನು ಬರುತ್ತೀನಿ ಎಂದು ರಮ್ಯಾ ಹೇಳುತ್ತಾಳೆ. ಅದಕ್ಕೆ ಅನು ಬೇಡ. ನಾನೇ ಹೋಗಿ ಬರುತ್ತೀನಿ. ಇನ್ಮುಂದೆ ನಾನು ಆಫೀಸ್ ಕೆಲಸದ ಕಡೆ ಗಮನ ಕೊಡುತ್ತೀನಿ ಎಂದು ಹೇಳುತ್ತಾಳೆ.

  ಸಂಜು, ಆರ್ಯ ರೂಮಿನಲ್ಲಿ ಕೂತು ಪುಸ್ತಕವನ್ನು ಓದುತ್ತಿರುತ್ತಾನೆ. ಆಗ ಅಜ್ಜಯ್ಯ ಬಂದು ನಿಮಗೆ ಏನಾದರೂ ಬೇಕಿತ್ತಾ ಎಂದು ಕೇಳುತ್ತಾರೆ. ಸಂಜು ಇಲ್ಲ ನನ್ನಿಂದ ತೊಂದರೆ ಆಯ್ತಾ..? ಲೈಟ್ ಆಫ್ ಮಾಡಬೇಕಿತ್ತಾ ಎಂದು ಕೇಳಿದಾಗ ಅಜ್ಜಯ್ಯ ಇಲ್ಲ ಎನ್ನುತ್ತಾರೆ.

  ಹೂವಿಯ ಹಿನ್ನೆಲೆ ಹುಡುಕಲು ಹೊರಟ ಮಾಲಿನಿ: ಸ್ವಂತ ತಂಗಿ ಎಂದು ತಿಳಿದರೆ ಅರಗಿಸಿಕೊಳ್ಳುತ್ತಾಳಾ..?ಹೂವಿಯ ಹಿನ್ನೆಲೆ ಹುಡುಕಲು ಹೊರಟ ಮಾಲಿನಿ: ಸ್ವಂತ ತಂಗಿ ಎಂದು ತಿಳಿದರೆ ಅರಗಿಸಿಕೊಳ್ಳುತ್ತಾಳಾ..?

  ಇನ್ನು ಪ್ರಿಯದರ್ಶಿನಿ ವೈದ್ಯರಿಗೆ ಕರೆ ಮಾಡುತ್ತಾರೆ. ಆಗ ವೈದ್ಯರು ಮಧ್ಯಾಹ್ನದೊಳಗೆ ಬರುವಂತೆ ಹೇಳುತ್ತಾರೆ. ಹಾಗಾಗಿ ಪ್ರಿಯದರ್ಶಿನಿ ಸಂಜುಗೆ ಆಸ್ಪತ್ರೆಗೆ ಹೋಗಬೇಕು ರೆಡಿಯಾಗಿ ಬರುವಂತೆ ಹೇಳುತ್ತಾಳೆ. ಸಂಜು ರೆಡಿಯಾಗಿ ಕೆಳಗೆ ಬರುತ್ತಾನೆ.

   ಇದು ನನ್ನ ಮನೆ ಎಂದು ಹೇಳಿದ ಹರ್ಷ

  ಇದು ನನ್ನ ಮನೆ ಎಂದು ಹೇಳಿದ ಹರ್ಷ

  ಮಾನ್ಸಿಗೆ ಮನೆಯಲ್ಲಿ ನಡೆಯುತ್ತಿರುವುದು ಯಾವುದೂ ಇಷ್ಟವಿಲ್ಲ. ಹಾಗಾಗಿ ಮತ್ತೆ ಹರ್ಷನ ಬಳಿ ನಾವು ಬೇರೆ ಹೋಗುವ ಬಗ್ಗೆ ಚರ್ಚಿಸುತ್ತಾಳೆ. ಈ ಮನೆ ಒಳ್ಳೆ ಛತ್ರದಂತೆ ಅನಿಸುತ್ತೆ. ಯಾರು ಬೇಕಿದ್ದರೂ ಬರುತ್ತಾರೆ. ನಮಗೆ ನಮ್ಮ ಮನೆ ಅನ್ನೋ ಫೀಲ್ ಬರೋದೇ ಇಲ್ಲ. ಆರ್ಯ ಅವರಿದ್ದಾಗ ಮನೆ ಬಿಟ್ಟು ಹೋಗೋಕೆ ಒಂದು ಕಾರಣ ಇತ್ತು. ಈಗ ಸಾವಿರ ಕಾರಣಗಳಿವೆ ಎಂದು ಹೇಳುತ್ತಾಳೆ. ಆಗ ಹರ್ಷ ಯಾಕೆ ಹಾಗಂತ ಹೇಳ್ತೀಯಾ. ಇದೇ ಮನೆಯಲ್ಲಿ ಇರೋದಕ್ಕೆ ಒಂದೇ ಒಂದು ಕಾರಣ ಇಲ್ವಾ.? ನಾನು ಈ ಮನೆಯ ಮಗ. ನಾನ್ಯಾಕೆ ಈ ಮನೆಯನ್ನು ಬಿಟ್ಟು ಬೇರೆ ಕಡೆ ಹೋಗಬೇಕು. ಇಲ್ಲೇ ನಮಗೆ ಬದುಕುವುದಕ್ಕೆ ಆಗುತ್ತಿಲ್ಲ ಎಂದ ಮೇಲೆ ಬೇರೆ ಕಡೆ ಹೋಗಿ ಅಲ್ಲಿಗೆ ಹೇಗೆ ಅಡ್ಜಸ್ಟ್ ಆಗ್ತೀವಿ ಹೇಳು ಎಂದು ಹೇಳುತ್ತಾನೆ. ಅಷ್ಟರಲ್ಲಿ ಸಂಜು ಬಂದು ಗುಡ್ ನೈಟ್ ಎಂದು ಹೇಳಿ ಹೋಗುತ್ತಾನೆ.

  ಸೊಸೆಯಂದಿರಿಗೆ ಎಜೆನೇ ಸರಿ: ದುರ್ಗಾ ಪ್ಲ್ಯಾನ್‌ನಿಂದ ಯಾರು ಸೋಲುತ್ತಾರೆ..?ಸೊಸೆಯಂದಿರಿಗೆ ಎಜೆನೇ ಸರಿ: ದುರ್ಗಾ ಪ್ಲ್ಯಾನ್‌ನಿಂದ ಯಾರು ಸೋಲುತ್ತಾರೆ..?

   ಝೇಂಡೇ ಜೊತೆ ಮಾತನಾಡಿದ ಮೀರಾ

  ಝೇಂಡೇ ಜೊತೆ ಮಾತನಾಡಿದ ಮೀರಾ

  ಆಫೀಸಿನಲ್ಲಿ ಝೇಂಡೇ ದುಃಖದಿಂದ ಆರ್ಯನ ಫೋಟೋವನ್ನು ನೋಡುತ್ತಿರುತ್ತಾನೆ. 10 ವರ್ಷದವನಿದ್ದಾಗ ಆರ್ಯ ಬರಿಗೈಯಲ್ಲಿ ಏನೂ ಇಲ್ಲದೆ ಬಂದಿದ್ದ. ಹಸಿವಿನಿಂದ, ಅನಾಥನಂತೆ ದಿಕ್ಕೆಟ್ಟು ಬಂದಿದ್ದ ಆರ್ಯನಿಗೆ ನಾನು ಜೊತೆಯಾದೆ. ಅಂದಿನಿಂದ ಆರ್ಯನನ್ನು ನಾನು ನನ್ನ ಹೃದಯದಲ್ಲಿಟ್ಟುಕೊಂಡಿದ್ದೆ. ಆದರೆ ಅವನ ಕೊನೆಯ ಮುಖವನ್ನು ನೋಡುವುದಕ್ಕೂ ಬಿಡಲಿಲ್ಲ. ನಾನೇನು ಅಂತಹ ತಪ್ಪು ಮಾಡಿದ್ದೆ ಮೀರಾ ಮೇಡಂ. ಯಾಕೆ ಹೀಗಾಯ್ತು ಅಂತ ಮಾತನಾಡುತ್ತಾ ಆರ್ಯನ ಸಾವಿಗೆ ಅನು ಕಾರಣ ಎಂದು ಹೇಳುತ್ತಾನೆ. ಈ ಮಾತನ್ನು ಮೀರಾ ಅಲ್ಲಗಳೆಯುತ್ತಾಳೆ.

   ಆಸ್ಪತ್ರೆಗೆ ಹೊರಟ ಅನು, ಸಂಜು

  ಆಸ್ಪತ್ರೆಗೆ ಹೊರಟ ಅನು, ಸಂಜು

  ಅನು ರೆಗ್ಯುಲರ್ ಚೆಕಪ್‌ಗೆ ಶಾರದಾ ಜೊತೆ ಹೊರಟಿರುತ್ತಾಳೆ. ಪ್ರಿಯದರ್ಶಿನಿ ಹಾಗೂ ಸಂಜು ಕೂಡ ಆಸ್ಪತ್ರೆಗೆ ಹೋಗಬೇಕಾಗಿರುತ್ತದೆ. ಆಗ ಶಾರದಾ ದೇವಿ ನಮ್ಮ ಜೊತೆಯೇ ಬನ್ನಿ. ನಿಮ್ಮನ್ನು ಬಿಟ್ಟು ನಾವು ಹೋಗಿ ಬರುತ್ತೀವಿ ಎಂದು ಹೇಳುತ್ತಾಳೆ. ಆಗ ಪ್ರಿಯದರ್ಶಿನಿ ಅವರು ಓಕೆ ಎನ್ನುತ್ತಾರೆ. ಅನು ಅವರ ತಾಯಿ ಪುಷ್ಪಾ ಅವರಿಗೆ ವಠಾರಕ್ಕೆ ಹೋಗಿ. ಆಸ್ಪತ್ರೆಯಿಂದ ನೇರವಾಗಿ ನಾನೂ ವಠಾರಕ್ಕೆ ಬರುತ್ತೀನಿ ಎಂದು ಅನು ಹೇಳುತ್ತಾಳೆ. ಹಾಗೆ ಹೇಳಿ ಕಾರಿನ ಕಡೆಗೆ ಹೋಗುತ್ತಾಳೆ.

   ಸಂಜುಗೆ ಎಲ್ಲಾ ನೆನಪಾಯ್ತಾ..?

  ಸಂಜುಗೆ ಎಲ್ಲಾ ನೆನಪಾಯ್ತಾ..?

  ಸಂಜು ಆರ್ಯನಂತೆಯೇ ಕಾರಿನ ಡೋರ್ ತೆಗೆದು ಅನುಳನ್ನು ಸ್ವಾಗತಿಸುತ್ತಾನೆ. ಇದನ್ನು ಕಂಡ ಅನು ಶಾಕ್ ಆಗುತ್ತಾಳೆ. ಆರ್ಯನನ್ನು ನೆನಪಿಸಿಕೊಂಡು ಕಾರ್ ಏರುತ್ತಾಳೆ. ವೈದ್ಯರು ಸಂಜುನನ್ನು ಪರೀಕ್ಷೆ ಮಾಡುತ್ತಾರೆ. ಪರ್ಫ್ಯೂಮ್ ಸ್ಮೆಲ್ ತೋರಿಸಿ, ಗುರುತು ಹಿಡಿಯರಿ ಎಂದಿದ್ದಕ್ಕೆ ಸಂಜು ಇದು ನನಗೆ ಬೇಕಾದ ಹತ್ತಿರದವರು ಬಳಸುವ ಪರ್ಫ್ಯೂಮ್ ಎಂದು ಹೇಳುತ್ತಾನೆ. ವೈದ್ಯರು ಸಂಪಿಗೆ ಹೂವನ್ನು ಕೈಗೆ ಕೊಡುತ್ತಾರೆ. ಅದರ ವಾಸನೆ ನೋಡಿ ಸಂಜು ಕೂಗಾಡುತ್ತಾನೆ. ಅವನ ನೆನಪು ಬರಲು ಸಂಪಿಗೆ ಹೂವು ಸಹಾಯ ಮಾಡುತ್ತದಾ ಎಂಬುದೇ ಕುತೂಹಲ.

  English summary
  jothe jotheyali serial 27th September Episode Written Update. sanju behaves like arya. Mansi is fedup of staying their. And she forces harsha to move to other house. Know More.
  Wednesday, September 28, 2022, 18:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X