Jothe Jotheyali: ಮತ್ತೆ ವರ್ಧನ್ ಕಂಪನಿಗೆ ಬರಲಿರುವ ಆರ್ಯ: ಝೇಂಡೇಗೆ ಏನೂ ಅರ್ಥವಾಗುತ್ತಿಲ್ಲ

By ಪ್ರಿಯಾ ದೊರೆ

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆರ್ಯ, ವರ್ಧನ್ ಗ್ರೂಪ್ಸ್ ಹಾಗೂ ಅನುಳನ್ನು ಕಾಪಾಡಿಕೊಳ್ಳುವ ಸಲುವಾಗಿ ದೊಡ್ಡ ಪ್ಲಾನ್ ಅನ್ನೇ ಮಾಡಿದ್ದಾನೆ. ಆ ಪ್ಲಾನ್ ಸಕ್ಸಸ್ ಕಾಣಬೇಕು ಎಂಬ ಕಾರಣಕ್ಕೆ ಈಗ ಆರ್ಯ ಮನೆಯಿಂದಲೂ ಕಂಪನಿಯಿಂದಲೂ ಹೊರ ನಡೆದಿದ್ದಾನೆ. ಬಾಲ್ಯ ಸ್ನೇಹಿತನಾದ ಝೇಂಡೇ ಜೊತೆಗೆ ಇದ್ದುಕೊಂಡು ತನ್ನ ಆಲೋಚನೆಗಳನ್ನು ಕಾರ್ಯ ರೂಪಕ್ಕೆ ತರುತ್ತಿದ್ದಾನೆ.

ಕಂಪನಿಗೆ ಮೋಸ ಆಗಬಾರದು ಎಂಬ ಕಾರಣಕ್ಕಾಗಿ ಆರ್ಯ ನಾಟಕ ಮಾಡುತ್ತಿದ್ದಾನೆ. ಆದರೆ ಇದು ಝೇಂಡೇಗೆ ಅರ್ಥವಾಗುತ್ತಿಲ್ಲ. ಆರ್ಯನ ನಡವಳಿಕೆ ವಿಚಿತ್ರ ಎನಿಸಿದರೂ ತನ್ನ ಜೊತೆಗೆ ಇದ್ದಾನೆ ಎಂಬ ಕಾರಣಕ್ಕೆ ಸುಮ್ಮನಾಗಿದ್ದಾನೆ. ಆದರೆ ಆರ್ಯ ತನ್ನ ಜೊತೆಗೆ ಇದ್ದುಕೊಂಡು ಝೇಂಡೇಯ ಆಟಗಳಿಗೆ ಬ್ರೇಕ್ ಹಾಕುತ್ತಾನೆ ಎಂಬ ಸಣ್ಣ ಕ್ಲೂ ಸಹ ದೊರೆತಿಲ್ಲ. ಝೇಂಡೇ ಕದ್ದಿರುವ ಕಂಪನಿಯ ಹಣವನ್ನೆಲ್ಲಾ ಅವನ ಕೈಯಿಂದಲೇ ವಾಪಸ್ ಮಾಡಿಸಲು ಮುಂದಾಗಿದ್ದಾನೆ. ಈ ಬಗ್ಗೆ ಮೀರಾಗೆ ಆರ್ಯ ಸಂಪೂರ್ಣ ಮಾಹಿತಿಯನ್ನೂ ನೀಡಿದ್ದಾನೆ.

Jothe jotheyali Serial 28th April episode written update

ಮೀರಾ ಕೂಡ ಆರ್ಯ ಹೇಳಿದಂತೆಯೇ ನಡೆದುಕೊಂಡಿದ್ದಾಳೆ. ಸದ್ಯ ಕಂಪನಿಗೆ ಆರ್ಯ ರಿಸೈನ್ ಮಾಡಿ ಈಗ ಬೇರೆ ಕಡೆಗಳಲ್ಲಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದಾನೆ. ಆದರೆ ಎಲ್ಲಾ ಕಡೆಯೂ ನೀವು ನಮಗೆ ಬೇಕಿರುವ ಪೋಸ್ಟ್‌ಗೆ ಓವರ್ ಕ್ವಾಲಿಫೈಡ್ ಎಂದು ಹೇಳಿ ಕೆಲಸದಿಂದ ರಿಜೆಕ್ಟ್ ಮಾಡುತ್ತಿದ್ದಾರೆ. ಈ ಬಗ್ಗೆ ಆರ್ಯ ಬಂದು ಝೇಂಡೇ ಬಳಿ ಹೇಳಿಕೊಳ್ಳುತ್ತಾನೆ. ಅದಕ್ಕೆ ಝೇಂಡೇ ನೀನು ವರ್ಧನ್ ಕಂಪನಿಗೆ ಹೋಗು. ಅದು ಸಂಪೂರ್ಣವಾಗಿ ನಿನ್ನದು. ನೀನೇ ವರ್ಧನ್ ಕಂಪನಿಯನ್ನು ಬೆಳೆಸಿದ್ದು ಎಂದು ಹೇಳುತ್ತಾನೆ.

ಇತ್ತ ಆರ್ಯ ಕಂಪನಿಯ ಸಿಇಒ ಪೋಸ್ಟ್‌ಗೆ ರಿಸೈನ್ ಮಾಡಿದ್ದಾನೆ. ಕಂಪನಿಯಲ್ಲಿ ಎಲ್ಲರೂ ಆರಾಧನಾ ಅವರೇ ಸಿಇಒ ಆದ್ರೆ ಚೆಂದ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇದನ್ನೆಲ್ಲಾ ಕೇಳಿಸಿಕೊಂಡು ಆರಾಧನಾಳಿಗೆ ರೆಕ್ಕೆ ಬಂದಂತೆ ಆಗಿದೆ. ತಾನೇ ಸಿಇಒ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದಾಳೆ. ಇನ್ನು ಮೀರಾ, ಅನು ಜೊತೆಗೆ ಹೊಸ ಸಿಇಒ ಬಗ್ಗೆ ಮಾತನಾಡಿಸುತ್ತಿರುವುದನ್ನು ಕೇಳಿಸಿಕೊಂಡಿದ್ದಾಳೆ. ಮೀರಾ ಬಳಿ ಯಾರು ಹೊಸ ಸಿಇಒ ಎಂದು ಕೇಳಿದ್ದಕ್ಕೆ ಸರ್ಪ್ರೈಸ್ ಅಂತ ಹೇಳಿದ್ದು, ಆರಾಧನಾಳಿಗೆ ಮತ್ತಷ್ಟು ಖುಷಿಯನ್ನು ತಂದಿದೆ. ತಾನೇ ಮುಂದಿನ ಸಿಇಒ ಎಂದು ಭಾವಿಸಿದ್ದಾಳೆ.

ಇನ್ನು ಮಾನ್ಸಿ, ಅನು ಬಗ್ಗೆ ಕೇರ್ ಮಾಡುತ್ತಿದ್ದಾಳೆ. ಅಡುಗೆ ಮನೆಯ ಕೆಲಸಗಳನ್ನು ಕೂಡ ಕಲಿತಿದ್ದಾಳೆ. ಅನುಗೆ ಈಗ ಒಳ್ಳೆಯ ಸ್ನೇಹಿತೆಯಾಗಿರುವ ಮಾನ್ಸಿ ಅವಳ ಭಾವನೆಗಳಿಗೆ ಸ್ಪಂದಿಸುತ್ತಿದ್ದಾಳೆ. ಇದರಿಂದ ಅನುಗೂ ಖುಷಿಯಾಗಿದೆ. ಇನ್ನು ಆಫೀಸಿಗೆ ಹೊಸ ಸಿಇಓ ಅನ್ನು ಘೋಷಿಸಬೇಕಿದೆ. ಇದಕ್ಕಾಗಿ ಅನು ಆಫೀಸಿಗೆ ಹೊರಟಿದ್ದಾಳೆ. ದಾರಿ ಮಧ್ಯೆ ಕಾರು ಕೆಟ್ಟು ನಿಂತಿದೆ.

Jothe jotheyali Serial 28th April episode written update

ಇತ್ತ ಆರ್ಯ, ಝೇಂಡೇ ನಿನ್ನ ಮಾತು ಸರಿ ಇದೆ. ನಾನು ವರ್ಧನ್ ಕಂಪನಿಯಲ್ಲಿ ಕೆಲಸ ಮಾಡುವುದೇ ಸರಿ. ಹಾಗಾಗಿ ನಾನೀಗ ವರ್ಧನ್ ಕಂಪನಿಗೆ ಹೋಗಿ ಕೆಲಸದವನಾಗಿ ಸೇರಿಕೊಳ್ಳುತ್ತೇನೆ. ನಿನ್ನನ್ನು ಕಂಪನಿಯ ಬಾಸ್ ಆಗಿ ಮಾಡುತ್ತೇನೆ ಎಂದು ನಂಬಿಸಿ ಹೊರಟಿದ್ದಾನೆ. ಅನು ಡ್ರೈವರ್‌ಗೆ ಕಾರು ಕೆಡುವಂತೆ ಹೇಳಿಕೊಟ್ಟಿದ್ದು, ಅನು ಜೊತೆಗೆ ಆಟೋದಲ್ಲಿ ಆಫೀಸಿಗೆ ಹೋಗಲು ಆರ್ಯ ಪ್ಲಾನ್ ಮಾಡಿದ್ದಾನೆ.

ಕಾರು ಕೆಟ್ಟಿದ್ದಕ್ಕೆ ಅನು ಆಟೋ ಹತ್ತಲು ಹೋಗುತ್ತಾಳೆ. ಆಗ ಆರ್ಯ ಎದುರಾಗಿದ್ದಕ್ಕೆ ಶಾಕ್‌ನಲ್ಲಿ ಇದ್ದಾಳೆ. ಇನ್ನು ಹೊಸ ಸಿಇಒ ಆರಾಧನಾ ಆಗುತ್ತಾಳೋ ಇಲ್ಲ ಝೇಂಡೇ ಆಗುತ್ತಾನೋ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.

More from Filmibeat

English summary
Jothe Jotheyali Serial 28th April episode written update. Here is Detials about Arya is acting in front of jhende. Now he planned to join vardhan groups as a employee. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X