ಆರ್ಯನ ಬಗ್ಗೆ ಅನುಗೆ ಸಿಕ್ತು ಮಹತ್ವದ ಸುಳಿವು: ಮೀರಾ ಹೇಳಿದ್ದು ಸತ್ಯವಾಗುತ್ತಾ..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ರಮ್ಯಾ, ಕರುಣಾಕರನ ಪ್ರಶ್ನೆಗಳಿಗೆ ಉತ್ತರ ಕೊಡುವುದೇ ಇಲ್ಲ. ಕರುಣಾಕರ ನಿಮ್ಮನ್ನೇ ಮದುವೆಯಾಗಬೇಕು ಎಂದು ಪರಿಪರಿಯಾಗಿ ಕೇಳಿಕೊಳ್ಳುತ್ತಿರುತ್ತಾನೆ. ಆದರೆ, ರಮ್ಯಾಗೆ ಇಷ್ಟವಿದ್ದರೂ ಏನೂ ಹೇಳದೇ ಹಾಗೆ ಕಳಿಸುತ್ತಾಳೆ.
ವರ್ಧನ್ ಕಂಪನಿಯ ಒಡೆತನವನ್ನು ತನ್ನ ವಶ ಮಾಡಿಕೊಂಡಿರುವ ಝೇಂಡೇ, ಎಲ್ಲಾ ಅಧಿಕಾರವನ್ನು ಬದಲಾಯಿಸುತ್ತಿದ್ದಾನೆ. ಇದರಿಂದ ಮೀರಾ, ಅನು, ಹರ್ಷ ಏನಾಗುತ್ತಿದೆ ಎಂಬುದೇ ತಿಳಿಯದೇ ಒದ್ದಾಡುತ್ತಿದ್ದಾರೆ.
ಇತ್ತ ಆರಾಧನಾ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ. ಈ ವಿಚಾರ ತಿಳಿದು ಅನು, ಸಂಜುಗೆ ಆರಾಧನಾ ಜೊತೆಗೆ ಇರಲು ಹೇಳಿರುತ್ತಾಳೆ. ಸಂಜುಗೆ ಇಷ್ಟವಿಲ್ಲದಿದ್ದರೂ ಆರಾಧನಾ ಜೊತೆಗೆ ರೂಮಿನಲ್ಲೇ ಇರುತ್ತಾನೆ.

ಆರಾಧನಾ ಜೊತೆಗೆ ಸಿಕ್ಕಿ ಬಿದ್ದ ಸಂಜು
ಆರಾಧನಾ, ಸಂಜುಗೆ ತಮ್ಮ ಸಂಬಂಧದ ಬಗ್ಗೆ ಹೇಳುತ್ತಿರುತ್ತಾಳೆ. ಆದರೆ, ಸಂಜುಗೆ ಇದನ್ನೆಲ್ಲಾ ಕೇಳಲು ಇಷ್ಟವಿರುವುದಿಲ್ಲ. ಆರಾಧನಾಗೆ ಸಂಜು ನಡವಳಿಕೆ ಬೇಸರವಾಗಿ ಸಾಯುತ್ತೇನೆ ಎಂದು ಪುನಃ ಹೇಳುತ್ತಾಳೆ. ಈ ಮಾತನ್ನು ಕೇಳಿಸಿಕೊಂಡು ಬಂದ ಅನು, ಸಂಜುಗೆ ವಾರ್ನಿಂಗ್ ಕೊಡುತ್ತಾಳೆ. ಆರಾಧನಾಗೆ ನಿಮ್ಮ ಜವಾಬ್ದಾರಿಯನ್ನು ಕೊಟ್ಟಿದ್ದೆ. ಆದರೆ, ಇನ್ಮುಂದೆ ನೀವು ಆರಾಧನಾರನ್ನು ನೋಡಿಕೊಳ್ಳಬೇಕು. ಅವರ ಜೀವಕ್ಕೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ನಾನು ಸುಮ್ಮನಿರುವುದಿಲ್ಲ ಎಂದು ವಾರ್ನಿಂಗ್ ಕೊಟ್ಟು ಹೋಗುತ್ತಾಳೆ.

ಝೇಂಡೇ ಬಗ್ಗೆ ಅನುಗೆ ಹೇಳಿದ ರಮ್ಯಾ
ರಮ್ಯಾ, ಅನುಗೆ ಕಾಲ್ ಮಾಡಿ ತುಂಬಾ ಮುಖ್ಯವಾದ ವಿಚಾರವನ್ನು ಮಾತನಾಡಬೇಕು ಎಂದು ಹೇಳುತ್ತಾಳೆ. ರಮ್ಯಾ ಹೇಳಿದ ಜಾಗಕ್ಕೆ ಅನು ಹೋಗುತ್ತಾಳೆ. ಮೊದಲಿಗೆ ಕರುಣಾಕರನನ್ನು ಭೇಟಿ ಮಾಡಿದ್ದನ್ನು ಹೇಳಿದ ರಮ್ಯಾ, ಬಳಿಕ ಝೇಂಡೇ ಹಾಗೂ ಸಂಜು ಒಟ್ಟಿಗೆ ಇರುವ ಫೋಟೋಗಳನ್ನು ತೋರಿಸುತ್ತಾಳೆ. ಅನುಗೆ ಫೋಟೋ ನೋಡಿ ಶಾಕ್ ಆಗುತ್ತದೆ. ಇಬ್ಬರೂ ಯಾಕೆ ಭೇಟಿ ಮಾಡಿದ್ದರು ಎಂಬುದು ಗೊತ್ತಾಗುವುದಿಲ್ಲ. ಇನ್ನು ಝೇಂಡೇ ಕಂಪನಿಯ ಹೆಸರನ್ನು ಬದಲಾಯಿಸುವುದು ಹೇಗೆ ಎಂಬುದನ್ನು ಕರುಣಾಕರ ಅವರ ತಂದೆಗೆ ಫೋನ್ ಮಾಡಿ ಕೇಳುತ್ತಿದ್ದರಂತೆ ಎಂದು ರಮ್ಯಾ ಹೇಳುತ್ತಾಳೆ. ಈ ಮಾತನ್ನು ಕೇಳಿದ ಅನುಗೆ ಇನ್ನಷ್ಟು ಶಾಕ್ ಆಗುತ್ತದೆ. ಆದರೆ, ಆಫೀಸ್‌ನಲ್ಲಿ ಏನು ನಡೆಯುತ್ತಿದೆ ಎಂಬುದು ಗೊತ್ತಾಗುವುದಿಲ್ಲ.

ಮನೆಗೆ ಹೋಗೋಣ ಎಂದ ಆರಾಧನಾ
ಇತ್ತ ಆರಾಧನಾ ನಾವು ಊರಿಗೆ ಹೋಗೋಣ. ನಿಮ್ಮ ಅಪ್ಪ-ಅಮ್ಮನ ಜೊತೆಗೆ ಇರೋಣ ಎಂದು ಹೇಳುತ್ತಾಳೆ. ಇದಕ್ಕೆ ಸಂಜು ನಿರಾಕರಿಸುತ್ತಾನೆ. ಆಗ ಆರಾಧನಾ ನಿಮ್ಮ ಅಪ್ಪ-ಅಮ್ಮನನ್ನ ನೋಡಬೇಕು ಅನಿಸುತ್ತಿಲ್ವಾ ಎಂದು ಕೇಳುತ್ತಾಳೆ. ಮೊದಲು ಇದು ನನ್ನ ಮನೆ. ಇಲ್ಲೇ ನನ್ನವರು ಇರುವುದು ಎಂದು ಹೇಳುತ್ತಾನೆ. ಬಳಿಕ ತನ್ನ ಬಗ್ಗೆ ಪ್ರಿಯದರ್ಶಿನಿ ಹಾಗೂ ಪ್ರಭುದೇಸಾಯಿ ಅವರಿಗೆ ಏನೋ ಗೊತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾನೆ. ಹೀಗಾಗಿ ಊರಿಗೆ ಹೋಗಲು ಒಪ್ಪುತ್ತಾನೆ. ಇದೇ ವಿಚಾರವನ್ನು ಬಂದು ಆರಾಧನಾ, ಶಾರದಾಳಿಗೆ ಹೇಳುತ್ತಾಳೆ.

ಅನು ಮುಂದಿನ ನಡೆ ಏನು..?
ಮೀರಾ, ಅನುಗೆ ಕಾಲ್ ಮಾಡಿ ನಿನ್ನ ಜೊತೆಗೆ ಮುಖ್ಯವಾದ ವಿಷಯವನ್ನು ಹೇಳಬೇಕು ಎಂದು ಹೇಳುತ್ತಾಳೆ. ಅನು ಮತ್ತು ಮೀರಾ ಪಾರ್ಕ್‌ನಲ್ಲಿ ಭೇಟಿ ಮಾಡುತ್ತಾರೆ. ಆಗ ಮೀರಾ ಖಾಲಿ ಪೇಪರ್‌ಗಳಿಗೆ ಸಹಿ ಹಾಕಿದ್ದು, ಝೇಂಡೇ ಆ ಪೇಪರ್‌ಗಳಿಗೆ ಶಾರದಾ ಅವರ ಕೈನಲ್ಲೂ ಸಹಿ ಹಾಕಿಸಿಕೊಂಡಿದ್ದು, ಈಗ ನಾಪತ್ತೆಯಾಗಿರುವುದನ್ನು ಹೇಳುತ್ತಾಳೆ. ಆಗ ಅನುಗೆ ಎಲ್ಲಾ ವಿಚಾರವನ್ನು ಕೇಳಿ ಶಾಕ್ ಆಗುತ್ತದೆ. ಅನು ಮುಂದಿನ ನಿರ್ಧಾರ ಏನಾಗಿರುತ್ತದೋ ಎಂಬುದು ಗೊತ್ತಿಲ್ಲ.


Click it and Unblock the Notifications











