Jothe Jotheyali: ಅನು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ತಪ್ಪಾಗುತ್ತಿವೆಯಾ..?

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರಾಧನಾಳಿಗೆ ವರ್ಧನ್ ಗ್ರೂಪ್ಸ್‌ನ ಬೋರ್ಡ್ ಸದಸ್ಯಳಾಗುವ ಅವಕಾಶ ಸಿಕ್ಕಿದೆ. ಇದನ್ನು ಅವಳು ಒಪ್ಪಿಕೊಳ್ಳುತ್ತಾಳಾ ಇಲ್ಲವೇ ತಿರಸ್ಕರಿಸುತ್ತಾಳಾ ಗೊತ್ತಿಲ್ಲ.

ಇತ್ತ ಶಾರದಾ ದೇವಿ ಹಾಗೂ ಪುಷ್ಪಾ, ಅನು ಮತ್ತು ಆರ್ಯನನ್ನು ಒಂದು ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಆರ್ಯಗೆ ತಾನು ತಂದೆ ಆಗುತ್ತಿರುವ ವಿಚಾರವನ್ನು ಹೇಳಿದ್ದಾರೆ.

ಇದರಿಂದ ಈಗ ಆರ್ಯ, ಅನುಗೆ ಹತ್ತಿರವಾಗಿದ್ದಾನೆ. ಆಕೆಯನ್ನು ಮತ್ತೆ ಪ್ರೀತಿಸಲು ಶುರು ಮಾಡಿದ್ದಾನೆ. ಇಬ್ಬರೂ ಕೂಡ ಒಬ್ಬರನ್ನೊಬ್ಬರು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಅಪ್ಪನಿಗೆ ಹೆದರಿದ ಮಗಳು-ಅಳಿಯ

ಅಪ್ಪನಿಗೆ ಹೆದರಿದ ಮಗಳು-ಅಳಿಯ

ಅನು ಮತ್ತು ಆರ್ಯ ಇಬ್ಬರೂ ದೂರ ಆದಷ್ಟು ಇಬ್ಬರ ನಡುವೆ ಪ್ರೀತಿ ಹೆಚ್ಚಾಗಿದೆ. ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಸುತ್ತಿದ್ದು, ಅನು ಮತ್ತು ಆರ್ಯ ಆಫಿಸಿನಿಂದ ಒಟ್ಟಿಗೆ ಮನೆಗೆ ಹೊರಡುತ್ತಾರೆ. ಆದರೆ, ಅನು ಮತ್ತು ಆರ್ಯ ಇಬ್ಬರೂ ಸುಬ್ಬು ನೋಡಿದರೆ ಕಷ್ಟ ಎಂದು ಹೆದರುತ್ತಾರೆ. ಹೀಗಾಗಿ ಅನುಳನ್ನು ಮನೆಯಿಂದ ಸ್ವಲ್ಪ ದೂರದಲ್ಲೇ ಕಾರನ್ನು ನಿಲ್ಲಿಸುತ್ತಾರೆ. ಅನು ಮನೆಗೆ ಹೋಗುವುದನ್ನೇ ಆರ್ಯ ನಿಂತು ನೋಡುತ್ತಿರುತ್ತಾನೆ. ಇದನ್ನು ಸುಬ್ಬು ನೋಡಿ ಬಿಡುತ್ತಾನೆ.

ಪೆದ್ದಳಂತಾಗಿರುವ ಅನು

ಪೆದ್ದಳಂತಾಗಿರುವ ಅನು

ಮಗಳು ಆರ್ಯನಿಂದ ದೂರ ಇರಬೇಕು ಎಂದು ಅವರ ಮನೆಯಿಂದ ಕರೆದುಕೊಂಡು ಬಂದು ಬಾಡಿಗೆ ಮನೆ ಮಾಡಿರುವ ಸುಬ್ಬುಗೆ ಅನು, ಆಫೀಸಿಗೆ ಹೋಗುವುದೂ ಇಷ್ಟವಿಲ್ಲ. ಹೇಗಾದರೂ ಮಾಡಿ ಅನುಳನ್ನು ಆಫೀಸಿನಿಂದ ಬಿಡಿಸಬೇಕು ಎಂದುಕೊಂಡ ಸುಬ್ಬು, ಅನುಗೆ ಆಫೀಸಿಗೆ ಹೋಗಬೇಡ ಎಂದು ಹೇಳುತ್ತಾನೆ. ಪುಷ್ಪಾ, ಸುಬ್ಬು ಮೇಲೆ ಕೂಗಾಡುತ್ತಾಳೆ. ಆದರೆ, ಸುಬ್ಬು ನನಗೆ ನನ್ನ ಮಗಳ ಆರೋಗ್ಯ ಮುಖ್ಯ. ಅವಳು ಆರ್ಯನಿಂದ ದೂರ ಇರಬೇಕು. ಆದರೆ ಆಫೀಸಿನಲ್ಲಿ ಮತ್ತೆ ಆರ್ಯನ ಜೊತೆ ಕೆಲಸ ಮಾಡುವುದು ಇಷ್ಟವಿಲ್ಲ. ಹಾಗಾಗಿ ಕೆಲಸ ಬಿಡು ಎಂದು ಹೇಳುತ್ತಾನೆ. ಅನುಗೆ ಏನಾಗಿದೆಯೋ ಗೊತ್ತಿಲ್ಲ. ಅಪ್ಪ ಹೇಳಿದಂತೆ ಕೇಳುವ ಅನು, ಸರಿ ನಿಮ್ಮಿಷ್ಟವೇ ನನ್ನಿಷ್ಟ ಎಂದು ಆಫೀಸಿಗೆ ರಾಜೀನಾಮೆ ಕೊಡಲು ತೀರ್ಮಾನ ಮಾಡುತ್ತಾಳೆ.

ಕೆಲಸಕ್ಕೆ ರಾಜೀನಾಮೆ ಕೊಡುತ್ತಾಳಾ ಅನು..?

ಕೆಲಸಕ್ಕೆ ರಾಜೀನಾಮೆ ಕೊಡುತ್ತಾಳಾ ಅನು..?

ಅನುಗೆ ದಾರಿಯಲ್ಲಿ ಸಿಕ್ಕಿ ಜೋಗ್ತವ್ವ ಹೇಳಿದ್ದನ್ನು ಮರೆತಿರಬೇಕು. ಜೋಗ್ತವ್ವ, ದಾರಿ ತಪ್ಪ ಬೇಡ. ಸಿಕ್ಕ ಅವಕಾಶವನ್ನು ಬಿಟ್ಟರೆ, ಜೀವನ ಪೂರ್ತಿ ಗೋಳಾಡಬೇಕಾಗುತ್ತದೆ ಎಂದು ಜೋಗ್ತವ್ವ ಹೇಳಿರುತ್ತಾಳೆ. ಆದರೆ, ಅನು ಅದೆಲ್ಲವನ್ನೂ ಮರೆತು, ಅಪ್ಪನ ಇಷ್ಟವೇ ತನ್ನಿಷ್ಟ ಎಂಬಂತೆ ನಡೆದುಕೊಳ್ಳುತ್ತಿದ್ದಾಳೆ. ಆರ್ಯನಿಂದ ತನಗೆ ಗೊತ್ತಿಲ್ಲದೇ ದೂರ ಆಗುತ್ತಿದ್ದಾಳೆ. ಈಗ ಅಪ್ಪನ ಮಾತನ್ನು ಕೇಳಿ ಅನು ಕೆಲಸಕ್ಕೆ ರಾಜೀನಾಮೆ ಕೊಡುತ್ತಾಳಾ ಎಂಬ ಕುತೂಹಲ ಮೂಡಿದೆ.

ಆರಾಧನಾ ದಾರಿ ತಪ್ಪಿದ್ದಾಳಾ..?

ಆರಾಧನಾ ದಾರಿ ತಪ್ಪಿದ್ದಾಳಾ..?

ಆರಾಧನಾ ಇಲ್ಲೇ ಪರ್ಮನೆಂಟ್ ಆಗಿ ಉಳಿದುಕೊಳ್ಳಲು ನಿರ್ಧರಿಸಿದ್ದಾಳೆ ಎಂದು ಕಾಣುತ್ತದೆ. ಆರ್ಯ ಕೊಟ್ಟ ಆಫರ್ ಅನ್ನು ಒಪ್ಪಿರುವ ಆರಾಧನಾ ಈಗ ವರ್ಧನ್ ಗ್ರೂಪ್ಸ್‌ನ ಸದಸ್ಯಳಾಗುತ್ತಿದ್ದಾಳೆ. ಇದಕ್ಕೆ ಒಪ್ಪಿರುವ ಆರಾಧನಾ ನಾನು ಇಲ್ಲೇ ಉಳಿದುಕೊಳ್ಳುತ್ತೇನೆ ಎಂದು ಹೇಳಿದ್ದಾಳೆ. ಈ ಮಾತನ್ನು ಕೇಳಿ ಆರ್ಯ ಕೂಡ ಖುಷಿಪಟ್ಟಿದ್ದಾನೆ. ಮನೆಯಿಂದ ಅನು ಈಗ ದೂರಾಗಿದ್ದಾಳೆ. ಕೆಲಸಕ್ಕೂ ರಾಜೀನಾಮೆ ಕೊಡುತ್ತಿದ್ದಾಳೆ. ಆರಾಧನಾ ಮನೆಯಲ್ಲೇ ಉಳಿಯುವ ನಿರ್ಧಾರ ಮಾಡಿರುವುದು ಕಥೆ ಬೇರೆಯೇ ಟ್ವಿಸ್ಟ್ ಪಡೆಯುತ್ತಿದೆ ಎಂದು ಗೋಚರಿಸುತ್ತಿದೆ.

More from Filmibeat

English summary
Jothe Jotheyali Serial 28th February Episode Written Update. Subbu now decides that anu should not go for office. Anu also agrees to subbu decision. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X