For Quick Alerts
  ALLOW NOTIFICATIONS  
  For Daily Alerts

  ಆಸ್ಪತ್ರೆಗೆ ದಾಖಲಾದ ಸಂಜು ಬದುಕುಳಿಯುತ್ತಾನಾ; ಮೀರಾಗೆ ಆರ್ಯ ಬದುಕಿರುವ ಸತ್ಯ ಗೊತ್ತಾಯ್ತಾ?

  By ಪ್ರಿಯಾ ದೊರೆ
  |

  ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಸಂಜು ವಿಷದ ಪಾಯಸವನ್ನು ಒಬ್ಬನೇ ಕುಡಿದು ಬಿಡುತ್ತಾನೆ. ಅನು ಸಂಜುಗೆ ಬೈಯುತ್ತಾಳೆ. ನೀವು ನಮಗೆ ಸಹಾಯ ಮಾಡುತ್ತೀನಿ ಎಂದು ಹೇಳುತ್ತಾ ನಮಗೆ ತುಂಬಾ ತೊಂದರೆ ಕೊಡುತ್ತಿದ್ದೀರಾ ಎನ್ನುತ್ತಾಳೆ.

  ಮಾತು ಮುಂದುವರಿಸಿ, ನಾನು ಹುಟ್ಟಿದಾಗಿನಿಂದಲೂ ಇದೇ ವಠಾರದಲ್ಲೇ ಇರೋದು. ರಜಿನಿ ಆಂಟಿ ನನಗೆ ವಿಷ ಹಾಕುವಷ್ಟು ಕೆಟ್ಟವರಲ್ಲ. ಅವರ ಬಗ್ಗ ಹೀಗೆಲ್ಲಾ ಹೇಳಬೇಡಿ ಎಂದು ಹೇಳುತ್ತಾಳೆ.

  ಇದಕ್ಕೆ ಸಂಜು ಇಲ್ಲ ಅನು ಅವರೇ, ಅವರೇ ವಿಷ ಹಾಕಿರುವ ಬಗ್ಗೆ ಮಾತನಾಡಿದ್ದನ್ನು ನಾನು ಕೇಳಿಸಿಕೊಂಡಿದ್ದೀನಿ. ನಿಜವಾಗಲೂ ಈ ಪಾಯಸದಲ್ಲಿ ವಿಷ ಹಾಕಿದ್ದಾರೆ ಎಂದು ಹೇಳುತ್ತಾನೆ. ಅಷ್ಟರಲ್ಲಿ ಸಂಜು ಕಣ್ಣೆಲ್ಲಾ ಕೆಂಪಗಾಗಿ ಬೀಳುತ್ತಾನೆ.

  ಆತಂಕದಲ್ಲಿ ಏನೇನೋ ಮಾತನಾಡಿದ ಆರಾಧನಾ

  ಆತಂಕದಲ್ಲಿ ಏನೇನೋ ಮಾತನಾಡಿದ ಆರಾಧನಾ

  ತಕ್ಷಣವೇ ಸಂಜುನನ್ನು ಆಸ್ಪತ್ರೆಗೆ ಸೇರಿಸಲಾಗುತ್ತೆ. ವೈದ್ಯರು ಸಂಜುಗೆ ಚಿಕಿತ್ಸೆ ನೀಡುತ್ತಾರೆ. ಅನು ಶಾರದಾ ದೇವಿಗೆ ಕರೆ ಮಾಡಿ ವಿಷಯ ತಿಳಿಸುತ್ತಾಳೆ. ಹರ್ಷ ಆರಾಧನಾಳನ್ನು ಕರೆದುಕೊಂಡು ಆಸ್ಪತ್ರೆಗೆ ಬರುತ್ತಾರೆ. ಆತಂಕದಲ್ಲೇ ಬರುವ ಆರಾಧನಾ ನೀವೆಲ್ಲಾ ಸೇರಿಕೊಂಡು ನನ್ನ ಗಂಡನಿಗೆ ಏನು ಮಾಡಿದಿರಿ ಎಂದು ಪ್ರಶ್ನೆ ಮಾಡುತ್ತಾಳೆ. ಇದಕ್ಕೆ ಸುಬ್ಬು ಅವರು ಎದುರುತ್ತರ ಕೊಡುತ್ತಾರೆ. ಈಗ ಏನು ಮಾಡಬೇಕೋ ಅದನ್ನೇ ಮಾಡಿದ್ದೀವಿ. ಸಂಜು ಪ್ರಾಣಕ್ಕೇನು ಅಪಾಯವಿಲ್ಲ ಎಂದು ಹೇಳುತ್ತಾನೆ. ಇನ್ನು ವೈದ್ಯರು ಬಂದು ಏನಾಗಿದೆ ವಿಷ ಯಾಕೆ ತೆಗೆದುಕೊಂಡಿದ್ದರು ಎಂದೆಲ್ಲಾ ಪ್ರಶ್ನೆ ಮಾಡುತ್ತಾರೆ. ಆಗ ಮತ್ತೆ ಆರಾಧನಾ ಗಾಬರಿಯಾಗುತ್ತಾಳೆ. ಮತ್ತೆ ಎಲ್ಲರನ್ನು ಹೋಗಿ ಎಂದು ಹೇಳುತ್ತಾಳೆ.

  ಸಮಾಧಾನ ಮಾಡಿದ ಅನು

  ಸಮಾಧಾನ ಮಾಡಿದ ಅನು

  ಆರಾಧನಾಗೆ ಅನು ಮೇಲೆ ಬೇಸರವಿದೆ. ಹಾಗಾಗಿ ಆರಾಧನಾ ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ. ನನ್ನ ಜೊತೆಗೆ ವಿಶ್ವಾಸ್ ನನ್ನು ಕಳಿಸಿಕೊಡುತ್ತೀನಿ ಎಂದು ಹೇಳಿದ್ದಿರಿ. ಆದರೆ ಈಗ ಮಾಡುತ್ತಿರುವುದೇ ಬೇರೆ ಎಂದು ಹೇಳುತ್ತಾಳೆ. ಆರಾಧನಾ ಬೇಸರಕ್ಕೆ ಅನು ಸಮಾಧಾನ ಮಾಡುತ್ತಾಳೆ. ಆರಾಧನಾ ಸಮಾಧಾನ ಮಾಡಿಕೊಂಡು ವಿಶ್ ಪಕ್ಕದಲ್ಲೇ ಇರುತ್ತಾಳೆ. ಸುಬ್ಬು-ಪುಷ್ಪಾರನ್ನು ಮನೆಗೆ ಕಳಿಸುತ್ತಾಳೆ. ಇಷ್ಟವಿಲ್ಲದಿದ್ದರೂ ಸುಬ್ಬು ಮತ್ತು ಪುಷ್ಪಾ ಮನೆಗೆ ಹೊರಡುತ್ತಾರೆ.

  ಕ್ಷಮೆ ಕೇಳುವಂತೆ ಒತ್ತಾಯ ಮಾಡಿದ ರಮ್ಯಾ

  ಕ್ಷಮೆ ಕೇಳುವಂತೆ ಒತ್ತಾಯ ಮಾಡಿದ ರಮ್ಯಾ

  ಇತ್ತ ರಜಿನಿ ಮೇಲೆ ರಮ್ಯಾ ಮತ್ತು ಸಂಪತ್ ಕೋಪ ಮಾಡಿಕೊಂಡಿರುತ್ತಾರೆ. ನಿನ್ನೆಯಿಂದ ಏನೂ ತಿಂದಿಲ್ಲ ಈ ಕಾಫಿನಾದ್ರೂ ಕುಡಿ ರಮ್ಯಾ ಎಂದು ಹೇಳುತ್ತಾಳೆ. ಆದರೆ ರಮ್ಯಾ ಈ ಕಾಫಿಯಲ್ಲಿ ಏನು ಬೆರೆಸಿದ್ದೀಯಾ ಅಂತ ಹೇಳು. ಅನು ಗರ್ಭಿಣಿ ಅವಳಿಗೆ ವಿಷ ಬೆರೆಸಿದ ಪಾಯಸವನ್ನು ಅದೂ ನನ್ನ ಕೈಯಾರೆ ಕೊಡುವಂತೆ ಮಾಡಿದ್ದೀಯಾ. ಅನುಗೆ ಏನಾದರೂ ಆಗಿದ್ದರೆ ಏನು ಗತಿ. ಮೊದಲು ಅವರಿಗೆ ಫೋನ್ ಮಾಡಿ ಕ್ಷಮೆ ಕೇಳು ಎಂದು ಹೇಳುತ್ತಾಳೆ.

  ಆರ್ಯ ಬದುಕಿರುವ ಸತ್ಯ ತಿಳಿದ ಮೀರಾ

  ಆರ್ಯ ಬದುಕಿರುವ ಸತ್ಯ ತಿಳಿದ ಮೀರಾ

  ಇನ್ನು ಮೀರಾಗೆ ಆಫೀಸಿನಲ್ಲಿ ಉಸಿರುಗಟ್ಟಿದಂತಾಗುತ್ತಿದೆ. ಯಾರೂ ಸರಿಯಾಗಿ ಬರುತ್ತಿಲ್ಲ. ವರ್ಧನ್ ಮನೆಯವರು ಮೀರಾಗೆ ಹೆಚ್ಚಾಗಿ ಆಫೀಸಿನ ಕೆಲಸವನ್ನೇ ವಹಿಸುತ್ತಿದ್ದಾರೆ. ಹೀಗಾಗಿ ಮೀರಾ ಆಫೀಸ್ ಬಿಡಲು ಮುಂದಾಗಿದ್ದಾಳೆ. ಈ ಬಗ್ಗೆ ಝೇಂಡೇ ಬಳಿ ಮೀರಾ ಹೇಳುತ್ತಾಳೆ. ನಾನು ರಿಸೈನ್ ಮಾಡುತ್ತೀನಿ. ಆರ್ಯ ಸರ್ ಇದ್ದಾಲೇ ಚೆನ್ನಾಗಿತ್ತು ಎಂದು ಹೇಳುತ್ತಾಳೆ. ಈ ಮಾತಿಗೆ ಝೇಂಡೇ ಅಕಸ್ಮಾತ್ ಆರ್ಯ ಸರ್ ಬದುಕಿದ್ದರೆ ಏನು ಮಾಡುತ್ತೀರಾ. ಅವರು ವಾಪಸ್ ಬರುತ್ತಾರೆ ಎಂದು ಮೀರಾಗೆ ಭರವಸೆ ಕೊಡುತ್ತಾರೆ. ಮೀರಾ ಮೂಲಕ ಆರ್ಯ ಬದುಕಿರುವ ವಿಚಾರ ಅನುಗೆ ಗೊತ್ತಾಗುತ್ತಾ? ಇಲ್ಲ ಸಂಜುಗೆ ಪ್ರಜ್ಞೆ ಬಂದ ಮೇಲೆ ಹಳೆಯದೆಲ್ಲಾ ನೆನಪಾಗುತ್ತಾ?

  English summary
  sanju drinks poisoned payasa got admitted to hospital and Aradhana feels bad on anu.
  Monday, November 28, 2022, 18:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X