Don't Miss!
- News
ಕೇಂದ್ರ ಬಜೆಟ್: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಜೆಟ್ ಬಗ್ಗೆ ಭಾರೀ ಮೆಚ್ಚುಗೆ!
- Automobiles
ಸೇನೆಗೆ ಮಾರುತಿ ಜಿಪ್ಸಿ ಬದಲಿಗೆ ಅತ್ಯಾಧುನಿಕ ಹೊಸ ಜಿಮ್ನಿ ಸೇರ್ಪಡೆ ಹೇಗಿರಬಹುದು?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Sports
ಟಿ20 ರ್ಯಾಂಕಿಂಗ್: ಸೂರ್ಯಕುಮಾರ್ ಅಂಕದಲ್ಲಿ ಮತ್ತಷ್ಟು ಏರಿಕೆ
- Technology
ಬಜೆಟ್ ಬೆಲೆಯಲ್ಲಿ ದೂಳೆಬ್ಬಿಸಲು ಮೊಟೊ E13 ತಯಾರಿ! ಲಾಂಚ್ ಯಾವಾಗ!
- Finance
LIC Jeevan Lakshya: LIC ಜೀವನ್ ಲಕ್ಷ್ಯ ಯೋಜನೆ: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ? ತಿಳಿಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಶ್ವಾಸ್ ಸಾಲದ ಬಗ್ಗೆ ತಿಳಿದ ಮಾನ್ಸಿ: ಮತ್ತೆ ಜಗಳ ಮಾಡುತ್ತಾಳಾ..?
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ವಿಶ್ವಾಸ್ ಫೋನ್ ಅನ್ನು ಪ್ರಿಯದರ್ಶಿನಿ ಮನೆಯಲ್ಲೇ ಬಿಟ್ಟು ಹೋಗಿದ್ದಾನೆ. ಆ ಫೋನ್‌ಗೆ ವಿಶ್ವಾಸ್ ಪತ್ನಿ ಆರು ಸಲ ಕರೆ ಮಾಡಿದ್ದಾಳೆ. ಆದರೂ ಕೂಡ ಯಾರೂ ರಿಸೀವ್ ಮಾಡುವುದಿಲ್ಲ. ಫೋನ್ ರಿಂಗ್ ಆಗುತ್ತಲೇ ಇರುತ್ತದೆ.
ಆಗ ಮಾನ್ಸಿ ಬಂದು ಯಾರದು ಫೋನ್ ರಿಂಗ್ ಆಗುತ್ತಿದೆ ಎಂದು ನೋಡಲು ಬರುತ್ತಾಳೆ. ಆಗ ಅದು ವಿಶ್ವಾಸ್ ಫೋನ್ ಆಗಿರುತ್ತದೆ. ಯಾರಿದು ಆರಾಧನಾ ಹೆಸರು ಚೆನ್ನಾಗಿದೆ ಎಂದು ಮಾನ್ಸಿ ವಿಶ್ವಾಸ್ ಫೋನ್ ಹಾಗೂ ಪರ್ಸ್ ಅನ್ನು ತೆಗೆದು ನೋಡುತ್ತಾಳೆ. ಆರಾಧನಾ ವಿಶ್ವಾಸ್‌ನ ಪತ್ನಿ ಎಂಬುದು ಇದರಿಂದ ಅರ್ಥವಾಗುತ್ತದೆ.
ಲೀಲಾ
ಮನೆಯಲ್ಲಿ
ನಡೆದ
ಘಟನೆಯನ್ನು
ಎಜೆಗೆ
ಹೇಳಲಿಲ್ಲವೇಕೆ..
ಇನ್ನು ಹಾಗೆಯೇ ಮಾನ್ಸಿ ವಿಶ್ವಾಸ್ ಫೋನ್ ಅನ್ನು ಚೆಕ್ ಮಾಡುತ್ತಿರುತ್ತಾಳೆ. ಇದನ್ನು ನೋಡಿದ ಹರ್ಷ ಬೈಯುತ್ತಾನೆ. ಹಾಗೆಲ್ಲಾ ಬೇರೆಯವರ ಫೋನ್ ಅನ್ನು ಚೆಕ್ ಮಾಡಬಾರದು ಎಂದು ಹೇಳುತ್ತಾನೆ. ಅದಕ್ಕೆ ಮಾನ್ಸಿ ಸಬೂಬು ಕೊಡುತ್ತಲೇ ಇರುತ್ತಾಳೆ.

700 ಕೋಟಿ ಸಾಲದ ಬಗ್ಗೆ ಬಹಿರಂಗ
ಮಾನ್ಸಿ ವಿಶ್ವಾಸ್ ಫೋನ್ ಚೆಕ್ ಮಾಡುತ್ತಾ ಇರುತ್ತಾಳೆ. ಆಗ ಆರಾಧನಾ ಹಾಗೂ ವಿಶ್ವಾಸ್ ಚಾಟ್ ಅನ್ನು ಓದುತ್ತಿರುತ್ತಾಳೆ. ಆಗ ಆರಾಧನಾ ಹಾಗೂ ವಿಶ್ವಾಸ್ ರೊಮ್ಯಾಂಟಿಕ್ ಆಗಿ ಚಾಟ್ ಮಾಡಿರುವುದನ್ನು ಮಾನ್ಸಿ ಓದುತ್ತಾಳೆ. ಅದನ್ನು ಓದಿ ಎಷ್ಟು ರೊಮ್ಯಾಂಟಿಕ್ ಆಗಿದ್ದಾರೆ. ನೀನು ಒಂದು ದಿನವೂ ಹೀಗಿಲ್ಲ ಹರ್ಷನಿಗೆ ಎಂದು ಕಂಪೇರ್ ಮಾಡುತ್ತಾಳೆ. ಹಾಗೆ ಮುಂದೆ ಓದುತ್ತಾ ವಿಶ್ವಾಸ್ ಮಾಡಿರುವ 700 ಕೋಟಿ ರೂಪಾಯಿ ಸಾಲದ ಬಗ್ಗೆ ತಿಳಿಯುತ್ತದೆ. ಆಗ ಮಾನ್ಸಿ ಇವರು ನಮ್ಮ ಮನೆಗೆ ಬಂದಿರುವುದಕ್ಕೆ ಈಗ ಕಾರಣ ತಿಳಿಯಿತು. 700 ಕೋಟಿ ಸಾಲ ಮಾಡಿದ್ದಾರೆ. ಅದನ್ನು ಈ ಮನೆಯವರಿಂದ ಕೇಳಿ ಸಾಲ ತೀರಿಸೋಕೆ ಬಂದಿದ್ದಾರೆ ಎಂದು ಮಾನ್ಸಿ ಹೇಳುತ್ತಾಳೆ. ಈ ಮಾತನ್ನು ಕೇಳಿ ಹರ್ಷ ಕೂಡ ಶಾಕ್ ಆಗುತ್ತಾನೆ.

ಅನು ಗುರುತಿಸಿದ ಸಂಜುಗೆ ಎಲ್ಲಾ ನೆನಪಾಯ್ತಾ..?
ಸಂಜು ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿದ್ದಾನೆ. ಈ ವೇಳೆ ವೈದ್ಯರು ಕೆಲ ಫೋಟೋಗಳನ್ನು ಸಂಜುಗೆ ತೋರಿಸುತ್ತಾರೆ. ಸಂಜು ರಾಜನಂದಿನಿ ಫೋಟೋವನ್ನು ನೋಡಿ, ಇವರನ್ನು ಎಲ್ಲೋ ನೋಡಿದ್ದೀನಿ. ಆದರೆ ನೆನಪಾಗುತ್ತಿಲ್ಲ ಎಂದು ಹೇಳುತ್ತಾನೆ. ಬಳಿಕ ಅನು ಫೋಟೋ ನೋಡಿ, ಇವರು ನನಗೆ ಗೊತ್ತು. ಅವರ ಮನೆಯಲ್ಲೇ ನಾನೀಗ ಇರುವುದು. ತುಂಬಾ ಒಳ್ಳೆಯವರು. ಪಾಪ ಅವರ ಪತಿ ಸಾವಿನಿಂದ ಬೇಸರದಲ್ಲಿದ್ದಾರೆ ಎಂದು ಹೇಳುತ್ತಾನೆ. ಇನ್ನು ಕಾರಿನ ಫೋಟೋ ನೋಡಿ, ಅಪಘಾತವಾಗಿದ್ದನ್ನು ನೆನಪಿಸಿಕೊಳ್ಳಲು ಯತ್ನಿಸುತ್ತಾನೆ. ಬಳಿಕ ವೈದ್ಯರು ಪರ್ಫ್ಯೂಮ್ ಪರಿಮಳವನ್ನು ಗುರುತಿಸಲು ಹೇಳಿದಾಗ ಸಂಜು ಇದು ನನ್ನ ಹತ್ತಿರದವರು ಬಳಸುವ ಪರ್ಫ್ಯೂಮ್ ಎನ್ನುತ್ತಾನೆ. ವೈದ್ಯರು ಸಂಪಿಗೆ ಹೂವನ್ನು ಸಂಜು ಕೈಗೆ ಕೊಡುತ್ತಾರೆ. ಹೂವಿನ ವಾಸನೆಗೆ ಸಂಜು ಎಕ್ಸೈಟ್ ಆಗುತ್ತಾನೆ. ಇದು ಇಷ್ಟವಾಗುತ್ತಿಲ್ಲ ಎಂದು ಕೂಗಾಡುತ್ತಾನೆ. ನಂತರ ವೈದ್ಯರು ಇವತ್ತಿಗೆ ಇಷ್ಟು ಸಾಕು ಎಂದು ಹೇಳಿ ಕಳುಹಿಸುತ್ತಾರೆ.

ವೈದ್ಯರನ್ನು ಸಂಪರ್ಕಿಸಿದ ಪೊಲೀಸರು
ಝೇಂಡೆ ಆರ್ಯ ಸಾವನ್ನಪ್ಪಿದ್ದಾನೆ ಎಂಬುದು ತಿಳಿದ ಮೇಲೂ ಅವರ ಕುಟುಂಬವನ್ನು ಫಾಲೋ ಮಾಡುತ್ತಿದ್ದಾನೆ. ಸಂಜು ಆಸ್ಪತ್ರೆಗೆ ಬಂದಿರುವ ವಿಚಾರ ತಿಳಿದು ಝೇಂಡೆ ಅಲ್ಲಿಗೆ ಬರುತ್ತಾನೆ. ಪ್ರಿಯದರ್ಶಿನಿ ಅನ್ನು ನೋಡಿ, ನೀವೇನ್ ಇಲ್ಲಿ ಎಂದು ಕೇಳುತ್ತಾನೆ. ಆಗ ಪ್ರಿಯದರ್ಶಿನಿ ಅಲ್ಲಿಗೆ ಬಂದಿರುವ ಕಾರಣವನ್ನು ಹೇಳುತ್ತಾಳೆ. ನಂತರ ಪೊಲೀಸರು ಬಂದು ಆರ್ಯನ ಯೋಗ ಕ್ಷೇಮದ ಬಗ್ಗೆ ವಿಚಾರಿಸುತ್ತಿರುವುದನ್ನು ನೋಡುತ್ತಾನೆ.

ಸಂಜು ಮನಸೆಲ್ಲಾ ಅನು ಮೇಲೆ
ಇತ್ತ ಪುಷ್ಪಾ ಮನೆಗೆ ಬಂದಿರುತ್ತಾಳೆ. ಮಗಳಿಗೆ ಫೋನ್ ಮಾಡಿ ಸಮಾಧಾನ ಹೇಳುತ್ತಿರುತ್ತಾಳೆ. ಇನ್ನು ಅನು, ಶಾರದಾ, ಪ್ರಿಯದರ್ಶಿನಿ ಹಾಗೂ ಸಂಜು ಮನೆಗೆ ಬರುತ್ತಾರೆ. ಸಂಜು ತನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಂಡು ಕೊಂಚ ಹೊತ್ತು ಸುಮ್ಮನೆ ನೋಡುತ್ತಿರುತ್ತಾನೆ. ಮಾನ್ಸಿ ಸಂಜುವನ್ನು ಮಾತನಾಡಿಸಲು ಬಂದಾಗ ಸಂಜು ಅನುಗೆ ಹಾಯ್ ಹೇಳುತ್ತಾನೆ. ಆಗ ಮಾನ್ಸಿಗೆ ಶಾಕ್ ಆಗುತ್ತದೆ.