ಅನು ಝೇಂಡೇಗೆ ವಾರ್ನಿಂಗ್ ಕೊಡಲು ಕಾರಣವೇನು?

By ಪ್ರಿಯಾ ದೊರೆ

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಸಂಜು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾನೆ. ಇನ್ನೂ ಅವನಿಗೆ ಪ್ರಜ್ಞೆ ಬಂದಿಲ್ಲ. ಆಸ್ಪತ್ರೆಯಲ್ಲಿ ವೈದ್ಯರು ಕೂಡ ಸರಿಯಾಗಿ ಏನನ್ನೂ ಹೇಳುತ್ತಿಲ್ಲ ಇದರಿಂದ ಆರಾಧನಾ ಆತಂಕ ಹೆಚ್ಚಾಗಿದೆ.

ಅನು ದೇವರ ಕುಂಕುಮವನ್ನು ತಂದು ಆರಾಧನಾಗೆ ಕೊಡುತ್ತಾಳೆ. ಸಂಜು ಹಣೆಗೆ ಇಡಲು ಹೇಳುತ್ತಾಳೆ. ಆದರೆ ಆರಾಧನಾ ಇಲ್ಲ. ನೀವೇ ಇಡಿ, ನಾನು ಇಡೊಲ್ಲ ಎನ್ನುತ್ತಾಳೆ. ಅನು ಸಂಜು ಹಣೆಗೆ ಕುಂಕುಮವನ್ನು ಇಡುತ್ತಾಳೆ.

ಸುಬ್ಬು ಅನುಗೆ ಬಟ್ಟೆ ಮತ್ತು ಊಟವನ್ನು ತಂದಿದ್ದಾನೆ. ಆಸ್ಪತ್ರೆಯಲ್ಲಿ ವಾರ್ಡ್ ಮರೆತು ಹೋಗಿ ಅನುಗೆ ಫೋನ್ ಮಾಡುತ್ತಾನೆ. ಅನು ನಾನೇ ಬಂದು ಕರೆದುಕೊಂಡು ಬರುತ್ತೀನಿ ಎಂದು ಹೇಳುತ್ತಾಳೆ ಈ ವೇಳೆ ಝೇಂಡೇ ಅನ್ನು ನೋಡುತ್ತಾಳೆ.

ಅವಮಾನಿಸಿದ ಅನು

ಅವಮಾನಿಸಿದ ಅನು

ಆಗ ಅನು ಝೇಂಡೇ ಬಳಿ ಹೋಗಿ ನೀವ್ಯಾಕೆ ಇಲ್ಲಿ ಬಂದಿದ್ದೀರಾ ಎಂದು ಕೇಳುತ್ತಾಳೆ. ಅಷ್ಟರಲ್ಲಿ ಝೇಂಡೇ ವಿಶ್ವಾಸ್ ದೇಸಾಯಿ ಬಗ್ಗೆ ರಿಸೆಪ್ಷನ್ ನಲ್ಲಿ ಮಾಹಿತಿ ಕೇಳಿರುತ್ತಾನೆ. ಇನ್ನು ಅನು ಇಲ್ಲಿ ಯಾಕೆ ಇದ್ದೀರಾ ಎಂದಿದ್ದಕ್ಕೆ ಝೇಂಡೇ ಏನೇನೋ ಮಾತನಾಡಿ ನಾನು ಅಂದರೆ ಅಷ್ಟು ಭಯಾನಾ ಎಂದು ವ್ಯಂಗ್ಯ ಮಾಡುತ್ತಾನೆ. ಇದಕ್ಕೆ ಜಗ್ಗದ ಅನು ಅಲ್ಲ, ನೀವು ಅಂದರೆ ಅಸಹ್ಯ ಎಂದು ಹೇಳಿ ಅವಮಾನ ಮಾಡುತ್ತಾಳೆ. ಇನ್ನು ಇದೇನು ನಿಮ್ಮಪ್ಪನ ಆಸ್ಪತ್ರೆನಾ ಎಂದು ಕೇಳಿದ್ದಕ್ಕೆ, ಅನು ಅಲ್ಲ, ನನ್ನ ಆಸ್ಪತ್ರೆ ಇದರಲ್ಲಿ ನಮ್ಮದೂ ಅರ್ಧ ಶೇರ್ ಇದೆ ಎಂದು ಹೇಳಿ ರಿಸೆಪ್ಷನ್ ನಲ್ಲಿ ತನ್ನ ಪರ್ಮಿಷನ್ ಇಲ್ಲದೇ, ಸಂಜು ವಾರ್ಡ್ ಗೆ ಯಾರನ್ನೂ ಬಿಡುವಂತಿಲ್ಲ ಎಂದು ಹೇಳಿ ಹೊರಡುತ್ತಾಳೆ.

ಆರಾಧನಾ ಮಾತಿಗೆ ಅನು ಶಾಕ್

ಆರಾಧನಾ ಮಾತಿಗೆ ಅನು ಶಾಕ್

ಸುಬ್ಬು ಆರಾಧನಾ ತಮಾಷೆಯಾಗಿ ಮಾತನಾಡುತ್ತಿರುತ್ತಾರೆ. ಇನ್ನು ಸುಬ್ಬು ಆರಾಧನಾಗೆ ಇಬ್ಬರ ನಡುವೆ ಏನಾದರೂ ಮನಸ್ತಾಪವಿದ್ದರೆ, ಮುಂದುವರಿಸಬೇಡಿ ಎಂದು ಬುದ್ಧಿವಾದ ಹೇಳುತ್ತಿರುತ್ತಾನೆ. ಇದೇ ವೇಳೆಗೆ ಅನು ಕೂಡ ಬರುತ್ತಾಳೆ. ಏನು ಎಂದು ಕೇಳಿದ್ದಕ್ಕೆ ವಿಷಯ ಮುಚ್ಚಿಡುವ ಆರಾಧನಾ ನನ್ನ ವಿಶು ಲವ್ ಸ್ಟೋರಿ ಹೇಳುತ್ತಿದ್ದೆ ಎಂದು ಹೇಳುತ್ತಾಳೆ. ಆಗ ಅನು ಹೌದು.. ನನ್ನ ಮತ್ತೆ ನಿಮ್ಮದು ಒಂದೇ ಥರ ಪಾನಿ ಪುರಿಯಿಂದ ಶುರುವಾದ ಲವ್ ಸ್ಟೋರಿ ಎಂದು ಹೇಳುತ್ತಾಳೆ. ಆಗ ಆರಾಧನಾ ನನಗೆ ಸ್ಟ್ರೀಟ್ ಫುಡ್ ಇಷ್ಟಾನೇ ಆಗಲ್ಲ. ನಾವಿಬ್ಬರೂ ಯಾವತ್ತೂ ಪಾನಿಪುರಿ ತಿಂದಿಲ್ಲ ಎಂದು ಹೇಳುತ್ತಾಳೆ. ಇದರಿಂದ ಅನು ಶಾಕ್ ಆಗುತ್ತಾಳೆ.

ಸೊಸೆ ಆರಾಧನಾಳಿಗೆ ಎಲ್ಲಾ ಸತ್ಯ ಹೇಳುತ್ತಾರಾ?

ಸೊಸೆ ಆರಾಧನಾಳಿಗೆ ಎಲ್ಲಾ ಸತ್ಯ ಹೇಳುತ್ತಾರಾ?

ಇತ್ತ ಪ್ರಿಯದರ್ಶಿನಿ ಅನು ಬಗ್ಗೆ ಯೋಚಿಸುತ್ತಿರುತ್ತಾಳೆ. ಪ್ರಭು ದೇಸಾಯಿ ಜೊತೆಗೆ ಮಾತನಾಡುತ್ತಾ, ಸಂಜುಗೆ ಹೀಗಾಗಲು ಅನು ಕಾರಣ ಅನಿಸುತ್ತಿದೆ. ಅವಳೇ ಯಾಕೆ ಸಂಜುಗೆ ವಿಷ ಹಾಕಿರಬಾರದು ಎಂದೆಲ್ಲಾ ಹೇಳುತ್ತಾಳೆ ಇದರಿಂದ ಪ್ರಭು ದೇಸಾಯಿ ಶಾಕ್ ಆಗಿ ನಿನಗೇನಾಗಿದೆ ಎನ್ನುತ್ತಾನೆ. ಆಗ ಪ್ರಿಯದರ್ಶಿನಿ ತಾನು ಕೇಶವನ ಜೊತೆಗೆ ಮಾತನಾಡಿದ್ದು, ಅವನು ಎಲ್ಲವನ್ನೂ ಹೇಳಿದ್ದಾನೆ. ಅನು ಆರ್ಯ ಮೇಲೆ ದ್ವೇಷ ಕಾರುತ್ತಿದ್ದಾಳೆ ಎಂದೆಲ್ಲಾ ಹೇಳುತ್ತಾಳೆ. ಪ್ರಿಯದರ್ಶಿನಿ ಮಾತು ಕೇಳಿ ಪ್ರಭು ದೇಸಾಯಿ ಎಲ್ಲಾ ಸತ್ಯವನ್ನು ನಾನು ಆರಾಧನಾಗೆ ಹೇಳುತ್ತೀನಿ ಎನ್ನುತ್ತಾನೆ.

ಮೀರಾ ಝೇಂಡೇ ಮಾತನ್ನು ನಡೆಸಿಕೊಡುತ್ತಾಳಾ?

ಮೀರಾ ಝೇಂಡೇ ಮಾತನ್ನು ನಡೆಸಿಕೊಡುತ್ತಾಳಾ?

ಝೇಂಡೇ ಮೀರಾಗೆ ಫೋನ್ ಮಾಡಿ ಅಚ್ಚರಿಯ ವಿಚಾರವನ್ನು ಹೇಳಿದ್ದಾನೆ. ಆರ್ಯ ಸರ್ ವಾಪಸ್ ಆಫೀಸಿಗೆ ಬರಬೇಕು ಎಂದರೆ, ನೀನು ನನ್ನನ್ನ ಆಫೀಸಿಗೆ ಕರೆಸಿಕೊಳ್ಳಬೇಕು ಎನ್ನುತ್ತಾನೆ. ಝೇಂಡೇ ಮಾತಿನಿಂದ ಮೀರಾ ಶಾಕ್ ಅಷ್ಟೇ ಅಲ್ಲ, ಗಾಬರಿಯೂ ಆಗುತ್ತಾಳೆ. ಇದು ಹೇಗೆ ಸಾಧ್ಯ ಝೇಂಡೇ, ಹೀಗೆಲ್ಲಾ ಮಾತನಾಡಬೇಡಿ ಎನ್ನುತ್ತಾಳೆ. ಆದರೆ ಮುಂದೇನಾಗುತ್ತೋ ಎಂಬ ಕುತೂಹಲ ಮೂಡಿದೆ.

More from Filmibeat

English summary
jhende comes to see vishwas desai. But anu warns jhende not to come again.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X