ಅನು ಕೊಲ್ಲಲು ಝೇಂಡೆ ಮಾಸ್ಟರ್‌ ಪ್ಲಾನ್

By ಪ್ರಿಯಾ ದೊರೆ

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಸಂಜುಗೆ ಇನ್ನು ನೆನಪು ಬಂದಿಲ್ಲ. ಆದರೆ, ತನ್ನವರು ಎಂದು ಅನುಳನ್ನು ನೋಡಿದಾಗಲೆಲ್ಲಾ ಭಾವಿಸುತ್ತಾನೆ. ಆದರೆ ಆತನಿಗೆ ತನ್ನ ಭಾವನೆಗಳನ್ನು ತೋರಿಸಿಕೊಳ್ಳಲು ಆಗುತ್ತಿಲ್ಲ. ಆದರೆ ಅನು ಮೇಲೆ ವಿಶೇಷವಾದ ಕಾಳಜಿಯನ್ನು ಹೊಂದಿದ್ದಾನೆ.

ಇನ್ನು ಮನೆಯಲ್ಲಿ ಮುಖ ತೊಳೆದುಕೊಳ್ಳುವಾಗ ಸಂಜು ತನ್ನ ಮುಖವನ್ನು ನೋಡುತ್ತಾನೆ. ಆದರೆ ಅವನಿಗೆ ತನ್ನ ಮುಖ ವಿಚಿತ್ರ ಎಂದು ಅನಿಸುತ್ತದೆ. ಹೊಸದಾಗಿ, ಮೊದಲ ಬಾರಿಗೆ ನೋಡಿದಂತೆ ತನ್ನ ಮುಖವನ್ನು ಮತ್ತೆ ಮತ್ತೆ ಮುಟ್ಟಿ ನೋಡಿಕೊಳ್ಳುತ್ತಾನೆ.

ಇತ್ತ ಅಸ್ತಿ ಬಿಡಲು ಪ್ರಭು ದೇಸಾಯಿ ಅವರು ಬರುತ್ತಾರೋ ಇಲ್ಲವೋ ಎಂಬ ಗೊಂದಲದಲ್ಲಿ ಪ್ರಯದರ್ಶಿನಿ ಇರುತ್ತಾಳೆ. ಶಾರದಾ ಅವರು ಬಳಿ, ಅವರಿಗೆ ನನ್ನ ಮೇಲೆ ಕೋಪ, ಇಲ್ಲಿದ್ದು ನಿಮಗೆ ತೊಂದರೆ ಕೊಡುತ್ತಿದ್ದೇನೆ ಎಂದು. ಹಾಗಾಗಿ ಅವರು ಬರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳುತ್ತಾಳೆ.

ನೀನು ಎಷು ದೊಡ್ಡ ತಪ್ಪು ಮಾಡಿದ್ದೀಯಾ ಗೊತ್ತಾ..?

ನೀನು ಎಷು ದೊಡ್ಡ ತಪ್ಪು ಮಾಡಿದ್ದೀಯಾ ಗೊತ್ತಾ..?

ಅಷ್ಟರಲ್ಲಿ ಪ್ರಭು ದೇಸಾಯಿ ಅವರು ಮನೆಗೆ ಬರುತ್ತಾರೆ. ಅವರು ಬರುತ್ತಿದ್ದಂತೆ ಪ್ರಯದರ್ಶಿನಿ ಮೇಲೆ ಕರೆದುಕೊಂಡು ಹೋಗುತ್ತಾಳೆ. ಆಗ ಪ್ರಭು ನೀನು ಎಷು ದೊಡ್ಡ ತಪ್ಪು ಮಾಡಿದ್ದೀಯಾ ಗೊತ್ತಾ..? ಆರಾಧನಾಗೆ ಈ ವಿಚಾರ ತಿಳಿದರೆ ಹೇಗೆ ರಿಯಾಕ್ಟ್ ಮಾಡುತ್ತಾಳೋ ಗೊತ್ತಿಲ್ಲ. ಅಲ್ಲದೇ, ಆರ್ಯನಿಗೆ ಹಳೆಯದೆಲ್ಲಾ ನೆನಪು ಬಂದರೆ ಅವನೇ ಎಲ್ಲಾ ಸತ್ಯವನ್ನು ಹೇಳುತ್ತಾನೆ. ಆಗ ಏನು ಮಾಡುತ್ತೀಯಾ ಎಂದು ಹೇಳುತ್ತಾನೆ. ಅದಕ್ಕೆ ಪ್ರಯದರ್ಶಿನಿ ನನಗೇನು ಅರ್ಥವಾಗುತ್ತಿಲ್ಲ ಎನ್ನುತ್ತಾಳೆ. ಇತ್ತ ಮಾನ್ಸಿ ಈ ಮೂವರು ಯಾಕೆ ನಮ್ಮ ಮನೆಗೆ ಬಂದು ವಕ್ಕರಿಸಿಕೊಂಡಿದ್ದಾರೆ ಎಂಬ ಬಗ್ಗೆ ಲೆಕ್ಕಾಚಾರ ಹಾಕುತ್ತಿರುತ್ತಾಳೆ. ಇದರಲ್ಲಿ ಏನೋ ಮಿಸ್ ಹೊಡೀತಿದೆ ನಮಗೆ ಅರ್ಥವಾಗುತ್ತಿಲ್ಲ ಎಂದು ಹರ್ಷನ ಬಳಿ ಹೇಳುತ್ತಾಳೆ. ಹರ್ಷ ಕೂಡ ಹೌದಲ್ವಾ ಎಂದು ಯೋಚಿಸುತ್ತಾನೆ.

ಅನು ಕೊಲ್ಲಲು ಮುಂದಾದ ಝೇಂಡೆ

ಅನು ಕೊಲ್ಲಲು ಮುಂದಾದ ಝೇಂಡೆ

ಝೇಂಡೆ ಆರ್ಯವರ್ಧನ್ ಸತ್ತ ಮೇಲೂ ಅನು ಮೇಲೆ ಧ್ವೇಷ ಸಾಧಿಸುವುದನ್ನು ಬಿಟ್ಟಿಲ್ಲ. ಹೇಗಾದರೂ ಮಾಡಿ ಅನುಳನ್ನು ಕೊಲ್ಲಬೇಕು ಎಂದುಕೊಂಡಿದ್ದಾನೆ. ಹಾಗಾಗಿ ಅಸ್ತಿ ಬಿಡಲು ಹೋದಾಗ ಅನುಳನ್ನು ನೀರಿನಲ್ಲಿ ಮುಳುಗಿಸಿ ಸಾಯಿಸಬೇಕು ಎಂದು ಪ್ಲಾನ್ ಮಾಡಿದ್ದಾನೆ. ಇದಕ್ಕಾಗಿ ಒಬ್ಬನನ್ನು ನೇಮಿಸಿದ್ದಾನೆ. ಎಲ್ಲರೂ ಇರುವಾಗಲೇ ಅನುಳನ್ನು ಕೊಲ್ಲಬೇಕು. ಅದು ಕೊಲೆ ಅನ್ನೋದು ಯಾರಿಗೂ ಗೊತ್ತಾಗಬಾರದು. ಆಕ್ಸಿಡೆಂಟ್ ಎಂದುಕೊಳ್ಳಬೇಕು. ಅವಳ ಹೊಟ್ಟೆಯಲ್ಲಿರುವ ಮಗು ಕೂಡ ಸಾಯಬೇಕು ಎಂದು ಹೇಳುತ್ತಾನೆ.

ಅನುಗೆ ಯಾರೂ ಸಮಾಧಾನ ಮಾಡುತ್ತಿಲ್ಲ

ಅನುಗೆ ಯಾರೂ ಸಮಾಧಾನ ಮಾಡುತ್ತಿಲ್ಲ

ಇನ್ನು ಅಸ್ತಿ ಬಿಡಲು ಎಲ್ಲರೂ ಬಂದಿರುತ್ತಾರೆ. ಆಗ ಪುಷ್ಪಾ ಯಾರೂ ಅಳಬೇಡಿ. ಅಳುತ್ತಾ ಆರ್ಯ ಸರ್ ನನ್ನು ಕಳಿಸಿಕೊಡುವುದು ಬೇಡ ಎನ್ನಾತ್ತಾರೆ. ಆದರೂ ಎಲ್ಲರೂ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕುತ್ತಿರುತ್ತಾರೆ. ಪ್ರಿಯದರ್ಶಿನಿ ದುಃಖದಿಂದ ಎಲ್ಲರೂ ಆರ್ಯ ಸತ್ತಿದ್ದಾನೆ ಎಂದು ತಿಳಿದು ಅಳುತ್ತಿದ್ದಾರೆ. ಆದರೆ ಅದು ನಮ್ಮ ಮಗ ವಿಶ್ವಾಸ್ ಎಂದು ಅಳುತ್ತಾಳೆ. ಆಗ ಪ್ರಭು ಪ್ರಿಯಾಗೆ ಬಾಯಿಮುಚ್ಚು ಹೇಳುತ್ತಾನೆ. ಇತ್ತ ಸಂಜು ಅನುಳನ್ನೇ ನೋಡುತ್ತಿರುತ್ತಾನೆ. ಪಾಪ ಅನುಗೆ ಯಾರೂ ಸಮಾಧಾನ ಮಾಡುತ್ತಿಲ್ಲ. ಅವರು ಆರ್ಯ ಅವರನ್ನು ತುಂಬಾ ಪ್ರೀತಿಸುತ್ತಿದ್ದರು ಎಂದು ಕಾಣುತ್ತದೆ ಎಂದು ಹೇಳುತ್ತಾ ಸಮಾಧಾನ ಮಾಡಲು ಮುಂದಾಗುತ್ತಾನೆ. ಆದರೆ ಸಾಧ್ಯವಾಗುವುದಿಲ್ಲ.

ಸಂಜು ನಡವಳಿಕೆಯತ್ತ ಮಾನ್ಸಿ ಗಮನ

ಸಂಜು ನಡವಳಿಕೆಯತ್ತ ಮಾನ್ಸಿ ಗಮನ

ಮಾನ್ಸಿ ಸಂಜು ನಡವಳಿಕೆಯನ್ನು ಗಮನಿಸುತ್ತಿರುತ್ತಾಳೆ. ಯಾಕೆ ಇವನು ಅನುಳನ್ನೇ ನೋಡುತ್ತಿದ್ದಾನೆ. ಏನಾಗಿದೆ ಇವನಿಗೆ ಎಂದು ಅಂದುಕೊಳ್ಳುತ್ತಾಳೆ. ಅಸ್ತಿ ಬಿಟ್ಟ ನಂತರ ಅನು ನದಿಗೆ ಇಳಿಯುತ್ತಾಳೆ. ಅಷ್ರಲ್ಲಿ ಯಾರೋ ಎಳೆದಂತಾಗಿ ಅನು ನೀರಿನಲ್ಲಿ ಬಿದ್ದು ಬಿಡುತ್ತಾಳೆ. ಅವಳನ್ನು ಸಂಜು ಕಾಪಾಡುತ್ತಾನಾ..? ಇಲ್ಲ ಅನು ಸಾಯುತ್ತಾಳಾ ಕಾದು ನೋಡಬೇಕಿದೆ.

More from Filmibeat

English summary
Sanju Likes Anu for no reason. Jhende plans to kill Anu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X