Jothe Jotheyali: ಕಮಲಮ್ಮನ ವಠಾರದಲ್ಲಿ ಹಬ್ಬ: ಈ ಸಂಭ್ರಮದಲ್ಲಿ ಎಲ್ಲರೂ ಒಂದಾಗುತ್ತಾರಾ..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಸುಬ್ಬು ವಠಾರದಲ್ಲಿರುವ ತನ್ನ ಮನೆಯನ್ನು ರಿಪೇರಿ ಮಾಡಿಸುತ್ತಿದ್ದಾನೆ. ಸುಬ್ಬು ದೆಸೆಯಿಂದಾಗಿ ವಠಾರದ ಜನರು ಕೂಡ ತಮ್ಮ ಮನೆಗಳಲ್ಲಿ ರಿಪೇರಿ ಕೆಲಸಗಳನ್ನು ಮಾಡಿಸುತ್ತಿದ್ದಾರೆ.
ರಿಪೇರಿ ಕೆಲಸಗಳು ಮುಕ್ತಾಯದ ಹಂತ ತಲುಪಿದ್ದು, ಇದೇ ಸಂದರ್ಭದಲ್ಲಿ ವಠಾರದಲ್ಲಿ ಹಬ್ಬ ಮಾಡಲು ತೀರ್ಮಾನಿಸಿದ್ದಾರೆ. ಹೀಗಾಗಿ ವಠಾರದವರೆಲ್ಲಾ ಹಬ್ಬಕ್ಕೆ ತಯಾರಿಯನ್ನೂ ನಡೆಸುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ರಮ್ಯಾ ಮತ್ತು ಕರುಣಾಕರ ದೂರ ಆಗಿ ಬಹಳ ಕಾಲವಾಯ್ತು. ಕಮಲಮ್ಮನ ವಠಾರದ ಹಬ್ಬಕ್ಕೆ ಬಂದು ಮತ್ತೆ ಸಂಬಂಧ ಬೆಳೆಸುತ್ತಾನಾ ಎಂಬ ಕುತೂಹಲ ಮೂಡಿದೆ.

ಮತ್ತೆ ರಮ್ಯಾ ಕರುಣಾಕರ ಪ್ರೀತಿ ಹುಟ್ಟುತ್ತಾ?
ಕಮಲಮ್ಮನ ವಠಾರದಲ್ಲಿ ಹಬ್ಬ ಮಾಡಲು ವಠಾರದವರೆಲ್ಲರೂ ತೀರ್ಮಾನಿಸಿದ್ದಾರೆ. ಹೀಗಾಗಿ ರಮ್ಯಾ ಮತ್ತು ಸಂಪತ್ ಸೇರಿ ಇಬ್ಬರೂ ಎಲ್ಲರಿಗೂ ಫೋನ್ ಮಾಡಿ ಆಹ್ವಾನಿಸುತ್ತಿದ್ದಾರೆ. ಸಂಪತ್ ಈ ವೇಳೆ ಎಡವಟ್ಟು ಒಂದನ್ನು ಮಾಡಿದ್ದಾನೆ. ರಮ್ಯಾ ಫೋನ್‌ನಿಂದ ಅಕಸ್ಮಾತ್ ಆಗಿ ಕರುಣಾಕರನಿಗೆ ಫೋನ್ ಮಾಡಿದ್ದಾನೆ. ರಮ್ಯಾ ಫೋನ್ ಬಂದಿದ್ದಕ್ಕೆ ಖುಷಿ ಪಟ್ಟ ಕರುಣಾಕರ ಮತ್ತೆ ಮತ್ತೆ ರಮ್ಯಾಗೆ ಪೋನ್ ಮಾಡುತ್ತಿದ್ದಾನೆ. ಆದರೆ, ಇದು ಸಂಪತ್‌ಗೆ ಪೀಕಲಾಟವಾಗಿದೆ. ಈ ಮೂಲಕವಾದರೂ ರಮ್ಯಾ ಮತ್ತು ಕರುಣಾಕರನ ನಡುವೆ ಪ್ರೀತಿ ಹುಟ್ಟುತ್ತಾ ಎಂದು ಕಾದು ನೋಡಬೇಕಿದೆ.

ಶಾರದಾರನ್ನು ಹಬ್ಬಕ್ಕೆ ಕರೆದ ಪುಷ್ಪಾ
ಈಗಾಗಲೇ ಕಮಲಮ್ಮನ ವಠಾರಕ್ಕೆ ಲೈಟ್‌ಗಳನ್ನು ಹಾಕಿ ಹಬ್ಬಕ್ಕೆ ತಯಾರಿ ನಡೆಸಲಾಗಿದೆ. ವಠಾರದ ಮಗಳು ಹಾಗೂ ಅಳಿಯ ಆದ ಅನು ಮತ್ತು ಆರ್ಯನನ್ನು ಕರೆಯಲು ವಠಾರದವರು ತೀರ್ಮಾನಿಸಿದ್ದಾರೆ. ಸುಬ್ಬು ನಿರ್ಧಾರಗಳಿಂದ ಬೇಸತ್ತಿರುವ ಪುಷ್ಪಾ, ಶಾರದಾ ದೇವಿಗೆ ಫೋನ್ ಮಾಡಿದ್ದಾಳೆ. ವಠಾರದಲ್ಲಿ ಮನೆ ರಿಪೇರಿ ಮುಕ್ತಾಯಗೊಂಡಿದೆ. ಹೀಗಾಗಿ ಪುಷ್ಪಾ, ಶಾರದಾಳನ್ನು ಸೆಲಬ್ರೇಷನ್‌ಗೆ ಬನ್ನಿ ಎಂದು ಕರೆಯುತ್ತಾಳೆ. ಆದರೆ, ಶಾರದಾ ಇದಕ್ಕೆ ಸುಬ್ಬು ಕರೆದಿದ್ದರೆ ಬರಬಹುದಿತ್ತು. ಆದರೆ ಈಗ ಬರೋದು ಹೇಗೋ ಗೊತ್ತಿಲ್ಲ ಎಂದು ಹೇಳುತ್ತಾರೆ. ಇದರಿಂದ ಪುಷ್ಪಾ ಬೇಸರ ಮಾಡಿಕೊಳ್ಳುತ್ತಾಳೆ.

ಚಿಂತೆಯಲ್ಲಿ ಮುಳುಗಿದ ಅನು
ಇನ್ನು ವಠಾರದಿಂದ ಮೀರಾಗೆ ಫೋನ್ ಮಾಡಿ ಆರ್ಯ ಸರ್‌ನನ್ನು ಕಮಲಮ್ಮನ ಹಬ್ಬಕ್ಕೆ ಕಳಿಸಿಕೊಡಬೇಕು ಎಂದು ಕೇಳುತ್ತಾರೆ. ಈ ಬಗ್ಗೆ ಮೀರಾ ಓಕೆ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿಸಿಕೊಂಡ ಆರಾಧನಾ ಕಳಿಸದಂತೆ ಅವಾಯ್ಡ್ ಮಾಡಲು ಪ್ಲ್ಯಾನ್ ಮಾಡುತ್ತಾಳೆ. ಇದೇ ವೇಳೆ ಇತ್ತ ಅನು ತನ್ನ ಹಾಗೂ ಆರ್ಯನ ಬಗ್ಗೆ ಯೋಚಿಸುತ್ತಿರುತ್ತಾಳೆ. ರಾಜೀನಾಮೆ ಕೊಟ್ಟು ಎರಡು ತಿಂಗಳು ನೊಟೀಸ್ ಪೀರಿಯಡ್ ಮುಗಿಯುವುದರೊಳಗೆ ಆರ್ಯ ಸರ್ ಅಪ್ಪನ ಮನಸನ್ನು ಗೆಲ್ಲಬೇಕು. ಇಲ್ಲದಿದ್ದರೆ, ನಾನು ಮತ್ತು ಆರ್ಯ ಸರ್ ಇನ್ನೂ ದೂರ ಆಗಬೇಕಾಗುತ್ತದೆ ಎಂದು ಯೋಚಿಸುತ್ತಿರುತ್ತಾಳೆ.

ಆರ್ಯನಿಗೆ ವೈರಿ ಆಗುತ್ತಾಳಾ ಆರಾಧನಾ..?
ಆರಾಧನಾ, ಆರ್ಯ ಸರ್ ಕಮಲಮ್ಮನ ವಠಾರಕ್ಕೆ ಹೋಗಲೇ ಬೇಕಾ.? ಕ್ಯಾನ್ಸಲ್ ಮಾಡುವುದಕ್ಕೆ ಆಗುವುದಿಲ್ವಾ ಎಂದು ಕೇಳುತ್ತಾಳೆ. ಇದಕ್ಕೆ ಮೀರಾ ಇಲ್ಲ, ಆರ್ಯ ಸರ್ ಹೋಗುತ್ತಾರೆ. ಆರ್ಯ ಸರ್‌ಗೆ ಫ್ಯಾಮಿಲಿ ಮೊದಲು ಆಮೇಲೆ ಕೆಲಸ ಎಂದು ಹೇಳುತ್ತಾಳೆ. ಆದರೆ, ಆರಾಧನಾ ನನ್ನ ಟೀಮ್ ದೂರದಿಂದ ಬರುತ್ತಿದೆ. ಹೀಗಾಗಿ ಮೊದಲು ಕೆಲಸ, ಟೈಮ್ ಅಂದರೆ ಆರ್ಯಗೆ ಬೆಲೆ ಇಲ್ವಾ ಎಂದು ವಾದ ಮಾಡುತ್ತಾಳೆ. ಮೀರಾಗೆ ಆರಾಧನಾ ನಡವಳಿಕೆ ಬೇಸರವಾಗುತ್ತದೆ.


Click it and Unblock the Notifications











