Jothe Jotheyali: ಆರಾಧನಾ ನೀಡಿದ ಪೇಪರ್‌ಗಳಿಗೆ ಸಹಿ ಹಾಕಲು ಆಗುತ್ತಿಲ್ಲ: ಅನುಳನ್ನು ರಾಜನಂದಿನಿ ತಡೆಯುತ್ತಿದ್ದಾಳಾ..?

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಒಬ್ಬೊಬ್ಬರು ಒಂದೊಂದು ಸ್ಥಿತಿಯಲ್ಲಿ ಇದ್ದಾರೆ. ಎಲ್ಲರೂ ಬೇರೆ ಬೇರೆ ದಿಕ್ಕುಗಳಿಗೆ ಮುಖ ಮಾಡಿದ್ದು, ಧಾರಾವಾಹಿಯ ಮುಂದಿನ ಕಥೆ ಎತ್ತ ಸಾಗುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ. ಅನು ತನ್ನ ಪಾಡಿಗೆ ತಾನಿದ್ದು, ಮೀರಾ, ಆರಾಧನಾಳನ್ನು ಆರ್ಯನ ಜೊತೆಗಿರುವುದಕ್ಕೆ ಗೊಂದಲ ತೋರ್ಪಡಿಸಿದ್ದಾಳೆ. ಮಾನ್ಸಿ ತನ್ನ ಅವಶ್ಯಕತೆ ಆ ಮನೆಯಲ್ಲಿ ಎಷ್ಟಿದೆ ಎಂದು ಪರೀಕ್ಷೆ ಮಾಡುತ್ತಿದ್ದಾಳೆ. ಸಂಜೀವಿನಿ ಆಸ್ತಿ ಮೇಲಿನ ಆಸೆಗೆ ಬಂದಿದ್ದರೆ, ಭಾವನಾಳಿಗೆ ಹರ್ಷನ ಮೇಲೆ ಮನಸ್ಸಿದೆ.

ಆರಾಧನಾ, ಆರ್ಯನನ್ನು ತನ್ನತ್ತ ಸೆಳೆಯಲು ಯತ್ನಿಸುತ್ತಿದ್ದಾಳೆ. ಹರ್ಷ, ಮಾನ್ಸಿ ಇಲ್ಲದೇ ಒದ್ದಾಡುತ್ತಿದ್ದಾನೆ. ಹೀಗಿರುವಾಗ ಝೇಂಡೇ ಉದ್ದೇಶವೇ ಬೇರೆ ಇದೆ. ಅನುಳನ್ನು ಮನೆಯಿಂದ ಹೊರಗೆ ಹಾಕಲು, ಅಥವಾ ಆಕೆಯನ್ನು ಸಂಪೂರ್ಣವಾಗಿ ನಾಶ ಮಾಡಲು ದೊಡ್ಡ ಪ್ಲ್ಯಾನ್‌ ಮಾಡಿದ್ದಾನೆ. ಹೀಗಾಗಿ ಸಂಜೀವಿನಿಗೆ ವಾಯ್ಸ್ ಮೆಸೇಜ್ ಕಳಿಸಿರುವ ಝೇಂಡೇ, ಅನುಳನ್ನು ಸಂಪೂರ್ಣವಾಗಿ ನಾಶ ಮಾಡು. ಇಲ್ಲದಿದ್ದರೆ, ಯಾವ ಕೆಲಸವೂ ಈ ಮನೆಯಲ್ಲಿ ಆಗುವುದಿಲ್ಲ. ನಿನ್ನಿಷ್ಟದಂತೆ ಈ ಮನೆಯಲ್ಲಿ ನಿನಗೆ ಅಧಿಕಾರ ಸಿಗುವುದಿಲ್ಲ ಎಂದು ಕಳಿಸಿರುತ್ತಾನೆ. ಇದನ್ನು ಕೇಳಿದ ಸಂಜೀವಿನಿಗೆ ಏನು ಮಾಡುವುದು ಎಂಬುದು ತಿಳಿಯುವುದಿಲ್ಲ.

jothe jotheyali Serial 30th March episode written update

ಇನ್ನು ಭಾವನಾಳಿಗೆ ಹರ್ಷ ಮದುವೆಯಾಗಿರುವ ವಿಚಾರ ತಿಳಿದು ಬೇಸರ ಮಾಡಿಕೊಳ್ಳುತ್ತಾಳೆ. ಭಾವನಾಳಿಗೆ ಹರ್ಷ ಇಷ್ಟವಾಗಿರುತ್ತಾನೆ. ಆತನನ್ನು ಮದುವೆಯಾಗಬೇಕು ಎಂದು ಕೂಡ ಬಯಸಿರುತ್ತಾಳೆ. ಆದರೆ, ಮಾನ್ಸಿಯನ್ನು ಹರ್ಷ ಮದುವೆಯಾಗಿದ್ದು, ಅವಳು ಸದ್ಯ ಮನೆಯಲ್ಲಿ ಇಲ್ಲ ಎಂಬುದು ತಿಳಿದು ಶಾಕ್ ಆಗಿರುತ್ತದೆ. ಹೀಗಾಗಿ ಭಾವನಾ ವಾಪಸ್ ತನ್ನೂರಿಗೆ ಹೋಗಲು ಮುಂದಾಗಿರುತ್ತಾಳೆ. ಇದೆಲ್ಲಾ ಸಂಜೀವಿನಿಗೆ ಅರ್ಥವಾದರೂ ಸುಮ್ಮನಿರುತ್ತಾಳೆ. ಇನ್ನು ಮಾನ್ಸಿ ಹರ್ಷನ ಒದ್ದಾಟ ನೋಡಿ ಬೇಸರ ಮಾಡಿಕೊಳ್ಳುತ್ತಾಳೆ. ಹರ್ಷನಿಗೆ ನನ್ನನ್ನು ಬಿಟ್ಟು ಇರುವುದಕ್ಕೆ ಆಗುತ್ತಿಲ್ಲ ಎಂಬುದನ್ನು ತಿಳಿದುಕೊಳ್ಳುತ್ತಾಳೆ.

ಈಗ ಮಾನ್ಸಿಗೆ ಸಂಜೀವಿನಿ ಈ ಮನೆಗೆ ಬರಲು ಏನು ಉದ್ದೇಶ ಎಂಬುದನ್ನು ತಿಳಿಯಬೇಕಿದೆ. ಹಾಗಾಗಿ ಇನ್ನೂ ಮನೆ ಕೆಲಸದವಳ ವೇಷದಲ್ಲೇ ಇದ್ದಾಳೆ. ಆರಾಧನಾಳಿಗೆ ಮೀರಾ ಹೇಳಿದ ಮಾತು ಮನದಲ್ಲೇ ಕೊರೆಯುತ್ತಿರುತ್ತದೆ. ಆರ್ಯನಿಗಿಂತಲೂ ಮುಖ್ಯ ಅನು ಸಹಿ. ಅನು ಸಹಿ ಇಲ್ಲದೇ, ಯಾವುದು ಸಾಧ್ಯವಿಲ್ಲ ಎಂಬುದು ಬೇಸರವನ್ನುಂಟು ಮಾಡಿರುತ್ತದೆ. ತನ್ನ ಕಂಪನಿಯನ್ನು ಮರ್ಜ್ ಮಾಡಲು ಅನು ಸಹಿ ಬೇಕಾಗಿರುತ್ತದೆ. ಆಕೆ ಇನ್ನು ಸಹಿ ಹಾಕಿಲ್ಲ ಎಂದು ಕೂಡ ಟೆನ್ಷನ್ ಮಾಡಿಕೊಂಡಿರುತ್ತಾಳೆ. ಸಂಜೀವಿನಿ ಆರಾಧನಾಳಿಗೆ ಸಮಾಧಾನ ಮಾಡಲು ಬಂದಾಗ ಆರಾಧನ, ಸಂಜೀವಿನಿಗೆ ಬೈಯುತ್ತಾಳೆ.

jothe jotheyali Serial 30th March episode written update

ನಿನಗೆ ನನ್ನ ಬಗ್ಗೆ ಕಾಳಜಿ ಇಲ್ಲ. ಯಾವುದೋ ಉದ್ದೇಶದಿಂದ ಇಲ್ಲಿಗೆ ಬಂದಿದ್ದೀಯಾ ಎಂದು ಮರು ಪ್ರಶ್ನೆ ಅನ್ನು ಮಾಡುತ್ತಾಳೆ. ಆಗ ಸಂಜೀವಿನಿ, ಆರಾಧನಾಳಿಗೆ ನೀನು ಯಾವ ಉದ್ದೇಶದಿಂದ ನಿನ್ನ ಕಂಪನಿ ಅನ್ನು ಮರ್ಜ್ ಮಾಡುತ್ತಿದ್ದೀಯಾ ಅನ್ನೋದು ನನಗೆ ಗೊತ್ತಿಲ್ಲ ಎಂದುಕೊಳ್ಳಬೇಡ ಅಂತ ಮರು ಮಾತನಾಡಿ, ಆರಾಧನಾಳನ್ನು ಸುಮ್ಮನಾಗಿಸುತ್ತಾಳೆ. ಆರಾಧನಾ ಈ ಮಾತಿಗೆ ಉತ್ತರ ಕೊಡಲಾಗದೇ ಸುಮ್ಮನಾಗುತ್ತಾ, ತಾನು ಕಂಪನಿ ಮರ್ಜ್ ಮಾಡುತ್ತಿರುವುದು ಸರಿಯೋ ತಪ್ಪೋ ಎಂಬುದು ಅರ್ಥವಾಗದಂತೆ ಯೋಚಿಸಲು ಮುಂದಾಗುತ್ತಾಳೆ.

ಅನು ಆರಾಧನಾ ಪೇಪರ್‌ಗಳಿಗೆ ಸಹಿ ಮಾಡಲು ಸಾಧ್ಯವಾಗುತ್ತಿಲ್ಲ. ತಾನು ಪ್ರತಿ ಬಾರಿ ಸಹಿ ಹಾಕಲು ಹೋದಾಗ ಕೈಯಿಂದ ಪೆನ್ನು ಬೀಳುತ್ತಿರುತ್ತದೆ. ಇದರಿಂದ ಅನುಗೆ ಆತಂಕವಾಗುತ್ತದೆ. ಯಾಕೆ ಹೀಗಾಗುತ್ತಿದೆ ಎಂಬುದೇ ತಿಳಿಯುವುದಿಲ್ಲ. ಈ ಬಗ್ಗೆ ಆರ್ಯನ ಬಳಿಯೂ ಹೇಳುತ್ತಾಳೆ. ಆದರೆ, ಆರ್ಯ ನಂಬುವುದಿಲ್ಲ. ರಾಜನಂದಿನಿಯ ಶಕ್ತಿಯೇ ಹೀಗೆ ಮಾಡಿಸುತ್ತಿರಬಹುದು ಎಂದು ಪ್ರೇಕ್ಷಕರು ಊಹೆ ಮಾಡಿದ್ದಾರೆ.

More from Filmibeat

English summary
Jothe Jotheyali Serial 30th March episode written update. Here Is Detials About Bhavana comes to know that harsha got married. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X