For Quick Alerts
  ALLOW NOTIFICATIONS  
  For Daily Alerts

  ಎಚ್ಚರವಾದ ಸಂಜುಗೆ ಹಳೆಯದೆಲ್ಲಾ ನೆನಪಿಗೆ ಬಂತಾ?

  By ಪ್ರಿಯಾ ದೊರೆ
  |

  ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಪಾಯಸಕ್ಕೆ ವಿಷ ಬೆರೆಸಿದ ರಜಿನಿಗೆ ಈಗ ಆತಂಕ ಹೆಚ್ಚಾಗಿದೆ. ವಿಷ ಬೆರೆಸಿದಾಗ ಇಲ್ಲದ ಭಯ ಶುರುವಾಗಿದ್ದು, ಪಶ್ಚಾತಾಪ ಪಡುತ್ತಿದ್ದಾಳೆ. ಒಬ್ಬಳೇ ಒದ್ದಾಡುತ್ತಿದ್ದಾಳೆ.

  ಆಸ್ಪತ್ರೆಯಿಂದ ಪುಷ್ಪಾ ಮತ್ತು ಸುಬ್ಬು ವಠಾರಕ್ಕೆ ಬರುತ್ತಿದ್ದಂತೆ ರಜಿನಿ ಕ್ಷಮೆಯಾಚಿಸುತ್ತಾಳೆ. ಆದರೆ, ಪುಷ್ಪಾ ರಜಿನಿಯನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ. ಮಾಡುವುದೆಲ್ಲಾ ಮಾಡಿ ಈಗ ಬಂದು ಕ್ಷಮೆ ಕೇಳುತ್ತಾರೆ. ಜೀವಕ್ಕೆ ಏನಾದರೂ ಆಗಿದ್ದರೆ ಗತಿ ಏನು ಎಂದು ಮನೆಗೆ ಹೋಗುತ್ತಾಳೆ.

  ಆಗ ರಮ್ಯಾ ಮತ್ತು ಸಂಪತ್ ರಜಿನಿಗೆ ತ್ತೆ ಬೈಯುತ್ತಾರೆ. ರಜಿನಿ ಪುಷ್ಪಾ ಮನೆಗೆ ಬಂದು ಅವಳ ಕಾಲನ್ನು ಹಿಡಿದು ಕ್ಷಮೆ ಕೇಳುತ್ತಾಳೆ. ಆಗಲೂ ಪುಷ್ಪಾ ರಜಿನಿಗೆ ಬೈದು ಕಳಿಸುತ್ತಾಳೆ. ಇಷ್ಟೇ ಸಾಕು, ನಮಗೂ-ನಿಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಾಳೆ.

  ಸಂಜುಗೆ ಪ್ರಜ್ಞೆ ಬಂತಾ?

  ಸಂಜುಗೆ ಪ್ರಜ್ಞೆ ಬಂತಾ?


  ಅನು ಮತ್ತು ಆರಾಧನಾ ಇಬ್ಬರೂ ಆಸ್ಪತ್ರೆಯಲ್ಲಿ ಕೂತು ತಮ್ಮ ಲವ್ ಸ್ಟೋರಿ ವಿಚಾರವನ್ನು ಮಾತನಾಡುತ್ತಿರುತ್ತಾರೆ. ಆಗ ಅನು ಹಾಗಾದರೆ ಸಂಜು ಅವರ ನನ್ನ ಹಾಗೂ ಆರ್ಯನ ಲವ್ ಸ್ಟೋರಿಯನ್ನು ತಮ್ಮದು ಎಂದು ಹೇಗೆ ಹೇಳಿದರು ಎಂದು ಕೇಳಿದ್ದಕ್ಕೆ ಆರಾಧನಾ ಬಹುಷಃ ಯಾರೋ ಅವರಿಗೆ ಹೇಳಿರಬೇಕು. ಅದನ್ನು ಅವರ ತಮ್ಮದೇ ಲವ್ ಸ್ಟೋರಿ ಎಂದು ಅಂದುಕೊಂಡಿರಬೇಕು ಎಂದು ಹೇಳುತ್ತಾಳೆ. ಅಷ್ಟರಲ್ಲಿ ಸಂಜುಗೆ ಎಚ್ಚರವಾಗುತ್ತೆ. 700 ಕೋಟಿ ಸಾಲದ ಬಗ್ಗೆ ಮಾತನಾಡುತ್ತಾನೆ. ಸಂಜು ಕನವರಿಸುವ ಮಾತುಗಳನ್ನು ಕೇಳಿದ ಅನುಗೆ ಅನುಮಾನ ಬರುತ್ತದೆ.

  ಹರ್ಷನಿಗೆ ಶಾಕ್ ಕೊಟ್ಟ ಮೀರಾ

  ಹರ್ಷನಿಗೆ ಶಾಕ್ ಕೊಟ್ಟ ಮೀರಾ

  ಆಫೀಸಿನಲ್ಲಿ ಬೋರ್ಡ್ ಮೀಟಿಂಗ್ ಮುಗಿದ ಮೇಲೆ ಎಲ್ಲರ ಎದುರಿಗೆ ನಾನು ರಿಸೈನ್ ಮಾಡುತ್ತಿದ್ದೇನೆ ಎಂದು ಮೀರಾ ಹರ್ಷವರ್ಧನ್ ಗೆ ಹೇಳುತ್ತಾಳೆ. ಈ ಮಾತನ್ನು ಕೇಳಿ ಹರ್ಷ ಶಾಕ್ ಆಗುತ್ತಾನೆ. ನಂತರ ಹರ್ಷ ಮೀರಾ ಜೊತೆಗೆ ಸಪರೇಟ್ ಆಗಿ ಮಾತನಾಡುತ್ತಾನೆ. ನಿಮಗೆ ಈ ಆಫೀಸಿನಲ್ಲಿ ಯಾರಿಂದ ಬೇಸರ ಆಗಿದೆ ಹೇಳಿ. ಸರಿ ಮಾಡೋಣ ಎಂದು ಹರ್ಷ ಹೇಳುತ್ತಾನೆ. ಅದಕ್ಕೆ ಮೀರಾ ನಾನು ಇಲ್ಲಿ ಯಾರ ಸಜೆಷನ್ ಕೂಡ ಕೇಳುವುದಕ್ಕೂ ತಯಾರಿಲ್ಲ. ನಾನು ನನ್ನ ನಿರ್ಧಾರವನ್ನು ತಿಳಿಸಿದ್ದೇನೆ. ನಿಮಗೂ ಅನುಗೂ ಮೇಲ್ ಮಾಡುತ್ತೀನಿ ನನ್ನ ರೆಸಿಗ್ನೇಷನ್ ಅನ್ನು ಆಕ್ಸೆಪ್ಟ್ ಮಾಡಿ ಎಂದು ಹೇಳುತ್ತಾಳೆ.

  ಗೊಂದಲದಲ್ಲಿರುವ ಪ್ರಿಯದರ್ಶಿನಿ

  ಗೊಂದಲದಲ್ಲಿರುವ ಪ್ರಿಯದರ್ಶಿನಿ


  ಇತ್ತ ಪ್ರಿಯದರ್ಶಿನಿ ಮತ್ತು ಪ್ರಭು ದೇಸಾಯಿ ಮಾತನಾಡುತ್ತಿರುತ್ತಾರೆ. ಆಗ ಆರಾಧನಾಗೆ ವಿಶ್ವಾಸ್ ದೇಸಾಯಿ ಸಾವನ್ನಪ್ಪಿರುವ ವಿಚಾರವನ್ನು ಹೇಳಬೇಕು ಎಂದು ಪ್ರಭು ದೇಸಾಯಿ ಅವರು ಹೇಳುತ್ತಾರೆ. ಅದಕ್ಕೆ ಪ್ರಿಯದರ್ಶಿನಿ ಬೇಡ. ಒಬ್ಬರಿಗೆ ಹೇಳಿದರೆ, ಮತ್ತೊಬ್ಬರಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ ಎಂದು ಹೇಳುತ್ತಾಳೆ. ಆದರೆ, ಪ್ರಭು ದೇಸಾಯಿ ಇಲ್ಲ. ನಾವು ಆರಾಧನಾಗೆ ಈಗ ಹೇಳದಿದ್ದರೆ, ಮತ್ತಷ್ಟು ತಪ್ಪಾಗುತ್ತದೆ. ನಾವು ಈಗ ಹೇಳಲೇಬೇಕು ಎಂದು ಹೇಳುತ್ತಾನೆ. ಪ್ರಿಯದರ್ಶಿನಿ ಹೇಳಬೇಕೋ ಬೇಡವೋ ಎಂಬ ಗೊಂದಲದಲ್ಲೇ ಇದ್ದಾಳೆ.

  ಅನುಗೆ ಸಂಜು ಮೇಲೆ ಅನುಮಾನವೇನು?

  ಅನುಗೆ ಸಂಜು ಮೇಲೆ ಅನುಮಾನವೇನು?


  ಸಂಜುಗೆ ಪೂರ್ತಿ ಎಚ್ಚರವಾದ ಮೇಲೆ ಆರಾಧನಾಳನ್ನು ಗುರುತು ಇಲ್ಲದಂತೆ ನೋಡುತ್ತಾನೆ. ಅನುಳನ್ನು ಗುರುತು ಹಿಡಿಯುತ್ತಾನೆ. ಆದರೆ ಬಾಯಿ ಬಿಟ್ಟು ಏನನ್ನೂ ಮಾತನಾಡುವುದಿಲ್ಲ. ಬಳಿಕ ಮನೆಗೆ ಬರುತ್ತಾರೆ. ಅನುಗೆ ತನ್ನನ್ನು ಉಳಿಸಿದ್ದಕ್ಕೆ ಧನ್ಯವಾದ ಹೇಳುತ್ತಾನೆ. ನಿಮ್ಮ ನಂಬಿಕೆ ಗಳಿಸಲು ಏನು ಬೇಕಿದ್ದರೂ ಮಾಡುತ್ತೇನೆ ಎಂದು ಹೇಳಿದಾಗ ಅನು ಸಂಜುಗೆ ನಿಮಗಾಗಿ ಕಾಯುತ್ತಿರುವವರ ಕಡೆ ಗಮನ ಕೊಡಿ ಎಂದು ಹೇಳುತ್ತಾಳೆ. ಆದರೆ, ಅನುಗೆ ಬಂದಿರುವ ಅನುಮಾನದ ಪ್ರಕಾರ ಸಂಜು ಆರ್ಯ ಎಂಬುದನ್ನು ಗುರುತಿಸುತ್ತಾಳಾ..?

  English summary
  Jothe jotheyali Serial 30th november Episode Written Update
  Thursday, December 1, 2022, 6:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X