ಅನುಳನ್ನು ರಕ್ಷಿಸಿದ ಸಂಜು: ಝೇಂಡೇ ಸಿಕ್ಕಿ ಹಾಕಿಕೊಂಡನಾ..?

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಸಂಜು ಅನು ಮೇಲೆ ವಿಶೇಷವಾದ ಕಾಳಜಿಯನ್ನು ಹೊಂದಿರುತ್ತಾನೆ. ಅದು ಯಾಕೆ ಎಂಬುದು ಅವನಿಗೂ ತಿಳಿಯುವುದಿಲ್ಲ. ವೈದ್ಯರು ಕೇಳಿದಾಗಲು ಅನು ತುಂಬಾ ಒಳ್ಳೆಯ ಹುಡುಗಿ. ಆರ್ಯನ ಸಾವಿನಿಂದ ನೊಂದಿದ್ದಾಳೆ ಎಂದೆಲ್ಲಾ ಹೇಳುತ್ತಾನೆ.

ಮಾನ್ಸಿ ಕೂಡ ಸಂಜು ಬಳಿ ಆರಾಧನಾ ಕಾಲ್ ಮಾಡಿದ್ದಳು ಎಂದು ಮಾತನಾಡುತ್ತಿರುತ್ತಾಳೆ. ಆಗ ಸಂಜು ತನಗೆ ಆಕೆಯ ಬಗ್ಗೆ ನೆನಪಿಲ್ಲ ಎಂದು ಹೇಳಿ, ಮಾನ್ಸಿ ಮಾತಿಗೆ ಕಿವಿಗೊಡದೆ ಅನುಗೆ ಹಾಯ್ ಹೇಳುತ್ತಾನೆ. ನಿಮ್ಮ ಫೋಟೋವನ್ನು ವೈದ್ಯರು ತೋರಿಸಿದ್ದರು. ನೀವು ಗುರುತಿದ್ದೀರಾ ಎಂದು ಕೇಳಿದರು.

ನಿತ್ಯ ನಿಮ್ಮನ್ನೇ ನೋಡುತ್ತಿದ್ದೇನೆ. ಹೇಗೆ ಗೊತ್ತಿಲ್ಲ ಎಂದು ಹೇಳಲಿ ಎಂದು ಹೇಳುತ್ತಾನೆ. ಈ ಮಾತು ಮಾನ್ಸಿಗೆ ವಿಚಿತ್ರವೆನಿಸುತ್ತದೆ. ಯಾಕೆ ಇವನು ಹೀಗಾಡುತ್ತಿದ್ದಾನೆ ಎಂದು ಅಂದುಕೊಳ್ಳುತ್ತಾಳೆ. ಇದೆಲ್ಲವೂ ಅನು ಮೇಲೆ ಸಂಜುಗೆ ವಿಶೇಷ ಕಾಳಜಿ ಇರುವುದು ಗೊತ್ತಾಗುತ್ತದೆ.

ಸಂಜು ನಡವಳಿಕೆಯಿಂದ ಬೇಸತ್ತ ಮಾನ್ಸಿ

ಸಂಜು ನಡವಳಿಕೆಯಿಂದ ಬೇಸತ್ತ ಮಾನ್ಸಿ

ಆರ್ಯವರ್ಧನ್ ಅಸ್ತಿ ಬಿಡಲು ಎಲ್ಲರೂ ಬಂದಿದ್ದಾರೆ. ಈ ವೇಳೆ ಎಲ್ಲರೂ ಅಳುತ್ತಿದ್ದರೆ, ಸಂಜು ಮಾತ್ರ ಅನುಳನ್ನೇ ನೋಡುತ್ತಿರುತ್ತಾನೆ. ಪಾಪ ಅನುಗೆ ಯಾರೂ ಸಮಾಧಾನ ಮಾಡುತ್ತಿಲ್ಲ. ಆರ್ಯ ಅವರನ್ನು ಅನು ಅವರು ತುಂಬಾ ಪ್ರೀತಿಸುತ್ತಿದ್ದರು ಎಂದು ಕಾಣಿಸುತ್ತದೆ ಎಂದು ಮನದಲ್ಲೇ ಮಾತನಾಡಿಕೊಳ್ಳುತ್ತಿರುತ್ತಾನೆ. ಇದನ್ನೆಲ್ಲಾ ನೋಡುವ ಮಾನ್ಸಿಗೆ ಒಂದು ಥರ ಮುಜುಗರವಾಗುತ್ತದೆ. ಹಾಗಾಗಿ ಮಾನ್ಸಿ ಈ ವಿಚಾರವನ್ನು ಹರ್ಷನಿಗೆ ಹೇಳುತ್ತಾಳೆ. ಆಗ ಹರ್ಷ ಈಗಲೂ ಇದೆಲ್ಲಾ ಬೇಕಾ ಎನ್ನುತ್ತಾನೆ. ಅಷ್ಟೊತ್ತಿಗೆ ಮಾನ್ಸಿ ಸಂಜುನನ್ನು ಕರೆಯುತ್ತಾಳೆ. ಆದರೆ ತಡೆದು ಹರ್ಷ ಏನು ಇಲ್ಲ ಎಂದು ಬಿಡುತ್ತಾನೆ. ಇದರಿಂದ ಮಾನ್ಸಿ ಬೇಸರ ಮಾಡಿಕೊಳ್ಳುತ್ತಾಳೆ.

ಸಂಜುಗೆ ಬೈದ ಅನು

ಸಂಜುಗೆ ಬೈದ ಅನು

ಸ್ವಲ್ಪ ಹೊತ್ತಿಗೆ ಅನುಗೆ ತಲೆ ಸುತ್ತು ಬರುತ್ತದೆ. ಆಗ ಬೀಳುತ್ತಾಳೆ. ಇದನ್ನು ಗಮನಿಸಿದ ಸಂಜು ತಕ್ಷಣ ಅನು ಕೆಳಗೆ ಬೀಳದಂತೆ ಹಿಡಿದುಕೊಳ್ಳುತ್ತಾನೆ. ಅನುಗೆ ಎಚ್ಚರವಾದಾಗ ಸಂಜು ಹಿಡಿದಿರುವುದಕ್ಕೆ ಸಿಟ್ಟು ಮಾಡಿಕೊಳ್ಳುತ್ತಾಳೆ. ಈ ವೇಳೆ ಪುಷ್ಪಾ ಬೆಳಗ್ಗಿನಿಂದ ಏನೂ ತಿಂದಿಲ್ಲ. ಅದಕ್ಕೆ ತಲೆ ತಿರುಗಿರಬೇಕು ಎನ್ನುತ್ತಾಳೆ. ಆಗ ಅನು ಹಾಗೆನಿಲ್ಲ ಅಮ್ಮ ಎನ್ನುತ್ತಾಳೆ. ಅಷ್ಟರಲ್ಲಿ ಸಂಜು ಅಲ್ಲೇ ಇದ್ದ ಬಾಳೆ ಹಣ್ಣನ್ನು ತಂದು ಕೊಡುತ್ತಾನೆ. ಅದಕ್ಕೆ ಅನು ಈ ರೀತಿ ನನ್ನ ಮೇಲೆ ಅತಿಯಾದ ಕಾಳಜಿ ತೋರಿಸಬೇಡಿ ಎನ್ನುವಂತೆ ನೋಡುತ್ತಾಳೆ. ಸಂಜು ಸುಮ್ಮನಾಗುತ್ತಾನೆ.

ಅನುಳನ್ನು ರಕ್ಷಿಸಿದ ಸಂಜು

ಅನುಳನ್ನು ರಕ್ಷಿಸಿದ ಸಂಜು

ಝೇಂಡೇ ಅನು ಸಿರಿಮನೆ ಹಾಗೂ ಅವಳ ಮಗುವನ್ನು ಕೊಲ್ಲಬೇಕು ಎಂದು ತೀರ್ಮಾನಿಸಿದ್ದು, ಅದಕ್ಕಾಗಿ ಸುಪಾರಿ ಕೂಡ ಕೊಟ್ಟಿದ್ದಾನೆ. ಝೇಂಡೇ ಅನುಳನ್ನು ಕೊಲ್ಲಲು ಮಾಡಿರುವ ಪ್ಲ್ಯಾನ್‌ನಂತೆ ಹುಡುಗರು ಬಂದು ಬಲೆ ಹಾಕಿ ಹೋಗುತ್ತಾರೆ. ಅನು ಸಿರಿಮನೆ ಅಸ್ತಿ ಬಿಡುವ ಕಾರ್ಯ ಮುಗಿದ ಮೇಲೆ ನದಿ ಮೆಟ್ಟಿಲುಗಳನ್ನು ಇಳಿರುತ್ತಾಳೆ. ಆಗ ನೀರಿನಲ್ಲಿ ಜಾರಿ ನದಿಗೆ ಬಿದ್ದು ಬಿಡುತ್ತಾಳೆ. ಇದನ್ನೆಲ್ಲಾ ಗಮನಿಸಿದ ಮನೆಯವರು ಓಡಿ ಬರುತ್ತಾರೆ. ಅಷ್ಟೊತ್ತಿಗೆ ಸಂಜು ನೀರಿಗೆ ಬಿದ್ದು, ಅನುಳನ್ನು ಎತ್ತುಕೊಂಡು ಬರುತ್ತಾನೆ. ನಂತರ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ.

ಅನು ಬದುಕುಳಿಯುವುದು ಡೌಟ್..?

ಅನು ಬದುಕುಳಿಯುವುದು ಡೌಟ್..?

ಇಷ್ಟು ದಿನ ವಿಲನ್ ಇಲ್ಲದ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಝೇಂಡೇ ಈಗ ವಿಲನ್ ಆಗಿದ್ದಾನೆ. ನನ್ನ ಮತ್ತು ನನ್ನ ಆರ್ಯನನ್ನು ದೂರ ಮಾಡಿದ ಕುಟುಂಬದವರು ಯಾರನ್ನೂ ಜೀವಂತವಾಗಿ ಬಿಡಬಾರದು ಎಂದು ಝೇಂಡೇ ಪಣ ತೊಟ್ಟಿದ್ದಾನೆ.ಇತ್ತ ಅನು ಸಿರಿಮನೆ ಬದುಕುತ್ತಾಳಾ..? ಇಲ್ಲ ಅವಳ ಹೊಟ್ಟೆಯಲ್ಲಿರುವ ಮಗುವಿಗೆ ತೊಂದರೆಯಾಗುತ್ತದಾ ಗೊತ್ತಿಲ್ಲ. ಇದರ ಜೊತೆಗೆ ಝೇಂಡೇ ಈ ಕೊಲೆಗೆ ಪ್ರಯತ್ನಪಟ್ಟ ಎಂಬ ಸತ್ಯ ತಿಳಿಯುತ್ತದೆಯೇ ಎಂದು ನೋಡಬೇಕಿದೆ.

More from Filmibeat

English summary
jothe jotheyali Serial 30th September Episode Written Update. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X