Jothe Jotheyali: ಆರಾಧನಾ ಮಾತಿಗೆ ತಲೆದೂಗಿದ ಆರ್ಯನ ನಿರ್ಧಾರದಿಂದ ಖುಷಿಪಟ್ಟ ಮೀರಾ
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ರಮ್ಯಾಗೆ ಕರುಣಾಕರನ ಜೊತೆಗೆ ಎಂಗೇಜ್‌ಮೆಂಟ್ ಫಿಕ್ಸ್ ಆಗಿತ್ತು. ಆದರೆ, ಆಗ ಝೇಂಡೇ ಹಾಗೂ ಆರ್ಯನ ಕಿತ್ತಾಟದಿಂದ ಈ ಮದುವೆ ಕ್ಯಾನ್ಸಲ್ ಆಗಿತ್ತು.
ಅಲ್ಲದೇ, ರಮ್ಯಾಗೆ ಕರುಣಾಕರನ ತಂದೆ ರತ್ನಾಕರನ ಅವ್ಯವಹಾರ ತಿಳಿದಿರುತ್ತದೆ. ಝೇಂಡೇ ಜೊತೆ ಸೇರಿ ವರ್ಧನ್ ಕುಟುಂಬದ ಆಸ್ತಿಯನ್ನು ಕೊಳ್ಳೆ ಹೊಡೆಯುತ್ತಿರುವುದು ತಿಳಿದಿರುತ್ತದೆ.
ಹೀಗಾಗಿ ರಮ್ಯಾ ಕೂಡ ಈ ಸಂಬಂಧ ಬೇಡ ಎಂದು ಹೇಳಿರುತ್ತಾಳೆ. ಆದರೆ ಕರುಣಾಕರನಿಗೆ ರಮ್ಯಾ ಮೇಲೆ ಪ್ರೀತಿ ಇರುತ್ತದೆ. ಹಾಗಾಗಿ ಹೇಗಾದರೂ ಮಾಡಿ ರಮ್ಯಾಳನ್ನು ಮದುವೆಯಾಗಬೇಕು ಎಂದು ಪ್ರಯತ್ನಿಸುತ್ತಿದ್ದಾನೆ.

ಮೀರಾ ಬಂದು ಎಲ್ಲವನ್ನೂ ಕೆಡಿಸಿದಳು
ಇತ್ತ ಆರಾಧನಾಳಿಗೆ ಆರ್ಯ ಕಮಲಮ್ಮನ ವಠಾರಕ್ಕೆ ಹೋಗುವುದು ಇಷ್ಟವಿಲ್ಲ. ಹಾಗಾಗಿ ಹೇಗಾದರೂ ಮಾಡಿ ಕಮಲಮ್ಮನ ವಠಾರದ ಹಬ್ಬಕ್ಕೆ ಆರ್ಯನನ್ನು ಕಳಿಸಬಾರದು ಎಂದು ಲೆಕ್ಕಾಚಾರ ಹಾಕುತ್ತಿದ್ದಾಳೆ. ಹಾಗಾಗಿ ಆರ್ಯನ ಬಳಿ ತನ್ನ ಟೀಂ ನಾಳೆ ಬರುತ್ತಿದೆ. ಅವರನ್ನು ಭೇಟಿ ಮಾಡಿ ಎರಡೂ ಕಂಪನಿಯನ್ನು ಒಟ್ಟುಗೂಡಿಸುವ ಕೆಲಸ ಆಗಬೇಕು. ಆಗ ನೀವು ಇರಲೇಬೇಕು ಎಂದು ಹೇಳುತ್ತಾಳೆ. ಆರಾಧನಾ ಮಾತುಗಳನ್ನು ಕೇಳುತ್ತಾ ಆರ್ಯ ತಲೆ ದೂಗುತ್ತಾನೆ. ಆದರೆ, ಮೀರಾ ಇದೇ ಸಮಯಕ್ಕೆ ಬರುತ್ತಾಳೆ. ಆಗ ಆರ್ಯನಿಗೆ ಕಮಲಮ್ಮನ ಮನೆಯ ಹಬ್ಬದ ಬಗ್ಗೆ ಹೇಳುತ್ತಾಳೆ.

ವಠಾರವೇ ಮುಖ್ಯ ಎಂದ ಆರ್ಯ
ಆಗ ಆರ್ಯ ಮೊದಲು ಕಮಲಮ್ಮನ ವಠಾರದ ಹಬ್ಬಕ್ಕೆ ಭೇಟಿ ಕೊಟ್ಟು ಬಳಿಕವಷ್ಟೇ ತಾನು ಆರಾಧನಾ ಅವರ ಟೀಂ ಅನ್ನು ಭೇಟಿ ಆಗುವುದಾಗಿ ಹೇಳುತ್ತಾನೆ. ಆರಾಧನಾ ಈ ಪ್ರೋಗ್ರಾಮ್ ಅಷ್ಟು ಮುಖ್ಯನಾ ಎಂದು ಪ್ರಶ್ನೆ ಮಾಡಿದ್ದಕ್ಕೆ ಆರ್ಯ, ಹೌದು. ಆ ವಠಾರದವರ ಜೊತೆಗೆ ಒಂದು ಬಾಂಧವ್ಯ ಇದೆ. ಅಲ್ಲಿರುವವರ ಗುಣಗಳು ಎಲ್ಲರಿಗೂ ಇಷ್ಟ ಆಗುತ್ತೆ ಎಂದು ಹೇಳುತ್ತಾನೆ. ಮೊದಲು ಕಾರ್ಯಕ್ರಮವನ್ನು ಮುಗಿಸಿಕೊಂಡು ಬಂದು ನಂತರ ನಿಮ್ಮ ಟೀಂ ಅನ್ನು ಭೇಟಿ ಮಾಡುತ್ತೀನಿ ಎಂದು ಆರ್ಯ ಹೇಳುತ್ತಾನೆ. ಈ ಮಾತನ್ನು ಕೇಳಿದ ಆರಾಧನಾ ತೀರಾ ಬೇಸರ ಮಾಡಿಕೊಳ್ಳುತ್ತಾಳೆ. ಆರಾಧನಾ ಹೊಟ್ಟೆ ಉರಿದುಕೊಳ್ಳುವುದನ್ನು ಮೀರಾ ಗಮನಿಸುತ್ತಿರುತ್ತಾಳೆ. ನಂತರ ಅವಳ ಮನಸ್ಸನ್ನು ಬೇರೆ ಕಡೆ ತಿರುಗಿಸಲು ಪ್ರಯತ್ನಿಸುತ್ತಾಳೆ.

ಒಟ್ಟಿಗೆ ಊಟ ಮಾಡಿದ ಅನು-ಆರ್ಯ
ಇತ್ತ ಊಟದ ಸಮಯವಾಯ್ತು ಎಂದು ಆರ್ಯ, ಅನು ಕ್ಯಾಬಿನ್‌ಗೆ ಬರುತ್ತಾನೆ. ಹಿಂದಿನ ದಿನದಂತೆ ಅನು ಎರಡು ಬಾಕ್ಸ್ ಅನ್ನು ತಂದಿದ್ದಾಳೆ ಎಂದು ತಿಳಿದುಕೊಂಡಿರುತ್ತಾನೆ. ಆದರೆ, ಒಂದು ಬಾಕ್ಸ್ ಅನ್ನು ಸುಬ್ಬು ತೆಗೆದುಕೊಂಡು ಹೋಗಿರುತ್ತಾನೆ. ಹೀಗಾಗಿ ಅನು ಒಂದೇ ಬಾಕ್ಸ್ ಅನ್ನು ತಂದಿರುತ್ತಾಳೆ. ವಿಷಯ ತಿಳಿದ ಆರ್ಯ ನನ್ನ ಮಾವ ಸದಾ ನಮಗೆ ಒಳ್ಳೆಯದನ್ನೇ ಮಾಡುತ್ತಾರೆ. ಒಂದೇ ಬಾಕ್ಸ್ ಇರುವುದರಿಂದ ಈಗ ಒಟ್ಟಿಗೆ ಒಂದೇ ಬಾಕ್ಸ್‌ನಲ್ಲಿ ಊಟ ಮಾಡಬಹುದು ಎಂದು ಹೇಳುತ್ತಾನೆ. ಇಬ್ಬರೂ ಒಟ್ಟಿಗೆ ಊಟ ಮಾಡುತ್ತಾ, ಕಮಲಮ್ಮನ ಹಬ್ಬದ ಸಮಯದಲ್ಲಾದರೂ ಸುಬ್ಬು ಅವರ ಮನಸ್ಸನ್ನು ಗೆಲ್ಲಬೇಕು ಎಂದು ಆರ್ಯ ಯೋಚಿಸುತ್ತಾನೆ.

ಝೇಂಡೇ ಮುಂದಿನ ಹೆಜ್ಜೆ ಏನು..?
ಕರುಣಾಕರ ಬೆನ್ನು ಬಿಡದೆ ರಮ್ಯಾಗೆ ಫೋನ್ ಮಾಡುತ್ತಲೇ ಇರುತ್ತಾನೆ. ರಮ್ಯಾ ಇವನು ಬಿಡಲ್ಲ ಎಂದು ರಿಸೀವ್ ಮಾಡುತ್ತಾಳೆ. ಇದೇ ಸಮಯಕ್ಕೆ ಬಂದ ರತ್ನಾಕರ, ಕರುಣಾಕರನ ಫೋನ್ ಅನ್ನು ತೆಗೆದುಕೊಳ್ಳುತ್ತಾನೆ. ಸ್ಪೀಕರ್ ಹಾಕಿದಾಗ ರಮ್ಯಾ, ಕರುಣಾಕರನಿಗೆ ಬೈಯುತ್ತಾಳೆ. ಅಲ್ಲದೇ, ಕಮಲಮ್ಮನ ಮನೆಯಲ್ಲಿ ನಡೆಯುತ್ತಿರುವ ಹಬ್ಬ ಹಾಗೂ ಆರ್ಯ ಅಲ್ಲಿಗೆ ಬರುವುದನ್ನೂ ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಝೇಂಡೇ ಈಗ ಆರ್ಯನ ಮೇಲೆ ಕತ್ತಿ ಮಸೆಯುತ್ತಿದ್ದಾನಾ ಎಂಬ ಅನುಮಾನ ಶುರುವಾಗಿದೆ.


Click it and Unblock the Notifications











