ಝೇಂಡೇ ಆರ್ಯನ ಮೊಬೈಲ್ ನಂಬರ್ ಹೇಳಿದ ಸಂಜು ಪ್ಲ್ಯಾನ್ ಏನು..?

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ನೀರಿಗೆ ಬಿದ್ದ ಕಾರಣ ಆಕೆಯನ್ನು ಸಂಜು ರಕ್ಷಿಸಿದ್ದಾನೆ. ಪ್ರಜ್ಞೆ ತಪ್ಪಿರುವ ಅನುಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಅನುಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂಜು ಅನು ನೀರಿನಲ್ಲಿ ಬಿದ್ದಿರುವುದು ಆಕಸ್ಮಿಕವಲ್ಲ. ಅದು ಕೊಲೆ ಪ್ರಯತ್ನವಿರಬೇಕು ಎಂದು ಅನುಮಾನವನ್ನು ಪಟ್ಟಿದ್ದಾನೆ. ಆದರೆ ಈ ವಿಚಾರವನ್ನೂ ಇನ್ನೂ ಯಾರಿಗೂ ಹೇಳಿಲ್ಲ. ಸಂಜು ಈ ವಿಚಾರವನ್ನು ಯಾರ ಬಳಿ ಹೇಗೆ ಹೇಳಿಕೊಳ್ಳುತ್ತಾನೋ ಗೊತ್ತಿಲ್ಲ.

ಆಸ್ಪತ್ರೆಗೆ ಅನುಳನ್ನು ನೋಡಲು ಝೇಂಡೇ, ಮೀರಾ ಕೂಡ ಬಂದಿದ್ದಾರೆ. ಆದರೆ ಯಾರೂ ಕೂಡ ಇನ್ನು ಅನುಳನ್ನು ನೋಡಲು ಹೋಗಿಲ್ಲ. ಇದೆಲ್ಲಾ ಹೇಗಾಯ್ತು..? ಯಾಕಾಯ್ತು ಎಂಬ ಗೊಂದಲದಲ್ಲಿ ಇದ್ದಾರೆ.

 ಝೇಂಡೇಗೆ ಸಂಜು ಯಾರೆಂದು ಗೊತ್ತಾಯ್ತಾ..?

ಝೇಂಡೇಗೆ ಸಂಜು ಯಾರೆಂದು ಗೊತ್ತಾಯ್ತಾ..?

ಅನುಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅನುಗೆ ಇನ್ನು ಪ್ರಜ್ಞೆ ಬಂದಿಲ್ಲ. ಇದರಿಂದಾಗಿ ಎಲ್ಲರೂ ಶಾಕ್ ಆಗಿದ್ದಾರೆ. ಪ್ರಭು ದೇಸಾಯಿ ಮತ್ತು ಪ್ರಿಯದರ್ಶೀನಿ ಅವರು ಮಾತನಾಡಿಕೊಂಡಿದ್ದಾರೆ. ನಾವು ದೊಡ್ಡ ತಪ್ಪು ಮಾಡಿದೆವು. ಅನು ತನ್ನ ಗಂಡನಿಲ್ಲ ಎಂದು ಹೀಗೆ ಕೊರಗುತ್ತಿದ್ದಾಳೆ ಪಾಪ. ವಿಶ್ವಾಸ್ ಚಿತೆಯನ್ನೇ ಪತಿಯದ್ದು ಎಂದುಕೊಂಡಿದ್ದಾಳೆ. ಎಂದು ಇಬ್ಬರೂ ಮಾತನಾಡಿಕೊಳ್ಳುತ್ತಾರೆ. ಅಷ್ಟರಲ್ಲಿ ವೈದ್ಯರು ಬಂದು ಅನುಗೆ ರೆಸ್ಟ್ ಬೇಕಾಗಿದೆ. ಆಕೆಯ ಹಾಗೂ ಮಗುವಿನ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ಹೇಳುತ್ತಾರೆ.

 ಮಾನ್ಸಿ ಲೆಕ್ಕಾಚಾರವೆಲ್ಲಾ ನಿಜವಾಗುತ್ತದೆಯೇ..?

ಮಾನ್ಸಿ ಲೆಕ್ಕಾಚಾರವೆಲ್ಲಾ ನಿಜವಾಗುತ್ತದೆಯೇ..?

ಇತ್ತ ಮಾನ್ಸಿಗೆ ಸಂಜು ಮೇಲಿನ ಅನುಮಾನ ದುಪ್ಪಟ್ಟಾಗುತ್ತಿವೆ. ಹೀಗಾಗಿ ಮಾನ್ಸಿ ಪದೇ ಪದೇ ಹರ್ಷವರ್ಧನ್ ಬಳಿ ತನ್ನ ಅಭಿಪ್ರಾಯವನ್ನು ಹೇಳಿಕೊಳ್ಳುತ್ತಿರುತ್ತಾಳೆ. ಆದರೆ ಹರ್ಷ ಮಾನ್ಸಿ ಮಾತುಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಅನುಳನ್ನು ಸಂಜುನೇ ನೀರಿಗೆ ದಬ್ಬಿ ಕಾಪಾಡಿರಬಾರದೇಕೆ.? ಅವನಿಗೇಕೆ ಅನು ಮೇಲೆ ಅಷ್ಟೊಂದು ಕಾಳಜಿ.? ಎಲ್ಲವೂ ಆತ ಮಾಡಿರುವ ಸಾಲವನ್ನು ಈ ಮನೆಯಿಂದ ತೆಗೆದುಕೊಳ್ಳುವ ಪ್ರಯತ್ನ ಎಂದು ಮಾನ್ಸಿ ಅನುಮಾನಿಸಿದ್ದಾಳೆ.

 ಆರ್ಯನ ಫೋನ್ ನಂಬರ್ ಕೊಟ್ಟ ಸಂಜು

ಆರ್ಯನ ಫೋನ್ ನಂಬರ್ ಕೊಟ್ಟ ಸಂಜು

ಝೇಂಡೇಗೆ ಹುಡುಗರು ಫೋನ್ ಮಾಡಿ ಪ್ಲ್ಯಾನ್ ಸಕ್ಸಸ್ ಆಯ್ತು. ಆದರೆ ಯಾರೋ ಬಂದು ಆಕೆಯನ್ನು ಕಾಪಾಡಿದರು ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿದ ಝೇಂಡೇ ಸೀದಾ ಆಸ್ಪತ್ರೆಗೆ ಬರುತ್ತಾನೆ. ಅಲ್ಲಿ ಪ್ರಭು ಹಾಗೂ ಪ್ರಿಯಾ ಮಾತನಾಡುತ್ತಿರುವುದನ್ನು ಅರ್ಧಂಬರ್ಧ ಕೇಳಿಸಿಕೊಳ್ಳುತ್ತಾನೆ. ಅಷ್ಟರಲ್ಲಿ ಸಂಜು, ಅನುಗಾಗಿ ಔಷಧಿ ತರಲು ಮೆಡಿಕಲ್‌ಗೆ ಬರುತ್ತಾನೆ. ಆಗ ಝೇಂಡೇ ಆತನನ್ನು ಮಾತನಾಡಿಸಲು ಪ್ರಯತ್ನಿಸುತ್ತಾನೆ. ಸಂಜು ತಾನು ಬ್ಯುಸಿ ಇದ್ದು, ಕರೆ ಮಾಡಲು ಹೇಳುತ್ತಾನೆ. ಹಾಗಾಗಿ ಝೇಂಡೇ ಫೋನ್ ನಂಬರ್ ಕೇಳಿದಾಗ ಆರ್ಯನ ಮೊಬೈಲ್ ಸಂಖ್ಯೆಯನ್ನು ಹೇಳುತ್ತಾನೆ. ಇದನ್ನು ಕೇಳಿ ಝೇಂಡೇ ಶಾಕ್ ಆಗುತ್ತಾನೆ. ಅಷ್ಟರಲ್ಲಿ ಝೇಂಡೇಯನ್ನು ನೋಡಿದ ಮೀರಾ ಮಾತನಾಡಿಸುತ್ತಾಳೆ.

 ಸಂಜುಗೆ ಯಾರ ಮೇಲಿದೆ ಅನುಮಾನ..?

ಸಂಜುಗೆ ಯಾರ ಮೇಲಿದೆ ಅನುಮಾನ..?

ಅನುಗೆ ಎಚ್ಚರವಾಗುತ್ತದೆ. ಆಕೆಯನ್ನು ಡಿಸ್ಚಾರ್ಜ್ ಮಾಡಲು ವೈದ್ಯರು ಮುಂದಾಗುತ್ತಾರೆ. ಅನು ತುಂಬಾ ವೀಕ್ ಆಗಿದ್ದಾಳೆ. ಆಕೆಗೆ ರೆಸ್ಟ್ ಬೇಕು ಹಾಗೆಯೇ ಟೈಂ ಟು ಟೈಂ ತಿನ್ನಬೇಕು ಎನ್ನುತ್ತಾರೆ. ಅದಕ್ಕೆ ಸುಬ್ಬು ಮತ್ತು ಪುಷ್ಪಾ ಅನುಳನ್ನು ತಮ್ಮ ವಠಾರಕ್ಕೆ ಕರೆದುಕೊಂಡು ಹೋಗುತ್ತೇವೆ ಎನ್ನುತ್ತಾರೆ. ಆಗ ಅನುಳನ್ನು ಮಾತನಾಡಿಸಬೇಕೆಂದು ಸಂಜು ಒದ್ದಾಡುತ್ತಾನೆ. ಸಂಜುಗೆ ಅನು ತಾನಾಗಿಯೇ ಬಿದ್ದಿಲ್ಲ. ಯಾರೋ ತಳ್ಳಿದ್ದಾರೆ. ಆಕೆಯನ್ನು ಕೊಲ್ಲಲು ಪ್ರಯತ್ನಪಟ್ಟಿದ್ದಾರೆ ಎಂಬ ಅನುಮಾನವಿರುತ್ತದೆ. ಆದರೆ ಯಾರು ಎಂಬುದು ಗೊತ್ತಿಲ್ಲ. ಮಾನ್ಸಿ ಸಂಜುನನ್ನು ಒಂದು ರೀತಿಯಲ್ಲಿ ಅನುಮಾನಿಸಿದರೆ, ಅನು ಸಂಜುನನ್ನು ತಿರಸ್ಕೃತ ಭಾವದಲ್ಲಿ ನೋಡುತ್ತಾಳೆ. ಆದರೆ ಝೇಂಡೇಗೆ ಸಂಜು ಕೊಟ್ಟ ಫೋನ್ ನಂಬರ್ ಎಲ್ಲಾ ಸತ್ಯ ಹೇಳುತ್ತಾ ಕಾದು ನೋಡಬೇಕಿದೆ.

More from Filmibeat

English summary
jothe jotheyali Serial 3rd october Episode Written Update. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X