Jothe Jotheyali: ಮತ್ತೆ ಕಾಣೆಯಾದ ಆರ್ಯ: ಇದು ಝೇಂಡೇ ಕೆಲಸಾನಾ..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮೀರಾ, ಆರಾಧನಾ ಎಲ್ಲರೂ ಆರ್ಯನ ಮನೆಯಲ್ಲೇ ಉಳಿದುಕೊಂಡಿರುತ್ತಾರೆ. ಮೀರಾ ಅನು ಮತ್ತು ಆರ್ಯನಿಗೆ ಸರ್ಪ್ರೈಸ್ ಕೊಡಲು ಪ್ಲ್ಯಾನ್ ಮಾಡಿರುತ್ತಾಳೆ.
ಶಾರದಾಳಿಗೆ ಬಂದ ಕಷ್ಟವೆಲ್ಲಾ ತೀರಿತು. ಇನ್ನೇನಿದ್ದರೂ ಅನು ಮತ್ತು ಆರ್ಯ ಇಬ್ಬರೂ ಮತ್ತೆ ಮೊದಲಿನಂತ ಆದರೆ ಸಾಕು ಎಂದು ಬಯಸುತ್ತಿರುತ್ತಾಳೆ. ಪುಷ್ಪಾ ಹಾಗೂ ಸುಬ್ಬು ಕೂಡ ಇದೇ ಮನಸ್ಥಿತಿಯನ್ನು ಹೊಂದಿದ್ದಾರೆ.
ಇತ್ತ ಝೇಂಡೇ ಮಾತ್ರ ಹೇಗಾದರೂ ಮಾಡಿ ಆರ್ಯ ಮತ್ತು ಅನುಳನ್ನು ಮತ್ತೆ ಬೇರೆ ಮಾಡಬೇಕು. ಆರ್ಯನನ್ನು ತನ್ನ ಜೊತೆಗೆ ಕರೆದುಕೊಂಡು ಹೋಗಬೇಕು ಎಂದು ಆಲೋಚಿಸುತ್ತಿದ್ದಾನೆ.

ಝೇಂಡೇ ಅನು ಮನೆಗೆ ಕರೆದ ಆರ್ಯ
ಝೇಂಡೇ ಆರ್ಯನಿಗಾಗಿ ಹಗಲು ರಾತ್ರಿ ಎನ್ನದೇ, ಮನೆಯ ಮುಂದೆಯೇ ಕಾಯುತ್ತಿರುತ್ತಾನೆ. ಆರ್ಯನಿಂದ ದೂರ ಆಗಲಾಗದೇ, ಮೀರಾಳನ್ನು ಕೇಳಿಕೊಳ್ಳುತ್ತಾನೆ. ಆದರೆ, ಝೇಂಡೇ ನಡೆದುಕೊಂಡ ರೀತಿಗೆ ಮೀರಾ, ಹೊಸಮನಿ ಯಾರೂ ರೆಸ್ಪಾನ್ಸ್ ಮಾಡುವುದಿಲ್ಲ. ಆರ್ಯ ರಾತ್ರಿ ಝೇಂಡೇಯ ನೆನಪಾಗಿ ಗೇಟ್ ಬಳಿ ಬಂದು ನೋಡುತ್ತಾನೆ. ಝೇಂಡೇ ಚಳಿಯಲ್ಲಿ ನಡುಗುತ್ತಿರುತ್ತಾನೆ. ಇದರಿಂದ ನೊಂದುಕೊಂಡ ಆರ್ಯ, ಝೇಂಡೇ ಅನ್ನು ಮನೆಗೆ ಕರೆಯುತ್ತಾನೆ. ಊಟ ಮಾಡಲು ಹೇಳುತ್ತಾನೆ. ಈ ವೇಳೆಗೆ ಬರುವ ಶಾರದಾ ಬೈಯುತ್ತಾಳೆ. ಅನು, ಪುಷ್ಪಾ, ಸುಬ್ಬು, ಮಾನ್ಸಿ, ಹರ್ಷ ಎಲ್ಲರೂ ಬರುತ್ತಾರೆ. ರಾಜವರ್ಧನ್ ನನ್ನು ಝೇಂಡೇ ಕೊಂದಿದ್ದು ಎಂಬ ಸತ್ಯವನ್ನು ಶಾರದಾ ಹೇಳುತ್ತಾಳೆ. ಆಗ ಎಲ್ಲರೂ ಬೈದರೂ, ಆರ್ಯ ಊಟ ಮಾಡುತ್ತಿರುವವನನ್ನು ಏಳಿಸುವುದು ಸರಿಯಲ್ಲ ಎಂದು ಹೇಳುತ್ತಾನೆ. ಎಲ್ಲರೂ ಸುಮ್ಮನಾಗುತ್ತಾರೆ.

ಅನು ಬಗ್ಗೆ ಪುನಃ ಚಾಡಿ ಹೇಳಿದ ಝೇಂಡೇ
ಝೇಂಡೇ ನೊಂದುಕೊಳ್ಳುತ್ತಾನೆ. ಆದರೆ ಆರ್ಯ, ನನಗೆ ತಾಯಿಯಂತೆ ನೀನು, ಊಟ ಮಾಡು ಎಂದು ಊಟ ಮಾಡಿಸುತ್ತಾನೆ. ಆಗ ಝೇಂಡೇ ಸಿಕ್ಕ ಅವಕಾಶವನ್ನು ಬಿಡಬಾರದು ಎಂದು ಮನೆಯವರ ಮೇಲೆ ಮತ್ತೆ ಆರೋಪ ಮಾಡುತ್ತಾನೆ. ಅವರೆಲ್ಲಾ ನಿನ್ನನ್ನು ಉಳಿಸಲ್ಲ. ನನ್ನ ಜೊತೆಗೆ ಬಂದು ಬಿಡು ಆರ್ಯ. ಅನು ಸರಿಯಿಲ್ಲ. ಅವಳು ನಿನ್ನ ಜೊತೆಗೆ ನಾಟಕವಾಡುತ್ತಿದ್ದಾಳೆ ಎಂದು ಹೇಳುತ್ತಾನೆ. ಈ ವೇಳೆಗೆ ಬರುವ ಅನು ಝೇಂಡೇ ಅನ್ನು ಗುರಾಯ್ಸಿ ನೋಡುತ್ತಾಳೆ. ಇನ್ನು ಪುಷ್ಪಾ ಮತ್ತು ಸಬ್ಬು ಝೇಂಡೇ ರಾಜವರ್ಧನ್ ನನ್ನು ಕೊಲೆ ಮಾಡಿದ್ದಾನೆ ಎಂಬುದನ್ನು ತಿಳಿದು ಗಾಬರಿಯಾಗುತ್ತಾರೆ.

ಮನೆಗೆ ಬಂದ ಜೋಗ್ತವ್ವ
ಇನ್ನು ಬೆಳಗ್ಗೆ ಜೋಗ್ತವ್ವ ಬರುತ್ತಾಳೆ. ಮನೆಗೆ ಮಗಳು ಬಂದಾಯ್ತು ಎಂದು ಸುಮ್ಮನಿರಬೇಡಿ, ತಾಯಿ ಯಲ್ಲವ್ವನ ಪೂಜೆ ಮಾಡಿ. ಅವಳೇ ನಿಮ್ಮನ್ನು ಕಾಪಾಡುವುದು ಎಂದು ಹೇಳಿ ಹೋಗುತ್ತಾಳೆ. ಆಗ ಶಾರದಾ ಮತ್ತು ಪುಷ್ಪಾ ಸೇರಿಕೊಂಡು ಮನೆಯಲ್ಲಿ ಅಷ್ಟಮಿ ಪೂಜೆಗೆ ತಯಾರು ನಡೆಸುತ್ತಾರೆ. ಅನು ಮದುವೆಯ ಸೀರೆಯನ್ನು ಉಟ್ಟುಕೊಂಡು ಪೂಜೆಗೆ ಬರುತ್ತಾಳೆ.

ಝೇಂಡೇ ಜೊತೆ ಹೋಗಿದ್ದಾನಾ ಆರ್ಯ..?
ಆಗ ಎಲ್ಲರೂ ಅನುಳನ್ನು ಆರ್ಯ ಎಲ್ಲಿ ಎಂದು ಕೇಳುತ್ತಾರೆ. ಅನು ಮೇಲಿಲ್ಲ. ಇಲ್ಲೇ ಇರಬಹುದು ಎಂದುಕೊಂಡು ಬಂದೆ ಎನ್ನುತ್ತಾಳೆ. ಆಗ ಹರ್ಷ ಆರ್ಯನನ್ನು ಹುಡುಕಿಕೊಂಡು ಹೋಗುತ್ತಾರೆ. ಮನೆಯಲ್ಲಿ ಎಲ್ಲಿಯೂ ಆರ್ಯ ಇರುವುದಿಲ್ಲ. ಇದರಿಂದ ಗಾಬರಿಯಾಗುತ್ತಾರೆ. ಇನ್ನು ಝೇಂಡೇ ಕೂಡ ಕಾಣಿಸುತ್ತಿಲ್ಲ. ಆರ್ಯನೂ ಇಲ್ಲ ಎಂಬುದನ್ನು ತಿಳಿಯುತ್ತಾರೆ. ಆಗ ಅನು ಇದೆಲ್ಲಾ ಝೇಂಡೇ ಕೆಲಸಾನೇ. ಅವನೇ ಆರ್ಯನನ್ನು ಕರೆದುಕೊಂಡು ಹೋಗಿರಬಹುದು ಎಂದು ಭಾವಿಸುತ್ತಾಳೆ. ಆದರೆ, ಆರ್ಯ ಎಲ್ಲಿದ್ದಾನೋ ಗೊತ್ತಿಲ್ಲ. ಕಥೆಯಲ್ಲಿ ಹೊಸ ಟ್ವಿಸ್ಟ್ ಶುರುವಾಯ್ತಾ ತಿಳಿಯುತ್ತಿಲ್ಲ.


Click it and Unblock the Notifications











